Daily Horoscope: ಈ ರಾಶಿಯವರು ಸಂಕಷ್ಟ ಪರಿಹರಕ್ಕೆ ದೈವದ ಮೊರೆ ಹೊಗುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್​ 2: ನಿಮ್ಮ ಸಂಕಟವನ್ನು ಪರಿಹರಿಸಿಕೊಳ್ಳಲು ದೈವದ ಮೊರೆ ಹೊಗುವಿರಿ. ದೂರದ ಬಂಧುಗಳ ನಿಮ್ಮನ್ನು ಭೇಟಿಯಾಗಬಹುದು. ನಿಮ್ಮ ಕೆಲಸಕ್ಕೆ ಸಮಜಾಯಿಷಿ ಕೊಡಲು ಹೋಗುವಿರಿ. ನಿಮ್ಮ ವಿದೇಶಕ್ಕೆ ಹೋಗುವ ಕನಸು ನನಸಾಗುವ ಸಾಧ್ಯತೆ ಇದೆ.‌ ಹಾಗಾದರೆ ಸೆಪ್ಟೆಂಬರ್​ 2ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಸಂಕಷ್ಟ ಪರಿಹರಕ್ಕೆ ದೈವದ ಮೊರೆ ಹೊಗುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 02, 2024 | 12:10 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 2) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಮಘಾ, ಯೋಗ: ಶಿವ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:42 ಗಂಟೆ, ರಾಹು ಕಾಲ ಬೆಳಿಗ್ಗೆ 07:54 ರಿಂದ 09:27, ಯಮಘಂಡ ಕಾಲ ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 12:32ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:37ರ ವರೆಗೆ.

ಸಿಂಹ ರಾಶಿ: ಮನೆಯ ತುರ್ತು ಕಾರ್ಯಗಳನ್ನು ಮಾಡಲು ಆಗದು. ಇಂದು ಆರಂಭಿಸಿದ ಕಾರ್ಯವನ್ನು ಮುಗಿಸುವ ಮನೋಭಾವದಲ್ಲಿ ಇರುವಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಸ್ವತಂತ್ರನಿರ್ಧಾರವನ್ನು ತೆಗೆದುಕೊಳ್ಳದೇ ಉದ್ಯೋಗಿಗಳ ಅಭಿಪ್ರಾಯವನ್ನೂ ಕಲೆಹಾಕಿ ಅಂತಿಮ‌ನಿರ್ಧಾರಕ್ಕೆ ಬರುವುದು ಉತ್ತಮ. ಸಂಗಾತಿಯ ಬೇಸರವನ್ನು ಸರಿಮಾಡುವಿರಿ. ದಾಂಪತ್ಯದಲ್ಲಿನ ಒಡಕು ಎಲ್ಲರಿಗೂ ಗೊತ್ತಾಗಂತೆ ಸರಿ ಮಾಡಿಕೊಳ್ಳಬೇಕಾಗಬಹುದು. ಆಕಸ್ಮಿಕ ವಾರ್ತೆಯು ನಿಮಗೆ ಆಚ್ಚರಿಯನ್ನು ತಂದೀತು. ಯಾರದೋ ತಪ್ಪಿಗೆ ನೀವು ಉತ್ತರಿಸಬೇಕಾದೀತು. ವಿದೇಶಿ ಕಂಪೆನಿಯಲ್ಲಿ ನೀವು ಕೆಲಸಕ್ಕೆ ಸೇರುವಿರಿ. ಸಮಸ್ಯೆಗಳು ಬರುವ ಮೊದಲೇ ನೀವು ಎಚ್ಚೆತ್ತುಕೊಳ್ಳುವುದು ಉತ್ತಮ. ನಿಮ್ಮ ಪ್ರಯಾಣವು ತೊಂದರೆಯಿಂದ ಕೂಡಿರಲಿದೆ. ನಿಮ್ಮವರು ಇದನ್ನು ಅಪಹಾಸ್ಯ ಮಾಡುವರು. ಸಣ್ಣ ಪ್ರಯಾಣವಾದರೂ ಆಯಾಸವಾಗಲಿದೆ. ಮಕ್ಕಳಿಲ್ಲದೇ ಬೇಸರವಾಗಲಿದೆ. ಏಕಾಂಗಿಯಾಗಿ ಇರುವುದು ಕಷ್ಟವಾಗುವುದು.

