ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಸಂಜೆ 05:14 ರಿಂದ 6:49ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:29 ರಿಂದ 02:04 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:14ರ ವರೆಗೆ.
ಮೇಷ ರಾಶಿ: ಇಂದು ವಾಹನದ ಖರೀದಿಗೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುವಿರಿ. ಭೂಮಿಗೆ ಸಂಬಂಧಿಸಿದ ಕಲಹಗಳು ಇಂದಿಗೆ ಮುಕ್ತಾಯಗೊಳ್ಳಬಹುದು. ತಾಯಿಯು ನಿಮಗೆ ಬೇಕಾದ ಸಹಾಯವನ್ನು ಮಾಡುವಳು. ತುರಿ, ನವೆ ಮುಂತಾದ ಚರ್ಮಕ್ಕೆ ಸಂಬಂಧಪಟ್ಟ ಖಾಯಿಲೆಗಳಿಗೆ ಖರ್ಚುಮಾಡಬೇಕಾಗಿ ಬರಬಹುದು. ವಿದ್ಯುತ್ ಉಪಕರಣದ ರಿಪೇರಿಗೆ ಅನಿರೀಕ್ಷಿತ ಹಣವನ್ನು ಖರ್ಚುಮಾಡುವಿರಿ. ಇದು ನಿಮಗೆ ಬೇಸರ ತರಿಸುವ ಕೆಲಸವಾಗಿರುತ್ತದೆ. ಹೊಸ ಯೋಜನೆಗಳು ಸಿಗಲಿದೆ. ಸಂಬಂಧಗಳು ಸುಧಾರಿಸುವ ಹಂತಕ್ಕೆ ಹೋಗಲಿವೆ. ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಿ. ಯಾರಾದರೂ ಶ್ರೇಷ್ಠ ವ್ಯಕ್ತಿಗಳ ಭೇಟಿಯು ಆಗಸ್ಮಿಕವಾಗಿ ಆಗಲಿದೆ. ಅವರ ಒಡನಾಟವನ್ನು ಇಟ್ಟುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳ ಒತ್ತಡಕ್ಕೆ ಕೊನೆಗೂ ಶರಣಾಗಬೇಕಾಗುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ.
ವೃಷಭ ರಾಶಿ: ನಿಮ್ಮ ವಿದೇಶದ ಪ್ರಯಾಣವು ಕೆಲವು ದಾಖಲೆಗಳ ಕೊರತೆ, ಅಸ್ಪಷ್ಟತೆಯ ಕಾರಣದಿಂದ ಮುಂದೂಡಲ್ಪಡಬಹುದು. ಅತಿಯಾದ ದೇಹಾಲಸ್ಯದಿಂದ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗದೇ ವಿಳಂಬವಾಗಲಿದೆ. ನೀವು ನಿರ್ಮಿಸಿಕೊಂಡ ನೂತನ ಗೃಹದಲ್ಲಿ ವಾಸವು ಆರಂಭವಾಗಲಿದೆ. ಹತ್ತಿರ ಬಂಧುಗಳನ್ನು ಕಳೆದುಕೊಳ್ಳಬಹುದು. ಬೇಸರಿಸದೇ ಸಹಜವಾಗಿ ಸ್ವೀಕರಿಸಿ. ಶ್ವಾಸಕೋಶದ ತೊಂದರೆಯು ಕಾಣಸಿಗಬಹುದು. ಅತಿಯಾದ ಆಹಾರವು ಅಜೀರ್ಣವಾಗಿ ತೊಂದರೆ ಕೊಡುವುದು. ಸಂಗಾತಿಯ ಹಳೆಯ ಸ್ನೇಹಿತನ ಭೇಟಿಯಾಗಲಿದೆ. ದಾಂಪತ್ಯದಲ್ಲಿ ಕೆಲವು ಕಹಿ ಮಾತುಗಳು ಬರಬಹುದು. ನಿಮಗ ಆಗುವಷ್ಟು ಭಾರವನ್ನು ಒಯ್ಯುವುದು ಉತ್ತಮ. ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿ ಪ್ರಯೋಜನವಾಗದು. ಯಾರದೋ ಸುದ್ದಿಯನ್ನು ಮತ್ಯಾರಿಗೋ ಹೇಳುತ್ತ ಸಮಯವನ್ನು ಕಳೆಯುವಿರಿ. ಮಕ್ಕಳಲ್ಲಿ ಸ್ಪರ್ಧೆಯ ಮನೋಭಾವವನ್ನು ಹೆಚ್ಚುಮಾಡುವಿರಿ.
ಮಿಥುನ ರಾಶಿ: ಇಂದು ಶತ್ರುಗಳ ಬಗ್ಗೆ ಬಹಳ ಕುತೂಹಲವಿರಲಿದೆ. ಜೋಪಾನವಾಗಿ ನಿಮ್ಮ ಯೋಜನೆಯನ್ನು ಸಿದ್ಧಮಾಡಿಕೊಳ್ಳುವುದು ಸೂಕ್ತ. ನೀವು ಸುಳ್ಳನ್ನು ಆಡುವವರು ಎನ್ನುವ ಹಣೆಪಟ್ಟಿ ಬೀಳಲಿದೆ. ನಿಮ್ಮ ಮಾತಿಗೆ ಬಿಡಿಗಾಸಿನಷ್ಟೂ ಬೆಲೆ ಇಲ್ಲದೇ ಕಡಿಮೆಯಾಗಬಹುದು. ನೀರಿಗೆ ಸಂಬಂಧಿಸಿದ ಉದ್ಯೋಗಾವಕಾಶಗಳು ಹೆಚ್ಚು ಸಿಗಬಹುದು. ನಿಮ್ಮ ಹೇಳಿಕೆಗಳು ಬಹಳ ಹರಿತವಾಗಿ ಇರುವುದು. ಕೃಷಿಗೆ ಸಂಬಂಧಿಸಿದ ವಸ್ತುಗಳ ವ್ಯಾಪಾರ ಅಧಿಕವಾಗಲಿದೆ. ಊರಿನಿಂದ ಹೊರಹೋಗುವ ಸಾಧ್ಯತೆ ಇದೆ. ಕಲಾವಿದರು ಹೆಚ್ಚಿನ ಪ್ರಶಂಸೆಯನ್ನು ಗಳಿಸುವರು. ಆಪ್ತರು ನೀಡಿದ ವಸ್ತುವನ್ನು ಕಳೆದುಕೊಳ್ಳುವಿರಿ. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬೇಕಾದಷ್ಟು ಮಾತ್ರ ಮಾತುಗಳನ್ನಾಡಿ. ತಲೆಯ ನೋವಿಗೆ ಯೋಗ್ಯ ಚಿಕಿತ್ಸೆಯನ್ನು ಮಾಡಿಕೊಳ್ಳಿ.
ಕಟಕ ರಾಶಿ: ಇಂದು ನಿಮಗೆ ಅಧ್ಯಾತ್ಮದ ಕಡೆ ಓಲೈಕೆ ಹೆಚ್ಚು ಇರಲಿದೆ. ಶತ್ರುಗಳು ಮಿತ್ರರಾಗಲು ಬರಬಹುದು. ನಿಮ್ಮ ಪ್ರಭಾವೀ ವ್ಯಕ್ತಿತ್ವವನ್ನು ಜನಕ್ಕೆ ತಿಳಿಸುವಿರಿ. ನೀವಿಡುವ ಹೆಜ್ಜೆಯು ಗುರುತಾಗಲಿದೆ. ಎಂತಹ ಹೆಜ್ಜೆಗಳನ್ನು ಇಡಬೇಕು ಎನ್ನುವುದನ್ನು ತೀರ್ಮಾನಿಸಿಕೊಳ್ಳಿ. ಉದ್ಯೋಗದ ಕಾರಣಕ್ಕೆ ವಿದೇಅಸಕ್ಕೆ ಹೋಗಬೇಕಾಗಿ ಬರಬಹುದು. ಬಂಧುಗಳ ಭೇಟಿ ಸುಖದಾಯಕವಾದುದಾಗಿರುತ್ತದೆ. ಒಂದಕ್ಕೊಸ್ಕರ ಎರಡನ್ನು ಬಿಡಬೇಕಾದೀತು. ಯಾವುದೋ ಒಪ್ಪಂದಗಳಿಗೆ ಸಹಿ ಹಾಕಿಬಿಡಬೇಡಿ. ಅನುಭವಿಗಳ ಜೊತೆ ಚರ್ಚೆಗಳನ್ನು ಮಾಡಿ. ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುವಿರಿ. ಹಿಂದೊಮ್ಮೆ ಆಲೋಚಿಸಿದ್ದ ಕೆಲಸಗಳನ್ನು ಪುನಃ ಆರಂಭಿಸುವಿರಿ. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ಕತ್ತಲೆಯನ್ನು ಶಪಿಸುವುದಕ್ಕಿಂತ ಬೆಳಕನ್ನು ಹುಡುಕುವುದು ಉತ್ತಮ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ.
ಸಿಂಹ ರಾಶಿ: ನಿಮ್ಮವರ ಕೆಲವು ವರ್ತನೆಗಳು ಬೇಸರವನ್ನೂ ತರಿಸಬಹುದು. ಇದರಿಂದ ಸಿಟ್ಟುಕೊಂಡ ದೂರ ಸರಿಯುವ ನಿರ್ಧಾರಗಳನ್ನೂ ತೆಗಕೊಳ್ಳುವ ಸಾಧ್ಯತೆ ಇದೆ. ಉದ್ವೇಗಕ್ಕೆ ಒಳಗಾಗದೇ ತಾಳ್ಮೆಯಿಂದ ವರ್ತಿಸುವುದು ಉಚಿತ. ದಾಂಪತ್ಯದಲ್ಲಿ ಮಾತಿನ ಸಣ್ಣ ಬಿಸಿ ಉಂಟಾಗಬಹುದು. ಮನಸ್ಸಿನಲ್ಲಿ ಒಡಕುಗಳು ಮೂಡಬಹುದು. ಆದಷ್ಟು ಮುಂದುವರಿಯದೇ ನಿಲ್ಲಿಸಲು ಪ್ರಯತ್ನಿಸಿ. ಮುಂದೆ ಅದು ವಿಚ್ಛೇದನಕ್ಕೆ ಕಾರಣವಾಗಬಹುದು. ಎಲ್ಲವನ್ನೂ ಸಿಟ್ಟಿನಿಂದ ಗೆಲ್ಲಲು ಸಾಧ್ಯವಾಗದು. ಗೃಹಬಳಕೆಯ ವಸ್ತುಗಳಿಂದ ಖರ್ಚು ಹೆಚ್ಚಾಗಬಹುದು ಭೂಮಿಯ ವ್ಯವಹಾರಸ್ಥಾರಿಗೆ ಲಾಭವಿದೆ. ನಿಮಗೆ ಗೌರವಕ್ಕೆ ತೊಂದರೆ ಆಗಬಹುದು. ಉತ್ತಮ ಭೋಜನವನ್ನು ಮಾಡುವಿರಿ. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು. ವಿರೋಧಿಗಳ ಮಾತಿನ ಭರದಲ್ಲಿ ನಿಮ್ಮ ಮಾತು ಗೌಣವಾಗಬಹುದು. ನಿಮ್ಮನ್ನು ನಿಂದಿಸುವವರನ್ನು ನೀವು ದೂರವಿರಿಸುವಿರಿ.
ಕನ್ಯಾ ರಾಶಿ: ಇಂದು ನಿಮಗಾದ ಅಪಮಾನವು ದ್ವೇಷವಾಗಿ ಬದಲಾಗುವುದು. ಬಂಧುಗಳು ನಿಮ್ಮನ್ನು ನೋಡಿ ಆಡಿಕೊಳ್ಳುವರು. ನಿಮ್ಮೆದುರು ಮಾತನಾಡದೇ ಹಿಂಬದಿಯಿಂದ ಮಾತನಾಡಲಿದ್ದಾರೆ. ಕೃಷಿಯ ಬಗ್ಗೆ ಆಸಕ್ತಿ ಇರುವ ನೀವು ಕೃಷಿಯನ್ನು ಮಾಡಿ ಸ್ವಲ್ಪಮಟ್ಟಿನ ಲಾಭವನ್ನು ಗಳಿಸುವಿರಿ. ತಂದೆಯು ನಿಮ್ಮ ಕೆಲಸಕ್ಕೆ ಧನಸಹಾಯವನ್ನು ಮಾಡಲಿದ್ದಾರೆ. ಸಹೋದರನು ನಿಮಗೆದುರಾದ ತೊಂದರೆಯನ್ನು ಪರಿಹರಿಸಿಕೊಳ್ಳಲು ನಿಮ್ಮ ಸಹಾಯಕ್ಕೆ ಬರಲಿದ್ದಾನೆ. ಕೆಲಸಗಳು ವಿಘ್ನಗಳ ನಿಧಾನವಾಗಲಿದೆ. ಮಾತಿನಲ್ಲಿ ಹಿಡಿತಬೇಕು ಎನಿಸಬಹುದು. ಯಾರಿಗೂ ಹೇಳಿಕೊಳ್ಳದೇ ನೀವೊಬ್ಬರೇ ರೋಗವನ್ನು ಅನುಭವಿಸುವಿರಿ. ಕೆಲವರ ಸಹವಾಸದಿಂದ ನಿಮ್ಮ ದಿಕ್ಕು ತಪ್ಪಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ಅಲ್ಪಾವಧಿಯಲ್ಲಿ ಅಧಿಕ ಲಾಭಕ್ಕಾಗಿ ಹೂಡಿಕೆ ಮಾಡುವಿರಿ. ವಿದೇಶೀಯ ವ್ಯಾಪಾರವು ಹೆಸರಿಗಷ್ಟೇ ಇರುವುದು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು.
ತುಲಾ ರಾಶಿ: ನಿಮ್ಮ ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ನಡೆಯುವುದು. ಗೌರವ ಹಾಗೂ ಸಮ್ಮಾನಗಳು ನಿಮಗೆ ಸಿಗಲಿವೆ. ಕಛೇರಿಯಲ್ಲಿ ನೀವು ಸಿದ್ಧಪಡಿಸಿರುವ ಯೋಜನೆಗಳಿಗೆ ಪ್ರಶಂಸೆ ಸಿಗುವುದು. ಒತ್ತಡಗಳನ್ನು ನಿವಾರಿಸುವ ವಿದ್ಯೆಯು ಕರಗತವಾಗಿದ್ದು ಅನಾಯಾಸದಿಂದ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಹೊಸ ಕೆಲಸವನ್ನು ಆರಂಭಿಸುವವರು ಆರಂಭಿಸಲು ಯೋಗ್ಯವಾದ ಸಮಯವಾಗಿದೆ. ಯಾರಿಂದಲೋ ಪ್ರೇರಿತರಾಗಿ ಆಸ್ತಿಯನ್ನು ಪಡೆಯುವ ಹುನ್ನಾರ ನಡೆಸುವಿರಿ. ರಾಜಕೀಯದಲ್ಲಿ ವಿವಾದಸ್ಪದ ಮಾತುಗಳು ಆಡಿ ಎಲ್ಲರ ಕೆಂಗಣ್ಣಿಗೆ ಸಿಲುಕುವಿರಿ. ಮುಖಂಡರ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಅಮೂಲ್ಯವಾದ ವಸ್ತುಗಳು ಪಡೆದುಕೊಳ್ಳುವಿರಿ. ಇಂದು ನಿಮ್ಮ ಮಾತಿನ ಆರಂಭವೇ ನೀವು ಎಂತಹವರು ಎನ್ನುವುದನ್ನು ತಿಳಿಸುತ್ತದೆ. ಕೆಲಸಗಳಲ್ಲಿ ನೀವು ಜಯವನ್ನು ಸಾಧಿಸಬಹುದು.
