AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನೀವು ಮಾಡಿರುವ ತಪ್ಪನ್ನು ಇತರರ ಮೇಲೆ ಹಾಕಬೇಡಿ, ಅಧಿಕಾರ ಶಾಶ್ವತವಲ್ಲ

ಸೆಪ್ಟೆಂಬರ್​ 2,​ 2024ರ​​ ನಿಮ್ಮ ರಾಶಿಭವಿಷ್ಯ: ಮನೆಗೆ ಬಂದವರಿಗೆ ಯೋಗ್ಯ ಆತಿಥ್ಯ ನೀಡುವಿರಿ. ಅಧಿಕ ಖರ್ಚಿಗೆ ಇಂದು ಬಹಳ ಆತಂಕಪಡುವಿರಿ. ನಿಮ್ಮ ಬಳಿ ಸಹಾಯ ಕೇಳಿ ಬಂದರೆ ಇಲ್ಲವೆನ್ನಬೇಡಿ. ವ್ಯವಹಾರದಲ್ಲಿ ನಿಮಗೆ ಗೊತ್ತಿಲ್ಲದೇ ಮೋಸವಾಗಬಹುದು. ಹಾಗಾದರೆ ಸೆಪ್ಟೆಂಬರ್​ 2ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ನೀವು ಮಾಡಿರುವ ತಪ್ಪನ್ನು ಇತರರ ಮೇಲೆ ಹಾಕಬೇಡಿ, ಅಧಿಕಾರ ಶಾಶ್ವತವಲ್ಲ
TV9 Web
| Edited By: |

Updated on: Sep 02, 2024 | 12:05 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 2) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಮಘಾ, ಯೋಗ: ಶಿವ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:42 ಗಂಟೆ, ರಾಹು ಕಾಲ ಬೆಳಿಗ್ಗೆ 07:54 ರಿಂದ 09:27, ಯಮಘಂಡ ಕಾಲ ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 12:32ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:37ರ ವರೆಗೆ.

ಮೇಷ ರಾಶಿ: ಮಕ್ಕಳ ವರ್ತನೆಗಳು ನಿಮಗೆ ಕಷ್ಟಕೊಡಬಹುದು. ಸಮಯಕ್ಕೆ ಬೆಲೆ ಕೊಟ್ಟು ಇಂದಿನ ಕೆಲಸವನ್ನು ಮಾಡಿ. ಧಾರ್ಮಿಕವಾಗಿ ನೀವು ಹೆಚ್ಚು ಆಸಕ್ತರಾಗಬೇಕಾಗುತ್ತದೆ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಹಾಯ ಸಿಗಲಿದೆ, ಕೇಳಿ ಪಡೆಯಿರಿ. ಮನೆಗೆ ಬಂದವರಿಗೆ ಯೋಗ್ಯ ಆತಿಥ್ಯ ನೀಡುವಿರಿ. ಅಧಿಕ ಖರ್ಚಿಗೆ ಇಂದು ಬಹಳ ಆತಂಕಪಡುವಿರಿ. ನಿಮ್ಮ ಬಳಿ ಸಹಾಯ ಕೇಳಿ ಬಂದರೆ ಇಲ್ಲವೆನ್ನಬೇಡಿ. ವ್ಯವಹಾರದಲ್ಲಿ ನಿಮಗೆ ಗೊತ್ತಿಲ್ಲದೇ ಮೋಸವಾಗಬಹುದು. ಆದಷ್ಟು ವಸ್ತುಸ್ಥಿತಿಯಂತೆ ಆಲೋಚಿಸಿ. ವಾಹನವನ್ನು ಚಲಾಯಿಸುವ ಎಚ್ಚರವಿರಲಿ. ಪ್ರೇಮಪ್ರಕರಣದಲ್ಲಿ ಯಾವ ವ್ಯತ್ಯಸವೂ ಆಗದೇ ನಿಮ್ಮ ನಿರೀಕ್ಷೆ ಹುಸಿಯಾಗಬಹುದು. ನಿಮ್ಮ ತೊಂದರೆಗಳು ಇನ್ನೊಬ್ಬರ ಮೇಲೆ ಪರಿಣಾಮ ಬೀರುವುದು. ಮನೋರಂಜನೆಗೆ ನಿಮ್ಮದೇ ಆದ ದಾರಿಯನ್ನು ಹುಡುಕಿಕೊಳ್ಳುವಿರಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ.

