Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮೇ 5ರಿಂದ 11ರ ತನಕ ವಾರಭವಿಷ್ಯ  

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ5 ರಿಂದ 11ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮೇ 5ರಿಂದ 11ರ ತನಕ ವಾರಭವಿಷ್ಯ  
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 04, 2024 | 5:34 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ5 ರಿಂದ 11ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ವಿದೇಶಗಳಲ್ಲಿ ಇರುವಂಥವರಿಗೆ ಅಥವಾ ಮನೆಯಿಂದ ಅಥವಾ ಸಂಗಾತಿ- ಮಕ್ಕಳಿಂದ ದೂರವಿರುವಂಥವರಿಗೆ ಹಳೆಯ ನೆನಪುಗಳು ಆಗುವುದರಿಂದ ನಿಮ್ಮ ಮನಸ್ಸಿಗೆ ಬಹಳ ಸಂತೋಷ ಆಗಲಿದೆ. ಅದರಲ್ಲೂ ದೂರದ ಪ್ರದೇಶಗಳಲ್ಲಿ ಅಥವಾ ವಿದೇಶಗಳಲ್ಲಿ ವಾಸವಾಗಿದ್ದು, ಈಗ ತಮ್ಮ ತವರಿಗೆ ವಾಪಸ್ ಆಗುವಂಥವರಿಗೆ ಪ್ರೀತಿ- ಪ್ರೇಮ ಪ್ರಕರಣಗಳು ಇನ್ನಷ್ಟು ಗಟ್ಟಿಯಾಗಲಿದೆ. ಅಥವಾ ಈ ವಾರದಲ್ಲಿ ಮದುವೆಯೇ ನಿಶ್ಚಯ ಸಹ ಆಗುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ನಿಮ್ಮ ಮನಸ್ಸಿನಲ್ಲಿ ಇರುವಂಥ ವಿಚಾರಗಳನ್ನು ಹೇಳಿಕೊಳ್ಳುವುದಕ್ಕೆ ಹಿಂಜರಿಕೆ ಮಾಡಬೇಡಿ. ಇನ್ನು ಜಮೀನು, ಮನೆ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಹಿರಿಯರು ನೀಡುವ ಸಲಹೆ- ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಈ ದಿನ ಕೆಲವು ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ಉದ್ಯೋಗಸ್ಥರು, ಅದರಲ್ಲೂ ಅಕೌಂಟಿಂಗ್, ಬ್ಯಾಂಕಿಂಗ್, ಷೇರು ಬ್ರೋಕಿಂಗ್, ಹಣಕಾಸು ಸಲಹೆಗಳನ್ನು ನೀಡುವಂಥ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು ಹೊಸ ಕೋರ್ಸ್ ಗೆ ಸೇರ್ಪಡೆ ಆಗುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಸೋದರ ಸಂಬಂಧಿಗಳೇ ಈ ಕ್ಷೇತ್ರದಲ್ಲಿ ಇದ್ದಲ್ಲಿ ಅವರನ್ನು ಭೇಟಿ ಮಾಡಿ, ಅವರಿಂದ ಸೂಕ್ತ ಸಲಹೆ- ಸೂಚನೆಗಳನ್ನು ಪಡೆದುಕೊಳ್ಳಲಿದ್ದೀರಿ. ಇದರಿಂದ ಮನಸ್ಸಿಗೆ ಖುಷಿ, ಸಮಾಧಾನ ಆಗಲಿದೆ. ಈಗಾಗಲೇ ಶಸ್ತ್ರಚಿಕಿತ್ಸೆ ಆಗಿರುವಂಥವರು ಅಥವಾ ಬೆನ್ನಿಗೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಾ ಇರುವಂಥವರು ಭಾರವಾದ ವಸ್ತುಗಳನ್ನು ಎತ್ತಬೇಕಾಗುತ್ತದೆ ಎಂದಾದಲ್ಲಿ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ. ಕಡಿಮೆ ಬಡ್ಡಿಗೆ ಸಾಲ ದೊರೆಯಲಿದೆ ಅಥವಾ ಝೀರೋ ಕಾಸ್ಟ್ ಇಎಂಐ ದೊರೆಯಲಿದೆ ಎಂಬ ಕಾರಣಕ್ಕೆ ನಿಮಗೆ ಅಗತ್ಯವಾದ ಕೆಲವು ವಸ್ತುಗಳನ್ನು ಖರೀದಿಸಲಿದ್ದೀರಿ. ಇದಕ್ಕೆ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಸಹಾಯ ಮಾಡಬಹುದು. ಸರ್ಕಾರಿ ಯೋಜನೆಗಳಿಗೆ ಅರ್ಜಿ ಹಾಕಬೇಕು ಎಂದಿರುವವರಿಗೆ ನಾನಾ ಬಗೆಯಲ್ಲಿ ಅನುಕೂಲಗಳು ದೊರೆಯಲಿದೆ ಹಾಗೂ ನೀವು ಕೈಯಿಂದ ಎಷ್ಟು ಹಣ ಖರ್ಚಾಗಬಹುದು ಎಂದುಕೊಂಡಿರುತ್ತೀರೋ ಅದಕ್ಕಿಂತ ಕಡಿಮೆ ಖರ್ಚಿನಲ್ಲಿ ಕೆಲಸ ಮುಗಿಯಲಿದೆ. ಕೃಷಿಕರಿಗೆ ಮನೆ ಅಥವಾ ಜಮೀನಿನ ವಿಚಾರಕ್ಕೆ ಬೆಳವಣಿಗೆ, ಅಭಿವೃದ್ಧಿ ಇದೆ. ಆದಾಯ- ವೆಚ್ಚದ ವಿಚಾರದಲ್ಲಿ ನಿಮ್ಮ ಲೆಕ್ಕಾಚಾರಗಳು ಸರಿಯಾಗಿ ನಡೆಯುವುದರಿಂದ ಒಂದು ಬಗೆಯ ಸಮಾಧಾನ ನಿಮಗೆ ಇರಲಿದೆ,. ಮನೆಯ ದುರಸ್ತಿ ಮಾಡಬೇಕು ಎಂದಿರುವವರು ಈ ಬಗ್ಗೆ ಮಾತುಕತೆ ನಡೆಸಲಿದ್ದೀರಿ. ಸ್ವಲ್ಪ ಮುಂಗಡವನ್ನು ಸಹ ನೀಡುವ ಸಾಧ್ಯತೆಗಳಿವೆ. ಇದೇ ವೇಳೆ ರುಚಿಕಟ್ಟಾದ ಊಟ- ತಿಂಡಿ ಮಾಡುವ ಯೋಗ ಇದೆ. ವೃತ್ತಿನಿರತರು ಏಕಾಂಗಿಯಾಗಿ ಇದ್ದೇನೆ ಎಂದು ಇಷ್ಟು ಸಮಯ ಅನ್ನಿಸುತ್ತಿದ್ದಲ್ಲಿ ಈಗ ಇತರರ ನೆರವು ದೊರೆಯಲಿದೆ. ಈ ಹಿಂದಿನ ಘಟನಾವಳಿಗಳಿಂದ ಆಗಿದ್ದ ಬೇಸರ ಅಥವಾ ಭಿನ್ನಾಭಿಪ್ರಾಯಗಳನ್ನು ನಿವಾರಣೆ ಮಾಡಿಕೊಳ್ಳಲಿದ್ದೀರಿ. ಈ ಹಿಂದೆ ತೆಗೆದುಕೊಂಡ ನಿರ್ಧಾರಗಳಿಂದ ಈಗ ಅನುಕೂಲ ಕೂಡಿ ಬರಲಿವೆ. ಈ ವಾರ ನಿಮಗೆ ನೀಡುವ ಎಚ್ಚರಿಕೆ ಅಥವಾ ಸಲಹೆ ಏನೆಂದರೆ ಊಟ- ತಿಂಡಿ ವಿಚಾರದಲ್ಲಿ ಪಥ್ಯವನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಇತರ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಅಭಿಪ್ರಾಯ ಹೇಳುವುದೋ ಅಥವಾ ಇನ್ಯಾರದೋ ಜತೆಯಲ್ಲಿ ಮಾತನಾಡುವುದೋ ಮಾಡಬೇಡಿ. ವಿದ್ಯಾರ್ಥಿಗಳು ಇನ್ನೊಬ್ಬರ ಪರವಾಗಿ ನಿರ್ಧಾರ ತೆಗೆದುಕೊಳ್ಳುವಂಥ ಸನ್ನಿವೇಶಗಳಲ್ಲಿ ಸರಿಯಾದ ತೀರ್ಮಾನವನ್ನು ಮಾಡಿ, ಇತರರ ಮೆಚ್ಚುಗೆಯನ್ನು ಪಡೆಯಲಿದ್ದೀರಿ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿ ಆಗುವಂಥ ಸೂಚನೆಗಳು ಕಂಡುಬರುತ್ತಿವೆ. ಪೋಷಕರು ಅಥವಾ ತಾತ- ಅಜ್ಜಿ ಒಂದಷ್ಟು ಮೊತ್ತವನ್ನು ನಿಮಗೆ ನೀಡುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಇಷ್ಟು ಸಮಯ ಕಾಡುತ್ತಿದ್ದ ದಾಖಲೆ- ಪತ್ರಗಳ ವ್ಯವಹಾರಗಳಲ್ಲಿ ಸಮಾಧಾನ ದೊರೆಯಲಿದೆ. ಕಾನೂನು ತಿಳಿದವರು, ಅನುಭವಿಗಳು ನಿಮಗೆ ಎಲ್ಲ ರೀತಿಯಿಂದ ನೆರವು ನೀಡಲಿದ್ದಾರೆ. ನಿಮ್ಮ ನಿರ್ಧಾರ, ತೀರ್ಮಾನಗಳು ನಿಚ್ಚಳವಾಗಿ ಇರಲಿವೆ. ಹೊಸದಾಗಿ ಸ್ನೇಹಿತರಾದವರು- ಪರಿಚಯ ಆದವರಿಂದ ನಿಮಗೆ ಆಗಬೇಕಾದ ಕೆಲಸಗಳು ಸಲೀಸಾಗಿ ಆಗಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಎದುರಿಗೆ ಇರುವಂಥ ವ್ಯಕ್ತಿಯ ಅಗತ್ಯಗಳನ್ನು ಅರ್ಥ ಮಾಡಿಕೊಂಡು, ಅವರಿಗೆ ಬೇಕಾದಂಥದ್ದನ್ನು ದೊರಕಿಸಿಕೊಡುವ ಸಾಮರ್ಥ್ಯ ಹೆಚ್ಚಾಗಿ ಇರಲಿದೆ. ಆ ಕಾರಣದಿಂದಾಗಿ ಯಾವ ಗ್ರಾಹಕರ ಜತೆಗೆ ಅಥವಾ ವ್ಯಕ್ತಿಗಳ ಜತೆಗೆ ವ್ಯವಹರಿಸುವುದು ಕಷ್ಟ ಎಂದು ನಿಮ್ಮ ಸಹೋದ್ಯೋಗಿಗಳು ಕೈ ಚೆಲ್ಲಿ ಸುಮ್ಮನಾಗಿರುತ್ತಾರೋ ಅಂಥವರ ಜತೆಗೆ ಬಹಳ ಸರಳವಾಗಿ ಹಾಗೂ ಸುಲಭವಾಗಿ ವ್ಯವಹರಿಸುವುದಕ್ಕೆ ನೀವು ಯಶಸ್ವಿಯಾಗಲಿದ್ದೀರಿ. ಹೊಸ ಬಟ್ಟೆ, ಪ್ಲಾಟಿನಂ ಆಭರಣ- ಅದರಲ್ಲೂ ವಜ್ರದ ಆಭರಣವನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗಿದೆ. ಇನ್ನು ನಿಮಗೆ ಈ ಹಿಂದೆ ಯಾರಿಗೆ ಕೆಲಸ ಮಾಡಿಕೊಟ್ಟಿರುತ್ತೀರೋ ಅಂಥ ಕೆಲವರು ಉಡುಗೊರೆಗಳನ್ನು ನೀಡುವಂಥ ಸಾಧ್ಯತೆ ಇದೆ. ಗೇಟೆಡ್ ಕಮ್ಯುನಿಟಿಯಲ್ಲಿ ನಿವೇಶನ ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ಅದು ಕೂಡ ನೀವು ಯಾವ ಬೆಲೆಗೆ ಖರೀದಿಸಬೇಕು ಎಂದು ಇರುತ್ತೀರೋ ಅದಕ್ಕಿಂತ ಕಡಿಮೆಗೆ ಸಿಗುವ ಸಾಧ್ಯತೆಗಳಿವೆ. ನೀವು ಇರುವ ಸ್ಥಳದಿಂದ ಪಶ್ಚಿಮಕ್ಕೆ ಅಥವಾ ನೈರುತ್ಯಕ್ಕೆ ಪ್ರಯಾಣ ಮಾಡುವುದರ ಮೂಲಕ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬ್ಯಾಂಕ್ ನಲ್ಲಿ ಎಫ್ ಡಿ ಎಂದಿಟ್ಟಿದ್ದಲ್ಲಿ ಅದನ್ನು ಮುರಿಸುವ ಬಗ್ಗೆ ಹಾಗೂ ಅದನ್ನು ಅದಕ್ಕಿಂತ ಹೆಚ್ಚಿನ ರಿಟರ್ನ್ಸ್ ದೊರೆಯುವ ಕಡೆಯಲ್ಲಿ ಹೂಡಿಕೆ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ತೀರಾ ಆಕ್ರಮಣಕಾರಿಯಾಗಿ ಹಣ ಕೂಡಿಡುವ ಬಗ್ಗೆ ಲೆಕ್ಕಾಚಾರ ಹಾಕಿಕೊಳ್ಳಲಿದ್ದೀರಿ. ಸ್ನೇಹಿತರು- ಸಂಬಂಧಿಕರು ನೀಡುವ ಮಾಹಿತಿ ಬಹಳ ಉಪಯುಕ್ತವಾಗಲಿದೆ. ಕೃಷಿಕರಿಗೆ ವಿಪರೀತ ಕೆಲಸದ ಒತ್ತಡ ಬೀಳಲಿದೆ. ಕೆಲವು ನೀವಾಗಿಯೇ ಮೈ ಮೇಲೆ ಹಾಕಿಕೊಳ್ಳಲಿದ್ದೀರಿ. ಇನ್ನು ಕೆಲವು ಅನಿರೀಕ್ಷಿತವಾಗಿ ತಾವಾಗಿಯೇ ಹುಡುಕಿಕೊಂಡು ಬರಲಿವೆ. ಯಾವುದಕ್ಕೆ ಹೌದು ಎನ್ನಬೇಕು ಹಾಗೂ ಯಾವುದಕ್ಕೆ ಇಲ್ಲ ಎನ್ನಬೇಕು ಎಂಬ ಬಗ್ಗೆ ಸ್ಪಷ್ಟತೆಯನ್ನು ಇರಿಸಿಕೊಳ್ಳಿ. ಇತರರ ಸಾಮರ್ಥ್ಯವನ್ನು ನಂಬಿಕೊಂಡು, ಹೂಂ ಅಂದುಬಿಡಬೇಡಿ. ಯಾವ ವಿಚಾರವಾದರೂ ದುಡ್ಡು- ಕಾಸಿನ ವಿಚಾರವನ್ನು ಆರಂಭದಲ್ಲಿಯೇ ಮಾತನಾಡಿಕೊಂಡು, ಮುಂದುವರಿಯಿರಿ. ವೃತ್ತಿನಿರತರಾಗಿದ್ದಲ್ಲಿ ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಇರುವಂಥವರು ಅಥವಾ ಈಗಾಗಲೇ ಅದೇ ಕಾರಣಕ್ಕೆ ಹೀಗಳೆದವರಿಗೆ ಸರಿಯಾದ ಉತ್ತರವನ್ನು ಕೆಲಸದ ಮೂಲಕವೇ ನೀಡಲಿದ್ದೀರಿ. ಯಾವುದಾದರೂ ಪ್ರಾಜೆಕ್ಟ್ ಗೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವ ಕುರಿತಂತೆ ಸೂಚನೆ ನೀಡಲಿದ್ದಾರೆ. ಅದೇ ವೇಳೆ ಅಲ್ಪಾವಧಿಗಾದರೂ ತರಬೇತಿ ಪಡೆದುಕೊಳ್ಳಬೇಕು ಎಂಬ ವಿಚಾರವನ್ನು ಸಹ ಹೇಳಲಿದ್ದಾರೆ. ಜವಾಬ್ದಾರಿಗಳನ್ನು ಧೈರ್ಯವಾಗಿ ವಹಿಸಿಕೊಳ್ಳಿ. ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ. ವಿದ್ಯಾರ್ಥಿಗಳು ಮನೆಯಲ್ಲಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ಮುಖ್ಯವಾಗಿ ಮೊಬೈಲ್ ಫೋನ್ ಚಾರ್ಜಿಂಗ್, ಲ್ಯಾಪ್ ಟಾಪ್ ಚಾರ್ಜಿಂಗ್ ಅಥವಾ ಟ್ಯಾಬ್ ಚಾರ್ಜಿಂಗ್ ಹಾಕುತ್ತಿದ್ದೀರಿ ಎಂದಾದಲ್ಲಿ ತುಂಬ ಹೊತ್ತು ಹಾಗೇ ಹಾಕಿಡದಿರುವುದು ಮತ್ತು ಚಾರ್ಜ್ ಗೆ ಹಾಕಿರುವಾಗಲೇ ಬಳಸುವುದನ್ನು ಮಾಡಬೇಡಿ. ಇಷ್ಟು ಸಮಯ ಹವ್ಯಾಸ ಎಂದಿರುವುದು ನಿಮ್ಮ ಪಾಲಿಗೆ ದೊಡ್ಡ ಆದಾಯ ತರುವಂತೆ ಮಾರ್ಪಡುವ ಸಾಧ್ಯತೆಗಳಿವೆ. ಮಹಿಳೆಯರು ಸಾವಧಾನದಿಂದ ಆಲೋಚನೆ ಮಾಡಿದ ಮೇಲಷ್ಟೇ ಅಭಿಪ್ರಾಯವನ್ನಾಗಲೀ ಹಣಕಾಸಿನ ವಿಚಾರಗಳ ಬಗ್ಗೆ ಆಗಲೀ ಮಾತನ್ನು ಶುರು ಮಾಡಿ. ಉದ್ಯೋಗಸ್ಥರಾಗಿದ್ದಲ್ಲಿ ಕೆಲಸದ ಸ್ಥಳದಲ್ಲಿ ಈ ಹಿಂದೆ ನಡೆದಿದ್ದ ಘಟನೆಯೊಂದಕ್ಕೆ ಬೇರೆಯದೇ ವ್ಯಾಖ್ಯಾನ ಸಿಕ್ಕಿ, ನಿಮಗೆ ಮುಜುಗರ ಮಾಡುವುದಕ್ಕೆ ಪ್ರಯತ್ನಿಸಬಹುದು. ಇಂಥ ಸನ್ನಿವೇಶದಲ್ಲಿ ಆತುರಕ್ಕೆ ಬಿದ್ದು, ಪ್ರತಿಕ್ರಿಯೆ ನೀಡುವುದಕ್ಕೆ ಹೋಗಬೇಡಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಸವಾಲುಗಳು ಎದುರಾಗಲಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಉದ್ದೇಶ ಒಳ್ಳೆಯದಾಗಿದ್ದರೂ ಅದನ್ನು ಎದುರಿನಲ್ಲಿ ಇರುವವರಿಗೆ ಅರ್ಥ ಮಾಡಿಸುವುದು ಕಷ್ಟವಾಗಲಿದೆ. ಆಸ್ತಿ ಮಾರಾಟ ಅಥವಾ ಖರೀದಿ ವಿಚಾರದಲ್ಲಿ, ಕುಟುಂಬದಲ್ಲಿನ ಸಾಮರಸ್ಯಕ್ಕೆ ಸಂಬಂಧಿಸಿದಂತೆ ನೀವು ಅಂದುಕೊಂಡಂತೆ ಏನೂ ಸಾಗುತ್ತಿಲ್ಲ ಎಂಬುದು ಆತಂಕದ ಸಂಗತಿ ಆಗಿರುತ್ತದೆ. ನೀವು ಒಳ್ಳೆ ಉದ್ದೇಶದಿಂದ ಆಡುವ ಮಾತು, ನೀಡುವ ಸಲಹೆ- ಸೂಚನೆಗಳ ಬಗ್ಗೆಯೂ ಒಂದಲ್ಲಾ ಒಂದು ಕೊಂಕು ಮಾತು ಕೇಳಿಸಿಕೊಳ್ಳುವಂಥ ಸಾಧ್ಯತೆಗಳಿವೆ. ಕಮಿಷನ್ ಆಧಾರದಲ್ಲಿ ಕೆಲಸ ಮಾಡಿಕೊಡುವಂಥವರಿಗೆ ಇಷ್ಟು ಸಮಯ ಸಾವಧಾನವಾಗಿ ಆಗುತ್ತಿದ್ದ ಕೆಲಸಗಳಲ್ಲಿ ದಿಢೀರನೆ ಅಡೆತಡೆಗಳು ಎದುರಾಗಬಹುದು. ನಿಮ್ಮ ಕೆಲಸದ ವೇಗಕ್ಕೆ ತಡೆ ಆಗುವಂಥ ಸನ್ನಿವೇಶಗಳು ಸಹ ಎದುರಾಗಲಿವೆ. ಮೊದಲೇ ಹೇಳಿಟ್ಟಿದ್ದರೂ ನೀವು ಒಪ್ಪಿಕೊಂಡ ಕೆಲಸ ಸಲೀಸಾಗಿ ಮುಗಿಯುವುದಕ್ಕೆ ಅಗತ್ಯ ಇರುವಷ್ಟು ಸಂಖ್ಯೆಯ ಕೆಲಸಗಾರರು ಬಾರದಿರಬಹುದು, ಅಥವಾ ಏನಾದರೂ ನೆಪವೊಡ್ಡಿ ಇಡೀ ತಂಡವೇ ಚಕ್ಕರ್ ಹಾಕಿಬಿಡಬಹುದು. ಆದ್ದರಿಂದ ನೀವು ಒಪ್ಪಿಕೊಂಡ ಯಾವುದೇ ಕೆಲಸಗಳಿದ್ದರೂ ಅದನ್ನು ಸರಿಯಾಗಿ ಪೂರ್ತಿ ಮಾಡುವುದಕ್ಕೆ ಬೇಕಾದಷ್ಟು ಸಂಖ್ಯೆಯ ಜನರನ್ನು ಒಟ್ಟು ಮಾಡುವುದರ ಕಡೆಗೆ ನಿಮ್ಮ ಆದ್ಯತೆ ಇರಲಿ. ಯಾರು ಕೂಡು ಕುಟುಂಬದಲ್ಲಿ ಇರುತ್ತೀರಿ, ಅಂಥವರಿಗೆ ಒಂದು ಬಗೆಯ ಒತ್ತಡದ ವಾತಾವರಣ ಕಂಡುಬರುತ್ತದೆ. ಹಣಕಾಸಿನ ವಿಚಾರಕ್ಕೆ ಜೋರುಜೋರಿನ ಮಾತುಕತೆಗಳಾಗಬಹುದು. ತಾಳ್ಮೆಯಿಂದ ಇರುವುದು ಮುಖ್ಯವಾಗುತ್ತದೆ. ಕೃಷಿಕರಿಗೆ ಸಂಬಂಧಿಕರು ಯಾಕಾದರೂ ಕರೆ ಮಾಡುತ್ತಾರೋ ಅಥವಾ ಯಾಕಾದರೂ ಮನೆಗೆ ಬರುತ್ತಾರೋ ಎಂದು ಬಹಳ ಬೇಸರ ಮಾಡಿಕೊಳ್ಳುವಂತಾಗುತ್ತದೆ. ಅವರಿಂದಾಗಿಯೇ ಮನೆಯಲ್ಲಿ ಜಗಳ, ಬೇಸರದ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಇನ್ನು ಸಂಗಾತಿ ಜತೆಗೆ ಮಾತನಾಡುವಾಗ ಸಣ್ಣ ಸಂಗತಿಗೂ ಸಿಟ್ಟು ಮಾಡಿಕೊಂಡು, ನಿಮ್ಮ ಮೇಲೆ ರೇಗಾಡುವಂಥ ಸಾಧ್ಯತೆಗಳಿವೆ. ಇದೇ ವೇಳೆ ಸ್ನೇಹಿತರು ನಿಮ್ಮಿಂದ ನಿರೀಕ್ಷೆ ಮಾಡುವುದು ವಿಪರೀತ ಆಗುತ್ತದೆ. ಕೆಲಸವೇ ಇಲ್ಲದಿದ್ದರೂ ಬಹಳ ಕೆಲಸ ಮಾಡುತ್ತಿರುವಂತೆ ತೋರಿಸಿಕೊಳ್ಳುತ್ತಿದ್ದೀರಿ ಎಂಬ ರೀತಿಯಲ್ಲಿ ನಿಮ್ಮನ್ನು ಮೂದಲಿಸಬಹುದು. ಹೊಸ ಬಟ್ಟೆಯೋ ಅಥವಾ ಗೃಹ ಬಳಕೆ ವಸ್ತುವನ್ನೋ ಇತರರಿಗಾಗಿ ಖರೀದಿಸಿದ್ದಕ್ಕೆ ನೀವೇ ಹಣ ಕೊಟ್ಟು, ಇಟ್ಟುಕೊಳ್ಳಬೇಕಾಗುತ್ತದೆ. ವೃತ್ತಿನಿರತರಿಗೆ ದಮ್ಮಯ್ಯಗುಡ್ಡೆ ಹಾಕಿ ನಿಮ್ಮ ಬಳಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಕೆಲವರು ಪ್ರಯತ್ನಿಸಲಿದ್ದಾರೆ. ಇದು ಈ ಕ್ಷಣದ ಅಗತ್ಯ. ಹಣಕಾಸಿನ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ನೇರಾನೇರವಾಗಿ ಮಾತನಾಡಿ. ಏಕೆಂದರೆ, ನೀವು ಹಣಕ್ಕೆ ಬೇಡಿಕೆ ಇಡುವ ಸ್ಥಿತಿಯಲ್ಲಿ ಇರುತ್ತೀರಿ. ಇನ್ನು ನಿಮ್ಮ ವೃತ್ತಿಗೆ ಅಗತ್ಯ ಇರುವ ಎಲೆಕ್ಟ್ರಾನಿಕ್ ವಸ್ತುಗಳು ಅಥವಾ ಸಲಕರಣೆಗಳನ್ನು ಖರೀದಿ ಮಾಡುವಂಥ ಸಾಧ್ಯತೆ ಇದೆ. ಇವುಗಳನ್ನು ಕಡಿಮೆ ದುಡ್ಡಲ್ಲಿ ಖರೀದಿಸುವುದಕ್ಕೆ ಸ್ನೇಹಿತರು, ಸಂಬಂಧಿಕರು ಸಹಾಯ ಮಾಡುವುದಕ್ಕೆ ಸಾಧ್ಯತೆ ಇದೆ. ಅಥವಾ ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ಪರಿಚಿತರು ಇದ್ದಾರಾ ಎಂಬುದನ್ನು ನೆನಪಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ನಿಮ್ಮ ಸ್ನೇಹಿತರ ವಲಯದಲ್ಲಿ ಅವಮಾನ, ನಿಮ್ಮ ಮೇಲೆ ವೃಥಾ ಆರೋಪಗಳು, ವಾದ- ವಿವಾದ ಆಗುವಂಥ ಸಾಧ್ಯತೆಗಳು ಹೆಚ್ಚು. ನಿಮ್ಮ ಬಗ್ಗೆ ಪೋಷಕರ ಬಳಿ ದೂರುಗಳು ಹೇಳುವವರ ಸಂಖ್ಯೆ ಹೆಚ್ಚಾಗಲಿವೆ. ದುರಭ್ಯಾಸಗಳು ಇವೆ ಅಂತಲೋ ದುಷ್ಟ ಜನರ ಸಹವಾಸ ಮಾಡುತ್ತಿದ್ದಾರೆ ಅಂತಲೋ ದೂರುಗಳು ಹೇಳುತ್ತಾರೆ. ನೀವೇನೂ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಮಾಡುವಷ್ಟರಲ್ಲಿ ಹೈರಾಣಾಗುತ್ತೀರಿ. ಮಹಿಳೆಯರಿಗೆ ನರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಲಿವೆ. ಈಗಾಗಲೇ ಅಂಥ ಸಮಸ್ಯೆಗಳು ಇದ್ದಲ್ಲಿ ಉಲ್ಬಣ ಆಗಲಿದೆ. ಯಾವುದೇ ಕೆಲಸ ಮಾಡುವಾಗ ಗಾಬರಿ ಗಾಬರಿ ಆಗುತ್ತದೆ. ಮುಖ್ಯ ಮಾಹಿತಿಯನ್ನು ನೀವೇ ಮಿಸ್ ಮಾಡಿಕೊಂಡು ಬಯ್ಯಿಸಿಕೊಳ್ಳುವ, ನಿಮ್ಮ ಕೈಯಿಂದಲೇ ಹಣ ಕಳೆದುಕೊಳ್ಳುವ ಯೋಗ ಸಹ ಇದೆ. ನಿಮ್ಮ ಅರಿವಿಗೆ ಬಾರದಂತೆಯೇ ಕೆಟ್ಟ ಬೈಗುಳ ಬಂದು, ಇತರರಿಗೆ ನಿಮ್ಮ ಬಗ್ಗೆ ಗೌರವ ಹೋಗಬಹುದು. ಸ್ನೇಹಿತರ ಜತೆಗೆ ಜಗಳ- ಕದನಗಳಾಗಿ, ಸ್ನೇಹ ಕಳೆದುಕೊಳ್ಳುವ ಯೋಗ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸ್ನೇಹ- ಪ್ರೀತಿ- ಸಂಬಂಧ ಹೀಗೆ ಎಲ್ಲಕ್ಕೂ ತಳುಕು ಹಾಕಿಕೊಂಡಂಥ ಸಂಗತಿಯೊಂದರಲ್ಲಿ ಮುಖ್ಯವಾದ ವಿಚಾರ ಕಾಡಲು ಶುರುವಾಗುತ್ತದೆ. ಭಾವನಾತ್ಮಕವಾಗಿ ನಿಮಗೆ ಬಹಳ ಮುಖ್ಯ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಇದು ಬಹಳ ಮುಖ್ಯವಾದ ವಾರವಾಗಿರುತ್ತದೆ. ನಿಮ್ಮಲ್ಲಿ ಕೆಲವರಿಗೆ ಈ ವಿಚಾರವಾಗಿ ಮನೆಯಲ್ಲಿ ಮಾತುಕತೆಯಾಗಿ, ನಿಮ್ಮ ಮದುವೆಗೆ ಒಪ್ಪಿಗೆ ಸಿಕ್ಕಿಯೂ ಬಿಡಬಹುದು. ಯಾರು ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವುದಕ್ಕೆ ಸೂಕ್ತವಾದ ಕಾಂಟ್ಯಾಕ್ಟ್ ಗಾಗಿ ಹುಡುಕಾಟ ನಡೆಸುತ್ತಿದ್ದೀರಿ, ಅಂಥವರಿಗೆ ಅಚಾನಕ್ ಆಗಿ ಸಿಕ್ಕಂಥ ಕಾಂಟ್ಯಾಕ್ಟ್ ನಿಂದ ಬಹಳ ದೊಡ್ಡ ಮಟ್ಟದ ಅನುಕೂಲ ಒದಗಿಬರಲಿದೆ. ನಿಮಗೆ ಈ ವಾರದ ಪ್ರಮುಖ ಎಚ್ಚರಿಕೆ ಏನೆಂದರೆ, ಹೊಸದಾಗಿ ವಾಹನ ಕಲಿಯುತ್ತಿದ್ದೀರಿ ಎಂದಾದಲ್ಲಿ ಇತರ ವಾಹನಗಳು ತಾಗಿ ಅಥವಾ ಬೇರೆ ಎಲ್ಲಾದರೂ ರಸ್ತೆ ವಿಭಜಕ ಅಥವಾ ಮರಗಳಿಗೆ ಗುದ್ದಿ ವಾಹನದ ಪೇಂಟ್ ಹೋಗುವುದೋ ಅಥವಾ ಡೆಂಟ್ ಆಗುವುದೋ ಇಂಥ ಬೆಳವಣಿಗೆ ಆಗಲಿದೆ. ಇದರಿಂದ ನಿಮ್ಮ ಆತ್ಮಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳಿ. ಇತರರ ವ್ಯವಹಾರಕ್ಕೆ ಮಧ್ಯವರ್ತಿಗಳಿಗೆ ಕೆಲಸ ಮಾಡುತ್ತಿರುವವರಿಗೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರತಿಫಲ ದೊರೆಯಲಿದೆ. ನಿಮ್ಮಲ್ಲಿ ಕೆಲವರಿಗೆ ಚಿನ್ನದ ಒಡವೆಯೋ ಅಥವಾ ಗ್ಯಾಜೆಟ್ ಗಳೋ ಉಡುಗೊರೆಯಾಗಿ ಪಡೆದುಕೊಳ್ಳುವಂಥ ಯೋಗ ಸಹ ಇದೆ. ಸಾಧ್ಯವಾದಷ್ಟೂ ಆಡುವ ಮಾತಿನ ಮೇಲೆ ಒಂದಿಷ್ಟು ನಿಗಾ ಇರಿಸಿಕೊಳ್ಳಿ. ಕಡಿಮೆ ಮಾತನಾಡಿದಷ್ಟೂ ಲಾಭ ಹೆಚ್ಚಿಗೆ ದೊರೆಯಲಿದೆ. ಕಾರು ಅಥವಾ ಆಟೋ ಚಾಲಕರಿಗೆ ಸ್ವಂತ ವಾಹನವನ್ನು ಖರೀದಿಸುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಕೃಷಿಕರಿಗೆ ಈ ವಾರ ಏನನ್ನೋ ಸಾಧಿಸಿದಂಥ ಮಾನಸಿಕ ಸಮಾಧಾನ ಇರುತ್ತದೆ. ವೈಯಕ್ತಿಕವಾಗಿ ಬಹಳ ಮುಖ್ಯವಾಗಿದ್ದ ಜವಾಬ್ದಾರಿಯೊಂದು ನೀವಂದುಕೊಂಡ ರೀತಿಯಲ್ಲೇ ಪೂರ್ತಿ ಆಗುವಂಥ ಯೋಗ ಇದೆ. ಈ ಹಿಂದೆ ಮಾತುಕತೆ ಆಡಿ, ಅರ್ಧದಲ್ಲೇ ನಿಂತು ಹೋಗಿದ್ದ ಜಮೀನು ಖರೀದಿ ಅಥವಾ ಭೋಗ್ಯಕ್ಕೆ ಪಡೆಯುವಂಥ ಮಾತುಕತೆಗಳು ಮತ್ತೆ ಮುಂದುವರಿಯುವ ಸಾಧ್ಯತೆಗಳು ತೆರೆದುಕೊಳ್ಳಲಿವೆ. ಆದರೆ ಎಲ್ಲ ಸಲೀಸಾಗಿ ಆಗುತ್ತದೆ, ಮನೆಯ ಸದಸ್ಯರ ಎಲ್ಲರ ಒಮ್ಮತದ ತೀರ್ಮಾನದಿಂದ ಆಗಬಹುದು ಎಂದು ನೀವಂದುಕೊಂಡಿದ್ದ ಕೆಲ ವಿಚಾರಗಳ ಬಗ್ಗೆ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತ ಆಗಬಹುದು. ವೃತ್ತಿನಿರತರು ಸುಮ್ಮನೆ ಒಂದು ಪ್ರಯತ್ನ ಅನ್ನೋ ಹಾಗೆ ಭೇಟಿ ಮಾಡುವ ವ್ಯಕ್ತಿಯಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ನಿಮ್ಮ ಸಂವಹನ ಅತ್ಯುತ್ತಮ ಮಟ್ಟದಲ್ಲಿ ಇರುತ್ತದೆ. ಇನ್ನೊಬ್ಬರ ಮೇಲೆ ಪ್ರಭಾವ ಬೀರಿ, ಕೆಲಸಗಳನ್ನು ಸಲೀಸಾಗಿ ಮಾಡಿಸಿಕೊಳ್ಳಲಿದ್ದೀರಿ. ಆಪ್ತರಿಗೆ ಅಥವಾ ಹತ್ತಿರದ ಬಂದುವೊಬ್ಬರಿಗೆ ಉಡುಗೊರೆಗಳನ್ನು ನೀಡುವಂಥ ಸಾಧ್ಯತೆ ಇದೆ. ಆದರೆ ನೆನಪಿಟ್ಟುಕೊಳ್ಳಿ, ಒಮ್ಮೆ ಹೇಳಿ ಸುಮ್ಮನಾಗಬೇಕಾದ ವಿಚಾರಗಳಿದ್ದಲ್ಲಿ ಪದೇಪದೇ ಹೇಳುವುದಕ್ಕೆ ಹೋಗದಿರಿ. ವಿದ್ಯಾರ್ಥಿಗಳಿಗೆ ಓದು, ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿ, ಭವಿಷ್ಯ ಏನು, ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು, ಯಾವ ಶಿಕ್ಷಣ ಸಂಸ್ಥೆಗೆ ಸೇರಬೇಕು ಹೀಗೆ ಹತ್ತಾರು ವಿಚಾರಗಳು ತಲೆಯಲ್ಲಿ ಸುಳಿದಾಡುವುದಕ್ಕೆ ಆರಂಭವಾಗುತ್ತದೆ. ಅದೆಷ್ಟೋ ಸಮಯದ ಹಿಂದೆ ನಡೆದಂಥ ಘಟನೆಗಳೋ ಸನ್ನಿವೇಶಗಳೋ ಇಂಥದ್ದರ ಕಾರಣಕ್ಕೆ ಜನರ ಗುಣವನ್ನು ಅಳೆಯುವುದಕ್ಕೆ ಆರಂಭಿಸುತ್ತೀರಿ. ನೀವು ಹೌದೋ ಅಲ್ಲವೋ ಎಂದು ಇತರರು ಅಚ್ಚರಿ ಪಡುವ ಮಟ್ಟಿಗೆ ನಿಮ್ಮ ವರ್ತನೆಯಲ್ಲಿ ಬದಲಾವಣೆಗಳು ಆಗಲಿವೆ. ಯಾವುದೇ ವಿಚಾರವನ್ನು ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ಮಹಿಳೆಯರಿಗೆ ನಿಮ್ಮ ಮಾತಿನಲ್ಲಿ ಒಂದು ಬಗೆಯ ಆಕರ್ಷಣೆ ಇರುತ್ತದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ದೊರೆಯುವಂಥ ಸಾಧ್ಯತೆ ಇದೆ. ಅದರಲ್ಲೂ ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗಿ ಆದಾಗ ನಿಮ್ಮನ್ನು ನೋಡಿದವರು ಮದುವೆ ಪ್ರಸ್ತಾವ ಇಡಬಹುದು. ಈ ಹಿಂದೆ ನೀವು ಕಾರ್ಯ ನಿರ್ವಹಿಸಿದ ರೀತಿ ನೋಡಿದ್ದವರು ಉದ್ಯೋಗದ ಆಫರ್ ನೀಡಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಹಲವು ಕೆಲಸಗಳನ್ನು ಆತುರವಾಗಿ ಮಾಡಿ ಮುಗಿಸಲೇಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಹಣಕಾಸು, ಉದ್ಯೋಗ, ವೈಯಕ್ತಿಕ ಬದುಕು, ಪ್ರೀತಿ- ಪ್ರೇಮ ಸಂಗತಿಗಳು, ಆರೋಗ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಒಂದೇ ಬಗೆಯ ಧಾವಂತ ಕಾಣಿಸಿಕೊಂಡು, ತೀರ್ಮಾನ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತದೆ. ಆನ್ ಲೈನ್ ಮೂಲಕ ಮಾಡಿದ ವ್ಯವಹಾರದಲ್ಲಿ ಹಣ ಒಂದಕ್ಕೆ ಎರಡು ಬಾರಿಗೆ ಎಂಬಂತೆ ಪಾವತಿಯಾಗಿ, ಅದನ್ನು ವಾಪಸ್ ಪಡೆಯುವುದಕ್ಕೆ ಹರಸಾಹಸ ಪಡುವಂತಾಗುತ್ತದೆ. ಈ ವಿಷಯ ನಿಮ್ಮೊಳಗೇ ಇರಲಿ ಎಂದು ರಹಸ್ಯವಾದ ಸಂಗತಿಯನ್ನು ನೀವು ಯಾರ ಬಳಿ ಹೇಳಿರುತ್ತೀರೋ ಅವರೇ ಆ ಬಗ್ಗೆ ಎಲ್ಲರ ಬಳಿಯೂ ಹೇಳಿಕೊಂಡು ಬಂದು, ಅದನ್ನು ಯಾರ ಬಳಿಯೂ ಹೇಳಬಾರದು ಎಂದು ನೀವೇ ಹೇಳಿದ್ದಿರಿ ಅಂತಲೂ ತಿಳಿಸುತ್ತಾರೆ. ಇದರಿಂದಾಗಿ ಸಂಬಂಧಿಕರು ಹಾಗೂ ಆಪ್ತರ ನಡುವೆ ಇರುವಾಗ ಮುಜುಗರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು, ಮುಂಜಾಗ್ರತೆಯನ್ನು ವಹಿಸಿ. ಯಾರ ಬಳಿ ಏನನ್ನು ಹೇಳಬೇಕು ಅಥವಾ ಹೇಳಬಾರದು ಎಂಬ ಬಗ್ಗೆ ವಿವೇಚನೆಯನ್ನು ಬಳಸಿ. ಕೃಷಿ ವೃತ್ತಿಯಲ್ಲಿ ಇರುವಂಥವರು ಏನು ಮಾಡಿದರೆ ಸರಿ ಅಥವಾ ಏನು ಮಾಡಿದರೆ ಸರಿಯಲ್ಲ ಎಂಬುದನ್ನು ನಿರ್ಧಾರ ಮಾಡುವ ಸ್ಥಿತಿಯಲ್ಲಿ ಈ ವಾರ ಇರುವುದಿಲ್ಲ. ಇತರರು ನಿಮ್ಮ ಮೇಲೆ ಬಹಳ ಸುಲಭವಾಗಿ ಪ್ರಭಾವ ಬೀರುವಂತಹ ಸಾಧ್ಯತೆಗಳು ಇರುತ್ತವೆ. ಆ ಕಾರಣದಿಂದ ಯಾವುದೇ ಪ್ರಮುಖ ನಿರ್ಧಾರವನ್ನು ಈ ವಾರದ ಮಟ್ಟಿಗೆ ತೆಗೆದುಕೊಳ್ಳದಿರುವುದು ಉತ್ತಮ. ಇನ್ನು ಭವಿಷ್ಯದ ವಿಚಾರದಲ್ಲಿ ನಿಮ್ಮ ಆದ್ಯತೆಗಳೇನು ಎಂಬುದರ ಪಟ್ಟಿ ಒಂದನ್ನು ಮಾಡಿಕೊಳ್ಳಿ. ನಿಮ್ಮ ಆಪ್ತರು ಹಾಗೂ ಹಿತೈಷಿಗಳು ಏನನ್ನಾದರೂ ಹೇಳಿದಲ್ಲಿ ತಾಳ್ಮೆಯಿಂದ ಕೇಳಿಸಿಕೊಳ್ಳಿ, ಅವುಗಳನ್ನು ಅನುಸರಿಸಲೇಬೇಕು ಎಂಬ ಕಡ್ಡಾಯವೇನಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ವೃತ್ತಿನಿರತರಿಗೆ ಯಾವುದೋ ಹಳೇ ವಿಚಾರವೊಂದು ಈ ವಾರ ತಲೆ ನೋವಾಗಿ ಪರಿಣಮಿಸಲಿದೆ. ಅದನ್ನು ಸಾಧ್ಯವಾದಷ್ಟೂ ಮುಂದುವರಿಸಿಕೊಂಡು ಹೋಗದಂತೆ ನೋಡಿಕೊಳ್ಳಿ. ನನ್ನದೇ ಸರಿ ಎಂಬ ಹಟ ಯಾವುದೇ ಕಾರಣಕ್ಕೂ ಬೇಡ. ಕಾರು ಪಾರ್ಕಿಂಗ್ ಅಥವಾ ಮನೆಯಲ್ಲಿನ ಸಾಕುಪ್ರಾಣಿಗಳ ವಿಚಾರದಲ್ಲಿ ಅಕ್ಕಪಕ್ಕದವರೊಂದಿಗೆ ಜಗಳ ಏರ್ಪಡುವ ಸಾಧ್ಯತೆಗಳಿವೆ. ಕೂತು, ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ವಸ್ತುಗಳನ್ನು ಕೊಳ್ಳುವ ವಿಚಾರಕ್ಕೆ ಇತರರ ಮೇಲೆ ಪ್ರತಿಷ್ಠೆಗೆ ಬಿದ್ದು ಖರ್ಚು ಮಾಡುವುದಕ್ಕೆ ಹೋಗಬೇಡಿ. ಅದರಲ್ಲೂ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದಲ್ಲಿ ಖರ್ಚಿನ ಮೇಲೆ ನಿಗಾ ಇರಲಿ. ಮೆಟ್ರೋ ರೈಲು ಅಥವಾ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವಂಥವರು ಮೊಬೈಲ್ ಸೇರಿದಂತೆ ನಿಮ್ಮ ಗ್ಯಾಜೆಟ್, ಲ್ಯಾಪ್ ಟಾಪ್ ಗಳನ್ನು ಜೋಪಾನವಾಗಿ ನೋಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಸ್ನೇಹಿತರು, ಸಂಬಂಧಿಕರು ಮನೆಗೆ ಬರುವುದರಿಂದ ಸಂತಸದ ವಾತಾವರಣ ಇರಲಿದೆ. ಬಹಳ ಇಷ್ಟಪಟ್ಟು ಮನೆಗೆ ತಂದಿದ್ದ ಎಲೆಕ್ಟ್ರಾನಿಕ್ ಅಥವಾ ಎಲೆಕ್ಟ್ರಿಕಲ್ ಉಪಕರಣಗಳನ್ನು ಹಿಂತಿರುಗಿಸಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮ ಯಾವುದೇ ಕಷ್ಟಕ್ಕೆ ನಾವು ಆಗುತ್ತೇವೆ ಎಂದು ಹೇಳಿದ ಸ್ನೇಹಿತರು ಅಥವಾ ಆಪ್ತರ ಮಾತನ್ನು ನೆಚ್ಚಿಕೊಂಡು ಯಾವುದೇ ದೊಡ್ಡ ತೀರ್ಮಾನಗಳನ್ನು ಮಾಡುವುದಕ್ಕೆ ಹೋಗಬೇಡಿ. ವಿದೇಶಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನ ಪಡಬೇಕು ಎಂದು ಈಗಾಗಲೇ ತೀರ್ಮಾನ ಮಾಡಿದ್ದಲ್ಲಿ ಇದನ್ನು ತಾತ್ಕಾಲಿಕವಾಗಿಯಾದರೂ ಮುಂದಕ್ಕೆ ಹಾಕಬೇಕಾದ ಸನ್ನಿವೇಶ ಎದುರಾಗಲಿದೆ. ಎಲ್ಲರೂ ಒಪ್ಪಿಕೊಂಡ ವಿಚಾರ ಒಂದಕ್ಕೆ ಬಲವಂತವಾಗಿಯಾದರೂ ನೀವು ಸರಿ ಎನ್ನಬೇಕಾಗುತ್ತದೆ. ಮಹಿಳೆಯರು ವಿವಾಹ ವಯಸ್ಕರಾಗಿದ್ದು, ಸೂಕ್ತ ಸಂಬಂಧಗಳಿಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ನೇಹಿತರ ಮೂಲಕವಾಗಿ ಮನಸ್ಸಿಗೆ ಖುಷಿ ನೀಡುವಂತಹ ಸುದ್ದಿ ಸಿಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಬಹಳ ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಹಾಗೂ ಅಪೇಕ್ಷಿಸುತ್ತಿದ್ದಂಥ ಬೆಳವಣಿಗೆಗಳು ಆಗಲಿದೆ. ಅಂದರೆ ನಿಮ್ಮ ಸ್ಥಾನ-ಮಾನ ಹೆಚ್ಚಾಗುವಂಥ ವಾರ ಇದಾಗಿರುತ್ತದೆ. ಮನೆಯಲ್ಲಿಯಾಗಲೀ ಅಥವಾ ನೀವು ಉದ್ಯೋಗ ಮಾಡುವ ಸ್ಥಳದಲ್ಲಾಗಲೀ ಗೌರವಾದರಗಳು ಹೆಚ್ಚಾಗಿ ಸಿಗಲಿದೆ. ಈ ಹಿಂದೆ ಯಾವಾಗಲೋ ಅರ್ಜಿ ಹಾಕಿಕೊಂಡಿದ್ದ ಮನೆ, ಸೈಟುಗಳು ಈಗ ನಿಮಗೆ ವಿತರಣೆ ಆಗುವಂಥ ಸೂಚನೆ ದೊರೆಯಬಹುದು ಅಥವಾ ಅದಕ್ಕೆ ಸಂಬಂಧಿಸಿದ ಮಾಹಿತಿ ಸಹ ದೊರೆಯಬಹುದು. ಮಕ್ಕಳ ಸಲುವಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಸಾಲ ಮಾಡಿಯಾದರೂ ಒಡವೆ- ವಸ್ತ್ರಗಳನ್ನು ಖರೀದಿಸುವಂಥ ಯೋಗ ಇದೆ. ಮನೆಯಲ್ಲಿ ಸಣ್ಣ- ಪುಟ್ಟ ದುರಸ್ತಿ ಕಾರ್ಯಗಳನ್ನಾದರೂ ಮಾಡಿಸುವಂಥ ಸಾಧ್ಯತೆಗಳಿವೆ. ಅಥವಾ ಈಗಿರುವ ಮಂಚ- ಕುರ್ಚಿ ಮೊದಲಾದವುಗಳನ್ನು ಮಾರಾಟ ಮಾಡಿ, ಹೊಸದಾಗಿ ಖರೀದಿಸುವುದಕ್ಕೆ ಆಲೋಚನೆ ಮಾಡುತ್ತೀರಿ ಅಥವಾ ನಿಮ್ಮಲ್ಲಿ ಕೆಲವರು ಖರೀದಿಸಿಯೇ ತರುತ್ತೀರಿ. ಎಚ್ ಆರ್ ಏಜೆನ್ಸಿಗಳನ್ನು ನಡೆಸುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ನಿಮ್ಮಲ್ಲಿ ಕೆಲವರು ಈ ಹಿಂದೆ ಮಾಡಿಕೊಂಡಂಥ ಸಾಲವನ್ನು ತೀರಿಸುವ ಯೋಗ ಸಹ ಇದೆ. ಕೃಷಿಕರು ಈಗಾಗಲೇ ವಿವಾಹಿತರಾಗಿದ್ದಲ್ಲಿ ಸಂಗಾತಿಗಾಗಿ ಚಿನ್ನದ ಒಡವೆ ಖರೀದಿಸುವ ಸಾಧ್ಯತೆಗಳಿವೆ ಅಥವಾ ಅವಿವಾಹಿತರಾಗಿದ್ದಲ್ಲಿ ಮದುವೆಗಾಗಿಯೇ ಚಿನ್ನದ ನಾಣ್ಯಗಳನ್ನು ಅತವಾ ಗಟ್ಟಿಗಳನ್ನು ಖರೀದಿಸುವಂತಹ ಯೋಗ ಈ ವಾರ ನಿಮ್ಮ ಪಾಲಿಗೆ ಇದೆ. ನಿಮ್ಮ ಸೋದರ ಸಂಬಂಧಿಗಳಿಗೆ ಹಣಕಾಸಿನ ಅಗತ್ಯ ಕಂಡುಬಂದು, ಹೇಗಾದರೂ ಹಣ ಬೇಕೇ ಬೇಕು ಎಂದು ಬರಲಿದ್ದು, ನೀವು ಸಾಲ ಮಾಡಿಯಾದರೂ ಅವರಿಗೆ ನೀಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮ ಕುಟುಂಬದ ಅಗತ್ಯಕ್ಕೆ ಇನ್ನೂ ದೊಡ್ಡ ಮನೆ ಬೇಕು ಎಂದು ಆಲೋಚಿಸುತ್ತಿರುವವರು ನಿಮಗೆ ಈಗಾಗಲೇ ಸೈಟ್ ಇದೆ ಅಂತಾದರೆ ಅಲ್ಲಿ ಮನೆ ಕಟ್ಟುವ ಬಗ್ಗೆ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸಲಿದ್ದೀರಿ. ಯಾರು ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದೀರಿ ಅಂಥವರಿಗೆ ಆದಾಯದಲ್ಲಿ ಏರಿಕೆ ಕಂಡು ಬರಲಿದೆ. ನಿಮ್ಮಲ್ಲಿ ಕೆಲವರು ವಾಹನಗಳನ್ನು ಖರೀದಿಸುವ ಸಾಧ್ಯತೆ ಕೂಡ ಇದೆ. ವೃತ್ತಿನಿರತರು ಸಂಬಂಧಿಕರು ಸ್ನೇಹಿತರ ಮನೆಯ ಶುಭ ಸಮಾರಂಭಗಳಿಗಾಗಿ ಹಣಕಾಸಿನ ನೆರವನ್ನು ನೀಡಲಿದ್ದೀರಿ. ಇನ್ನು ಇದೇ ಸಮಯದಲ್ಲಿ ಈ ಹಿಂದೆ ನೀವು ನೀಡಿದ್ದ ಸಾಲ ವಾಪಸ್ ಬರಬಹುದು ಅಥವಾ ಮ್ಯೂಚುವಲ್ ಫಂಡ್ ನಂಥ ಹೂಡಿಕೆಯಿಂದ ಹಣ ತೆಗೆದು, ನೀಡುವಂಥ ಸಾಧ್ಯತೆಗಳಿವೆ. ನಿಮ್ಮ ನೇರಾ ನೇರ ಮಾತುಗಳಿಂದ ವ್ಯವಹಾರಗಳಲ್ಲಿ ಲಾಭವಾಗಲಿದೆ. ನಿಮಗೆ ಸರಿ ಎಂದು ಎನಿಸಿದ ಕೆಲಸಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳಬೇಡಿ. ಸರ್ಕಾರದ ಜತೆಗಿನ ಪತ್ರ ವ್ಯವಹಾರಗಳು ಅಥವಾ ಯಾವುದೇ ಸಂವಹನ ಇದ್ದರೂ ನೀವೇ ಅವುಗಳನ್ನು ಒಮ್ಮೆ ವೈಯಕ್ತಿಕವಾಗಿ ಪರಿಶೀಲಿಸಿ, ಆ ನಂತರ ಅದನ್ನು ಕಳುಹಿಸುವುದು ಉತ್ತಮ. ಇಲ್ಲದಿದ್ದಲ್ಲಿ ನಿಮಗೆ ಇದರಿಂದ ಒಂದಲ್ಲಾ ಒಂದು ರೀತಿಯಿಂದ ನಷ್ಟ ಆಗುವಂತಾಗುತ್ತದೆ. ವಿದ್ಯಾರ್ಥಿಗಳು ಯಾರು ಮನೆಯಿಂದ ದೂರ, ಹಾಸ್ಟೆಲ್ ಗಳಲ್ಲಿ ಇದ್ದು ಓದುತ್ತಿದ್ದೀರಿ ಅಥವಾ ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದೀರಿ ಅಥವಾ ಈಗ ಟ್ಯೂಷನ್ ಸೇರುವುದು ಅನಿವಾರ್ಯ ಎಂಬ ಸ್ಥಿತಿ ಎದುರಿಸುತ್ತಿದ್ದೀರಿ ಅಂಥವರಿಗೆ ಹೆಚ್ಚುತ್ತಿರುವ ಖರ್ಚು ಹಾಗೂ ವೆಚ್ಚ ಆತಂಕಕ್ಕೆ ಗುರಿ ಮಾಡಲಿದೆ. ನಿಮಗೆ ಅರಿವಿಲ್ಲದಂತೆಯೂ ಅಥವಾ ಯಾವುದೋ ಉತ್ಸಾಹದಲ್ಲಿ ಒಪ್ಪಿಕೊಂಡು ಬಂದಂಥ ಕೋರ್ಸ್ ಅಥವಾ ಜವಾಬ್ದಾರಿಯು ಬಹಳ ಕಷ್ಟ ಎಂಬುದು ಆ ನಂತರ ಅರಿವಿಗೆ ಬರಲಿದೆ. ಮಹಿಳೆಯರಿಗೆ ನಿಮಗೆ ಬಹಳ ಅಗತ್ಯ ಇರುವ ಹಣಕಾಸಿನ ವಿಚಾರಕ್ಕೆ ನೆರವು ನೀಡುವುದಾಗಿ ಹೇಳಿದಂಥ ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥೆಯವರು ಕೊನೆ ಕ್ಷಣದಲ್ಲಿ ತಮ್ಮಿಂದ ಆಗುವುದಿಲ್ಲ ಎಂದು ಹೇಳುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಅರ್ಧದಷ್ಟು ಮುಗಿಸಿ ಆಗಿದೆ ಎಂಬಂತಹ ಕೆಲಸ- ಪ್ರಕ್ರಿಯೆಗಳನ್ನು ಮತ್ತೆ ಮೊದಲಿಂದ ಆರಂಭಿಸಬೇಕಾದ ಹಾಗೂ ಅದರಿಂದ ಒತ್ತಡ ಬೀಳುವಂಥ ಸನ್ನಿವೇಶಗಳು ಎದುರಾಗಲಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಒತ್ತಡದಲ್ಲಿ ಅಥವಾ ಎದುರಿಗೆ ಇರುವವರ ಮಾತಿಗೆ ಎದುರಾಡಬಾರದು ಎಂಬ ಕಾರಣದಿಂದ ನಿಮ್ಮ ಒಳ ಮನಸ್ಸಿಗೆ ಬೇಡ ಎಂದೆನಿಸಿದ ಕೆಲಸ- ಕಾರ್ಯಗಳನ್ನು ಈ ವಾರ ಯಾವುದೇ ಕಾರಣಕ್ಕೂ ಮಾಡಬೇಡಿ. ಒಂದು ವೇಳೆ ಅದರಿಂದ ಹೆಚ್ಚಿನ ಹಣ ಸಿಗುತ್ತದೆ, ನಿಮಗೆ ಭವಿಷ್ಯದಲ್ಲಿ ಅನುಕೂಲ ಆಗುತ್ತದೆ ಹೀಗೆ ಏನೇ ಅನಿಸಿದರೂ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ರಕ್ಷಣಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂತಾದಲ್ಲಿ ವರ್ಗಾವಣೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾ ಆಗುವ ಅವಕಾಶಗಳಿವೆ. ನಿಮ್ಮ ವರ್ತನೆ, ಗುಣ- ನಡವಳಿಕೆಗಳಿಂದ ಮೇಲಧಿಕಾರಿಗಳಿಗೆ ಸಂತೋಷವಾಗಿ, ಅನುಕೂಲಗಳನ್ನು ಮಾಡಿಕೊಡಲಿದ್ದಾರೆ. ವಿದೇಶಗಳಿಗೆ ಪ್ರವಾಸಕ್ಕೆ ತೆರಳಬೇಕು ಎಂಬ ಉದ್ದೇಶ ಇರುವಂಥವರಿಗೆ ಹಣಕಾಸಿನ ಅನುಕೂಲ, ನಿಮ್ಮ ಮನಸಿಗೆ ಒಪ್ಪುವಂಥ ಟ್ರಾವೆಲ್ ಏಜೆನ್ಸಿಗಳವರ ಪರಿಚಯ ಆಗಲಿದ್ದು, ಅಂತಿಮವಾಗಿ ದಿನಾಂಕವೇ ನಿಗದಿ ಆಗುವ ಸಾಧ್ಯತೆಗಳು ಹೆಚ್ಚಿವೆ. ಭಾರೀ ವಾಹನಗಳ ಚಾಲನೆ ಮಾಡುವಂಥ ಚಾಲಕರು ಮಾತ್ರ ಮಾಮೂಲಿ ದಿನಗಳಿಗಿಂತ ಈ ವಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಬೆಲೆಬಾಳುವ ವಸ್ತುಗಳು ಅಥವಾ ವಾಹನದ ಬಿಡಿ ಭಾಗಗಳು ಕಳುವಾಗುವ ಯೋಗ ಇದೆ. ಇನ್ನು ಚೀಟಿಗೆ ಹಣ ಕಟ್ಟುತ್ತಿದ್ದು, ಅದನ್ನು ತೆಗೆದುಕೊಳ್ಳಬೇಕು ಎಂದಿರುವವರು ನಿಮ್ಮ ಉದ್ದೇಶವನ್ನು ಯಾರ ಬಳಿಯೂ ಹೇಳಿಕೊಳ್ಳಬೇಡಿ. ಕೃಷಿಕರಿಗೆ ನಿಮ್ಮ ವರ್ತನೆಯಲ್ಲಿ ನಿಮಗೇ ಅಚ್ಚರಿ ಆಗುವಂಥ ಬೆಳವಣಿಗೆಗಳು ಆಗಲಿವೆ. ಎಲ್ಲರೂ ನಿಮ್ಮಿಂದ ಹಣದ ಸಾಲ ಪಡೆಯುವ ತನಕ ಚೆನ್ನಾಗಿದ್ದು, ಆ ನಂತರ ಅದನ್ನು ಹಿಂತಿರುಗಿಸುವಾಗ ಸತಾಯಿಸುತ್ತಾರೆ ಎಂದು ಬಲವಾಗಿ ಅನಿಸುತ್ತದೆ. ಅದರ ಜತೆಗೆ ನಿಮ್ಮ ವೃತ್ತಿಗೆ ಯಾರೂ ಒತ್ತಾಸೆಯಾಗಿ ನಿಲ್ಲುತ್ತಿಲ್ಲ ಅಂತಲೂ ಅನಿಸುತ್ತದೆ. ಆದ್ದರಿಂದ ಒಂದಿಷ್ಟು ಆಕ್ರಮಣಕಾರಿಯಾಗಿ ಆಲೋಚನೆ ಮಾಡಲಿದ್ದೀರಿ. ‘ದುಡ್ಡಿಟ್ಟು ಆ ಮೇಲೆ ಮಾತನಾಡು’ ಅನ್ನುವ ರೀತಿಯಲ್ಲಿ ಇರುತ್ತದೆ ನಿಮ್ಮ ಧ್ವನಿ. ಯಾರ ಮೇಲೂ ನಂಬಿಕೆಯಿಟ್ಟು, ವ್ಯವಹಾರ ನಡೆಸಬಹುದು ಎಂಬ ಭಾವನೆ ನಿಮ್ಮೊಳಗೆ ಮೂಡುವುದಿಲ್ಲ. ಇನ್ನು ಮುಂದೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವಂತವಾಗಿ, ಸ್ವತಂತ್ರವಾಗಿ ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಟ್ರ್ಯಾಕ್ಟರ್, ಟಿಲ್ಲರ್ ಸೇರಿಂದ ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡುವುದಕ್ಕಾಗಿ ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿರುವವರಿಗೆ ಹಣ ಮಂಜೂರಾಗುವ ಸುದ್ದಿ ದೊರೆಯಲಿದೆ. ನಿಮ್ಮ ಗ್ರಾಮದಲ್ಲಿ ನೀವು ನಡೆದುಕೊಳ್ಳುವಂಥ ದೇವರಿಗೆ ಸೋಮವಾರದಂದು ಹೂವು- ಕಾಯಿ ಮಾಡಿಸಿಕೊಂಡು ಬನ್ನಿ. ಹೀಗೆ ಮಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ವೃತ್ತಿನಿರತರು ಈ ವಾರ ಹೇಳಿದ್ದನ್ನೇ ಹೇಳಬೇಕಾದ ಹಾಗೂ ಮತ್ತೆ ಮತ್ತೆ ವಿವರಿಸಬೇಕಾದ ಸನ್ನಿವೇಶಗಳು ಎದುರಾಗುತ್ತವೆ. ಇನ್ನು ನಿಮ್ಮಲ್ಲಿ ಕೆಲವರಂತೂ ನನ್ನ ಮಾತು ಹಾಗೂ ಧ್ವನಿಯ ಅರ್ಥ ಇದಾಗಿತ್ತು ಅಂತ ಉದ್ದೇಶವನ್ನು ಬಿಡಿಸಿ ಹೇಳುವುದರಲ್ಲಿ ಹೈರಾಣಾಗುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಕುಟುಂಬದ ಸದಸ್ಯರು ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ಆತಂಕವನ್ನೂ ಹಾಗೂ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಪೋಷಕರು, ಸೋದರ- ಸೋದರಿಯರ ಅನಾರೋಗ್ಯ ಸಮಸ್ಯೆ ನಿಮ್ಮನ್ನು ವಿಚಲಿತರನ್ನಾಗಿ ಮಾಡಬಹುದು. ಹಸಿರು