
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 23ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಮನೆಯಲ್ಲಿ ಖುಷಿಯ ವಾತಾವರಣ ಇರುತ್ತದೆ. ಅಲಂಕಾರದ ದೃಷ್ಟಿಯಿಂದ ಏನೇನು ಬದಲಾವಣೆ ಮಾಡಬೇಕು ಅಂದುಕೊಂಡಿರುತ್ತೀರೋ ಆ ಎಲ್ಲವನ್ನು ಮಾಡಲು ಸಾಧ್ಯ ಆಗಲಿದೆ. ನಿಮಗೆ ಇರುವಂಥ ಬದ್ಧತೆಯನ್ನು ಸಾಬೀತು ಮಾಡಿಸಿಕೊಳ್ಳಲು ಅವಕಾಶಗಳು ಉದ್ಭವ ಆಗಲಿವೆ. ಕೆಲವು ಹಣಕಾಸಿನ ವಿಚಾರದ ನಿರ್ಧಾರಗಳು ಮುಂದಕ್ಕೆ ಹಾಕಿಕೊಳ್ಳಬೇಕಾಗುತ್ತದೆ. ಮೆಡಿಕಲ್ ಶಾಪ್ ನಡೆಸುತ್ತಾ ಇರುವವರು ಇದಕ್ಕೆ ಪೂರಕವಾಗಿ ಕೆಲವು ಹೊಸ ವ್ಯವಹಾರ ನಡೆಸುವ ಚಿಂತನೆ ನಡೆಸುತ್ತೀರಿ. ಉದ್ಯೋಗ ಸ್ಥಳದಲ್ಲಿ ನೀವು ಯಾವುದನ್ನು ಕೊನೆ ಆಯ್ಕೆ ಎಂದು ಭಾವಿಸಿರುತ್ತೀರೋ ಅದನ್ನೇ ಆರಿಸಿಕೊಳ್ಳುವಂತೆ ಆಗಲಿದೆ. ನಾಲಗೆ ಹುಣ್ಣು, ಗಂಟಲು ನೋವಿನ ಸಮಸ್ಯೆ ಈ ದಿನ ವಿಪರೀತ ಬಾಧಿಸಬಹುದು. ಆಹಾರ ಪಥ್ಯವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಆಕಸ್ಮಿಕವಾಗಿ ನಿಮಗೆ ಸಿಗುವಂಥ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಕಡೆಗೆ ಗಮನ ನೀಡಿ.
ನಿಮ್ಮ ಪಾಲಿನ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಿದ್ದರ ಉತ್ತಮ ಫಲಿತವನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಹೆಚ್ಚಿನ ಬಡ್ಡಿದರಕ್ಕೆ ತಂದಿದ್ದ ಸಾಲವನ್ನು ಹಿಂತಿರುಗಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಮಿನರಲ್ ವಾಟರ್ ವಿತರಣೆಯ ವ್ಯವಹಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಸವಾಲು ಎನಿಸಿದಂ ಕೆಲವು ಕೆಲಸಗಳನ್ನು ನೀವಾಗಿಯೇ ಮುಂದೆ ಹೋಗಿ ವಹಿಸಿಕೊಳ್ಳಲಿದ್ದೀರಿ. ಇದರಿಂದ ಯಶಸ್ಸು ಹಾಗೂ ಭವಿಷ್ಯದಲ್ಲಿ ಬಡ್ತಿ ಇತ್ಯಾದಿ ವಿಷಯಗಳಿಗೆ ಅನುಕೂಲ ಒದಗಿ ಬರುತ್ತದೆ. ಸಾದ್ಯಂತವಾಗಿ ಪರೀಕ್ಷೆ ಮಾಡದ ಹೊರತು ಯಾವುದೇ ಮುಖ್ಯ ಕಾಗದ- ಪತ್ರಗಳಿಗೆ ಸಹಿ ಮಾಡುವುದಕ್ಕೆ ಹೋಗಬೇಡಿ. ಅಣ್ಣ- ತಮ್ಮ, ಅಕ್ಕ- ತಂಗಿಯರ ಮಕ್ಕಳ ಮದುವೆಗಾಗಿ ಹಣಕಾಸಿನ ನೆರವು ಕೇಳಿಕೊಂಡು ಬರಲಿದ್ದಾರೆ. ನಿಮ್ಮ ಒಳಮನಸ್ಸಿಗೆ ಹೇಗೆ ನಡೆದುಕೊಳ್ಳಬೇಕು ಅನ್ನಿಸುತ್ತದೆಯೋ ಅದರಂತೆಯೇ ನಡೆದುಕೊಳ್ಳಿ.
