Horoscope 28 Nov: ದಿನಭವಿಷ್ಯ, ಈ ರಾಶಿಯವರು ವಿವಾದಕ್ಕೆ ಆಸ್ಪದ ಕೊಡದೇ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ

| Updated By: Rakesh Nayak Manchi

Updated on: Nov 28, 2023 | 10:07 PM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 28 Nov: ದಿನಭವಿಷ್ಯ, ಈ ರಾಶಿಯವರು ವಿವಾದಕ್ಕೆ ಆಸ್ಪದ ಕೊಡದೇ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ
ರಾಶಿಭವಿಷ್ಯ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 28 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣರಾಜ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ರೋಹಿಣೀ, ಯೋಗ: ಸಿದ್ಧ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:10 ರಿಂದ 04:35ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:31 ಗಂಟೆ 10:56 ನಿಮಿಷಕ್ಕೆ, ಗುಳಿಕ ಕಾಲ ಮಧ್ಯಾಹ್ನ 12:20 ರಿಂದ 01 :45ರ ವರೆಗೆ.

ಮೇಷ ರಾಶಿ: ನಿಮ್ಮ ಕಛೇರಿಯ ಸ್ಥಳದ ಬದಲಾವಣೆಯನ್ನು ಮಾಡಬೇಕಾದೀತು. ಅನಿಶ್ಚಿತ ಮನಸ್ಸಿನಿಂದ ನಿಶ್ಚಿತ ಗುರಿಯನ್ನು ನೀವು ಪಡೆಯಲು ಸಾಧ್ಯವಾಗದು. ಪ್ರೀತಿಯ ಹೊಸ ಅಧ್ಯಾಯವನ್ನು ಆರಂಭ ಮಾಡುವಿರಿ. ಒಂಟಿಯಾಗಿ ಕುಳಿತು ಕಳೆದ ದಿನಗಳನ್ನು ನೆನೆಯುವಿರಿ. ಮಕ್ಕಳ ಮದುವೆಯ ಚಿಂತೆಯೂ ಒಮ್ಮಿಂದೊಮ್ಮೆಲೆ ಬರಬಹುದು. ನಿಮ್ಮ ಮಾತಿಗೆ ಕುಟುಂಬವು ಸಮ್ಮತಿಸಬಹುದು. ಮನೆಯ ಪ್ರಶಾಂತ ವಾತಾವರಣವು ಉದ್ವಿಗ್ನಗೊಂಡೀತು. ಔದಾರ್ಯವು ಅಧಿಕವಾಗಿ ಬೇಡ. ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡುವುದಿಲ್ಲ. ಆರ್ಥಿಕವಾಗಿ ಬಲಗೊಳ್ಳಲು ನೀವು ದೈವಕ್ಕೆ ಶರಣಾಗುವಿರಿ. ಪಾಲುದಾರಿಕೆಯಲ್ಲಿ ಬಹುಪಾಲು ನಿಮ್ಮದಿರುವುದು. ಇಂದು ಏಕಾಗ್ರತೆಯಿಂದ ಕಾರ್ಯವನ್ನು ಮಾಡಲು ಕಷ್ಟವಾದೀತು. ಆಗಬೇಕಾದ ಕಾರ್ಯವು ಇಂದಿನ ಸುತ್ತಾಟದಿಂದ ವ್ಯರ್ಥವಾಗುವುದು.

