Horoscope: ಹೊಸತನ್ನು ಹುಡುಕುವಿರಿ, ವೈಯಕ್ತಿಕ ವಿಚಾರಕ್ಕೆ ಅನ್ಯರು ಪ್ರವೇಶ
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 13 ಜೂನ್ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಗುರುವಾರ (ಜೂನ್. 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಮಘಾ, ಯೋಗ: ಹರ್ಷಣ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 2:10 ರಿಂದ 03:47ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:05 ರಿಂದ 07:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:19 ರಿಂದ 10:56ರ ವರೆಗೆ.
ಮೇಷ ರಾಶಿ: ಇಂದಿನ ನಿಮ್ಮ ಅವಸರವಸರದ ಕಾರ್ಯಗಳಿಂದ ಜೊತೆಗಾರರಿಗೆ ಕಷ್ಟವಾಗುವುದು. ನಿಮ್ಮ ಉದ್ಯೋಗವು ಅನ್ಯರ ಪಿತೂರಿಯಿಂದ ನಷ್ಟವಾಗಬಹುದು. ಧಾರ್ಮಿಕಶ್ರದ್ಧೆಯಿಂದ ನಿಮಗೆ ಅನುಕೂಲವಿದ್ದರೂ ಅದನ್ನು ಮಾಡಲು ನಿಮಗೆ ಶ್ರದ್ಧೆ, ಭಕ್ತಿಯ ಕೊರತೆ ಹೆಚ್ಚಿರಲಿದೆ. ಮೇಲಧಿಕಾರಿಗಳನ್ನು ಮೆಚ್ಚಿಸಲು ಹೋಗಿ ನಿಮ್ಮ ಸಮಯವನ್ನು ವ್ಯರ್ಥಮಡಿಕೊಳ್ಳುವಿರಿ. ಅದರತ್ತ ಗಮನವಿರಲಿ. ನಿಮ್ಮ ಕೆಲಸಗಳನ್ನು ನೀವೇ ಹೊಗಳುತ್ತ ಅನ್ಯರ ಮೂದಲಿಕೆಗೆ ಸಿಕ್ಕುವಿರಿ. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ಯಾರನ್ನೂ ಸರಿಯಾಗಿ ಊಹಿಸಲಾರಿರಿ. ವಿಳಂಬವಾಗಿ ಬರುತ್ತದೆ ಎಂದುಕೊಂಡ ಹಣವು ಬೇಗ ನಿಮಗೆ ಬೇಗ ಸಿಗಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ. ನಿಮ್ಮನ್ನು ನೀವೇ ಒತ್ತಡದಲ್ಲಿ ಸಿಲುಕಿಸಿಕೊಂಡು ಸಮಯವಿಲ್ಲದಂತೆ ವರ್ತಿಸುವಿರಿ.
ವೃಷಭ ರಾಶಿ: ಮಾಡಿಕೊಂಡ ಹೊಂದಾಣಿಕೆಯಿಂದ ನಿಮಗೆ ಬೇಸರವಾಗುವುದು. ಹೊಸತನ್ನು ಹುಡುಕಲು ಆರಂಭಿಸುವಿರಿ. ವೈಯಕ್ತಿಕ ವಿಚಾರಕ್ಕೆ ಅನ್ಯರು ಪ್ರವೇಶ ಮಾಡುವುದು ಸರಿಕಾಣದು. ಇಂದು ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವುದರ ಜೊತೆಗೆ ಆತಂಕವೂ ಇರುವುದು. ಪಾಲುದಾರಿಕೆಯಲ್ಲಿ ಇಂದು ಸಣ್ಣ ಕ್ಲೇಶವು ಬರಬಹುದು. ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿ ಅಗೌರವವನ್ನು ತರಬಹುದು. ತನ್ನದು ಇಷ್ಟೇ ಸಾಮರ್ಥ್ಯ ಎಂಬ ತೀರ್ಮಾನಕ್ಕೆ ಬರುವಿರಿ. ಪತ್ನಿಯ ಮನಃಸ್ಥಿತಿಯನ್ನು ಅರಿತು ಇಂದು ಅವರೊಡನೆ ವ್ಯವಹರಿಸುವುದು ಒಳ್ಳೆಯದು. ನಿಮ್ಮ ಮಾತುಗಳು ದುರುದ್ದೇಶದಿಂದ ಕೂಡಿರುವುದು. ಉದ್ಯೋಗಿಗಳು ಪರಿಶ್ರಮವನ್ನು ಬಿಟ್ಟು ಲಾಭ ಗಳಿಸಲು ಬೇರೆ ದಾರಿ ಇರದು. ಯಾರನ್ನೂ ಅನವಶ್ಯಕವಾಗಿ ಬದೂರಬೇಡಿ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು.