ಇತರರ ವೈಯಕ್ತಿಕ ಅಭಿಪ್ರಾಯಗಳನ್ನು ತೆಗೆದುಹಾಕಲು ಹೋಗಬೇಡಿ. ಉದ್ಯೋಗ, ವೃತ್ತಿ- ವ್ಯವಹಾರಗಳಲ್ಲಿ ನೀಡುವಂಥ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ದೂರ ಪ್ರಯಾಣಕ್ಕೆ ಅಚಾನಕ್ ಆಗಿ ತೆರಳಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಹಳೇ ಒಪ್ಪಂದಗಳನ್ನು ಮುಂದುವರಿಸುವುದು ಬೇಡ ಎಂದುಕೊಳ್ಳಲಿದ್ದೀರಿ. ತರಕಾರಿ- ಹಣ್ಣುಗಳ ಸರಬರಾಜು ವಾಹನವನ್ನು ಚಾಲನೆ ಮಾಡುವವರು ಇದ್ದಲ್ಲಿ ಅದರದೇ ವ್ಯಾಪಾರವನ್ನು ಶುರು ಮಾಡುವ ಆಲೋಚನೆ ಮೂಡಲಿದೆ. ದುಡಿಮೆಯು ನಿರೀಕ್ಷೆ ಮಟ್ಟದಲ್ಲಿ ಇಲ್ಲ ಎಂಬುದು ಬಹಳವಾಗಿ ಕೊರೆಯಲು ಆರಂಭವಾಗುತ್ತದೆ. ಸ್ನೇಹಿತರ ಪೈಕಿ ಕೆಲವರು ನಿಮ್ಮ ಉದ್ದೇಶಕ್ಕೆ ಕೈ ಜೋಡಿಸಲು ಮುಂದೆ ಬರಲಿದ್ದಾರೆ. ಒಂದು ಕೆಲಸವನ್ನು ಮುಗಿಸುವುದಕ್ಕೆ ಇತರರಿಗೆ ಒಪ್ಪಿಸುವುದರಿಂದ ಅವರಿಗೆ ಸಲಹೆ- ಸೂಚನೆ, ಮಾರ್ಗದರ್ಶನ ನೀಡುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡುವಂತೆ ಆಗಲಿದೆ.
ಈ ದಿನ ಚಂಚಲತೆ ವಿಪರೀತ ಕಾಡುತ್ತದೆ. ಆತುರದಲ್ಲಿ ನಿಮ್ಮ ಯಾವುದೇ ತೀರ್ಮಾನ ಹೇಳುವುದಕ್ಕೆ ಹೋಗಬೇಡಿ. ಇನ್ನು ನಿಮ್ಮ ಬಳಿ ಇರುವ ಹಣಕ್ಕೆ ಎಷ್ಟು ಅಷ್ಟಕ್ಕೆ ಮಾತ್ರ ಯೋಜನೆ ಹಾಕಿಕೊಳ್ಳಿ. ಏನನ್ನಾದರೂ ದಕ್ಕಿಸಿಕೊಳ್ಳ ಬಲ್ಲೆ ಎಂಬ ಆಲೋಚನೆ ಅಪಾಯಕಾರಿ ಆಗಲಿದೆ. ಸರ್ಕಾರಿ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಮುಗಿಸಿಕೊಳ್ಳುವುದಕ್ಕೆ ಎಲ್ಲ ಪ್ರಯತ್ನ ಮಾಡಿದ ನಂತರವೂ ಕೊನೆ ಹಂತದಲ್ಲಿ ಅದು ನಿಂತು ಬಿಡಲಿದೆ. ಬೆನ್ನು ನೋವು ವಿಪರೀತವಾಗಿ ಕಾಡಬಹುದು. ಅದರಲ್ಲಿಯೂ ದ್ವಿಚಕ್ರ ವಾಹನವನ್ನು ಹೆಚ್ಚಾಗಿ ಬಳಸುತ್ತೀರಿ ಅಂತಾದಲ್ಲಿ ವೈದ್ಯರ ಬಳಿ ತೆರಳಿ, ಸಲಹೆ ತೆಗೆದುಕೊಳ್ಳುವುದು ಕ್ಷೇಮ. ಯಾವುದಕ್ಕೂ ಇರಲಿ ಎಂದುಕೊಂಡು, ಬಹಳ ಹಿಂದೆ ಸಣ್ಣ ಪ್ರಮಾಣದಲ್ಲಿ ಮಾಡಿದ್ದ ಹೂಡಿಕೆಯೊಂದು ಈಗ ಭಾರೀ ದೊಡ್ಡ ಲಾಭ ತಂದುಕೊಡಲಿದೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಆದರೆ ಈ ಬಗ್ಗೆ ಎಲ್ಲ ಕಡೆ ಹೇಳಿಕೊಂಡು ಬರಬೇಡಿ.
ಕೃಷಿಯಲ್ಲಿ ತೊಡಗಿಕೊಂಡವರು ಜಮೀನಿನಲ್ಲಿ ಕೆಲವು ದೀರ್ಘಾವಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಿದ್ದೀರಿ. ಕೊಟ್ಟಿಗೆ, ಗೋದಾಮು, ಇತರೆ ನಿಮ್ಮ ಚಟುವಟಿಕೆಗೆ ಅನುಕೂಲ ಆಗುವ ರೀತಿ ಯೋಜನೆ ಮಾಡಿಕೊಳ್ಳಲಿದ್ದೀರಿ. ಕುಟುಂಬ ಸದಸ್ಯರು ನಿಮ್ಮ ಆಲೋಚನೆಗಳಿಗೆ ಆರ್ಥಿಕವಾಗಿ ನೆರವು ನೀಡಲಿದ್ದಾರೆ. ತಕ್ಷಣಕ್ಕೆ ಬೇಡ ಅಂದುಕೊಂಡಂಥ ಕೆಲವು ಕೆಲಸಗಳನ್ನು ನಿರ್ಧಾರ ಬದಲಿಸಿ, ಆರಂಭ ಮಾಡಿಬಿಡುತ್ತೀರಿ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದಂಥವರು ಅದನ್ನು ಹಿಂತೆಗೆದುಕೊಳ್ಳವ ಆಲೋಚನೆ ಬಂದರೆ ಅದರಂತೆಯೇ ನಡೆದುಕೊಳ್ಳುವುದು ಉತ್ತಮ. ನಿಮಗೆ ಉದ್ಯೋಗ ಸ್ಥಳದಲ್ಲಿ ನೀಡಿದ್ದ ಭರವಸೆಗಳನ್ನು ಮೇಲಧಿಕಾರಿಗಳು ಈಡೇರಿಸುವ ಸೂಚನೆ ದೊರೆಯಲಿದೆ. ಇಂಥ ಸಮಯದಲ್ಲಿ ಮನಸ್ಸಿಗೆ ಬೇಸರ ಆಗುವಂಥ ಹಳೇ ಘಟನೆಗಳನ್ನು ನೆನಪಿಸಿಕೊಂಡು, ಸಿಟ್ಟು ಮಾಡಿಕೊಳ್ಳುವುದಕ್ಕೆ ಹೋಗಬೇಡಿ.