ವೃಷಭ ರಾಶಿ: ಮಾತಿನ ಮೇಲೆ‌ ಹಿಡಿತ ತಪ್ಪುವ ಸಾಧ್ಯತೆ ಇದೆ. ಎಲ್ಲ ಸಂದರ್ಭಗಳನ್ನು ಒಂದೇ ರೀತಿಯಲ್ಲಿ ತೂಗುವುದು ಸರಿಯಾಗದು. ನಿಮ್ಮದಲ್ಲದ ಕಾರ್ಯಕ್ಕೆ ನೀವು ತಲೆ ಕೊಡಬೇಕಾದೀತು. ನಿಮ್ಮ ಸಂಗಾತಿಯು ಕೋಪಗೊಳ್ಳಬಹುದು. ನಿಮ್ಮ ಮಾತಿನಿಂದ ಸಮಾಧಾನವು ಬರುವುದು. ದೂರದಲ್ಲಿರುವ ಮಕ್ಕಳನ್ನು ನೋಡುವ ಆಸೆಯಾಗಬಹುದು. ಉದ್ಯಮದ ಕಾರಣ ಪ್ರಯಾಣ ಮಾಡುವ ಸ್ಥಿತಿಯು ಬರಬಹುದು. ಅಪ್ತರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಿರಿ. ಹಿರಿಯರ ಬೋಧನೆಯು ಉಪಯುಕ್ತವೆನಿಸುವುದು. ಮನೆಯಿಂದ ದೂರವಿರುವ ನಿಮಗೆ ಮನೆಗೆ ಹೋಗಬೇಕು ಎಂದು ಅನ್ನಿಸುವುದು. ಖರ್ಚಿನ ದಾರಿಗಳು ಒಂದೊಂದೇ ತೆರೆಯುವುದು. ನಿಮ್ಮ ಮಾತಿಗೆ ಬೆಂಬಲವು ಸಿಗುವುದು. ನಿಮ್ಮ ಸೌಂದರ್ಯವು ಇಷ್ಟವಾಗುವುದು. ಹಲವು ಕಡೆಗಳಿಂದ ಕಾರ್ಯದ ಒತ್ತಡವು ಬರಬಹುದು.

ಮಿಥುನ ರಾಶಿ: ಮಾತಿನಿಂದಾಗಿ ಕಲಹವು ಅಧಿಕವಾದೀತು. ಪರೋಕ್ಷವಾಗಿ ನೀವು ಎಲ್ಲ ಕೆಲಸದಲ್ಲಿಯೂ ಭಾಗವಹಿಸುವಿರಿ. ನಿಮ್ಮ ಇಂದಿನ ಕೆಲಸವು ಯಶಸ್ಸಿನ ಎತ್ತರಕಗಕೆ ಏರುವುದು. ದಿನವಿಡೀ ನಿಮಗೆ ಲಾಭದ ಅವಕಾಶಗಳು ಸಿಗುವುದು. ಮಾನಸಿಕ ಸ್ಥಿತಿಯೂ ಬಹಳ ಆಹ್ಲಾದದಿಂದ ಇರಲಿದೆಯಾವ ಹೂಡಿಕೆಯು ನಿಮಗೆ ಲಾಭದಾಯಕವಾಗುವುದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿಯನ್ನು ಇಟ್ಟುಕೊಂಡವರು ಗುರುವಿನ ಆಶೀರ್ವಾದವನ್ನು ಪಡೆದುಕೊಳ್ಳಿ. ನಿಮಗಾದ ವಂಚನೆಯನ್ನು ಗೌಪ್ಯವಾಗಿ ಇರಿಸಿಕೊಳ್ಳಿ. ಗೌರವವು ಕಡಿಮೆ ಆದಂತೆ ಅನ್ನಿಸೀತು. ಸಂಗಾತಿಯ ವಿಚಾರದಲ್ಲಿ ಸಂಪೂರ್ಣ ಖುಷಿ ಇರುವುದು. ವೃತ್ತಿಯಲ್ಲಿ ಒತ್ತಡವಿದ್ದರೂ ಅದನ್ನು ತೋರಿಸುವುದಿಲ್ಲ. ಅನ್ಯರು ನಿಮ್ಮನ್ನು ಅಪಹಾಸ್ಯ ಮಾಡಬಹುದು. ಸಹಾಯ ಬಯಸಿದವರಿಗೆ ಸಹಕಾರ ನೀಡಿ.

