
ದಾವಣಗೆರೆಯಲ್ಲಿ ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶನಿವಾರ (ಜೂನ್. 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:19 ರಿಂದ 10:56ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:10 ರಿಂದ 03:47ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:05 ರಿಂದ 07:42ರ ವರೆಗೆ.
ಮೇಷ ರಾಶಿ: ಮನೆಯವರು ನಿಮ್ಮ ಮಾತಿನಿಂದ ಕಟ್ಟಿಹಾಕಬಹುದು. ಉಳಿದೆಲ್ಲ ಸಮಸ್ಯೆಗಿಂತ ಗುರಿಯೇ ನಿಮಗೆ ಮುಖ್ಯವಾಗಿರಲಿ. ನಿಮ್ಮ ಕಾರ್ಯದ ಶಿಸ್ತಿಗೆ ಸಹೋದ್ಯೋಗಿಗಳ ಸಹಾಯ ಪಡೆಯಿರಿ. ನಿಮ್ಮ ಮೇಲೆ ವಿಶ್ವಾಸವು ಮೂಡುವ ದಿನವಾಗಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಅನವರತ ಮಾಡಬೇಕಾದ ಸ್ಥಿತಿಯೂ ಇದೆ. ಕೃತಕವಾಗಿ ಬರುವ ಧಾರ್ಮಿಕ ಶ್ರದ್ಧೆಯಿಂದ ಯಾವ ಪರಿಣಾಮವಾಗದು. ನಿಮ್ಮ ಅನುಕೂಲಕ್ಕೆ ತಕ್ಕ ನಿಯಮಗಳನ್ನು ಬೇರೆಯವರ ಮೇಲೆ ಹೇರಬೇಡಿ. ಆಹಾರಕ್ಕಾಗಿ ದೂರ ಪ್ರಯಾಣ ಮಾಡಬೇಕಾದೀತು. ನಿಮಗೆ ಸಹಕಾರ ನೀಡದವರೆಲ್ಲ ಕೆಟ್ಟವರಲ್ಲ. ಕ್ಷಮೆಯಿಂದ ನೀವು ದೊಡ್ಡವರಾಗುವಿರಿ. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಕೆಲವು ಸಂದರ್ಭವು ನಿಮ್ಮ ನಿಯಂತ್ರಣವನ್ನು ಮೀರಿ ತಪ್ಪು ಆಗಬಹುದು. ಯೋಗ್ಯವಾದದನ್ನು ದಾನ ಮಾಡಿ.
ವೃಷಭ ರಾಶಿ: ಅಂದುಕೊಂಡಂತೆ ವೇಗವಾಗಿ ಸಮಯಕ್ಕೆ ಸರಿಯಾಗಿ ಕೆಲಸ ಆಗಲಿದ್ದು, ಅನಂತರ ಸ್ವಲ್ಪ ವಿಶ್ರಾಂತಿಯನ್ನೂ ಪಡೆಯುವಿರಿ. ಸಾಲಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ನಕಾರಾತ್ಮಕ ಪ್ರತಿಕ್ರಿಯೆಯನ್ನು ಕೊಟ್ಟು ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಅಧಿಕಾರದ ಆಮಿಷಕ್ಕೆ ತುತ್ತಾಗಿ ಇಲ್ಲದ ಕೆಲಸವನ್ನು ಮಾಡಬೇಕಾಗಬಹುದು. ಯಾರ ಮಾತನ್ನೂ ತಳ್ಳಿಹಾಕದೇ ಗಂಭೀರವಾಗಿ ಪರಿಗಣಿಸುವಿರಿ. ಉದ್ಯೋಗಿಗಳು ಬಹಳ ಪರಿಶ್ರಮದಿಂದ ಲಾಭವನ್ನು ಪಡೆಯಬೇಕಾಗಿದೆ. ಮಾಡಲು ಸಾಧ್ಯವಾಗುವ ಕೆಲಸಕ್ಕೆ ಕಾರಣವನ್ನು ಹುಡುಕುತ್ತ ಅವಕಾಶವಂಚಿತರಾಗಬೇಡಿ. ನೆಮ್ಮದಿಯು ಕೆಡಲು ಮಾರ್ಗಗಳು ಹಲವು ಇದ್ದರೂ ಅಲ್ಲಿ ಒಳ್ಳೆಯದನ್ನು ಆರಿಸಿಕೊಳ್ಳಿ. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ. ಯಾರ ಮೇಲೂ ಹಗುರಾದ ಮನೋಭಾವ ಬೇಡ. ದುಃಸ್ವಪ್ನವು ನಿಮ್ಮ ನಿದ್ರೆಯನ್ನು ಕೆಡಿಸೀತು. ದೀರ್ಘಕಾಲದ ಗೆಳೆತನವು ಮಾತಿನಿಂದ ಒಡೆದುಹೋಗಬಹುದು.