ಕನ್ಯಾ ರಾಶಿ: ಕೆಲವು ಒಪ್ಪಂದಗಳು ನಿಮ್ಮ ವ್ಯಾಪರಕ್ಕೆ ಒಳ್ಳೆಯದು. ಸಮಯ ಮಿತಿಯಲ್ಲಿ ಮಾಡಿಕೊಳ್ಳಬಹುದು. ಇಂದು ನಿಮ್ಮ ಕಾರ್ಯಕ್ಷೇತ್ರವನ್ನು ಉತ್ತಮ ಮಾಡಿಕೊಳ್ಳುವುದು ಹೊಣೆಗಾರಿಕೆ ಆಗುವುದು. ಆರ್ಥಿಕವಾದ ನಷ್ಟವನ್ನು ಸರಿ‌ಮಾಡಿಕೊಳ್ಳಲು ನೀವು ಉದ್ಯೋಗವನ್ನು ಬದಲಿಸುವಿರಿ. ವಾದದಲ್ಲಿ ನೀವು ಸೋಲುವ ಸಾಧ್ಯತೆ ಇದ್ದು, ಗೆಲ್ಲಲು ನಿಮ್ಮ‌ ಪರಿಶ್ರಮವು ಅಧಿಕವಾಗಲಿದೆ. ಯಾರ ಮೇಲೂ ಸುಮ್ಮನೆ ಸವಾರಿ ಮಾಡುವುದು ಬೇಡ. ನಿಮ್ಮನ್ನು ಪೂರ್ವಪುಣ್ಯವು ಕಾಪಾಡುವುದು. ಸದ್ಯಕ್ಕೆ ಸಿಕ್ಕ ಉದ್ಯೋಗವನ್ನು ಅಚ್ಚುಕಟ್ಟಾಗಿ ಮಾಡಿರಿ. ಸರ್ಕಾರಿ ಉದ್ಯೋಗಿಗಳಿಗೆ ಶುಭ ಸುದ್ದಿ ಸಿಗಲಿದೆ. ಸರ್ಕಾರಿ ಶಿಕ್ಷಕರು ಭಡ್ತಿಯನ್ನು ಪಡೆಯುವರು. ಉಳಿತಾಯದ ಬಗ್ಗೆ ಸಂಗಾತಿಯು ಗಮನಸುವರು. ವ್ಯಾಪಾರದ ನಷ್ಟವನ್ನು ಹೇಗಾದರೂ ತೂಗಿಸಿಕೊಳ್ಳುವಿರಿ. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿಂದಿಸಬಹುದು.

ತುಲಾ ರಾಶಿ: ನಿಮ್ಮ ಮಾತನಂತೆ ನಡೆಯುತ್ತಿಲ್ಲ ಎಂಬ ಬೇಸರ ಇರುವುದು. ಇಂದು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅತಿಯಾದ ಭಯವು ಕಾಡಬಹುದು. ನಿಮ್ಮಿಂದ ಆಗದ ಕೆಲಸವನ್ನು ಮತ್ತೆ ಮತ್ತೆ ಮಾಇನ್ನೊಬ್ಬರಅಪಮಾನಕ್ಕೆ ಒಳಗಾಗಬೇಡಿ. ಆರ್ಥಿಕ ವಿಭಾಗದಲ್ಲಿ ಕಾರ್ಯ ಮಾಡುವವರಿಗೆ ತೊಂದರೆಗಳು ಬರಬಹುದು. ಏಕಾಗ್ರತೆಯಿಂದ ಇರಲು ನಿಮಗೆ ಕಷ್ಟವಾದೀತು.‌ ಕೆಲಸಕ್ಕಾಗಿ ಬಹಳ‌ ಸಮಯ ಕಾಯಬೇಕಾಗಬಹುದು. ಅದರೂ ಇಂದೇ ಆಗುತ್ತದೆ ಎಂಬ ನಿರೀಕ್ಷೆ ಬೇಡ‌‌. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹಿಂದಿಸುವಿರಿ. ನಿಮ್ಮ ಯೋಜನೆಗಳು ಮುಂದಕ್ಕೆ ಹೋಗಬಹುದು. ಮಿತ್ರರಿಂದ ಸಹಾಯವನ್ನು ಪಡೆದು ನಿಮಗೆ ಆಗುವ ವ್ಯವಹಾರವನ್ನು ಮಾಡಿಲೊಳ್ಳುವಿರಿ. ಬಹಳ ದಿನಗಳ ಅನಂತರ ಸಹೋದರನ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳು ಬಹಳ ಸೋಮಸರಿಗಳಾಗುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳುವಿರಿ. ಅಮೂಲ್ಯ ವಸ್ತುಗಳ ಸಂಪಾದನೆ ನಿಮ್ಮ ಕನಸಾಗಲಿದೆ.