ಕಟಕ ರಾಶಿ: ಮೇಲಧಿಕಾರಿಗಳ ಮಾತು ನಿಮಗೆ ಕಹಿಯಾದೀತು. ವಾಹನದಿಂದ ಕೆಲವು ತೊಂದರೆಗಳು ಆದೀತು. ದುರಭ್ಯಾಸದಿಂದ ದೂರವಿರುವ ಮನಸ್ಸು ಬರಬಹುದು. ದೇಹಾರೋಗ್ಯದ ಬಗ್ಗೆ ಚಿಂತೆಯು ಹೆಚ್ಚಾದೀತು. ನಿಮ್ಮ ವಿಳಂಬ ಕಾರ್ಯಕ್ಕೆ ಹೇಳಿಸಿಕೊಳ್ಳಬೇಕಾದೀತು. ಪದೋನ್ನತಿಯ ಬಗ್ಗೆ ಕೇಳಿದರೂ ಏನೂ ಪ್ರಯೋಜನವಾಗದು. ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಬಂಗಾರದ ಬಗ್ಗೆ ವ್ಯಾಮೋಹ ಹೆಚ್ಚಾಗಲಿದೆ. ಸಂಗಾತಿಯನ್ನು ಹಣಕ್ಕಾಗಿ ಪೀಡಿಸುವಿರಿ. ಪ್ರೀತಿ ಪಾತ್ರರನ್ನು ನೀವು ದೂರಮಾಡುವಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಪ್ರಗತಿಯನ್ನು ಕಾಣುವರು. ನಿರಂತರ ಕೆಲಸದಿಂದ ಸ್ವಲ್ಪ ವಿಶ್ರಾಂತಿಯು ಮುಖ್ಯವಾದೀತು. ವಿದ್ಯಾರ್ಥಿಗಳಿಗೆ ಆಯ್ಕೆಯ ವಿಷಯದಲ್ಲಿ ನಿರಾಸಕ್ತಿ ಬರುವುದು. ಸಹೋದರನ ಆರೋಗ್ಯದ ಬಗ್ಗೆ ಅಧಿಕ ಗಮನವಿರುವುದು.

ಸಿಂಹ ರಾಶಿ: ಅನಿರೀಕ್ಷಿತವಾಗಿ ಯಾವುದೋ ಕಾರ್ಯದಲ್ಲಿ ಸಿಕ್ಕಿಕೊಳ್ಳುವಿರಿ. ಅಧ್ಯಾತ್ಮದಲ್ಲಿ ಆಸಕ್ತಿಯು ಹೆಚ್ಚಾಗಿರುವುದು. ಶತ್ರುಗಳು ಸಂಧಾನಕ್ಕೆ ಬರುವ ಸಾಧ್ಯತೆ ಇದೆ. ನೀವು ಯಾವ ಮಾತಿಗೂ ಜಗ್ಗದವರಂತೆ ಇರುವಿರಿ. ನಿಮ್ಮ ಮನೋವಿಕಾರಗಳು ಒಂದೊಂದಾಗಿಯೇ ಗೊತ್ತಾಗುವುದು. ಖರೀದಿಸಿದ ಭೂಮಿಯನ್ನು ಮತ್ತೊಬ್ಬರಿಗೆ ಕೊಟ್ಟುಬಿಡುವಿರಿ. ಸಾಲವನ್ನು ತೀರಿಸುವಷ್ಟು ಹಣವು ಆಗತ್ತದೋ ಇಲ್ಲವೋ ಎಂಬ ಭೀತಿ ಕಾಡುವುದು. ಹಿರಿಯರಿಂದ ನಿಮಗೆ ಮೆಚ್ಚುಗೆ ಸಿಗಬಹುದು. ದಾಂಪತ್ಯದಲ್ಲಿ ಪ್ರೀತಿಗೆ ನೀವು ಮಾರುಹೋಗಬಹುದು. ಅತಿಥಿಗಳ ಆಗಮನವು ನಿಮ್ಮ ಮನೆಗೆ ಆಗಲಿದೆ. ವೃತ್ತಿಯಲ್ಲಿ ನಿಮ್ಮ ಸಹಕಾರಕ್ಕೆ ಪ್ರಶಂಸೆಯು ಸಿಗುವುದು. ಪರಿಚಿತರ ಸ್ವತ್ತನ್ನು ಅಪಹರಿಸುವಿರಿ. ಭವಿಷ್ಯದ ಜೀವನದ ಬಗ್ಗೆ ಭಯವು ಇರುವುದು. ನಿಮ್ಮ ಬಗ್ಗೆ ಅಪ್ರಾಮಾಣಿಕತೆಯ ಬಗ್ಗೆ ಮಾತುಗಳು ಕೇಳಿಬರುವುದು.