ಮಿಥುನ ರಾಶಿ: ಕುಟುಂಬದಲ್ಲಿ ಬರುವ ಮಾತಿಗೆ ನೀವು ಪ್ರತಿಕ್ರಿಯೆ ಕೊಡುವುದು ಬೇಡ. ನಂಬಿಕೆ ದ್ರೋಹದಿಂದ ನಿಮಗೆ ಬೇಸರವಾಗಲಿದೆ. ಸಹೋದರ ಜೊತೆ ನಿಮಗೆ ಯೋಗ್ಯ ಸಲಹೆಯು ಸಿಗಬಹುದು. ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ಪ್ರಶಂಸೆಯನ್ನು ಇಷ್ಟಪಡುವ ನೀವು ಯಾರೂ ಪ್ರಶಂಸಿಸದಿದ್ದರೆ ಬೇಸರಿಸುವಿರಿ. ಊರಿನಲ್ಲಿ ನಿಮ್ಮ ಬಗ್ಗೆ ಅತ್ಯಂತ ಗೌರವವಿರಲಿದೆ. ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ನಿಮಗಿರಲಿದೆ. ಉತ್ತಮವಾದ ಸಂಜೆಯನ್ನು ನೀವು ಸ್ನೇಹಿತರ ಜೊತೆ ಕಳೆಯುವಿರಿ. ವಾಹನಭೀತಿಯಿಂದ ನೀವು ಮನೆಯಲ್ಲಿ ಇರುವಿರಿ. ಅಮೂಲ್ಯವಸ್ತುವಿನ ಕಳ್ಳತನವಾಗಬಹುದು. ಒಳ ಜಗಳದಿಂದ ನಿಮಗೆ ಎಲ್ಲ ಕಾರ್ಯದಲ್ಲಿ ತೊಂದರೆಯಾಗುವುದು. ಅತಿಯಾಗಿ ಯಾವುದನ್ನು ಮಾಡಲು ಹೋಗುವುದು ಬೇಡ. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ನಿಮ್ಮ ತಮಾಷೆಯು ಇಷ್ಟವಾಗದೇ ಇರಬಹುದು.
ಕಟಕ ರಾಶಿ: ನಿಮ್ಮ ಆದಾಯದ ಮೂಲವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ. ನಿಮ್ಮ ವೇತನವನ್ನು ಪ್ರಯತ್ನಪೂರ್ವಕವಾಗಿ ಯಾರಾದರೂ ಕೇಳಬಹುದು. ನಿಮ್ಮನ್ನು ನೀವು ಪರಿಚಯ ಮಾಡಿಕೊಳ್ಳುವಿರಿ. ನಿಮಗೆ ಇಂದು ಪ್ರೇಮವಿವಾಹದಿಂದ ಆಗುವ ತೊಂದರೆಗಳ ಅರಿವಾಗಬಹುದು. ವ್ಯವಹಾರದಿಂದ ಅರ್ಧಕ್ಕೆ ಕೈಬಿಡುವ ಸಾಧ್ಯತೆ ಇದೆ. ಅನಗತ್ಯ ತಿರುಗಾಟ, ಖರ್ಚುಗಳು ಜೀವನಕ್ಕೆ ದಿಕ್ಕು ಸಿಗಬಹುದು. ನಿಮ್ಮ ಉತ್ಸಾಹಕ್ಕೆ ಮನೆಯಲ್ಲಿ ಹಿನ್ನಡೆಯಾಗಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಹರಟೆ ಹೊಡೆಯುವುದು ನಿಮ್ಮ ಮನಸ್ಸಿಗೆ ಖುಷಿಯನ್ನು ಕೊಡಬಹುದು. ಬೇಕಾದುದನ್ನು ಕೇಳಿ ಪಡೆಯಿರಿ. ಭೂಮಿಯ ವ್ಯವಹಾರವು ಬಹಳ ಕಷ್ಟವೆನಿಸಿ ಬಿಡುವ ಸಾಧ್ಯತೆ ಇದೆ. ಆಪ್ತರನ್ನು ಕಳೆದುಕೊಳ್ಳಬೇಕಾಗುವುದು. ಮಕ್ಕಳಿಂದ ನಿಮಗೆ ಸಂತೃಪ್ತಿಯು ಸಿಗಲಿದೆ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು.