AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ ರಾಶಿ ಭವಿಷ್ಯ ಹೀಗಿದೆ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ ರಾಶಿ ಭವಿಷ್ಯ ಹೀಗಿದೆ
ರಾಶಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 21, 2024 | 12:15 AM

Share

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್​ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಅತಿಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:50 ಗಂಟೆ, ರಾಹು ಕಾಲ ಮಧ್ಯಾಹ್ನ 12:36 ರಿಂದ ಸಂಜೆ 14:09, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:28ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:02 ರಿಂದ 12:36ರ ವರೆಗೆ.

ಮೇಷ ರಾಶಿ : ಇಂದು ಅವಿವಾಹಿತರಿಗೆ ವಿವಾಹ ನಿಶ್ಚಯದ ಸಾಧ್ಯತೆ ಇದೆ. ಬಹಳ ದಿನಗಳ ಅನಂತರ ನಿಮ್ಮ ಮನೆಯಲ್ಲಿ ಸಂತೋಷದ ಸಂದರ್ಭವು ಇರುವುದು. ನಿತ್ಯ ಬಳಸುವ ವಸ್ತುವಿನಿಂದ ನಿಮಗೆ ಲಾಭವಿದೆ. ಅತಿಥಿಗಳ ಆಗಮನವು ಅನಿರೀಕ್ಷಿತವಾಗುವುದು. ನೀವು ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದ್ದು ನಿಮಗೆ ಒಮ್ಮೆಲೆ ಬಿಡಬೇಕಾದ ಸ್ಥಿತಿ ಬರಬಹುದು. ವ್ಯಾಪಾರವನ್ನು ನೀವು ಇಂದು ತಂತ್ರಗಾರಿಕೆಯ ಮೂಲಕ ಮಾಡಲಿದ್ದೀರಿ. ನಿಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಸಾಲ ಮಾಡಿಯಾದರೂ ಖರೀದಿಸಬೇಕಾದೀತು. ನೀವಿಂದು ತಂಡದ ನಾಯಕರಾಗಿ ಆಯ್ಕೆಯಾಗಿ ಅದನ್ನು ಮುನ್ನಡೆಸುವಿರಿ. ಎಲ್ಲರನ್ನೂ ಹತ್ತಿರದಿಂದ ತಿಳಿಯಲು ನೀವು ಇಷ್ಟಪಡುವಿರಿ. ದಾಂಪತ್ಯದಲ್ಲಿ ಸುಖವಿದ್ದರೂ ಒಳಗೊಳಗೇ ಸಂಶಯಗಳು ಇಬ್ಬರನ್ನೂ ಸಂತೋಷವಾಗಿ ಇಡಲು ಬಿಡುವುದಿಲ್ಲ. ಅನುವಾದಕರಿಗೆ ಹೆಚ್ಚು ಕಾರ್ಯಗಳು ಬರಬಹುದು. ಮನಸ್ಸಿನ ಭಾರವನ್ನು ಕಳೆಯುವ ದಾರಿಗಳು ನಿಮ್ಮ ಮುಂದೆ ಇರುವುದು.

ವೃಷಭ ರಾಶಿ : ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಎಲ್ಲದರಲ್ಲೂ ಹಿನ್ನಡೆಯಾಗುವ ನಿಮಗೆ ಆತ್ಮವಿಶ್ವಾಸ ತುಂಬಲು ಜನರ ಅವಶ್ಯಕತೆ ಇದೆ. ಕಷ್ಟದ ಕೆಲಸವನ್ನು ನೀವು ಅನಾಯಾಸವಾಗಿ ಮಾಡಿ ಮುಗಿಸುವಿರಿ. ಇಂದಿನ‌ ನಿಮ್ಮ ಕೆಲಸವು ಪೂರ್ಣವಾಗಬಹುದು. ಧನದ ಆದಾಯವು ನಿಮ್ಮ ನಿರೀಕ್ಷೆಯನ್ನು ಪೂರ್ಣವಾಗಿ ತಲುಪುವುದು. ನಿಮ್ಮ ಪ್ರಯಾಣ ಇಂದು ಬಹಳ ಕಷ್ಟಕಾರವಾದೀತು. ಯಶಸ್ಸನ್ನು ಒಡೆದು ಜೀರ್ಣಿಸಿಕೊಳ್ಳಲಾಗದಷ್ಟು ನಿಶ್ಶಕ್ತರಾಗವಿರಿ. ಹೆಚ್ಚು ಶ್ರಮದಿಂದ ಸಂಪತ್ತನ್ನು ಪಡೆಯುವಿರಿ. ಮಾಧ್ಯಮದಲ್ಲಿ ನೀವು ಇಂದು ಕಾಣಿಸಿಕೊಳ್ಳಬಹುದು. ಪಕ್ಷಪಾತದಿಂದ ನಿಮ್ಮ ಸಂಬಂಧಗಳು ಹಾಳಾಗಬಹುದು. ಎಷ್ಟೇ ಪ್ರಯತ್ನಿಸಿದರೂ ಸುಮ್ಮನೆ ಇರಲು ಆಗದು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ.