ಕನ್ಯಾ ರಾಶಿ: ಬಂಧುಗಳಿಂದ ಸಾಲಬಾಧೆಯು ಕಾಣಿಸಿಕೊಂಡೀತು. ಆಸ್ತಿಯ ವಿಚಾರವಾಗಿ ನೆರಮನೆಯವರ ಜೊತೆ ಕಲಹವು ಪುನಃ ಆರಂಭವಾಗಬಹುದು. ಇಂದು ಧೈರ್ಯದ ಕಾರ್ಯದಲ್ಲಿ ಮುನ್ನಡೆಯಲು ಕೊರತೆ ಕಾಣಿಸಿಕೊಳ್ಳಬಹುದು. ಕೆಲವು ಮಾನಸಿಕ ಸ್ಥಿತಿಯನ್ನು ಬಿಡಲು ಪ್ರಯತ್ನಿಸುವಿರಿ. ಆದರೆ ಅದು ನಿಮಗೆ ಗೊತ್ತಿಲ್ಲದೇ ನಿಮ್ಮನ್ನು ಆವರಿಸಬಹುದು. ನಿಮ್ಮ ಶಕ್ತಿ ಮೀರಿದ ಕಾರ್ಯಕ್ಕೆ ಬೆಲೆ ಸಿಗದೇ ಹೋಗುವುದು. ವಾಹನ ಖರೀದಿಸಲು ನಿಮಗೆ ಹಣಕಾಸಿನ ಕೊರತೆಯಾಗಿ ಮುಂದೂಡುವಿರಿ. ದಾಂಪತ್ಯದ ಇಂದಿನ ಕಲಹವನ್ನು ಅಲ್ಲಿಗೇ ನಿಲ್ಲಿಸಿ. ಹೆಚ್ಚು ಪ್ರಯತ್ನದಿಂದ ಅಲ್ಪ ಲಾಭವಾಗುವುದು. ನೇರವಾದ ಮಾತಿನಿಂದ ನಿಮಗೇ ನೋವಾಗುವುದು. ದುರ್ಜನರಿಂದ ದೂರವಿರಬೇಕಾಗಬಹುದು. ಬಂಧುಗಳ ಭೇಟಿಯು ನಿಮಗೆ ಸಮಾಧಾನವನ್ನು ತರದು. ತಾಯಿಯ ಜೊತೆ ವಾಗ್ವಾದಕ್ಕೆ ನಿಲ್ಲುವುದು ಬೇಡ.

ತುಲಾ ರಾಶಿ: ಮಂಗಳ ಕಾರ್ಯವನ್ನು ಮನೆಯಲ್ಲಿ ಮಾಡುವಿರಿ. ಸಾರ್ವಜನಿಕವಾಗಿ ಸಿಗುವ ಮನ್ನಣೆಯನ್ನು ವಿರೋಧಿಸುವರು. ನಿಮ್ಮ ಹಳೆಯ ವಸ್ತುಗಳನ್ನು ಹೊರಹಾಕಿ ಸಮಾಧಾನಪಟ್ಟುಕೊಳ್ಳುವಿರಿ. ಆದಾಯದ ವೃದ್ದಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಿರಿ. ತಂದೆಯ ವಿಚಾರದಲ್ಲಿ ಅನಾದರವು ಬರಬಹುದು. ಹಣಕಾಸಿನ ಮೌಲ್ಯವನ್ನು ಇಂದು ತಿಳಿದುಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ನಿಮಗೆ ಅವಸರ ಹೆಚ್ಚಾಗಿರುವುದು. ಧನದ ಸಹಾಯವನ್ನು ನಿಮ್ಮ ಸ್ನೇಹಿತರು ನಿಮ್ಮಿಂದ ಬಯಸುವರು. ಇಂದು ಅಧಿಕ ಒತ್ತಡವಿಲ್ಲದೇ ಕಾರ್ಯವು ಮುಗಿಯುವುದು. ವಿದೇಶಪ್ರಯಾಣದಿಂದ ಖುಷಿಯು ಇರಲಿದೆ. ನೌಕರರು ನಿಮಗೆ ಪೂರಕವಾಗಿ ಇರುವರು. ಸೌಂದರ್ಯಪ್ರಜ್ಞೆಯು ಇಂದು ಅಧಿಕವಾಗಿ ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ಕೊಡುವರು. ನಿಮ್ಮ ಭಾವನೆಗೆ ಸ್ಪಂದಿಸುವವರನ್ನು ಹುಡುಕುವಿರಿ.

