Horoscope: ಈ ರಾಶಿಯವರು ಹಿತಶತ್ರುಗಳನ್ನು ಅರಿಯುವಲ್ಲಿ ನಿಮಗೆ ಸೋಲಾಗುವುದು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 13, 2023 | 12:15 AM

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಡಿಸೆಂಬರ್ 13, 2023ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ಈ ರಾಶಿಯವರು ಹಿತಶತ್ರುಗಳನ್ನು ಅರಿಯುವಲ್ಲಿ ನಿಮಗೆ ಸೋಲಾಗುವುದು
ರಾಶಿಭವಿಷ್ಯ
Follow us on

ನಿತ್ಯ ಎದ್ದ ಕೂಡಲೇ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ? ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 13) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಬುಧವಾರ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಮೂಲಾ, ಯೋಗ: ಶೂಲ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:27 ರಿಂದ 01:51ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:14 ರಿಂದ 09:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:02 ರಿಂದ 12: 27ರ ವರೆಗೆ.

ಮೇಷ ರಾಶಿ : ಮನಸ್ಸಿಗೆ ವಿಶ್ರಾಂತಿಯನ್ನು ಕೊಡುವ ಅನಿವಾರ್ಯತೆ ಇದೆ. ಆದಾಯದ ಮೂಲವನ್ನು ನೀವು ಪ್ರಕಟಪಡಿಸುವುದು ಬೇಡ. ಮನೆಯ ಧಾರ್ಮಿಕ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂದುಕೊಂಡರೂ ಅದು ಅಸಾಧ್ಯ ಎನಿಸಬಹುದು. ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ಹಿತಶತ್ರುಗಳನ್ನು ಅರಿಯುವಲ್ಲಿ ನಿಮಗೆ ಸೋಲಾಗುವುದು. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ವಿಳಂಬವಾಗಿ ಬರುತ್ತದೆ ಎಂದುಕೊಂಡ ನಿಮ್ಮ ಹಣವು ಬೇಗ ಬರಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ. ವಿವಾಹಜೀವನವು ಅತ್ಯಂತ ಸುಖದಂತೆ ತೋರುವುದು. ಕೆಲವು ಅಭ್ಯಾಸವನ್ನು ನೀವು ಬಿಡಬೇಕೆಂದರೂ ಬಿಡಲಾಗದು. ಪುಣ್ಯಸ್ಥಳದ ದರ್ಶನವನ್ನು ಪೋಷಕರಿಗೆ ಮಾಡಿಸುವ ಚಿಂತನೆಯನ್ನು ನಡೆಸುವಿರಿ.

ವೃಷಭ ರಾಶಿ : ದೇಹವನ್ನು ಸುದೃಢವಾಗಿಸಿಕೊಳ್ಳಲು ಪ್ರಯತ್ನಿಸಿ. ನಕಾರಾತ್ಮಕ ವಿಚಾರಗಳ ನಡೆಯೂ ನೀವು ಬಲವಾಗಿದ್ದರೆ ಅದು ವಿದ್ಯೆಯ ಕಾರಣದಿಂದ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ಬಂಧುವನ್ನೇ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ನಂಬಿಕೆ ಕಡಮೆ ಆಗುವುದು. ಸಂಬಂಧದಲ್ಲಿ ಹಣಕಾಸಿನ ವ್ಯವಹಾರವನ್ನು ಇಟ್ಟುಕೊಳ್ಳಬೇಡಿ. ಯಾರಾದರೂ ಧನಸಹಾಯವನ್ನು ನಿಮ್ಮ ಬಳಿ ಕೇಳಬಹುದು. ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳಿ. ಶತ್ರುಗಳ ಕುತಂತ್ರವು ನಿಮಗೆ ಲಾಭವೇ ಆಗುವುದು. ಸಣ್ಣ ಪ್ರಮಾಣದ ವ್ಯವಹಾರಗಳನ್ನು ನಡೆಸುತ್ತಿರುವವರಿಗೆ ಅಲ್ಪ ಲಾಭಕ್ಕೆ ಖುಷಿಪಡಬೇಕಾದೀತು.