ಮಿಥುನ ರಾಶಿ : ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನವು ಬದಲಾಗುವುದು. ನಿಮ್ಮ ಬಗ್ಗೆ ಹೇಳಿದರೂ ಕಷ್ಟ ಹೇಳದಿದ್ದರೂ ಕಷ್ಟವೆನ್ನುವಂತೆ ಆಗುವುದು. ನೀವು ಅದನ್ನು ಕಲಿಯಲು ಇಚ್ಛಿಸುವಿರಿ. ಕಲಿಕೆ ನಿಮ್ಮದೇ ಆದ ವಿಧಾನವನ್ನು ಬಳಸಿಕೊಳ್ಳಲಿದ್ದೀರಿ. ಪ್ರೇಮದ ಸೆಳೆತಕ್ಕೆ ಸಿಲುಕುವಿರಿ. ಪ್ರೇಮಿಗಳು ಇಂದು ಒಂದಾಗುವ ಸಾಧ್ಯತೆ ಇದೆ. ಮನೆಯಲ್ಲಿ ಪ್ರಸ್ತಾಪ‌ ಮಾಡಿ ನಿಮ್ಮ ಮಾರ್ಗವನ್ನು ಸರಿ ಮಾಡಿಕೊಳ್ಳಿ. ವ್ಯಾಪಾರದಲ್ಲಿ ಕೆಲವು ಕೊರತೆಗಳನ್ನು ನೀಗಿಸಿಕೊಂಡರೆ ನೀವು ಲಾಭವನ್ನು ಗಳಿಸಬಹುದು. ಜವಾಬ್ದಾರಿಯಿಂದ ಗ್ರಾಹಕರ ಜೊತೆ ವರ್ತಿಸಿ. ಭೂಮಿಯ ವ್ಯವಹಾರ ಸದ್ಯ ಬೇಡ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಶಿಸ್ತನ್ನು ಕಾಪಾಡಿಕೊಂಡು ಕೆಲಸ ಮಾಡಿಕೊಳ್ಳುವಿರಿ. ಧಾರ್ಮಿಕ ಕಾರ್ಯಕ್ಕಾಗಿ ಸಮಯವನ್ನು ಹೊಂದಿಸಿಕೊಳ್ಳುವಿರಿ. ಮೂರ್ತಿಯಾಗಲು ಪೆಟ್ಟು ತಿನ್ನುವ ಅನಿವಾರ್ಯತೆ ಇರುವುದು. ದ್ವಿಚಕ್ರ ವಾಹನದಲ್ಲಿ ಎಚ್ಚರಿಕೆಯಿಂದ ಸಂಚರಿಸಿ.

ಕರ್ಕಾಟಕ ರಾಶಿ : ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಕಷ್ಟವಾಗುವುದು. ಯಾವುದನ್ನು ಮಾಡಲೇ ಬಾರದು ಎಂದು ಮತ್ತೆ ಅಂದುಕೊಂಡಿದ್ದರೋ ಅದೇ ಆಗುವುದು. ಇಂದು ನೀವು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪ ಪಡಬಹುದು. ಬೇಸರದ ಸಂಗತಿಗಳು ಇಂದು ನಡೆಯುವ ಸಾಧ್ಯತೆ ಇದೆ. ವಿರೋಧದ ನಡುವೆಯೂ ನಿಮ್ಮ ಹಣವನ್ನು ಸಾಧಿಸುವಿರಿ. ನಿಮ್ಮ ಅಪೇಕ್ಷಿತ ಸುಖವು ಬಯಸಿದವರಿಗೆ ಸಿಗದು. ಹಿರಿಯರು ನಿಶ್ಚಯಿಸಿದ ಸಂಬಂಧವನ್ನು ಒಪ್ಪಿಕೊಳ್ಳುವಿರಿ. ನಿಮ್ಮ‌ ಮನಸ್ಸು ಎಷ್ಟೇ ಪ್ರಯತ್ನಿಸಿದರೂ ನಕಾರಾತ್ಮಕವಾಗಿ ಇರಲಿದೆ. ನಿಮ್ಮನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಹಣವೂ ಗೊತ್ತಾಗದಂತೆ ಖಾಲಿಯಾದೀತು. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ನಿಮಗಾಗಿ ಬೇರೆಯವರು ತಮ್ಮ ಯೋಜನೆಯನ್ನು ಬದಲಾಯಿಸುವರು.