ವೃಶ್ಚಿಕ ರಾಶಿ: ಮಕ್ಕಳ ಆರೋಗ್ಯವನ್ನು ಸುಧಾರಿಸಲು ನೀವು ಬಹಳ ಓಡಾಟ ಮಾಡುವಿರಿ. ವ್ಯಾಪರದಲ್ಲಿ ಸಣ್ಣ ಬದಲಾವಣೆಯನ್ನು ತಂದುಕೊಳ್ಳುವಿರಿ. ಅಪ್ರಬುದ್ಧ ಆಲೋಚನೆಗಳು ನಿಮ್ಮಿಂದ ದೂರವಿರಲಿ. ಸಾಹಸದ ಕೆಲಸಕ್ಕೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ. ನಿಮ್ಮ ವ್ಯಕ್ತಿತ್ವವು ಬೆಳಕಿಗೆ ಬರಲು ಇಂದು ಸಹಾಯಕವಾಗುವುದು. ಶತ್ರುಬಾಧೆಯಿಂದ ಮನೆಯಲ್ಲಿಯೇ ಕಲಹದ ವಾತಾವರಣವು ಇರುವುದು. ಮೆಚ್ಚುಗೆಯ ಮಾತಿನಿಂದ ಸಂಕೋಚಗೊಳ್ಳುವಿರಿ. ಆರಿಸಿಕೊಂಡ ಆಯ್ಕೆಯು ನಿಮಗೆ ಇಷ್ಟವಾಗದೇ ಈಗ ಇರುವುದು. ಸಾಮಾಜಿಕ ಗೌರವದಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಪರಿಚಿತರ ವಿಚಾರದಲ್ಲಿ ನೀವು ನಕಾರಾತ್ಮಕವಾಗಿ ಮಾತನಾಡುವಿರಿ. ಮಕ್ಕಳಿಗೆ ನಿಮ್ಮ ಪ್ರೀತಿಯ ಅವಶ್ಯಕತೆ ಇರುವುದು. ಸಂಪಾದನೆಯ ಕಡೆ ಅಧಿಕ ಗಮನ ಇರಲಿದ್ದು ಕುಟುಂಬದ ಬಗ್ಗೆ ನೀವು ಒಮ್ಮನಸ್ಸು ಇರದು.

ಧನು ರಾಶಿ: ನಿಮ್ಮವರನ್ನು ದ್ವೇಷಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ. ಮಾನಸಿಕ ಆರೋಗ್ಯವು ಕ್ಷೀಣಿಸುವುದು ನಿಮ್ಮ ಗಮನಕ್ಕೆ ಬರಲಿದೆ. ಆಸ್ತಿಗೆ ಸಂಬಂಧಿಸಿದ ವಿಚಾರಕ್ಕೆ ಕೋಪಗೊಂಡು ನೀವು ಏನನ್ನಾದರೂ ಹೇಳುವಿರಿ. ಬಲವೃದ್ಧಿಗೆ ಬೇಕಾದ ತಯಾರಿಯನ್ನು ಮಾಡಿಕೋಳ್ಳುವುದು ಉತ್ತಮ. ಮಹಿಳೆಯರು ಆದಾಯದಲ್ಲಿ ಮುನ್ನಡೆ ಸಾಧಿಸುವರು ಇಂದು. ಇನ್ನೊಬ್ಬರ ಕಡೆಯಿಂದ ಕೆಲಸವನ್ನು ಮಾಡಿಸಿಕೊಳ್ಳುವ ಸಂದರ್ಭವು ಬರಬಹುದು. ಕಾರ್ಯದಲ್ಲಿ ಆಗುವ ವ್ಯತ್ಯಾಸದಿಂದ ಕೋಪಗೊಳ್ಳುವುದು ಬೇಡ. ಒಂದು ನಾಣ್ಯಕ್ಕೆ ಎರಡು ಮುಖಗಳು. ಎರಡೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳ ಓದುವ ಮನಸ್ಸು ಬಹಳ ಚಂಚಲವಾಗಿ ಇರಲಿದೆ. ಉದ್ಯೋಗದ ಬಡ್ತಿಯನ್ನು ನೀವು ನಿರೀಕ್ಷಿಸಬಹುದು. ಸರಿಯಾದ ತಿಳಿವಳಿಕೆ ಅಗತ್ಯ. ಅತ್ಯಂತ ಬೆಲೆ ಬಾಳುವ ಮರಗಳೂ ಎಂದಿಗೂ ಅಲ್ಪಕಾಲದಲ್ಲಿ ಬೆಳೆಯುವುದಿಲ್ಲ.