ಬಣ್ಣದ ಬಟ್ಟೆ ಧರಿಸುವುದರಿಂದ ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಮಾನಸಿಕವಾಗಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಮೀರಿ ನಿಲ್ಲುವುದಕ್ಕೆ ಸಾಧ್ಯವಾಗುತ್ತದೆ. ಮಹಿಳೆಯರು ದಿರಿಸು, ಒಡವೆ, ವಸ್ತುಗಳು ಪ್ರತಿಯೊಂದರಲ್ಲೂ ಒಪ್ಪ- ಓರಣವಾಗಿ ಸಿದ್ಧವಾಗಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗೀ ಆಗುವ ಯೋಗ ಇದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಸಂತಸದ ವಾರ ಇದಾಗಿರಲಿದೆ. ಪ್ರೀತಿಪಾತ್ರರಾದವರು ನಿಮಗೆ ಉಡುಗೊರೆಗಳನ್ನು ಕೊಡುವ ಸಾಧ್ಯತೆ ಇದೆ. ಇನ್ನು ಮ್ಯೂಚುವಲ್ ಫಂಡ್, ಷೇರುಗಳು ಇಂಥದ್ದರಲ್ಲಿ ಹೂಡಿಕೆ ಮಾಡಿದ್ದವರಿಗೆ ಲಾಭ ಬರುವಂಥ ಯೋಗ ಇದೆ. ಪಾರ್ಟಿಗಳಲ್ಲಿ ಭಾಗೀ ಆಗಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವು ಏನು ನಿರೀಕ್ಷೆ ಮಾಡಿದ್ದಿರೋ ಅಥವಾ ಅಪೇಕ್ಷಿಸಿದ್ದಿರೋ ಅದಕ್ಕೆ ಮೀರಿದಂಥದ್ದು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಜತೆಗೆ ವಿಪರೀತ ಪ್ರಚಾರಕ್ಕೆ ಬರಲಿದ್ದೀರಿ. ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಸುತ್ತಮುತ್ತ ಇರುವಂಥ ಬೆಂಬಲ ನಿಮಗೆ ದೊರೆಯಲಿದೆ. ನೀವಾಗಿ ವಹಿಸಿಕೊಂಡ ಜವಾಬ್ದಾರಿಗಳು ಹಾಗೂ ಸವಾಲಾಗಿ ಸ್ವೀಕರಿಸಿದಂಥ ಕೆಲಸಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ಸಂಘ- ಸಂಸ್ಥೆಗಳಲ್ಲಿ ಪ್ರಭಾರಿಯಾಗಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿರುವವರಿಗೆ ಅದು ಕಾಯಂ ಆಗುವ ಅಥವಾ ಪೂರ್ಣಾವಧಿಗೆ ಅಧಿಕಾರ ಹಿಡಿಯುವಂಥ ಯೋಗ ಇದೆ. ನಿಮಗೆ ಈ ವಾರದ ಅತಿ ಮುಖ್ಯ ಸಲಹೆ ಏನೆಂದರೆ, ಯಾವುದೇ ಹುದ್ದೆ, ಜವಾಬ್ದಾರಿ, ಕೆಲಸ ಖಾಲಿ ಇದೆ, ಅಲ್ಲಿ ನಿಮಗೆ ಬೆಳವಣಿಗೆಗೆ ಅವಕಾಶ ಇದೆ ಹಾಗೂ ಅದಕ್ಕೆ ಬೇಕಾದ ಎಲ್ಲ ಅರ್ಹತೆ ನಿಮಗೆ ಇದೆ ಮತ್ತು ಮಾನದಂಡಗಳು ಎಲ್ಲವನ್ನೂ ನೀವು ಮುಟ್ಟಬಲ್ಲಿರಿ ಎಂದಾದಲ್ಲಿ ಸಂಬಂಧ ಪಟ್ಟವರ ಬಳಿಯಲ್ಲಿ ನೇರವಾಗಿ ಅವಕಾಶವನ್ನು ಕೇಳಿ ಪಡೆಯಿರಿ. ನಿಮ್ಮಲ್ಲಿ ಯಾರು ಯೋಗಾಸನವನ್ನು ಹೇಳಿಕೊಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದೀರಿ ಅಂಥವರಿಗೆ ವಿದೇಶಗಳಿಂದ ಆಹ್ವಾನ ಬರುವಂಥ ಸಾಧ್ಯತೆಗಳಿವೆ. ಇನ್ನು ಸಂಘ- ಸಂಸ್ಥೆಗಳಿಂದ ಸನ್ಮಾನಗಳನ್ನು ಸಹ ಆಯೋಜನೆ ಮಾಡಬಹುದು. ಕೃಷಿಕರಿಗೆ ಕೃಷಿ ಭೂಮಿ, ಜಮೀನು ಅಥವಾ ಮನೆ ಖರೀದಿ ಮಾಡುವಂಥ ಸಾಧ್ಯತೆಗಳಿವೆ. ನಿಮ್ಮ ಮನಸ್ಸಿಗೆ ಹಿಡಿಸುವಂಥದ್ದೇ ದೊರೆಯಲಿವೆ, ನೀವು ಬೆಳೆಯುತ್ತಿರುವ ಬೆಳೆಗಳ ಮಾರಾಟ, ಪ್ರಚಾರದಲ್ಲಿ ಹೆಚ್ಚು ತೊಡಗಿಕೊಂಡು, ಅದಕ್ಕೆ ಉದ್ಯಮ, ವ್ಯಾಪಾರ, ವ್ಯವಹಾರದ ಸ್ವರೂಪವನ್ನು ಸಹ ನೀಡಲಿದ್ದೀರಿ. ನಿಮ್ಮ ಜತೆಗೆ ಬ್ರ್ಯಾಂಡಿಂಗ್ ಮಾಡುವುದಕ್ಕೆ ಪ್ರತಿಷ್ಠಿತ ಸಂಸ್ಥೆಗಳವರು ಮುಂದೆ ಬಂದಲ್ಲಿ ಅಂಥ ಯಾವುದೇ ಅವಕಾಶಗಳನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಪರಿಚಿತರು ಅಥವಾ ಸ್ನೇಹಿತರಿಂದ ನಿಮ್ಮ ನಿರ್ಧಾರಕ್ಕೆ ಬೆಂಬಲ ಹಾಗೂ ಸಹಾಯ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಆಯುರ್ವೇದ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ವೃತ್ತಿನಿರತರು ದೂರದ ಊರುಗಳಿಂದ ಶುಭ ಸುದ್ದಿಯನ್ನು ಕೇಳಲಿದ್ದೀರಿ. ಯಾರು ವೃತ್ತಿಯಲ್ಲಿ ಅಥವಾ ನೀವು ನೀಡುವ ಸೇವೆಗಳಲ್ಲಿ ಬದಲಾವಣೆ ಮಾಡಬೇಕು ಅಂದುಕೊಳ್ಳುತ್ತಾ ಇದ್ದೀರೋ ಅಂತಹವರಿಗೆ ಸ್ನೇಹಿತರ ನೆರವು ದೊರೆಯಲಿದೆ. ಈಗ ನೀಡುತ್ತಿರುವ ಸೇವೆಗೆ ದೊರೆಯುತ್ತಿರುವ ಆದಾಯವನ್ನು ಹೆಚ್ಚಳ ಮಾಡಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸುತ್ತಿದ್ದಲ್ಲಿ ಕಮಿಷನ್ ಸಹ ದೊರೆಯುವಂಥ ಸಾಧ್ಯತೆಗಳು ತೆರೆದುಕೊಳ್ಳಲಿವೆ. ಬಹುತೇಕ ಮುರಿದೇ ಹೋಯಿತು ಎಂದುಕೊಂಡಿದ್ದ ವ್ಯವಹಾರಗಳ ಮಾತುಕತೆಯನ್ನು ಮತ್ತೆ ಆರಂಭಿಸಿ, ಯಶಸ್ವಿಯಾಗಿ ಮುಗಿಸುವಲ್ಲಿ ಸಫಲರಾಗುತ್ತೀರಿ. ವಿದ್ಯಾರ್ಥಿಗಳು ಪ್ರಕೃತಿಯ ಮಧ್ಯೆ ಉತ್ತಮವಾದ ಸಮಯವನ್ನು ಕಳೆಯುವಂತಹ ಯೋಗ ಪಡೆಯಲಿದ್ದೀರಿ. ಸ್ಕೌಟ್, ಎನ್ ಸಿಸಿ ಮೊದಲಾದವುಗಳಲ್ಲಿ ಭಾಗವಹಿಸುವಂಥವರಿಗೆ ಹೆಮ್ಮೆ ಪಡುವಂಥ ಸಾಧನೆ ಮಾಡುವ ಅವಕಾಶಗಳು ದೊರೆಯಲಿವೆ.ಇನ್ನು ಏನೂ ಯೋಜನೆ ಮಾಡಿಕೊಳ್ಳದೆ ತೆರಳಿದಂತಹ ಪ್ರವಾಸಗಳು ಸಂತೋಷವನ್ನು ಕೊಡಲಿವೆ. ಇದೇ ಸಂದರ್ಭದಲ್ಲಿ ಹಳೆಯ ಸ್ನೇಹಿತರು ಅಥವಾ ಪರಿಚಯಸ್ಥರೂ ಸಿಕ್ಕಿ, ಅದರಿಂದಲೂ ಸಂತೋಷ ಸಿಗಲಿದೆ. ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂದಿದ್ದು, ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಅಥವಾ ವೀಸಾಗೆ ಸಂಬಂಧಿಸಿದ ಅಡೆತಡೆಗಳು ಏನನ್ನಾದರೂ ಎದುರಿಸುತ್ತಿದ್ದಲ್ಲಿ ಅವುಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರಿಸಲಿವೆ. ಮಹಿಳೆಯರು ಕುಟುಂಬ ಸದಸ್ಯರ ಅಗತ್ಯಗಳಿಗಾಗಿ ಈ ವಾರ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡುತ್ತಿದ್ದೀರಿ ಎಂದಾದಲ್ಲಿ ಖರ್ಚಿನ ಮೇಲೆ ಒಂದಿಷ್ಟು ನಿಗಾ ಇರಲಿ. ನಿಮ್ಮ ಸುತ್ತಮುತ್ತ ಇರುವವರು ನಿಮ್ಮನ್ನು ಉಬ್ಬಿಸಿ, ಹೊಗಳಿ ವಿಪರೀತ ಖರ್ಚು ಮಾಡಿಸುವ ಸಾಧ್ಯತೆಗಳು ಕಾಣಿಸುತ್ತಿವೆ. ಖರ್ಚಿನ ವಿಚಾರ ಬಂದಾಗ ಭಾವನಾತ್ಮಕವಾಗಿ ಆಲೋಚನೆ ಮಾಡದಿರುವುದು ಒಳಿತು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ವಾರ ನಿಮ್ಮದಲ್ಲದ ತಪ್ಪಿಗೆ ಅಥವಾ ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗೆ ಪರಿತಪಿಸಬೇಕಾದಂಥ ಸನ್ನಿವೇಶ ನಿರ್ಮಾಣ ಆಗಲಿದೆ. ಅದಕ್ಕೆ ಕಾರಣ ಏನು ಅಂತ ನೋಡುವುದಾದರೆ, ನಿಮ್ಮ ಮನೆ ಸುತ್ತಮುತ್ತ ಅಥವಾ ಉದ್ಯೋಗ ಸ್ಥಳಕ್ಕೆ ಸಮೀಪದಲ್ಲಿ ಇಟ್ಟಂಥ ಬೆಲೆಬಾಳುವ ವಸ್ತುಗಳು ಅಥವಾ ಹಣ ಕಳುವಾಗುವಂಥ ಸಾಧ್ಯತೆಗಳಿವೆ. ಅಥವಾ ನಿಮ್ಮದೇ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಕಳ್ಳತನ ಮಾಡುವುದಕ್ಕೆ ವಿಫಲ ಯತ್ನ ಮಾಡಿರುವುದು ಗಮನಕ್ಕೆ ಬರಲಿದೆ. ಇದರಿಂದ ಎಚ್ಚೆತ್ತುಕೊಳ್ಳುವ ನೀವು ಸಿಸಿಟಿವಿ ಕ್ಯಾಮೆರಾ ಖರೀದಿಸುವ ಬಗ್ಗೆ, ಬಾಗಿಲಿನ ಮುಂದೆ ಕಬ್ಬಿಣದ ಮತ್ತೊಂದು ಬಾಗಿಲನ್ನು ಹಾಕಿಸುವುದಕ್ಕೆ ಅಥವಾ ಕಾಂಪೌಂಡ್ ಸುತ್ತ ಗ್ರಿಲ್ ಹಾಕಿಸುವುದರ ಬಗ್ಗೆ ಈ ವಾರ ತೀರ್ಮಾನವನ್ನು ಮಾಡಲಿದ್ದೀರಿ ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ, ಮನೆಯ ಅಥವಾ ಕಚೇರಿ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಹಣ ಖರ್ಚು ಮಾಡಿ, ಕೆಲವು ವ್ಯವಸ್ಥೆಗಳನ್ನು ಮಾಡುವಂಥ ಸಾಧ್ಯತೆ ಇದೆ. ಹೀಗೆ ಮಾಡುತ್ತೀರಿ ಎಂದಾದಲ್ಲಿ ಖರ್ಚು ನೀವಂದುಕೊಂಡಿದ್ದಕ್ಕಿಂತ ಕೈ ಮೀರಿ ಹೋಗಲಿದೆ. ಆದ್ದರಿಂದ ಬಜೆಟ್ ಲೆಕ್ಕಾಚಾರ ಸರಿಯಾಗಿ ಹಾಕಿಕೊಳ್ಳಿ. ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಕರೋ ನಿಮ್ಮ ಹೆಸರಲ್ಲಿ ಸಾಲ ಕೊಡಿಸುವಂತೆ ಕೇಳಬಹುದು ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ, ಸಾಲ ತೆಗೆದುಕೊಂಡು, ಅದನ್ನು ಇಎಂಐ ಆಗಿ ಪರಿವರ್ತಿಸುವುದಾಗಿ ಹೇಳಬಹುದು. ಒಪ್ಪಿಗೆ ಕೊಡುವ ಮುಂಚೆ ಒಂದಕ್ಕೆ ನಾಲ್ಕು ಸಲ ಆಲೋಚಿಸಿ. ಕೃಷಿಕರಿಗೆ ಒಂದು ಬಗೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಈ ವಾರದಲ್ಲಿ ಕುಟುಂಬದ ಸಲುವಾಗಿ ಹೆಚ್ಚಿನ ಸಮಯವನ್ನು ಇಡಬೇಕು ಎಂದು ಆಲೋಚನೆ ಮಾಡಲಿದ್ದೀರಿ. ಈಗಾಗಲೇ ಒಪ್ಪಿಕೊಂಡಂಥ ಕೆಲಸಗಳು ಇದ್ದರೂ ಅದನ್ನು ಮುಂದಕ್ಕೆ ಹಾಕಿ ಅಥವಾ ಬೇಗನೆ ಮುಗಿಸಿಕೊಂಡು, ಕುಟುಂಬಕ್ಕಾಗಿ ಹೆಚ್ಚಿನ ಸಮಯ ನೀಡಲಿದ್ದೀರಿ. ಇನ್ನು ಮನೆಯಲ್ಲಿನ ಸದಸ್ಯರಿಗಾಗಿ ಬಟ್ಟೆ ಖರೀದಿಸುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ. ಇದರಿಂದ ನಿಮ್ಮ ಮನಸ್ಸಿಗೆ ಸಂತೋಷ ಸಿಗಲಿದೆ. ಬೆಳ್ಳಿ ಒಡವೆ ಅಥವಾ ದೀಪ, ತಟ್ಟೆ ಇಂಥದ್ದನ್ನು ಖರೀದಿಸುವಂಥ ಯೋಗ ಸಹ ಇದೆ. ಅಚ್ಚರಿ ಎಂಬಂತೆ ನಿಮ್ಮ ಹಳೇ ಸ್ನೇಹಿತ ಅಥವಾ ಸ್ನೇಹಿತೆಯರನ್ನು ಭೇಟಿ ಆಗಲಿದ್ದೀರಿ. ವೃತ್ತಿನಿರತರು ಇತರರನ್ನು ನಂಬಿ ಕೆಲಸ ವಹಿಸಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಮನಸ್ಸಿಲ್ಲದ ಮನಸ್ಸಲ್ಲಿ ವಹಿಸಿದ ಜವಾಬ್ದಾರಿ ಅಥವಾ ಕೆಲಸಗಳಿಗೆ ಒಂದಕ್ಕೆ ಎರಡರಷ್ಟು ಖರ್ಚು, ಜತೆಗೆ ಸಮಯ ಸಹ ವ್ಯರ್ಥ ಆಗಿ, ಬೇಸರ ಆಗಲಿದೆ. ಮಕ್ಕಳ ಶಿಕ್ಷಣದ ಸಲುವಾಗಿ ಕೂಡಿಸಿಟ್ಟಿದ್ದ ಹಣವನ್ನು ತೆಗೆದು, ಬೇರೆಯದ್ದಕ್ಕೆ ಬಳಸಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ನೀವು ಕೊಟ್ಟಿರುವ ಸಾಲವನ್ನು ವಾಪಸ್ ಕೇಳಲೇಬೇಕಾದ ಸನ್ನಿವೇಶ ಎದುರಾಗಲಿದ್ದು, ಹೇಗೆ ಕೇಳಬೇಕು ಎಂದು ಗೊಂದಲಕ್ಕೆ ಬೀಳುತ್ತೀರಿ. ಒಂದು ವೇಳೆ ಮ್ಯೂಚುವಲ್ ಫಂಡ್ ಅಥವಾ ಷೇರುಗಳಲ್ಲಿ ಹಣ ಹೂಡಿಕೆ ಮಾಡಿದ್ದಲ್ಲಿ ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ತೀರ್ಮಾನವನ್ನು ಮಾಡಲಿದ್ದೀರಿ. ಈ ನಿರ್ಧಾರದಿಂದ ನಿಮ್ಮ ಮನಸ್ಸಿಗೆ ಒಂದಿಷ್ಟು ಬೇಸರ ಆಗಬಹುದು. ಯಾವ ಉದ್ದೇಶಿತ ಕೆಲಸಕ್ಕಾಗಿ ಹೂಡಿಕೆ ಮಾಡಿದ್ದೀರಿ ಅದನ್ನು ಬಿಟ್ಟು ಬೇರೆಯದ್ದಕ್ಕೆ ಬಳಸಿಕೊಳ್ಳುತ್ತಿದ್ದೀರಿ ಎಂದು ಅನಿಸಲಿದೆ. ವಿದ್ಯಾರ್ಥಿಗಳಿಗೆ ನಿಮ್ಮನ್ನು ಬಹಳ ಹತ್ತಿರದವರೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರುವಾಗುತ್ತದೆ. ಹಳೇ ಘಟನೆಗಳನ್ನು ತಳುಕು ಹಾಕಿಕೊಂಡು ಆಲೋಚಿಸುವುದಕ್ಕೆ ಶುರು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಹೀಗೆ ಮಾಡುತ್ತಿರುವವರ ಬಳಿಯೇ ನೇರವಾಗಿ ಕೇಳಿಯೂ ಬಿಡುವ ಸಾಧ್ಯತೆ ಇದೆ. ಇದ್ಯಾವುದರಿಂದಲೂ ಏನೂ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ಇದನ್ನು ಮರೆತು ಮುಂದುವರಿಯುವುದು ಉತ್ತಮ. ಇಂಥ ಬೇಸರಗಳಿಗೆ ಏನು ಪರ್ಯಾಯ ಕಂಡುಕೊಳ್ಳಬಹುದು ಎಂಬ ಬಗ್ಗೆ ಆಲೋಚಿಸಿ. ಮಹಿಳೆಯರಿಗೆ ನಿಮ್ಮ ಸ್ವಂತ ವಿಷಯಗಳಲ್ಲಿ ಇತರರು ವಿಪರೀತ ಆಸಕ್ತಿ ತೋರಿಸುತ್ತಿದ್ದಾರೆ, ಮೂಗು ತೂರಿಸುತ್ತಿದ್ದಾರೆ ಎಂದು ಎನಿಸುವುದಕ್ಕೆ ಶುರುವಾಗುತ್ತದೆ. ಇದೇ ಕಾರಣಕ್ಕೆ ನೀವು ಕೂಗಾಟ- ಕಿರುಚಾಟ ಕೂಡ ಮಾಡಬಹುದು. ಇದರಿಂದ ನಿಮ್ಮ ವರ್ಚಸ್ಸಿಗೆ ಹಾನಿ ಎಂಬುದನ್ನು ನೆನಪಿನಲ್ಲಿಡಿ.

ಲೇಖನ- ಎನ್.ಕೆ. ಸ್ವಾತಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