ಗುರು ದೇವೋ ಭವ ಎಂದು ಹೇಳುತ್ತಾ ವಿದ್ಯೆ ಕಲಿಸಿದ ಗುರುವನ್ನು ದೇವರ ಸ್ಥಾನದಲ್ಲಿಟ್ಟು ಭಕ್ತಿಯಿಂದ ಪೂಜಿಸುವ ಸಂಸ್ಕೃತಿಯನ್ನೇ ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಗುರುವೆಂದಾಕ್ಷಣ ಕೇವಲ ಶಿಕ್ಷಣವನ್ನೇ ನೀಡಿರಬೇಕೆಂದೇನಿಲ್ಲ, ನಿಮ್ಮ ಜೀವನದಲ್ಲಿ ಉತ್ತಮ ಹಾದಿಯಲ್ಲಿ ನಡೆಯಲು ತೋರಿಸಿದ ಪ್ರತಿಯೊಬ್ಬರೂ ನಮ್ಮ ಗುರುವಾಗುತ್ತಾರೆ.
ಪ್ರಾಚೀನ ಕಾಲದಿಂದಲೂ ಕೂಡ ಗುರು-ಶಿಷ್ಯರ ಪರಂಪರೆ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯನ್ನು ಗುರು ಪೂರ್ಣಿಮಾ ರೂಪದಲ್ಲಿ ಆಚರಿಸಲಾಗುತ್ತದೆ.
ಗುರುವಿನ ಆಶೀರ್ವಾದ ಜೀವನದಲ್ಲಿ ಉನ್ನತಿ ಹಾಗೂ ಸಮೃದ್ಧಿಯನ್ನು ದಯಪಾಲಿಸುತ್ತದೆ. ಪೂರ್ಣಿಮಾ ತಿಥಿಯು ಜುಲೈ 13ರಂದು ಬೆಳಗ್ಗೆ 4ರಿಂದ ಜುಲೈ 14ರಂದು ಬೆಳಗ್ಗೆ 12:06ರವರೆಗೆ ಇರಲಿದೆ. ಯಾವ ರಾಶಿಯವರು ಹೇಗೆ ತಮ್ಮ ಪ್ರೀತಿ ಪಾತ್ರರೊಂದಿಗೆ ಈ ದಿನವನ್ನು ಕಳೆಯುತ್ತಾರೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಮೇಷ ರಾಶಿ: ಇಂದು ಈ ರಾಶಿಯವರಿಗೆ ಉತ್ತಮ ಫಲ ಲಭ್ಯವಾಗಲಿದೆ, ನಿಮ್ಮ ದಾಂಪತ್ಯ ಜೀವನದಲ್ಲಿ ಸಿಹಿಯು ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ವಿಶೇಷ ಸ್ಥಳಕ್ಕೆ ತೆರಳುತ್ತೀರಿ.
ವೃಷಭ ರಾಶಿ: ವೃಷಭ ರಾಶಿಯವರಿಗೂ ಇಂದು ಉತ್ತಮವಾದ ದಿನ, ನೀವು ನಿಮ್ಮ ಸಂಗಾತಿಯೊಂದಿಗೆ ದೂರದ ಪ್ರಯಾಣ ಮಾಡಬಹುದು. ವೃಷಭ ರಾಶಿಯ ಜನರು ಕಲ್ಲು ಸಕ್ಕರೆ ದಾನ ಮಾಡಿ, ದಿನವಿಡೀ ಪೂಜೆಯ ಕೊಠಡಿಯಲ್ಲಿ ತುಪ್ಪದ ದೀಪವನ್ನು ಬೆಳಗಿಸಿದರೆ ಉತ್ತಮ ಫಲ ಪಡೆಯುತ್ತೀರಿ.
ಮಿಥುನ ರಾಶಿ: ಇಂದು ನಿಮ್ಮ ದಿನ ಉತ್ತಮವಾಗಿರಲಿದ್ದು, ನಿಮ್ಮ ಸಂಗಾತಿ ಜತೆ ಊಟಕ್ಕೆ ಹೋಗಿ ಹೆಚ್ಚಿನ ಸಮಯ ಕಳೆಯುತ್ತೀರಿ, ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ, ಹೊಸ ಸ್ನೇಹಿತರನ್ನು ಭೇಟಿಯಾಗಲು ಉತ್ತಮ ದಿನ. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಇಮ್ಮಡಿಯಾಗುತ್ತದೆ.