ಮಕರ ರಾಶಿ: ಮಾನಸಿಕ ಒತ್ತಡವನ್ನು ನೀವು ಕಡಿಮೆ ಮಾಡಿಕೊಳ್ಳುವುದು ಉತ್ತಮ. ವಿಳಂಬದ ಕಾರ್ಯಕ್ಕೆ ನೀವೇ ಜವಾಬ್ದಾರರಾಗಿರುವಿರಿ. ವಿದ್ಯಾರ್ಥಿಗಳಿಗೆ ಯಶಸ್ಸನ್ನು ಪಡೆಯುವ ಬಯಕೆ ಇಟ್ಟುಕೊಳ್ಳುವಿರಿ. ‌ಇದೇ ಓದಿಗೆ ಅವರನ್ನು ಹಚ್ಚುವುದು. ನಿಮ್ಮ ಕುಶಲ ಕಾರ್ಯದಿಂದ ಪ್ರಸಿದ್ಧಿ ದೊರೆಯುವುದು. ಉದ್ಯೋಗದಲ್ಲಿ ಹಳೆಯ ಸಮಸ್ಯೆಯು ಪುನಃ ಬಾರದಂತೆ ನೋಡಿಕೊಳ್ಳಿ. ವಾದವನ್ನು ಮಾಡುವ ಮುಂದಿರುವ ಜನರನ್ನು ನೋಡಿಕೊಳ್ಳಿ. ನಾಲಿಗೆಯನ್ನು ಹೇಗಾದರೂ ಹರಿ ಬಿಡುವುದು ಬೇಡ. ಖನಿಜದ ವ್ಯವಹಾರ ತಕ್ಕಮಟ್ಟಿಗೆ ಆದಾಯವನ್ನು ಹೆಚ್ಚಿಸುವುದು. ಶತ್ರುಗಳ ಕಾಟವನ್ನು ಕಡಿಮೆ‌ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಮಿತ್ರರ ಆರ್ಥಿಕತೆಗೆ ನೀವು ಸಹಾಯ ಮಾಡುವಿರಿ. ಉದ್ಯಮವನ್ನು ಮಾಡುವವರಿಗೆ ಕೆಲವು ತೊಂದರೆಗಳು ಬರಬಹುದು.‌ ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕಾರ್ಯದಲ್ಲಿ ಒತ್ತಡವು ಮೇಲಧಿಕಾರಿಗಳಿಂದ ಬರುವುದು. ದೂರ ಪ್ರಯಾಣವನ್ನು ಮಾಡಲು ಬೇಕಾದ ತಯಾರಿ ಇರಲಿ.

