Horoscope: ಈ ರಾಶಿಯವರ ಪಾಲುದಾರಿಕೆಯು ಕಲಹದಲ್ಲಿ ಕೊನೆಯಾಗುವುದು
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಸಾಧ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 10:59 ರಿಂದ 12:36ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 03:50 ರಿಂದ 05:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:45 ರಿಂದ ಮಧ್ಯಾಹ್ನ 09:22ರ ವರೆಗೆ.
ಧನು: ಪಾಲುದಾರಿಕೆಯು ಕಲಹದಲ್ಲಿ ಕೊನೆಯಾಗುವುದು. ವೃತ್ತಿಪರರು ಕಛೇರಿಯಲ್ಲಿ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುವರು. ಹೊಸ ಉದ್ಯೋಗಕ್ಕೆ ಸೇರುವವರು ಸಂಪೂರ್ಣ ಮಾಹಿತಿಯ ಜೊತೆ ಸೇರುವಿರಿ. ಮಕ್ಕಳ ವಿಚಾರದಲ್ಲಿ ನಿಮಗೆ ಹೆಮ್ಮೆ ಎನಿಸಿ ಏನನ್ನಾದರೂ ಕೊಡುವಿರಿ. ನಿಮಗೆ ಸಿಗುವ ಸಂಗಾತಿಯು ಬಹಳ ಬುದ್ಧಿವಂತನಾಗಿರುವನು. ಧಾರ್ಮಿಕಕ್ಷೇತ್ರಗಳಿಗೆ ಹೋಗಿ ನಿಮ್ಮ ಹರಕೆಯನ್ನು ಒಪ್ಪಿಸಿ ಬರುವಿರಿ. ಸದ್ದಿಲ್ಲದೇ ನಿಮ್ಮ ಪ್ರಚಾರಗಳನ್ನು ಶತ್ರುಗಳು ಮಾಡುವರು. ತೆರಿಗೆಯ ವಿಚಾರವನ್ನು ನೀವು ಸರಿಯಾಗಿ ಪಡೆದು ದಂಡದಿಂದ ತಪ್ಪಿಸಿಕೊಳ್ಳುವುದು ಉತ್ತಮ. ಗುರುಚರಿತ್ರೆಯನ್ನು ಪಠಿಸಿ.
ಮಕರ: ನಿಮಗೆ ಹೇಳದೇ ಕುಟುಂಬವು ಮಾಡುವ ಕೆಒಸಕ್ಕೆ ನಿಮಗೆ ಅಸಮಾಧಾನ ಆಗಲಿದೆ. ಸ್ನೇಹಿತರಿಗೆ ಧನಸಹಾಯವನ್ನು ಮಾಡುವಿರಿ. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಕ್ಕಿ ಅವರ ಜೊತೆ ಮಾತಮಾಡುವಿರಿ. ಪೂರ್ವಪುಣ್ಯದಿಂದ ದೊಡ್ಡ ಅಪಾಯವೊಂದು ತಪ್ಪಿಹೋಗುವ ಸಂಭವವಿದೆ. ಮನೆಯಲ್ಲಿ ಕಿರಿಕಿರಿಯ ಕಾರಣ ಹೊರನಡೆಯುವಿರಿ. ಎಂದೋ ಆದ ತಪ್ಪಿಗೆ ಇಂದು ಪಶ್ಚಾತ್ತಾಪ ಪಡಬೇಕಾದೀತು. ಕೃಷಿಯು ನಿಮ್ಮ ಆಸಕ್ತಿಯ ಕ್ಷೇತ್ರವಾಗುವುದು. ಸಂಗಾತಿಯ ಜೊತೆ ಹರಟೆ ಹೊಡೆಯುತ್ತ ಕಾಲಕಳೆಯುವಿರಿ. ತಂದೆಯಿಂದ ಅಸಮಾಧಾದನ ಮಾತುಗಳನ್ನು ಕೇಳುವಿರಿ.
ಕುಂಭ: ನಿಮ್ಮ ಕೆಲಸಗಳಿಗೆ ಅಡ್ಡಿಯಾಗಬಹುದು. ಆಪ್ತರು ನಿಮ್ಮನ್ನು ಅನ್ಯ ಕೆಲಸಗಳಿಗೆ ಕರೆದೊಯ್ಯುವರು. ನಿಮ್ಮ ನಿಷ್ಪಕ್ಷಪಾತ ನಿಲುವು ಕೆಲವರಿಗೆ ಇಷ್ಟವಾಗದೇ ಹೋಗಬಹುದು. ನಿರ್ಮಾಣ ಹಂತದ ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ನಿಮ್ಮ ಪೂರ್ವನಿರ್ಧಾರಿತ ಪ್ರಯಾಣವನ್ನು ಮುಂದೂಡುವಿರಿ. ಖುಷಿಪಡುವ ಸಂಗತಿಗಳನ್ನು ಬಿಟ್ಟು ನಕಾರಾತ್ಮಕವಾಗಿ ಆಲೋಚಿಸುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಶ್ರಮಿಸುವಿರಿ. ಹಣಕಾಸಿನ ಚಿಂತೆ ಕಾಡಬಹುದು. ನಿಮ್ಮ ಬಂಧುಗಳ ನಡುವಿನ ಒಡನಾಟವು ಖುಷಿಕೊಡಬಹುದು. ನಿಮಗೆ ಭಯ ಉಂಟಾದಲ್ಲಿ ಶಿವಪಂಚಾಕ್ಷರಿಯನ್ನು ಪಠಿಸಿ.
ಮೀನ: ಸಾಮರಸ್ಯದ ಕೊರತೆಯಿಂದ ಮನಸ್ಸು ಉದ್ವೇಗಕ್ಕೆ ಒಳಗಾಗಬಹುದು. ನಿಮಗೆ ಇನ್ನಷ್ಟು ವಿದ್ಯಾಭ್ಯಾಸದ ಅವಶ್ಯಕತೆ ಬೇಕು ಎನಿಸಲಿದೆ. ಉಚಿತವಾದುದನ್ನು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ಕಡೆಗಣಿಸಿದ ಕಾರಣಕ್ಕೆ ಸಿಟ್ಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ವಲ್ಪ ಆಲಸ್ಯವು ಇರಲಿದ್ದು ಕೆಲಸಗಳು ನಾಳೆಗೆ ಉಳಿದುಕೊಳ್ಳುವುದು. ಸಂಗಾತಿಯು ಸಂಕಟಪಡುತ್ತಿದ್ದು ನಿಮ್ಮಿಂದ ಸಾಂತ್ವನ ಸಿಗಬೇಕಿದೆ. ಸಿಗಬೇಕಾದ ಲಾಭವು ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ಸಂಬಂಧಿಸದ ವಿಷಯವನ್ನು ಚರ್ಚಿಸಿ ಕಾಲಹರಣ ಮಾಡುವಿರಿ. ಶಿವನ ಮೂಲಮಂತ್ರವನ್ನು ಪಠಿಸಿ.
-ಲೋಹಿತಶರ್ಮಾ 8762924271 (what’s app only)