ಕಟಕ: ನಿಮ್ಮ ದಿನ ಇಂದು ಸಾಮಾನ್ಯವಾಗಿರಲಿದೆ. ಸಾಂಸಾರಿಕ ಜೀವನ ಉತ್ತಮವಾಗಿರಲಿದೆ. ಒತ್ತಡವು ದೂರವಾಗಲಿದೆ.
ಸಿಂಹ ರಾಶಿ: ಇಂದು ನಿಮಗೆ ಉತ್ತಮ ದಿನ, ನಿಮ್ಮ ವೈವಾಹಿಕ ಜೀವನದಲ್ಲಿ ಬಂಧವು ಗಟ್ಟಿಯಾಗುತ್ತದೆ. ಪ್ರೀತಿಪಾತ್ರರ ತಪ್ಪುಗ್ರಹಿಕೆಗಳು ಇಂದು ದೂರವಾಗುತ್ತವೆ, ನಿಮ್ಮ ಆಪ್ತತೆ ಹೆಚ್ಚಾಗುತ್ತದೆ.
ಕನ್ಯಾ ರಾಶಿ: ಇಂದು ನಿಮ್ಮ ಅತ್ಯುತ್ತಮ ದಿನವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಗಲಾಟೆಗಳು ಇಂದು ಕೊನೆಗೊಳ್ಳುತ್ತವೆ, ಇದು ನಿಮ್ಮ ಸಂಬಂಧಗಳಲ್ಲಿ ಹೆಚ್ಚು ಏಕತೆಯನ್ನು ತರುತ್ತದೆ.
ತುಲಾ ರಾಶಿ: ಇಂದು ನಿಮಗೆ ಸಂತೋಷದ ದಿನವಾಗಲಿದೆ. ಜೀವನ ಸಂಗಾತಿಯ ನಡುವೆ ಪರಸ್ಪರ ಸಾಮರಸ್ಯ ಇರುತ್ತದೆ. ಲವ್‌ಮೇಟ್‌ಗಳು ಇಂದು ಫೋನ್‌ನಲ್ಲಿ ದೀರ್ಘಕಾಲ ಮಾತನಾಡುತ್ತಾರೆ.
ವೃಶ್ಚಿಕ ರಾಶಿ: ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ಲವ್‌ಮೇಟ್‌ಗೆ ದಿನವು ರೋಮ್ಯಾಂಟಿಕ್ ಆಗಿರುತ್ತದೆ.
ಧನು ರಾಶಿ: ಇಂದು ನಿಮಗೆ ತುಂಬಾ ಸಂತೋಷದ ದಿನವಾಗಿರುತ್ತದೆ. ಲವ್‌ಮೇಟ್‌ಗಳು ಊಟಕ್ಕೆ ಹೋಗಲು ಯೋಜನೆಗಳನ್ನು ಮಾಡುತ್ತಾರೆ. ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ.
ಮಕರ ರಾಶಿ: ಇಂದು ಅದ್ಭುತ ದಿನವಾಗಲಿದೆ. ಲವ್ಮೇಟ್ ಇಂದು ಊಟಕ್ಕೆ ಹೋಗಲು ಯೋಜನೆಯನ್ನು ಮಾಡಬಹುದು. ವೈವಾಹಿಕ ಸಂಬಂಧದಲ್ಲಿನ ಬಿರುಕು ಇಂದು ಕೊನೆಗೊಳ್ಳುತ್ತದೆ, ನಿಮ್ಮ ಸಂಬಂಧವು ಗಟ್ಟಿಯಾಗುತ್ತದೆ. ಹೊಸ ಸ್ನೇಹಿತರನ್ನು ಭೇಟಿ ಮಾಡಲು ಇದು ಉತ್ತಮ ಸಮಯ.
ಕುಂಭ ರಾಶಿ: ಇಂದು ಲಾಭದಾಯಕ ದಿನವಾಗಿರುತ್ತದೆ. ಇಂದು ನೀವು ವೈವಾಹಿಕ ಜೀವನದ ಬಗ್ಗೆ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.
ಮೀನ : ಇಂದು ನಿಮ್ಮ ಅತ್ಯುತ್ತಮ ದಿನವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಗಲಾಟೆಗಳಿಗೆ ಇಂದು ಮುಕ್ತಿ ಸಿಗಲಿದೆ. ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಪ್ರೀತಿಸುತ್ತಿರುವ ಪ್ರೇಮಿಗಳ ಮನೆಯಿಂದ ಮದುವೆಗೆ ಒಪ್ಪಿಗೆ ಸಿಗಬಹುದು.
Published On - 11:19 am, Wed, 13 July 22