ಕುಂಭ ರಾಶಿ: ವಿವಾದಕ್ಕೆ ಆಸ್ಪದ ಕೊಡದೇ ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ. ಕಾರ್ಯದಲ್ಲಿ ಪ್ರಗತಿಯನ್ನು ಕಾಣಬಹುದು. ನಿಮ್ಮ ಜ್ಞಾನವನ್ನು ಬೆಳೆಸಿಕೊಳ್ಳಲು ವಿವಿಧ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಿರಿ. ಸಂಗಾತಿಯಿಂದ ನಿಮ್ಮ ಯೋಚನೆಗೆ ಪುಷ್ಟಿ ಸಿಗುವುದು. ಅನವಶ್ಯಕ ಆಲೋಚನೆಗಳಿಂದ ಮನಸ್ಸು ಕ್ಷೋಭೆಗೊಳ್ಳುವುದು. ಆರೋಗ್ಯದ ವೃದ್ಧಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಕುಟುಂಬವನ್ನು ಮೆಚ್ಚಿಕೊಳ್ಳುವಿರಿ. ಯಾರೊಂದಿಗೂ ಸ್ಪರ್ಧಿಸುವ ಅವಶ್ಯಕತೆ ಇಲ್ಲ. ನಿಮ್ಮ ಜವಾಬ್ದಾರಿಯ ಕಾರ್ಯಗಳು ಮುನ್ನೆಲೆಗೆ ಬರಬಹುದು. ಅಪರೂಪದ ದ್ರವ್ಯಗಳ ಸಂಗ್ರಹವನ್ನು ಮಾಡುವಿರಿ. ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ಖರ್ಚನ್ನು ಕಡಿಮೆ ಮಾಡಿಕೊಂಡ ಕಾರಣ ನಿಮ್ಮ ಆರ್ಥಿಕ ವ್ಯವಸ್ಥೆಯು ಸುಧಾರಿಸುವುದು. ಸುಮ್ಮನೇ ಆಡಿದ ಮಾತುಗಳೂ ನಿಮಗೆ ಕಷ್ಟವಾದೀತು.

ಮೀನ ರಾಶಿ: ದೂರಪ್ರಯಾಣವನ್ನು ಮಾಡಲು ನಿಮಗೆ ಇಂದು ಕಷ್ಟವಾದೀತು. ನಿಮ್ಮ ಶ್ರಮದ ಬಗ್ಗೆ ನಿಮಗೆ ಪೂರ್ಣವಿಶ್ವಾಸವು ಇರದು. ನಿಮಗೆ ಇಂದು ಆಸ್ತಿಯ ವಿಚಾರದಲ್ಲಿ ಅನುಕೂಲವಾದ ಬೆಳವಣಿಗೆ ಇರಲಿದೆ. ನೀವು ನಿರೀಕ್ಷಿಸಿದ್ದ ಸಮಸ್ಯೆಯು ಬಾರದೇ ಹೋದೀತು. ಖಾಸಗಿಯ ಕೆಲಸವು ನಿಮಗೆ ಸಾಕೆನಿಸಬಹುದು. ಬಂಧುಗಳಿಂದ ಮಾನಸಿಕ ಹಿಂಸೆಯಾಗುವುದು. ಆರೋಗ್ಯದ ವಿಚಾರದಲ್ಲಿ ಕೆಲಸದಲ್ಲಿ ಬದಲಾವಣೆಯು ನಿಮಗೆ ಬೇಕಾದೀತು. ಅಧಿಕಾರಿಗಳ ಪ್ರಶಂಸೆಯು ನಿಮ್ಮ ಕಾರ್ಯಕ್ಕೆ ಬಲವು ಬರಬಹುದು. ಸ್ನೇಹಿತರ ಸಮಸ್ಯೆಗೆ ನೀವು ಸ್ಪಂದಿಸುವಿರಿ. ನಿಮ್ಮ ಕಾರ್ಯವನ್ನು ಇಂದೇ ಮುಗಿಸುವ ಚಿಂತೆಯಲ್ಲಿ ಇರುವಿರಿ. ಇಷ್ಟವಸ್ತುಗಳನ್ನು ಪಡೆದುಕೊಳ್ಳಲು ಹಂಬಲಿಸುವಿರಿ. ಇಂದಿನ ಹಣಕಾಸಿನ‌ ಹರಿವು ನಿಮಗೆ ಸಂತೋಷವನ್ನು ಕೊಡಬಹುದು. ಧನ ಸಂಪಾದನೆಗೆ ಅವಕಾಶಗಳು ನಿಮಗೆ ಸಿಗಬಹುದು.

-ಲೋಹಿತಶರ್ಮಾ – 8762924271 (what’s app only)

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:00 am, Tue, 28 November 23