ಈ ಆರು ರಾಶಿಯ ಉದ್ಯೋಗಿಗಳು ಎಂಥ ಸಂಸ್ಥೆಯಲ್ಲೂ ಒಳ್ಳೆ ಹೆಸರು, ಹುದ್ದೆ ಪಡೆಯುತ್ತಾರೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 01, 2023 | 9:40 AM

ಉದ್ಯೋಗ ಮಾಡುವ ಕಡೆ ಎಲ್ಲರ ಸಾಮರ್ಥ್ಯವೂ ಒಂದೇ ಥರ ಇರುವುದಿಲ್ಲ. ಅದೇ ರೀತಿ ಉದ್ದೇಶ ಸಹ ಒಂದೇ ಇರುವುದಿಲ್ಲ. ರಾಶಿ ಚಕ್ರದಲ್ಲಿ ಇರುವ ಹನ್ನೆರಡು ರಾಶಿಗಳ ಪೈಕಿ ಆರು ರಾಶಿಯ ಜನರು ತಾವು ಇರುವ ಸ್ಥಳದಲ್ಲಿ ಗುರುತಿಸುವಂಥ ಕೆಲಸ ಮಾಡುತ್ತಾರೆ.

ಈ ಆರು ರಾಶಿಯ ಉದ್ಯೋಗಿಗಳು ಎಂಥ ಸಂಸ್ಥೆಯಲ್ಲೂ ಒಳ್ಳೆ ಹೆಸರು, ಹುದ್ದೆ ಪಡೆಯುತ್ತಾರೆ
ಸಾಂದರ್ಭಿಕ ಚಿತ್ರ
Follow us on

ಉದ್ಯೋಗ ಮಾಡುವ ಕಡೆ ಎಲ್ಲರ ಸಾಮರ್ಥ್ಯವೂ ಒಂದೇ ಥರ ಇರುವುದಿಲ್ಲ. ಅದೇ ರೀತಿ ಉದ್ದೇಶ ಸಹ ಒಂದೇ ಇರುವುದಿಲ್ಲ. ರಾಶಿ ಚಕ್ರದಲ್ಲಿ ಇರುವ ಹನ್ನೆರಡು ರಾಶಿಗಳ ಪೈಕಿ ಆರು ರಾಶಿಯ ಜನರು ತಾವು ಇರುವ ಸ್ಥಳದಲ್ಲಿ ಗುರುತಿಸುವಂಥ ಕೆಲಸ ಮಾಡುತ್ತಾರೆ. ಅದೇ ರೀತಿ ತಮ್ಮ ಮೇಲಧಿಕಾರಿ ದೃಷ್ಟಿಯಲ್ಲಿ ಕೆಲಸಗಾರರು ಎನಿಸಿಕೊಳ್ಳುತ್ತಾರೆ. ಹಾಗೆ ಈ ಆರು ರಾಶಿಯವರು ಹಾಗೆನಿಸಿಕೊಳ್ಳುವುದರ ಹಿಂದೆ ಜ್ಯೋತಿಷ್ಯ ರೀತಿಯಾಗಿಯೂ ಕಾರಣಗಳಿವೆ. ಅದೇನು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಮೇಷ

ಒಂದು ಕೆಲಸ ಅಂತ ಹೇಳಿಬಿಟ್ಟ ಮೇಲೆ ಅದರ ಕ್ರಮ ಸರಿಯಿದೆಯೋ ಬಿಟ್ಟಿದೆಯೋ ಅಥವಾ ಆ ಕೆಲಸ ಸರಿಯಾದ ರೀತಿ ಪೂರ್ತಿಯಾಗಿದೆಯೋ ಬಿಟ್ಟಿದೆಯೋ ಇದ್ಯಾವುದನ್ನೂ ತಲೆ ಕೆಡಿಸಿಕೊಳ್ಳದೆ ಓಹ್ ಪೂರ್ತಿ ಮಾಡಿದ್ದೀನಿ ಅನ್ನುವವರು ಮೇಷ ರಾಶಿಯವರು. ಬೇಕಾದರೆ ಆ ನಂತರ, ಇದು ಹೀಗಲ್ಲ ಹಾಗೆ ಮಾಡಬೇಕಿತ್ತು ಅಂದರೂ ಯಾವುದೇ ಬೇಜಾರಿಲ್ಲದೆ ಇನ್ನೊಂದು ಸಲ ಅದೇ ಕೆಲಸವನ್ನು ಮಾಡಬಲ್ಲಂಥ ಜನರಿವರು. ಕೆಲಸ ಮಾಡಿಲ್ಲ ನೀನು ಅನ್ನೋ ಮಾತನ್ನು ಇವರಿಗೆ ಯಾರೂ ಹೇಳಬಾರದು. ಅದಕ್ಕಾಗಿಯೇ ಸರಿ- ತಪ್ಪು ಅಂತಲೂ ಯೋಚಿಸದೆ ಕೆಲಸ ಮಾಡಿ, ಮುಗಿಸುತ್ತಾರೆ. ಎಂಥ ಕಷ್ಟದ ಕೆಲಸವಾದರೂ ಸರಿ, ಎದುರು ಮಾತನಾಡದೆ ಮಾಡುತ್ತಾರೆ. ಇವರು ಅನ್ನೋದು ಮೇಲಧಿಕಾರಿಗಳಿಗೆ ಬಹಳ ಇಷ್ಟವಾಗುತ್ತದೆ.

ಕರ್ಕಾಟಕ

ಅಯ್ಯೋ, ಇಷ್ಟು ಸಂಬಳ, ಸವಲತ್ತು ಎಲ್ಲ ಕೊಡುವ ಕಂಪನಿ ಇದೆ. ಹೀಗಿರುವಾಗ ಕೆಲಸ ಮಾಡದೇ ಇರುವುದು ತಪ್ಪಲ್ಲವಾ ಅನ್ನೋ ಆಲೋಚನೆಯ ಜನರಿವರು. ಇವರಿಗೆ ಕೆಲಸ ಅಂದರೆ ಎಮೋಷನ್. ಸ್ವತಃ ತಮಗೆ ಭಾವನಾತ್ಮಕವಾಗಿ ಸಮಾಧಾನ ಆಗುವ ತನಕ ಕೆಲಸ ಮಾಡುತ್ತಲೇ ಇರುತ್ತಾರೆ. ಇವರು ಕೆಲಸದ ಒತ್ತಡಕ್ಕೆ ಸಿಲುಕಿಕೊಂಡು ಆರೋಗ್ಯದ ಮೇಲೂ ಸಮಸ್ಯೆ ಆಗುವಂತೆ ಮಾಡಿಕೊಳ್ಳುತ್ತಾರೆ.

ಸಿಂಹ

ಈ ರಾಶಿಯವರು ತಮ್ಮನ್ನು ತಾವು ಗುರುತಿಸಿಕೊಳ್ಳಲು ಎದ್ದು ಬಿದ್ದು ಕೆಲಸ ಮಾಡುತ್ತಾರೆ. ನೇರ- ನೇರವಾಗಿ ಮಾತನಾಡುತ್ತಾರೆ. ಸಾಮಾನ್ಯವಾಗಿ ಸಿಂಹ ರಾಶಿಯ ಉದ್ಯೋಗಿಗಳು ತಮ್ಮ ಕಡೆಗೆ ತಪ್ಪು ಅಂತ ಬೆರಳು ಮಾಡುವುದಕ್ಕೆ ಸಾಧ್ಯ ಇಲ್ಲದಂತೆ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಮೇಲಧಿಕಾರಿಗೆ ಆವಾಜ್ ಹಾಕುವ ಮಟ್ಟಕ್ಕೆ ಹೋಗುವ ಇವರು, ಎಷ್ಟೇ ಒಳ್ಳೆ ಕೆಲಸ ಆದರೂ ಪರ್ಫಾರ್ಮೆನ್ಸ್ ರೇಟಿಂಗ್ ಅಂತ ಬಂದಾಗ ಪೆಟ್ಟು ತಿನ್ನುತ್ತಾರೆ.

ಇದನ್ನೂ ಓದಿ:Horoscope: ಈ ರಾಶಿಯವರ ಪಾಲುದಾರಿಕೆಯು ಕಲಹದಲ್ಲಿ ಕೊನೆಯಾಗುವುದು

ವೃಶ್ಚಿಕ

ವೃಶ್ಚಿಕ ರಾಶಿಯವರು ತಾವು ಮಾಡಿದ ಕೆಲಸಕ್ಕೆ ಮೆಚ್ಚುಗೆ ನಿರೀಕ್ಷೆ ಮಾಡುವಂಥವರಲ್ಲ. ಇವರಿಗೆ ತಮ್ಮ ಕೆಲಸಕ್ಕೆ ತಕ್ಕಂತೆ ಬಡ್ತಿ, ಸಂಬಳ ಹೆಚ್ಚು ಮಾಡುವುದು, ಬೋನಸ್ ಕೊಡುವುದು ಅದರ ಮೂಲಕ ತೋರಿಸಲಿ ಎಂಬುದು ನಿರೀಕ್ಷೆ ಆಗಿರುತ್ತದೆ. ಇವರು ಬಹಳ ಒಳ್ಳೆ ಮೈಂಡ್ ರೀಡರ್. ತಮ್ಮ ಮೇಲೆ ಕೂತಿರುವ ವ್ಯಕ್ತಿಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಇವರು ಕೆಲಸದಲ್ಲಿ ಮಾಡುವಂಥ ತಪ್ಪನ್ನು ಕಂಡುಹಿಡಿಯುವುದು ತುಂಬ ಕಷ್ಟ.

ಮಕರ

ತಮ್ಮ ಮೈ ಮೇಲೆ ಕೆಲಸ ಹಾಕಿಕೊಂಡು ಮಾಡುವ ಇವರ ಪಾಲಿಗೆ ಅದೃಷ್ಟ ಅನ್ನೋದು ಅಷ್ಟಾಗಿ ಇರುವುದಿಲ್ಲ. ಉದ್ಯೋಗ ಅಥವಾ ವೃತ್ತಿಯಲ್ಲಿ ಮೇಲಕ್ಕೆ ಏರುವುದಕ್ಕೆ ಶ್ರಮ ಪಡುವಂಥ ಇವರು, ಉಳಿದ ರಾಶಿಗಳವರಿಗೆ ಹೋಲಿಸಿದರೆ ಮೇಲಿನ ಸ್ತರಕ್ಕೆ ಏರುತ್ತಾರೆ, ಆದರೆ ಅದಕ್ಕೆ ಬಹಳ ಸಮಯ ಆಗುತ್ತದೆ. ತಮ್ಮದೇ ಸ್ವಂತ ಸಂಸ್ಥೆ ಆರಂಭಿಸಿದರೂ ಉದ್ಯೋಗಿ ರೀತಿಯಲ್ಲೇ ಕೆಲಸ ಮಾಡುವ ಜನ ಇವರು.

ಕುಂಭ

ಮೈ- ಕೈ ನೋವು ಮಾಡಿಕೊಳ್ಳದಂತೆ, ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡುವಂಥ ಜನ ಇವರು. ಯಾವುದೇ ಸಂಸ್ಥೆಯಲ್ಲಿ ಅಲ್ಲಿ ವ್ಯವಸ್ಥೆ, ನಿರೀಕ್ಷೆ ಹಾಗೂ ಯಾವುದಕ್ಕೆ ಬೆಲೆ ಎಂಬುದು ಗೊತ್ತಿರುವವರಿದ್ದರೆ ಅದು ಕುಂಭ ರಾಶಿಯವರೇ ಆಗಿರುತ್ತಾರೆ. ಯಾವುದೇ ಸಂದರ್ಭದಲ್ಲಿ ಬೆಟ್ಟಕ್ಕೆ ಕಲ್ಲು ಹೊರುವಂಥ ಕೆಲಸ ಮಾಡುವವರಲ್ಲ. ಜತೆಗೆ ಎಂಥ ಕಷ್ಟದ ಕೆಲಸವನ್ನು ಸುಲಭವಾಗಿ ಮಾಡುವುದು ಹೇಗೆ ಎಂಬುದೇ ಇವರ ಆಲೋಚನೆ ಆಗಿರುತ್ತದೆ. ಆ ಕಾರಣಕ್ಕೆ ಮ್ಯಾನೇಜ್ ಮೆಂಟ್ ದೃಷ್ಟಿಯಲ್ಲಿ ಇವರು ‘ಜಾಣರು’.