ವೃಶ್ಚಿಕ ರಾಶಿ: ಇಂದು ಹಿಡಿದ ಕೆಲಸವನ್ನು ಬಿಡದೇ ಮುಗಿಸುವ ಸ್ವಭಾವವಿರಲಿದೆ. ನೀವು ಬಹಳ ದಿನಗಳಿಂದ ಮಾಡುತ್ತಿರುವ ಕಾರ್ಯಗಳು ಮುಂದೆ ಹೋಗುತ್ತಿದ್ದು ಇಂದು ಅದನ್ನು ಪೂರೈಸುವಿರಿ. ಇಂದು ಮನಸ್ಸು ನಿರಾಳವಾಗಿ ಯಾವದೇ ಒತ್ತಡಕ್ಕೆ ಸಿಲುಕದೇ ಇರುವುದು. ನಿಮ್ಮ ಯಾರಾದರೂ ಕೆಣಕಬಹುದು. ದುರಭ್ಯಾಸವು ಮನೆಯವರಿಗೆ ಗೊತ್ತಾಗಲಿದೆ. ಉದ್ವೇಗಕ್ಕೆ ಒಳಗಾಗಿ ಸ್ನೇಹಿತರ ಅಪಹಾಸ್ಯಕ್ಕೆ ಸಿಲುಕಬೇಡಿ. ಆಯಾಸದ ಪ್ರಯಾಣವನ್ನು ಮಾಡುವಿರಿ. ಅತಿಯಾದ ಭಾರವನ್ನು ಎತ್ತುವ ಕೆಲಸಕ್ಕೆ ಹೋಗಬೇಡಿ. ನಿಮ್ಮ ಇಂದಿನ ಗಂಭೀರ ಮೌನಕ್ಕೂ ಅರ್ಥವು ಇರಲಿದೆ. ಮಕ್ಕಳ ಜೊತೆ ಅನ್ಯೋನ್ಯ ಸಂಬಂಧವು ಕಾಣಿಸಿಕೊಂಡೀತು. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ. ಆರ್ಥಿಕ ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು.
ಧನು ರಾಶಿ: ಆರ್ಥಿಕವಾಗಿ ಸಬಲರಾದವರು ಖರ್ಚನ್ನು ಹೆಚ್ಚು ಮಾಡುವರು. ಅನಗತ್ಯ ಕಾರ್ಯಹಳ ಪಟ್ಟಿಯೇ ದೊಡ್ಡದಾಗುವುದು. ತುರ್ತು ಅವಶ್ಯಕತೆಗಳನ್ನು ಮಾತ್ರ ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡಿ. ಯಾವುದೇ ಸಾಹಸಕ್ಕೆ ಕೈ ಹಾಕಲು ಹೋಗುವುದು ಬೇಡ. ನಿಮಗೆ ಭವಿಷ್ಯದ ಚಿಂತೆ ಇರಲಿದೆ. ನೀರಿನ ಪ್ರದೇಶಗಳಿಗೆ ಹೋಗುವ ಮನಸ್ಸು ನಿಮ್ಮದಾಗಲಿದೆ. ದೂರದ ಊರಿಗೆ ಪ್ರಯಾಣ ಹೋಗುವಿರಿ. ಕುಳಿತಲ್ಲೇ ಕುಳಿತು ದೇಹ ಮತ್ತು ಮನಸ್ಸು ಜಡವಾಗಿದೆ ಎಂದು ಅನ್ನಿಸಲಿದೆ. ಮಕ್ಕಳ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವೈದ್ಯಕೀಯ ವೃತ್ತಿಯಲ್ಲಿ ತುರ್ತು ಕಾರ್ಯಗಳು ಬರುವುದು. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು. ಆರೋಗ್ಯವು ಬಡವಾದಂತೆ ತೋರುವುದು.