ವೃಷಭ ರಾಶಿ: ನಿಮ್ಮವರ ಪಾಲಿಗೆ ನೀವು ಯಃಕಶ್ಚಿತ್ ನಂತೆ ತೋರುವಿರಿ. ಸ್ವಯಂ‌ಕೃತ ಅಪರಾಧಕ್ಕೆ ಬೇರೆಯವರನ್ನು ಬೊಟ್ಟುಮಾಡಿ ತೋರಿಸುವುದು ಬೇಡ. ಇಂದು ನೀವು ಎಲ್ಲರ ಮೇಲೂ ಸಿಟ್ಟು ಮಾಡಿಕೊಳ್ಳುವಿರಿ. ಮಾತಿಗೆ ಎದುರುತ್ತರ ಕೊಡುವಿರಿ. ಅಧಿಕಾರವು ಶಾಶ್ವತವಲ್ಲ ಎಂಬ ಮಾತು ನಿಮಗೆ ಕೇಳಿಸುತ್ತಿರಲಿ. ವಿವೇಚನೆಯನ್ನು ಕಳೆದುಕೊಂಡು ಇಂದಿನ ಮಾತುಕತೆಗಳು ತಾರಕಕ್ಕೆ ಹೋಗಬಹುದು. ನಿಮ್ಮ ಪರಾಕ್ರಮವು ಕೆಲಸದಲ್ಲಿ ಇರಲಿ. ಬಂಧುಗಳು ನಿಮ್ಮನ್ನು ದೂರವಿಡಬಹುದು. ವಾಹನ ಚಾಲನೆಯಲ್ಲಿ ಕಷ್ಟವಾಗಬಹುದು. ನಿಮ್ಮ ವಸ್ತುವನ್ನು ಇನ್ನೊಬ್ಬರ ಬಳಕೆಗೆ ಕೊಡಲಿದ್ದೀರಿ. ಇಂದು ಆರಾಮಾಗಿ ಇರಬೇಕೆಂದುಕೊಂಡಿದ್ದರೆ ಇರಲಾಗದು. ಕಛೇರಿಯಲ್ಲಿ ಒತ್ತಡದ ವಾತಾವರಣ ಇದ್ದಕಾರಣ ನಿಮ್ಮ ಪೂರ್ವಯೋಜನೆ ಸಫಲವಾಗದು. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು ಉಂಟಾಗಬಹದು. ಇಂದು ನೀವು ಮಕ್ಕಳಲ್ಲಿ ಸ್ಪರ್ಧೆಯ ಮನೋಭಾವವನ್ನು ಹೆಚ್ಚಿಸುವಿರಿ.

ಮಿಥುನ ರಾಶಿ: ದೈಹಿಕ ಆರೋಗ್ಯದಲ್ಲಿ ಏರುಪೇರಾಗಬಹುದು. ನಿಮ್ಮ ಉದ್ಯೋಗದ ಚಿಂತೆಯಿಂದ ಯಾವ ಪ್ರಯೋಜನವೂ ಆಗದು. ನಿಮ್ಮ ವೈಯಕ್ತಿಕ ಕೆಲಸಗಳೇ ಬಹಳ ಇರಲಿದ್ದು ಇನ್ನೊಂದರ ಕುರಿತು ಇಂದು ಯೋಚನೆ ಅಸಾಧ್ಯವಾದೀತು. ಕಾನೂನಾತ್ಮಕ ಹಾದಿಯಲ್ಲಿ ನಿಮಗೆ ಜಯ ಸಿಗುವ ನಿರೀಕ್ಷೆ ಇರುವುದು. ಇಂದು ನಿಮಗೆ ಸಿಕ್ಕ ಗೌರವವನ್ನು ಕಂಡು ಶತ್ರುಗಳು ಹುಟ್ಟಿಕೊಂಡಾರು. ಉದ್ಯೋಗವನ್ನು ಬದಸಲಿಸುವಿರಿ. ಕೇಳಿದಷ್ಟಕ್ಕೆ ಮಾತ್ರ ಉತ್ತರಿಸಿದರೆ ಸಾಕು. ಸರಳ ಜೀವನವನ್ನು ಇಷ್ಟಪಡುವಿರಿ. ಹೊಸ ವಸ್ತ್ರಗಳನ್ನು ಖರೀದಿಮಾಡುವಿರಿ. ಇಂದು ನೀವು ಅನವಶ್ಯಕ ವಸ್ತುಗಳನ್ನು ಇಷ್ಟಪಡುವಿರಿ. ನಿಮ್ಮದೆಂದು ಹೇಳಿಕೊಳ್ಳುವ ವಸ್ತು ನಿಮ್ಮದಲ್ಲದೇ ಹೋಗಬಹುದು. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕವಾಗಿ ಬರುವ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ.

ಕರ್ಕಾಟಕ ರಾಶಿ: ಸಂಸಾರದ ಸೂಕ್ಷ್ಮತೆಗಳು ನಿಮಗೆ ಅರ್ಥವಾಗದು. ನಿಮಗೆ ಇಂದು ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ಸ್ಥಾನವು ಪ್ರಾಪ್ತಿಯಾಗಲಿದೆ. ಸಂಗಾತಿಯ ಮನೋಭಾವವನ್ನು ಪೂರ್ತಿಯಾಗಿ ತಿಳಿಯಲು ಸಾಧ್ಯವಾಗದು. ನಿಮ್ಮ ಕೆಳಗೆ ಕೆಲಸ ಮಾಡುವವರು ಸರಿಯಾಗಿ ನಿರ್ವಹಿಸದೇ ನೀವು ಅನಂತರ ಮಾಡಬೇಕಾದೀತು. ನಿಮ್ಮ ಯೋಜನೆಯನ್ನು ಸರಿಯಾಗಿ ಪ್ರಸ್ತುತ ಪಡಿಸಿ. ದೇವರ ಮೇಲಿನ ನಂಬಿಕೆ ದೃಢವಾಗಿರಲಿ. ನೀವು ಇಷ್ಟಪಟ್ಟ ವಸ್ತುವನ್ನು ಇಂದು ಪಡೆಯುವಿರಿ. ನಿಮ್ಮ ಕೆಲಸವನ್ನು ತಪ್ಪಾಗುವುದು ಎಂಬ ಭಯದಿಂದ ಒಂಟಿಯಾಗಿ ಮಾಡಲು ಹಿಂಜರಿಯುವಿರಿ. ವ್ಯಕ್ತಿತ್ವವನ್ನು ನೋಡಿ ನಿಮ್ಮ ನಿರ್ಧಾರವು ಇರಲಿ. ಕೈಗೆ ಸಿಗದ ಹಣ್ಣು ಹುಳಿ ಎನ್ನುವುದು ಸಹಜವೇ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ.