Astrology: ಮಕ್ಕಳ ಮೇಲೆ ನಿಮ್ಮ ಗಮನವಿರಲಿ, ದೂರ ಬಂಧುಗಳು ನಿಮ್ಮನ್ನು ಭೇಟಿ ಮಾಡುವರು
ರಾಶಿ ಭವಿಷ್ಯ ಸೋಮವಾರ(ಸೆ. 2): ಪಾಲುದಾರಿಕೆಯಲ್ಲಿ ಸರಿಯಾದ ನಿಯಮಗಳನ್ನು ರೂಪಿಸಿಕೊಳ್ಳಿ. ಹೊಸ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ. ಸಣ್ಣ ಮೊತ್ತವನ್ನಾದರೂ ಕೂಡಿಡುವುದು ಉತ್ತಮ. ನಿಮ್ಮೆದುರು ಆಗುವ ಎಲ್ಲ ಘಟನೆಗಳನ್ನು ಸಮಾಧಾನ ಚಿತ್ತದಿಂದ ಗಮನಿಸಿ. ಹಾಗಾದರೆ ಸೆಪ್ಟೆಂಬರ್ 2ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಮಘಾ, ಯೋಗ: ಶಿವ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:42 ಗಂಟೆ, ರಾಹು ಕಾಲ ಬೆಳಿಗ್ಗೆ 07:54 ರಿಂದ 09:27, ಯಮಘಂಡ ಕಾಲ ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 12:32ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:37ರ ವರೆಗೆ.
ಧನು ರಾಶಿ: ಹೆಚ್ಚು ಶ್ರಮ ಹಾಗು ಕಡಿಮೆ ಆದಾಯದಿಂದ ನೀವು ತೃಪ್ತರಾಗಬೇಕಾಗುವುದು. ಇಂದು ಯಾವ ಕಾರ್ಯವನ್ನು ಮಾಡುವಾಗಲೂ ಉದ್ವೇಗಪಡುವ ಅಗತ್ಯ ಇರದು. ನಿಮ್ಮ ಸ್ನೇಹಿತರ ಬಳಗ ದೊಡ್ಡದಿದ್ದು ಎಲ್ಲರಿಗೂ ಸಂತೋಷವನ್ನು ಕೊಡುವಿರಿ. ಅಪರಿಚಿತ ಊರಿಗೆ ಹೋಗಿ ಸ್ವಲ್ಪ ಕಷ್ಟವಾದೀತು. ವೃತ್ತಿಯಲ್ಲಿ ಸಹಯೋಗದಿಂದ ಕಾರ್ಯವನ್ನು ಮಾಡುವಿರಿ. ಆದರೆ ಅದರ ಹೆಸರನ್ನು ನೀವು ಮಾತ್ರ ಪಡೆಯುವಿರಿ. ಮನೆಯಿಂದ ಅಶುಭವಾರ್ತೆಯು ಬರಬಹುದು. ಮನಸ್ಸನ್ನು ಗಟ್ಟಿಮಾಡಿಕೊಳ್ಳಿ. ಸಣ್ಣ ವಿಚಾರಕ್ಕೆ ಕೋಪ ಮಾಡಿಕೊಳ್ಳಬೇಡಿ. ಮಕ್ಕಳು ನಿಮ್ಮ ಬಳಿ ಏನನ್ನಾದರೂ ಹೇಳಿಕೊಳ್ಳಲು ಬಯಸಬಹುದು. ಅದನ್ನು ಆಲಿಸಿ. ವಿದೇಶದಿಂದ ಸ್ವದೇಶಕ್ಕೆ ಬರಲು ಇಚ್ಛಿಸುವಿರಿ. ಅಪರಿಚಿತರು ಆಪ್ತರಾಗುವ ಸಾಧ್ಯತೆ ಇದೆ. ಪ್ರತಿಭಾ ಪ್ರದರ್ಶನಕ್ಕೆ ಪೂರ್ವಸಿದ್ಧತೆ ಕಷ್ಟವಾದೀತು. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು.
ಮಕರ ರಾಶಿ: ನಿಮ್ಮ ಅಧಿಕಾರವನ್ನು ಹಿಡಿತಕ್ಕೆ ತಂದುಕೊಳ್ಳುವದೇ ಸಾಹಸವಾಗಬಹುದು. ಇಂದು ನಿಮ್ಮ ಸಂಗಾತಿಯು ನಿಮಗೆ ಪ್ರಿಯವಾದುದನ್ನೇ ಮಾಡುವರು. ಸರ್ಕಾರಿ ಕೆಲಸಗಳು ನಿಧಾನವಾಗಿ ಮುಂದುವರಿಯುವುದು. ಕೆಲವು ನಿಮಗೆ ಬಂಧನ ಎನಿಸಬಹುದು. ಕಛೇರಿಯಲ್ಲಿ ನಿಮ್ಮ ಸಾಮರ್ಥ್ಯವು ಅರ್ಥವಾಗುವುದು. ಹಳೆಯ ಘಟನೆಗಳು ಮರೆತುಹೋಗುವ ಸಾಧ್ಯತೆ ಇದೆ. ನೀವು ಹೆಚ್ಚಿನ ಮಾರ್ಗದರ್ಶನವನ್ನು ಹಿರಿಯರಿಂದ ಬಯಸುವಿರಿ. ಕಳೆದುಹೋದುದರ ಬಗ್ಗೆ ಬಹಳ ಚಿಂತನೆಯನ್ನು ಮಾಡುವಿರಿ. ನಿಮ್ಮವರನ್ನು ದೂರವಿಟ್ಟು ಕಾರ್ಯವನ್ನು ಮಾಡಬೇಕಾಗುವುದು. ಸಂಗಾತಿಯ ಕಡೆಯಿಂದ ಪ್ರೀತಿಯು ಸಿಗಲಿದೆ. ನಿಮ್ಮ ನಿಲುವನ್ನು ಬದಲಿಸಿಕೊಳ್ಳಲು ಇಚ್ಛಿಸುವುದಿಲ್ಲ. ನಿಮ್ಮ ಸಂದರ್ಭೋಚಿತ ಸಲಹೆಯನ್ನು ಸ್ವೀಕರಿಸುವರು. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ. ನಿಮ್ಮಲ್ಲಿ ಗುಟ್ಟು ನಿಲ್ಲುವುದು ಕಷ್ಟ. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ.
ಕುಂಭ ರಾಶಿ: ನಿಮ್ಮ ನೋವುಗಳನ್ನು ಹೇಳಿಕೊಂಡು ಕಡಿಮೆ ಮಾಡಿಕೊಳ್ಳಬಹುದು. ಇಂದಿನ ನಿಮ್ಮ ಹೂಡಿಕೆ ನಿಮಗೆ ಬಹು ಉಪಕಾರಿ. ಒಂದುಷ್ಟು ಶಿಸ್ತಿನಿಂದ ನೀವು ಇರಬೇಕಾದೀತು. ನಿಮ್ಮ ಗಂಭೀರವಾದ ನಡೆಯು ಕೆಲವರಿಗೆ ಕಷ್ಟವಾಗಬಹುದು. ಮಕ್ಕಳ ಮೇಲೆ ನಿಮ್ಮ ಗಮನವಿರಲಿ. ದೂರ ಬಂಧುಗಳು ನಿಮ್ಮನ್ನು ಭೇಟಿಯಾಗಲು ಬರುವರು. ನಿಮ್ಮ ಮಾತಿನಿಂದ ಸಂತೋಷಪಡುವರು. ಪುಣ್ಯಸ್ಥಳಗಳಿಗೆ ಹೋಗುವಿರಿ. ಉತ್ತಮ ಉದ್ಯೋಗವನ್ನು ಬಿಟ್ಟುಕೊಳ್ಳುವಿರಿ. ಯಾರ ಮಾತಿಗೂ ಗೌರವವನ್ನು ಕೊಡದೇ ನಿಮ್ಮದೇ ಚಿಂತನೆಯಲ್ಲಿ ಇರುವಿರಿ. ಸ್ವಭಾವವನ್ನು ಬದಲಿಸಿಕೊಳ್ಳಬೇಕಾದೀತು. ಆರ್ಥಿಕ ಅಭಾವವನ್ನು ನೀವು ಯಾರ ಬಳಿಯೂ ಹೇಳುವುದು ಬೇಡ. ವಾಹನದ ವಿಚಾರಕ್ಕೆ ದಂಪತಿಗಳ ನಡುವೆ ಕಲಹವಾಗಬಹುದು. ಕಳೆದುಕೊಂಡ ವಸ್ತುವನ್ನು ಪಡೆಯಲಿದ್ದೀರಿ. ಆಪ್ತರೆಂದು ಮಾತಿನಲ್ಲಿ ಹಿಡಿತವಿಲ್ಲದೇ ಏನನ್ನಾದರೂ ಹೇಳುವಿರಿ. ಇನ್ನೊಬ್ಬರಿಗೆ ಕೊಟ್ಟು ನೀವೂ ಭೋಗಿಸಿ.
ಮೀನ ರಾಶಿ: ನಿಮ್ಮ ಆತುರದ ಕಾರಣ ನಿಮ್ಮ ಜೊತೆ ಇತರರು ವ್ಯವಹರಿಸುವುದು ಕಷ್ಟವಾಗಲಿದೆ. ಇಂದಿನ ನಿಮ್ಮ ಪ್ರಯಾಣದಿಂದ ನಷ್ಟವಾಗುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಆರ್ಥಿಕ ನಷ್ಟವಾಗಬಹುದು. ಕಲಾವಿದರಿಗೆ ಹೆಚ್ಚು ಅನುಕೂಲವಾಗಲಿದೆ. ಪಾಲುದಾರಿಕೆಯಲ್ಲಿ ಸರಿಯಾದ ನಿಯಮಗಳನ್ನು ರೂಪಿಸಿಕೊಳ್ಳಿ. ಹೊಸ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ. ಸಣ್ಣ ಮೊತ್ತವನ್ನಾದರೂ ಕೂಡಿಡುವುದು ಉತ್ತಮ. ನಿಮ್ಮೆದುರು ಆಗುವ ಎಲ್ಲ ಘಟನೆಗಳನ್ನು ಸಮಾಧಾನ ಚಿತ್ತದಿಂದ ಗಮನಿಸಿ. ದೈವದಲ್ಲಿ ಹೆಚ್ಚು ವಿಶ್ವಾಸವಿಟ್ಟು ಮುಂದೆ ಹೆಜ್ಜೆ ಇಡಿ. ಗಳಿಸಿದ್ದನ್ನು ಕಳೆದುಕೊಳ್ಳುವಾಗ ಯೋಚಿಸಿ. ಕೆಲವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಅವಶ್ಯಕತೆ ಇದ್ದರೆ ಮಾತ್ರ ಮುಂದುವರಿಯುವುದು ಉತ್ತಮ. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ. ಖುಷಿಯಿಂದ ಸ್ವೀಕರಿಸಿ ಎಲ್ಲವನ್ನೂ. ನಿಮ್ಮ ಇಂದಿನ ಶ್ರಮಕ್ಕೆ ತಕ್ಕ ಫಲವು ಪ್ರಾಪ್ತವಾಗಲಿದೆ.