ವೃಶ್ಚಿಕ ರಾಶಿ: ನಿಮಗೆ ಇಂದು ಅಶಕ್ತರ ಬಗ್ಗೆ ಕರುಣೆ ಹೆಚತವುವುದು. ಇಂದು ನಿಮ್ಮ‌ ಮನಸ್ಸನ್ನು ಕಲಕಲೆಂದು ಕೆಲವರು ತಯಾರಿ ಮಾಡಬಹುದು. ನಿಮ್ಮ ಸಂಕಟವನ್ನು ಪರಿಹರಿಸಿಕೊಳ್ಳಲು ದೈವದ ಮೊರೆ ಹೊಗುವಿರಿ. ದೂರದ ಬಂಧುಗಳ ನಿಮ್ಮನ್ನು ಭೇಟಿಯಾಗಬಹುದು. ನಿಮ್ಮ ಕೆಲಸಕ್ಕೆ ಸಮಜಾಯಿಷಿ ಕೊಡಲು ಹೋಗುವಿರಿ. ನಿಮ್ಮ ವಿದೇಶಕ್ಕೆ ಹೋಗುವ ಕನಸು ನನಸಾಗುವ ಸಾಧ್ಯತೆ ಇದೆ.‌ ನಿಮ್ಮ ಯಶಸ್ಸು ಕುಂಟಿತವಾಗಲಿದೆ. ಸುಳ್ಳನ್ನು ಹೇಳಿ ಸತ್ಯವನ್ನು ಮುಚ್ಚಿಡುವಿರಿ. ನೋವಾಗುವಂತೆ ನೀವು ಮಾತನಾಡುವಿರಿ. ಯಾರ ಸಲಹೆಯನ್ನೂ ಕೇಳದೇ ಹೂಡಿಕೆ ಮಾಡುವಿರಿ. ಉಳಿಸಿಕೊಂಡ ಕೆಲಸವನ್ನು ವಿರಾಮ‌ಪಡೆದು ಪೂರೈಸುವಿರಿ. ಕೆಲಸವಿಲ್ಲದೇ ಮನೆಯಲ್ಲಿ ಕುಳಿತುಕೊಂಡು ಬೇಸರವಾಗಲಿದೆ. ದಾಂಪತ್ಯದಲ್ಲಿ ಕೆಲವು ಜೀರ್ಣವಾಗದ ಮಾತುಗಳನ್ನು ಕೇಳುವಿರಿ. ಸ್ವಲ್ಪ ವಿಳಂಬ ಮಾಡಿ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ವಿದೇಶದ ಉತ್ಪನ್ನಗಳು ನಿಮ್ಮ ಕೈಸೇರಬಹುದು. ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು. ಯಾರನ್ನೋ ಹಿಮ್ಮೆಟ್ಟುವ ಇಚ್ಛೆಯಿಂದ ಕೆಲಸ ಮಾಡುವಿರಿ.

ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