ಮಿಥುನ ರಾಶಿ: ಇಂದು ಹೊಸದಾಗಿ ವೃತ್ತಿಯನ್ನು ಆರಂಭಿಸಿದವರಿಗೆ ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲದಲ್ಲಿ ಇರುವರು. ಹೊಸ ಕೆಲಸವನ್ನು ತಯಾರಿಸಲು ಉತ್ತಮ ಸಮಯ. ನಿಮ್ಮ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ. ಪರಿಣಾಮಗಳನ್ನು ಪರಿಗಣಿಸಿ ಮುನ್ನಡೆಯಬೇಕು. ನಿಮಗೆ ಇನ್ನೊಬ್ಬರ ವ್ಯಕ್ತಿತ್ವ ಇಷ್ಟವಾಗದಿದ್ದರೆ ಅವರ ಬಳಿಯೇ ಹೇಳಿ. ಅದನ್ನು ಯಾರದೋ ಸಮೀಪ ಸಲ್ಲದ ಮಾತುಗಳನ್ನು ಆಡಿ ಅವರ ಮಾನವನ್ನು ಕಳೆಯಬೇಡಿ. ನಿಮ್ಮ ಆಯ್ಕೆ ಗುಣಮಟ್ಟದ್ದೇ ಆಗಿರಲಿದೆ. ದಾಂಪತ್ಯದ ಕಲಹದಲ್ಲಿ ಮಕ್ಕಳು ನಿಮ್ಮ ಪರವಾಗಿ ಇರುವರು.ಕಣ್ಣಿನ ತೊಂದರೆಯು ಸ್ವಲ್ಪ ಕಡಿಮೆ ಆದಂತೆ ತೋರುತ್ತದೆ. ನಿಮ್ಮ ಹಣವು ಕರಗುವ ಬಗ್ಗೆ ಚಿಂತೆ ಆಗಲಿದೆ. ನಿಮ್ಮ ಬಗ್ಗೆ ಆಡಿಕೊಳ್ಳುತ್ತಿರುವವರು ಸುಮ್ಮನಾಗುವರು. ಹೃದಯವೈಶಾಲ್ಯದಿಂದ ಪ್ರಶಂಸೆ ಸಿಗುವುದು. ವಾಹನದ ಮೇಲಿನ ವ್ಯಾಮೋಹ ಕಡಿಮೆಯಾಗುವುದು. ಸಂಗಾತಿಯ ವರ್ತನೆಯು ಹಿಡಿಸದೇ ಇದ್ದೀತು. ವಿದೇಶದಲ್ಲಿ ಇರವವರಿಗೆ ಅಸಮಾಧಾನ ಹೆಚ್ಚಿರುವುದು.
ಕರ್ಕಾಟಕ ರಾಶಿ: ಇಂದು ನಿಮ್ಮ ಕಾರ್ಯಗಳು ಸುಲಭದಲ್ಲಿ ಪೂರ್ಣಗೊಳ್ಳುವುದು. ಪದೇ ಪದೇ ಆಗಿಹೋದುದರ ಬಗ್ಗೆ ಯೋಚಿಸಿ ಮಾನಸಿಕವಾಗಿ ಹಿಂಸೆ ಮಾಡಿಕೊಳ್ಳುವಿರಿ. ನಿಮ್ಮ ಇಷ್ಟದ ಜನರಿಂದ ನೀವು ಬೆಂಬಲವನ್ನು ಪಡೆಯುತ್ತಿರುವಿರಿ. ಎಲ್ಲರ ಜೊತೆ ಬೆರೆಯಬೇಕು ಎನ್ನುವ ಇಚ್ಛೆ ಇದ್ದರೂ ನಿಮ್ಮನ್ನು ಸೇರಿಕೊಳ್ಳದೇ ಇರುವರು. ಕೆಲಸವೂ ಇಲ್ಲದೇ ಸುಮ್ಮನೆಯೂ ಇರಲಾಗದೇ ಸುತ್ತಾಡುವಿರಿ. ಎಂದಿನ ಉತ್ಸಾಹವಿಲ್ಲದೇ ಇಂದು ಇರದು. ದೂರದ ಊರಿನ ಉದ್ಯೋಗವನ್ನು ಮಾಡಲು ಹಿಂಜರಿಯುವಿರಿ. ಆತ್ಮೀಯರ ಮಾತು ನಿಮಗೆ ಕಹಿ ಎನ್ನಿಸಲೂಬಹುದು. ದೇಹ ಆರೋಗ್ಯವಾಗಿದ್ದರೂ ಮನಸ್ಸು ನಿಮ್ಮನ್ನು ಕಟ್ಟಿಹಾಕುವುದು. ಪ್ರೇಮವು ಕಾಮವಾಗಿ ಪರಿವರ್ತನೆ ಆಗಬಹುದು. ಸಂಬಂಧದಲ್ಲಿನ ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಯಾರಾದರೂ ಪ್ರಾಬಲ್ಯವನ್ನು ಸಾಧಿಸಬಹುದು. ಆಲಸ್ಯದಿಂದ ಈ ದಿನವನ್ನು ಕಳೆಯುವಿರಿ.