Horoscope: ರಾಶಿಭವಿಷ್ಯ, ತಂದೆಯ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತೀರಿ, ಮನಸ್ಸು ಸ್ತಿಮಿತವನ್ನು ತಪ್ಪಬಹುದು

|

Updated on: Jan 21, 2024 | 12:10 AM

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಜನವರಿ 21, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ರಾಶಿಭವಿಷ್ಯ, ತಂದೆಯ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತೀರಿ, ಮನಸ್ಸು ಸ್ತಿಮಿತವನ್ನು ತಪ್ಪಬಹುದು
ಪ್ರಾತಿನಿಧಿಕ ಚಿತ್ರ
Follow us on

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ (ಜನವರಿ 21) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಏಕಾದಾಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಶುಕ್ಲ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 24 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:59 ರಿಂದ ಸಂಜೆ 06:25ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:44 ರಿಂದ 02:09ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:34 ರಿಂದ 04:59ರ ವರೆಗೆ.

ಮೇಷ ರಾಶಿ: ಇಂದು ನಿಮ್ಮ ಸಂಗಾತಿಯು ನಿಮಗೆ ಅಚ್ಚರಿಯನ್ನು ಕೊಡಬಹುದು. ಇಂದು ಹೂಡಿಕೆ ಮಾಡಲು ಉತ್ತಮ ದಿನವಲ್ಲ. ಮನೆಯಲ್ಲಿ ವಾತಾವರಣ ಸ್ವಲ್ಪ ಉದ್ವಿಗ್ನವಾಗಿರುತ್ತದೆ. ಕುಟುಂಬ ಸದಸ್ಯರ ಜೊತೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಯಾರನ್ನೂ ನಿಮ್ಮ ದೃಷ್ಟಿಯಿಂದ ಅಳೆಯಲು ಆಗದು. ಅದಕ್ಕಾಗಿ ಸಮಯವನ್ನೂ ವ್ಯರ್ಥ ಮಾಡುವುದು ಬೇಡ. ಸಮಯದ ಹೊಂದಾಣಿಕೆ ಅವಶ್ಯಕ. ಪ್ರೇಯಸಿಯ ನೆನಪನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು. ನೀವು ಅಂದುಕೊಂಡಷ್ಟು ಸರಳ ಕೆಲಸಗಳು ಇಂದು ಆಗದು. ಕೆಲವು ಸಂಗತಿಯನ್ನು ಅನುಭವಿಸದೇ ಇರಲಾಗದು. ಕಾರಣವಿಲ್ಲದೇ ಕೋಪವು ಬರುವುದು. ಅತಿಯಾದ ಮೋಹದಿಂದ ಹೊರಬರುವಿರಿ. ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಮಗೆ ಸಮಾರಂಭಗಳಿಗೆ ಆಹ್ವಾನವು ಬರಬಹುದು.

ವೃಷಭ ರಾಶಿ: ಇಂದು ನೀವು ತುಂಬಾ ಸಮತೋಲನದಲ್ಲಿ ಇರಬೇಕಾದೀತು. ತಂದೆಯ ಆರೋಗ್ಯದ ಕುಸಿತದಿಂದಾಗಿ ಚಿಂತೆ ಮಾಡುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಕಾಳಜಿ ವಹಿಸಬೇಕು. ಹೆಚ್ಚು ಕೆಲಸ ಮಾಡುವುದನ್ನು ಬಿಟ್ಟು ವಿಶ್ರಾಂತಿ ಪಡೆಯುವಿರಿ. ಕೆಲಸದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಎಲ್ಲರ ಮೇಲೂ ಸಿಟ್ಟಾಗುವಿರಿ. ಮನಸ್ಸು ಸ್ತಿಮಿತವನ್ನು ತಪ್ಪಬಹುದು. ಸಹನೆಯು ನಿಮ್ಮ ಅಸ್ತ್ರವಾಗಬೇಕಾಗಬಹುದು. ಸಂಗಾತಿಯ ಸ್ವಭಾವವನ್ನು ಸುಲಭದಿಂದ ತಿಳಿಯಲು ಸಾಧ್ಯವಾಗದು. ಅತಿಯಾದ ಬಂಧನವೂ ನಿಮಗೆ ಕಿರಿಕಿರಿ ಎನಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ನಿಮ್ಮ ನಂಬಿಕೆಗೆ ತೊಂದರೆಯಾಗುವುದು. ನೀವು ಬಯಸಿದ ವಸ್ತುವು ಯಾವುದೋ ರೂಪದಲ್ಲಿ ನಿಮ್ಮನ್ನು ಬಂದು ಸೇರಬಹುದು.

ಮಿಥುನ ರಾಶಿ: ಇಂದು ನೀವು ಯಾರ ಸಂಗಡವೂ ವಾದವನ್ನು ಮಾಡುವ ಸಂದರ್ಭವು ಬರಲಿದ್ದು, ಮಿತಿಮೀರಿದಾಗ ಹಿಂದಿರುಗುವುದು ಉತ್ತಮ. ಕೆಲಸದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು, ಇದರಿಂದಾಗಿ ನೀವು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಇಂದು ಹಿರಿಯರಿಂದ ಯಾವುದೇ ವಿಶೇಷ ಬೆಂಬಲವನ್ನು ಪಡೆಯುವುದಿಲ್ಲ. ಈ ಸಮಯ ವ್ಯಾಪಾರಿಗಳಿಗೆ ಅನುಕೂಲಕರವಾಗಿಲ್ಲ. ಇಂದು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮಕ್ಕಳ ಮೇಲೆ ಪ್ರೀತಿ ಅಧಿಕವಾಗುವುದು. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು. ವಿವಾಹದಲ್ಲಿ ನಿರಾಸಕ್ತಿಯನ್ನು ತೋರಿಸುವಿರಿ. ಹಿರಿಯರ ಕೋಪಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಇಂದು ಸ್ವತಂತ್ರವಾಗಿರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ.

ಕಟಕ ರಾಶಿ: ಇಂದು ವೈಯಕ್ತಿಕ ಸಂಬಂಧಗಳು ಉತ್ತಮವಾಗಿಸಿಕೊಳ್ಳುವಿರಿ. ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಇರುತ್ತದೆ. ಇಂದುಬನಿಮ್ಮ ಸಂಗಾತಿ ಕೂಡ ಉತ್ತಮ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ನೀವು ದೀರ್ಘಕಾಲದವರೆಗೆ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ, ಆದರೆ ಇಂದು ನೀವು ನಿಮ್ಮ ಅತ್ಯುತ್ತಮವಾದದನ್ನು ನೀಡುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸುತ್ತೀರಿ. ತಾಯಿಯ ಅನಾರೋಗ್ಯದ ಚಿಕಿತ್ಸೆಗೆ ಓಡಾಡಬೇಕಾಗಬಹುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು. ನಿಮ್ಮ ಸ್ವಭಾವಗಳು ನಿಮ್ಮವರಿಗೆ ಇಷ್ಟವಾಗದೇ ಹೋಗುವುದು. ಕುಟುಂಬದ ಕೆಲವು ವಿಚಾರವು ನಿಮಗೆ ಹಿಡಿಸದೇಹೋದೀತು. ಸಂಬಂಧವನ್ನು ಆತ್ಮೀಯಗೊಳಿಸಿಕೊಳ್ಳಲು ಪ್ರಯತ್ನಪಡುವಿರಿ.