Horoscope: ದಿನಭವಿಷ್ಯ, ಹೊರೆ ಹೆಚ್ಚಾಗುವುದು, ಅನಗತ್ಯ ಖರ್ಚಿಗೆ ಬೇಸರ

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 20 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ದಿನಭವಿಷ್ಯ, ಹೊರೆ ಹೆಚ್ಚಾಗುವುದು, ಅನಗತ್ಯ ಖರ್ಚಿಗೆ ಬೇಸರ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Jan 20, 2024 | 12:15 AM

ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಜನವರಿ 20) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಪೂರ್ವಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಶುಭ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 24 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:53 ರಿಂದ 11:18ರ ವರೆಗೆ, ಯಮಘಂಡ ಕಾಲ 14:09 ರಿಂದ 15:34ರ ವರೆಗೆ, ಗುಳಿಕ ಕಾಲ ಬೆಳಗ್ಗೆ 7:03 ರಿಂದ 08:28ರ ವರೆಗೆ.

ಧನು ರಾಶಿ: ಇಂದು ಉದ್ಯೋಗದಲ್ಲಿ ಹೊಸ ಅವಕಾಶಗಳ ಕಡೆ ಗಮನ ಹರಿಸುವಿರಿ. ಆರ್ಥಿಕತೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಗತಿ ಇರುವುದು. ಇಷ್ಟದವರು ನಿಮ್ಮನ್ನು ಶುಭಕಾರ್ಯಗಳಿಗೆ ಆಹ್ವಾನಿಸಬಹುದು. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ನಿಮ್ಮ ಮಾತನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು. ಆಭರಣ ಮುಂತಾದ ಬಹು ಮೌಲ್ಯದ ವಸ್ತುವನ್ನು ಖರೀದಿಸುವಿರಿ. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ವೈಯಕ್ತಿಕ ಕಾರ್ಯದಲ್ಲಿ ಗಮನವು ಕಡಿಮೆ ಇರುವುದು. ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಓಡಾಡಬಹುದು. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು. ಬಹಳ ದಿನಗಳ ಕಳೆದ ಮೇಲೆ ತಂದೆಯ ಜೊತೆ ಮಾತನಾಡಿ ನೆಮ್ಮದಿಯು ಪಡೆಯುವಿರಿ.

ಮಕರ ರಾಶಿ: ನಿಮ್ಮ ಸಂಬಂಧದಲ್ಲಿಯೇ ವಿವಾಹ ನಿಶ್ಚಯವಾಗಬಹುದು. ಇಂದಿನ ವ್ಯವಹಾರದಲ್ಲಿ ಊಹೆಯು ಸತ್ಯವಾದೀತು. ವಿದ್ಯಾರ್ಥಿಗಳು ಪರಿಶ್ರಮದಿಂದ ಪಡೆಯಬೇಕಾದುದನ್ನು ಪಡೆಯುವರು. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ. ಕಾನೂನಿನ ಪಾಠವನ್ನು ಹಿರಿಯರು ಮಾಡುವರು. ಉದ್ಯೋಗಕ್ಕಾಗಿ ಬಂದ ಬಂಧುವಿಗೆ ಮಾರ್ಗದರ್ಶನ ಮಾಡುವಿರಿ. ಸಹೋದರನ ಸಹಕಾರವು ಅನುಕೂಲವೇ ಆಗುವುದು. ನೂತನ ವಾಹನದ‌ ಖರೀದಿಯನ್ನು ಮಾಡುವ ಇಚ್ಛೆಯು ಇಂದು ಪೂರ್ಣವಾಗುವುದು. ನಿಮ್ಮ ಬಗ್ಗೆ ದೂರಗಳು ಕೇಳಿ ಬರಬಹುದು.

ಕುಂಭ ರಾಶಿ: ಸಾಮಾಜಿಕ ಕಾರ್ಯದಿಂದ ಖ್ಯಾತಿಯು ಹೆಚ್ಚಾಗಬಹುದು. ವ್ಯಾಪಾರದಲ್ಲಿ ಬಿಡುವಿಲ್ಲ ಒತ್ತಡವು ಇರುವುದು. ನಿರುದ್ಯೋಗಿಗಳಿಗೆ ಕೆಲಸವು ಸಿಗಬಹುದು. ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ದೇಹವನ್ನು ದಂಡಿಸಲು ನಿಮಗೆ ಆಗದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಆಪ್ತ ಬಂಧುವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ. ಸಮಯೋಚಿತ ಕಾರ್ಯದಿಂದ‌ ಪ್ರಶಂಸೆಯು ಇರಲಿದೆ. ಎಲ್ಲರೆದುರು ಮುಖಭಂಗವನ್ನು ಎದುರಿಸಿಬೇಕಾದೀತು. ವೈವಾಹಿಕ ಜೀವನದ ಕನಸು ಕಾಣುವಿರಿ.

ಮೀನ ರಾಶಿ: ಇಂದು ನಿಮ್ಮ ಉದ್ಯೋಗವು ಸಾಮರಸ್ಯದಿಂದ ಸಾಗುವುದು. ಯಾವುದಾದರೂ ಶುಭದ ನಿರೀಕ್ಷೆಯಲ್ಲಿ ಇರಬಹುದು. ಹಣಕಾಸಿನ ಪ್ರಯತ್ನಗಳು ಸಫಲವಾಗಬಹುದು. ಅಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ.‌ ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಬಹಳ ಹುಡುಕಾಟದ ಅನಂತರದ ಉತ್ತಮ‌ ವಿವಾಹ ಸಂಬಂಧವು ಬರುವುದು. ಪಾಲುದಾರಿಕೆಯಲ್ಲಿ ಅಧಿಕಾರದ ಬಗ್ಗೆ ಅಸಮಾಧಾನ ಹೆಚ್ಚಾಗುವುದು. ಅನಗತ್ಯ ಖರ್ಚಿಗೆ ಬೇಸರಿಸುವಿರಿ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ. ನಿಮಗೆ ಸಾಕಷ್ಟು ಸಮಯವು ಇಂದು ಇರಲಿದ್ದು ಏನು ಮಾಡಬೇಕೆಂದು ತಿಳಿಯದೇ ಕಾಲವನ್ನು ಕಳೆಯುವಿರಿ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್