ಮಿಥುನ ರಾಶಿ : ಊಹಿಸಿದಷ್ಟು ಸಹಕಾರವನ್ನು ಯಾರಿಂದಲೂ ಸಿಗದು. ನಿಮ್ಮ ಮಾತುಗಳು ವಿಶ್ವಾಸಕ್ಕೆ ಯೋಗ್ಯವಾಗದೇ ಇರಬಹುದು. ಅಭಿವೃದ್ಧಿಗೆ ಅವಕಾಶವಿದ್ದರೂ ನಿಮಗೆ ಹಿನ್ನಡೆಯಂತೆ ಎಲ್ಲವೂ ಭಾಸವಾಗುವುದು. ಶ್ರಮಕ್ಕೆ ತಕ್ಕ ಫಲವು ಲಭಿಸಿಲ್ಲ ಎಂದು ನಿಮ್ಮ ಮನಸ್ಸಿಗೆ ಗಾಢವಾಗಿ ತಿಳಿಯುವುದು. ಅತಿಯಾಗಿ ಯಾವುದನ್ನು ಮಾಡಲು ಹೋಗುವುದು ಬೇಡ. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ನಿಮ್ಮ ತಮಾಷೆಯು ಇಷ್ಟವಾಗದೇ ಇರಬಹುದು. ಸಂಗಾತಿಯ ಮನೋಭಾವವು ನಿಮಗೆ ಇಂದು ಸರಿ ಹೊಂದದು. ಸಮಯಕ್ಕೆ ಯಾವುದನ್ನೂ ಸರಿಯಾಗಿ ಮಾಡಲಾಗದು. ವ್ಯವಹಾರದಲ್ಲಿ ನೀವು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಎಂಬ ಭಾವವು ಆಗಾಗ ಬರುವುದು. ಸಂಗಾತಿಯ ಜೊತೆ ವಾಯುವಿಹಾರದ ಸುಖವನ್ನು ಅನುಭವಿಸುವಿರಿ.

ಕಟಕ ರಾಶಿ :
ದುಃಖವನ್ನು ಹೊರಹಾಕಲು ನಿಮಗೆ ಕಷ್ಟವಾಗುವುದು. ಭೂಮಿಯ ಖರೀದಿಯ ಬಗ್ಗೆ ನಿಮಗೆ ಆಸಕ್ತಿಯು ಅಷ್ಟಾಗಿ ಇರದು. ಕಳ್ಳತನದ ಆರೋಪವನ್ನು ಎದುರಿಸಬೇಕಾಗಬಹುದು. ನಿಮ್ಮ ನಿರುದ್ಯೋಗವು ಚಿಂತೆಯಾಗಿ ನಿಮ್ಮ ಬಗ್ಗೆಯೇ ನಿಮಗೆ ನಕಾರಾತ್ಮಕ ಭಾವ ಮೂಡುವುದು. ಯಾವುದೋ ಆಲೋಚನೆಯಲ್ಲಿ ಮುಳುಗಿರುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಸರಳವಾದ ಕೆಲಸವನ್ನು ಮನಶ್ಚಾಂಚಲ್ಯದಿಂದ ಸಂಕೀರ್ಣ ಮಾಡಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಉಂಟಾಗಬಹುದು. ನಿಮ್ಮ ಹಾಸ್ಯಪ್ರಜ್ಞೆ ಕೆಲವರಿಗೆ ಇಷ್ಟವಾಗದು. ದೇಹವು ಅಧಿಕ ಶ್ರಮದಿಂದ ಆಯಾಸಗೊಳ್ಳುವುದು. ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು ಎನಿಸುವುದು. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ನಿಮ್ಮನ್ನು ಕುಗ್ಗಿಸುವುದು. ಅತಿಯಾದ ಪ್ರೀತಿಯೂ ನಿಮಗೆ ಮುಳುವಾದೀತು.