ತುಂಬ ಉತ್ಸಾಹದಿಂದ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವುದಕ್ಕೆ ಆಗಲ್ಲ. ಮುಖ್ಯವಾಗಿ ಮೈ- ಕೈ ನೋವು, ಜ್ವರ, ತಲೆನೋವು ಇಂಥವು ನಿಮ್ಮನ್ನು ಈ ದಿನ ಬಹುವಾಗಿ ಕಾಡಲಿವೆ. ಯಾಕೆ- ಏನು ಎಂಬುದನ್ನು ವಿಚಾರಿಸದೆ ಸ್ನೇಹಿತರು ಹೇಳುವಂತಹ ಕೆಲಸಗಳನ್ನು ಮಾಡುವುದಕ್ಕೆ ಒಪ್ಪಿಕೊಳ್ಳಬೇಡಿ. ಸಂಘ- ಸಂಸ್ಥೆಗಳನ್ನು ಮುನ್ನಡೆಸುತ್ತಾ ಇರುವವರಿಗೆ ದೊಡ್ಡ ಜವಾಬ್ದಾರಿಯೊಂದು ಹೆಗಲು ಏರಲಿದೆ. ಇನ್ನು ಬಿಡಿ ಬಿಡಿಯಾಗಿ ಕೆಲಸ ಮುಗಿಸುವ ಬದಲಿಗೆ ಒಂದೇ ಸಲಕ್ಕೆ ಎಲ್ಲವನ್ನೂ ಮಾಡಿಬಿಡೋಣ ಎಂದುಕೊಂಡು ಮುಂದಕ್ಕೆ ಹಾಕಿಕೊಂಡು ಹೋಗಬೇಡಿ. ಕಾಂಡಿಮೆಂಟ್ಸ್, ಚಾಟ್ಸ್ ಮಾರಾಟದ ವ್ಯವಹಾರ ಮಾಡುತ್ತಾ ಇರುವವರಿಗೆ ಹೊಸ ಅವಕಾಶಗಳು ಕಾಣಿಸಿಕೊಳ್ಳಲು ಶುರು ಆಗುತ್ತವೆ. ಮಳಿಗೆ ರಿನೊವೇಷನ್ ಮಾಡಿಸಬೇಕು ಎಂದುಕೊಳ್ಳುತ್ತಾ ಇದ್ದಲ್ಲಿ ಅದಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆ ಆಗಲಿದ್ದು, ಇದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 21ರಿಂದ 27ರ ತನಕ ವಾರಭವಿಷ್ಯ
ಬಂದದ್ದು ಬರಲಿ ಎಂದು ಧೈರ್ಯವಾಗಿ ನೀವು ತೆಗೆದುಕೊಂಡ ತೀರ್ಮಾನಗಳು ಲಾಭದಾಯಕ ಆಗಲಿದೆ. ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವುದಕ್ಕಾಗಿ ವಿರೋಧಿಗಳು ಮಾಡುವ ಪ್ರಯತ್ನಗಳು ಅವರಿಗೇ ಉಲ್ಟಾ ಹೊಡೆಯಲಿದೆ. ನಿಧಾನವಾಗಿ ಬದಲಾವಣೆಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಕೆಲವು ತಾಂತ್ರಿಕ ತರಬೇತಿಗಳನ್ನು ಅನಿವಾರ್ಯವಾಗಿ ಕಲಿಯಬೇಕು ಎಂಬ ಸ್ಥಿತಿ ನಿರ್ಮಾಣ ಆಗಲಿದೆ. ಆದರೆ ಇದರಿಂದ ಭವಿಷ್ಯದಲ್ಲಿ ನಿಮಗೆ ಅನುಕೂಲ ಆಗಲಿದೆ. ಕ್ರೀಡಾಪಟುಗಳಿಗೆ ಪ್ರಾಯೋಜಕರು ದೊರೆಯುವಂಥ ಯೋಗ ಇದೆ. ಪ್ರತಿಷ್ಠಿತ ಸಂಸ್ಥೆ ಅಥವಾ ವ್ಯಕ್ತಿಗಳು ಅವರಾಗಿಯೇ ಭೇಟಿ ಆಗುವಂತೆ ತಿಳಿಸಿದಲ್ಲಿ ನಿಧಾನ ಮಾಡಬೇಡಿ. ಇನ್ನು ಯುಪಿಐ ಮೂಲಕ ದೊಡ್ಡ ಮೊತ್ತದ ಪಾವತಿ ಮಾಡುವಂಥ ಸನ್ನಿವೇಶದಲ್ಲಿ ಸರಿಯಾದ ಸಂಖ್ಯೆಯನ್ನು ಬಳಸಿದ್ದೀರಾ ಎಂಬುದನ್ನು ಸಾವಕಾಶವಾಗಿ ಪರೀಕ್ಷಿಸಿಕೊಳ್ಳುವುದು ಕ್ಷೇಮ.