ಮಕರ ರಾಶಿ: ಇಂದು ಅನ್ಯ ಮಾರ್ಗವಿಲ್ಲದೆ ಉದ್ಯೋಗವನ್ನೇ ನಂಬಿದವರಿಗೆ ಸ್ವಲ್ಪ ಆರ್ಥಿಕವಾಗಿ ಹಿನ್ನಡೆಯಾಗಲಿದೆ. ಕಛೇರಿಯಲ್ಲಿ ನಿಮ್ಮನ್ನು ಹಿಮ್ಮೆಟ್ಟಲು ಕಾಯುತ್ತಿರುವರು. ಅವರಿಗೆ ನೀವು ಆಹಾರವಾಗಲಿದ್ದೀರಿ. ಇಂದು ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವಿರಿ. ನಿಮ್ಮ ಅನಂತರ ಕೆಲಸ ಮಾಡುವವರಿಂದ ನಿಮಗೆ ಕೆಲವು ಮಾತುಗಳು ಸಿಗಬಹುದು. ಮಾತಿನ ಮೇಲೆ ಹಿಡಿತವನ್ನು ಇಟ್ಟು, ಆಲೋಚಿಸಿ ಮಾತನಾಡಿ. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ. ಸಾಮಾಜಿಕವಾದ ನಿಮ್ಮ ಕಾರ್ಯಗಳು ಪ್ರಶಂಸೆಯನ್ನು ಪಡೆಯುತ್ತವೆ. ಯಾವ ಬಲವನ್ನು ನಂಬದೇ ಸ್ವಪ್ರಯತ್ನದಿಂದ ಎಲ್ಲವನ್ನೂ ಮಾಡಲು ಬಯಸುವಿರಿ. ಮುರಿದ ಸಂಬಂಧಗಳು ಎಷ್ಟೇ ಆದರೂ ಸರಿಯಾಗಿ ಕೂಡಿಕೊಳ್ಳುವುದು ಕಷ್ಟವಾದೀತು. ಇಂದಿನ ಕಾರ್ಯಗಳಲ್ಲಿ ತೊಂದರೆಗಳು ಎದ್ದು ಕಾಣಿಸುವುದು. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ.