ನೀವು ನಂಬಿದ ವ್ಯವಹಾರ ಬೆಳವಣಿಗೆಗೆ ಸಹಕಾರಿ ಆಗುವ ಸುಳಿವು ನೀಡಲಿದೆ. ಸಂಗಾತಿ ಕುಟುಂಬದ ಕಡೆಯಿಂದ ದೊಡ್ಡ ಮಟ್ಟದಲ್ಲಿ ಬೆಂಬಲ ದೊರೆಯಲಿದೆ. ನಿಮ್ಮ ಜೊತೆಗೆ ಓದಿದಂಥ ಸ್ನೇಹಿತರ ಸಲಹೆಯಿಂದ ಆಲೋಚನಾ ವಿಧಾನವನ್ನು ಬದಲಾವಣೆ ಮಾಡಿಕೊಳ್ಳಲಿದ್ದೀರಿ. ನಿಮಗೆ ಗೊತ್ತಿರುವ ಕೌಶಲಕ್ಕೆ ಬೇಡಿಕೆ ಹೆಚ್ಚಾಗಲಿದ್ದು, ಕೆಲವು ಪ್ರಾಜೆಕ್ಟ್ ಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣ ಮಾಡಿಕೊಟ್ಟಲ್ಲಿ ಮಾರುಕಟ್ಟೆಯಲ್ಲಿ ಇರುವುದಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡುವುದಾಗಿ ಕೆಲವರು ಪ್ರಸ್ತಾವ ಇಡಲಿದ್ದಾರೆ. ನೀವು ಹಾಕಿದ್ದ ಪ್ಲಾನ್ ಗೆ ಸಂಬಂಧಿಸಿದಂತೆ ಇರುವ ಅನಿಶ್ಚಿತತೆ ದೂರ ಆಗಲಿದ್ದು, ಕುಟುಂಬದ ಎಲ್ಲ ಸದಸ್ಯರು ಬೆಂಬಲವನ್ನು ನೀಡಲಿದ್ದಾರೆ. ಸೆಕೆಂಡ್ ಹ್ಯಾಂಡ್ ವಸ್ತುಗಳು ಬಹಳ ಕಡಿಮೆಗೆ ಸಿಗುತ್ತಿದೆ, ಅದು ನಿಮಗೆ ಬಹಳ ಅಗತ್ಯವಾದ ವಸ್ತುಗಳು ಎಂದಾದಲ್ಲಿ ಖರೀದಿ ಮಾಡುವುದಕ್ಕೆ ಯಾವುದೇ ರೀತಿಯ ಹಿಂಜರಿಕೆ ಮಾಡಬೇಡಿ.
ನಿಮ್ಮ ಬುದ್ಧಿವಂತಿಕೆ ಹಾಗೂ ಚೌಕಾಶಿ ಮಾಡುವ ಸಾಮರ್ಥ್ಯ ಅತ್ಯುತ್ತಮವಾದ ಫಲ ನೀಡುವ ದಿನ ಇದಾಗಿರುತ್ತದೆ. ನಿಮ್ಮ ಜಮೀನು, ಸೈಟು ಅಥವಾ ಯಾವುದೇ ಅಸ್ತಿಗೆ ಸಂಬಂಧಿಸಿದ ಕಾಗದ ಪತ್ರದ ವ್ಯವಹಾರಕ್ಕೆ ಬಹಳ ಸಮಯದಿಂದ ಓಡಾಡುತ್ತಾ ಇದ್ದೀರಿ ಅಂತಾದರೆ ಅದು ಪೂರ್ಣಗೊಳ್ಳುವ ಯೋಗ ಇದೆ. ನಿಮ್ಮಿಂದ ಸಾಲ ಪಡೆದು ಬಹಳ ಸಮಯದಿಂದ ಅದನ್ನು ಹಿಂತಿರುಗಿಸಲ್ಲ ಅಂತಾದಲ್ಲಿ ಅದನ್ನು ವಸೂಲಿ ಮಾಡುವಂಥ ಯೋಗ ಈ ದಿನ ಇದೆ. ಬೇಕರಿ ಪದಾರ್ಥಗಳಿಂದ ದೂರ ಇರುವುದು ಒಳ್ಳೆಯದು. ಅದರಲ್ಲೂ ಇತ್ತೀಚೆಗೆ ನಿಮಗೆ ಹೊಟ್ಟೆನೋವಿನ ಸಮಸ್ಯೆ ತೀವ್ರ ಆಗಿದೆ ಅಂತಾದಲ್ಲಿ ಈ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಿ. ಸಂಗಾತಿ ಜತೆಗೆ ಮುಖ್ಯವಾದ ಸಂಗತಿಯನ್ನು ಚರ್ಚೆ ಮಾಡಲಿದ್ದೀರಿ. ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ತೃಪ್ತಿ, ಸಮಾಧಾನ ಹಾಗೂ ನೆಮ್ಮದಿಯನ್ನು ನೀಡಲಿದೆ.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