ಕುಂಭ ರಾಶಿ: ನಿಮ್ಮ ಮೇಲೆ ಇಂದು ಎಂದೂ ಮಾಡದ ಕೆಲಸಕ್ಕೆ ಅಪವಾದಗಳು ಬರಲಿವೆ. ಅದನ್ನು ನ್ಯಾಯಸಮ್ಮತವಾಗಿ ದೃಷ್ಟಾಂತ ಸಹಿತ ಅಲ್ಲಗಳೆಯುವಿರಿ. ದೂರದ ಊರಿಗೆ ವೈಯಕ್ತಿಕ ಕಾರ್ಯದ ನಿಮಿತ್ತ ಪ್ರಯಾಣ ಮಾಡಲಿದ್ದೀರಿ. ಸ್ನೇಹಿತ ಮಾತುಗಳು ನಿಮಗೆ ಕಸಿವಿಸಿ ವಾತಾವರಣವನ್ನು ಉಂಟುಮಾಡಲಿದೆ. ಉನ್ನತ ವಿದ್ಯಾಭ್ಯಾಸವನ್ನು ಮಾಡುವವರಿಗೆ ವಿದೇಶಗಳಲ್ಲಿ ಅವಕಾಶವು ದೊರೆಯಲಿದೆ. ಇನ್ನೊಬ್ಬರಿಗೆ ತೊಂದರೆ ಕೊಡುವ ಕಾರ್ಯದಲ್ಲಿ ಹಿಂದೇಟು ಹಾಕುವಿರಿ. ಸಾಲವನ್ನು ಮಾಡುವುದಿದ್ದರೆ ಅವಶ್ಯಕತೆಗೆ ತಕ್ಕಂತೆ ಮಾಡಬಹುದು. ಅಪರಿಚಿತರ ಜೊತೆ ವೃಥಾ ಕಲಹವಾಗಬಹುದು. ನಿಮ್ಮ ಇಂದಿನ ನಡೆಯು ಅನೂಹ್ಯವಾಗಿರುವುದು. ರಾಜಕೀಯದಲ್ಲಿ ಬದಲಾವಣೆಯನ್ನು ತರಿಸುವುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ. ಕೆಲವು ಗೊಂದಲವು ಪರಿಹಾರವಾಗದೇ ಹಾಗೆಯೇ ಇರುವುದು.
ಮೀನ ರಾಶಿ: ಇಂದು ಗುರುತು ಪರಿಚಯವಿಲಗಲದ ವ್ಯಕ್ತಿಗಳಿಂದ ಜೀವನಕ್ಕೆ ಬೇಕಾದ ಉಪದೇಶವು ಸಿಗಲಿವೆ. ಖುಷಿಯಾಗಿರಲು ಕೆಲವು ಸಂಗತಿಗಳು ನಿಮ್ಮ ಪಾಲಿಗೆ ಇರಲಿವೆ. ವಿನಾಕಾರಣ ಸಂಗಾತಿಯ ನಡುವೆ ಸಣ್ಣ ಕಲಹಗಳು ಹುಟ್ಟಿಕೊಳ್ಳಬಹುದು. ಅನಿವಾರ್ಯವಾಗಿ ಹೊರಗಿನ ತಿಂಡಿಯನ್ನು ತಿನ್ನಬೇಕಾದೀತು. ಉದರಕ್ಕೆ ಸಂಬಂಧಿಸಿದ ರೋಗವು ಬಂದು ಆರೋಗ್ಯವು ಕೆಡುವುದು. ನಿಮಗೆ ಕೆಲವು ಶುಭ ಶಕುನಗಳು ಕಾಣಿಸಿಕೊಳ್ಳಲಿದ್ದು ಅದರಂತೆ ನಿಮ್ಮ ನಡಿಗೆ ಇರಲಿ. ಸಹನೆಯ ಪರೀಕ್ಷೆಯಲ್ಲಿ ನೀವು ಗೆಲ್ಲುವಿರಿ. ವಿನಾಕಾರಣ ನೆಮ್ಮದಿಯನ್ನು ಹಾಳುಮಾಡಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ನಿಮ್ಮನ್ನು ನಗಿಸುವ ಪ್ರಯತ್ನ ಮಾಡಿದರೂ ನೀವು ಯಾವುದೋ ಆಲೋಚನೆಯಲ್ಲಿಯೇ ಇರುವಿರಿ. ನಿಮ್ಮ ಇಂದಿನ ಶ್ರಮಕ್ಕೆ ತಕ್ಕುದಾದ ಫಲವು ಸಿಗಬಹುದು. ಭೂಮಿಯ ವ್ಯಾಪಾರದಲ್ಲಿ ಜಯವಾಗಲಿದೆ. ಎಲ್ಲರ ಮಾತನ್ನು ಧಿಕ್ಕರಿಸುವ ಉದ್ಧಟತನ ಬೇಡ.
ಲೋಹಿತ ಹೆಬ್ಬಾರ್ – 8762924271 (what’s app only)