ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:12 ರಿಂದ ಸಂಜೆ 04:40 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:22 ರಿಂದ 10:49ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:17 ರಿಂದ 01:45 ರವರೆಗೆ.
ಮೇಷ ರಾಶಿ; ಇನ್ನೊನ್ಬರ ಮಾತಿಗೆ ಮಣಿದು ಏನನ್ನಾದರೂ ಮಾಡಿ ತೊಂದರೆಪಡುವುದು ಬೇಡ. ಸರಿ ಎನಿಸಿದರೆ ಒಪ್ಪಿ, ಇಲ್ಲವಾದರೆ ಮುನ್ನಡೆಯಿರಿ. ನಿಮ್ಮ ನಡವಳಿಕೆಯೇ ಸಮೀಪಕ್ಕೆ ಜನರು ಬರುವಂತೆ ಮಾಡಿದೆ. ನಿಮಗೆ ಇಂದು ನೀವು ಮಾಡುವ ಕೆಲಸದಲ್ಲಿ ತೃಪ್ತಿಯು ಸಿಗಲಿದೆ. ಸಂಗಾತಿಯ ಪ್ರೀತಿಯೂ ನಿಮಗೆ ಲಭ್ಯವಾಗುವುದು. ಅಮೂಲ್ಯ ಸಂಪತ್ತನ್ನು ಪ್ರದರ್ಶಿಸುವುದು ಬೇಡ. ನೀವು ಅಧ್ಯಾತ್ಮದಿಂದ ಹೆಚ್ಚು ಪ್ರಭಾವಿತರಾಗಲಿದ್ದೀರಿ. ನಿಮ್ಮ ಚಂಚಲ ಮನಸ್ಸಿನಿಂದ ಮಾಡಿದ ನಿರ್ಧಾರವು ಕುಟುಂಬಕ್ಕೆ ಸಮಸ್ಯೆಯಾಗಿ ಪರಿಣಮಿಸಬಹುದು. ಅತಿಯಾದ ಭೋಜನವು ನಿಮಗೆ ಸಂಕಟ ಕೊಟ್ಟೀತು. ತಾಯಿಯ ಕಡೆಯ ಬಂಧುಗಳ ಸಹಾಯದಿಂದ ನೀವು ಸ್ವಂತ ವಾಹನವನ್ನು ಖರೀದಿಸುವಿರಿ. ಗಂಭೀರ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳುವುವುದು ಬೇಡ. ಉದ್ಯೋಗಕ್ಕೆ ಸೇರಿ ನಿಮಗೆ ತೊಂದರೆಯಾಗಬಹುದು. ವಿದ್ಯಾರ್ಥಿಗಳಿಗೆ ಸಾಲಬಾಧೆ ತಟ್ಟುವ ಸಾಧ್ಯತೆ ಇದೆ. ಹೃದಯದ ದೌರ್ಬಲ್ಯವು ನಿಮ್ಮನ್ನು ಎಲ್ಲ ರೀತಿಯಿಂದ ಕಟ್ಟಿಹಾಕಬಹುದು.
ವೃಷಭ ರಾಶಿ: ನಿಮ್ಮ ತಾಳ್ಮೆಯು ದೌರ್ಬಲ್ಯದ ಸಂಕೇತವಾಗಬಹುದು. ಸ್ವಯಂ ಕೃತ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾಗುವುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ನೀವಾಡುವ ಮಾತುಗಳಿಗೆ ಕುಟುಂಬವು ಉತ್ತರಿಸಬೇಕಾದೀತು. ಕೆಲವು ತೀರ್ಮಾನಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನೀವು ಇಂದು ನಿಮ್ಮ ಬಳಿ ಇರುವ ಸಂಪತ್ತನ್ನು ತೋರಿಸುವುದು ಬೇಡ. ದೇಹವನ್ನು ಹೆಚ್ಚು ದಂಡಿಸಬೇಕಾಗುವುದು. ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದು ಉತ್ತಮ. ಕಛೇರಿಯ ವ್ಯವಹಾರವನ್ನು ಅಲ್ಲಿಯೇ ಬಿಟ್ಟು ಬನ್ನಿ. ಸ್ನೇಹಿತರಿಗಾಗಿ ಧನವು ನಷ್ಟವಾಗುವುದು. ಯಾರನ್ನೂ ಸಣ್ಣವರನ್ನಾಗಿ ತಿಳಿಯುವುದು ಬೇಡ. ಯಾರದೋ ಮೇಲಿನ ಭಯದಿಂದ ಗೌಪ್ಯ ವಿಚಾರವನ್ನು ಹೇಳುವಿರಿ. ಸನ್ನಿವೇಶವನ್ನು ಎದುರಿಸುವುದು ಕಷ್ಟವಾಗಲಾರದು. ನಿಮ್ಮ ಸ್ವೇಚ್ಛೆಗೆ ಭಂಗವಾಗುವುದನ್ನು ನೀವು ಸಹಿಸಲಾರಿರಿ.
ಮಿಥುನ ರಾಶಿ: ಕೆಲವು ಅವಕಾಶಗಳು ನಿಮ್ಮನ್ನು ಪರೀಕ್ಷಿಸಲು ಬರಬಹುದು. ನಿಮ್ಮ ಆಲೋಚನೆಗಳಿಂದ ನಿಮಗೆ ಯೋಗ್ಯ ಸ್ಥಾನವು ಲಭಿಸುವುದು. ಆರ್ಥಿಕತೆಯ ಕಾರಣಕ್ಕಾಗಿ ನೀವು ಹೆಚ್ಚು ಆತಂಕ ಪಡುವಿರಿ. ಯಂತ್ರೋಪಕರಣಗಳ ದುರಸ್ತಿಯನ್ನು ಮಾಡಿಸುವಿರಿ. ದಾಯದಿದಗಳ ಕಲಹವೂ ನಿಮ್ಮ ಅನಾರೋಗ್ಯಕ್ಕೆ ಪೂರಕವಾಗಿರುವುದು. ನಿಮ್ಮ ಉತ್ಸಾಹಕ್ಕೆ ಭಂಗವಾಗುವ ಸನ್ನಿವೇಶವು ನಿಮ್ಮ ಕಣ್ಣೆದುರಿಗೆ ನಡೆಯುವುದು. ಆಪತ್ಕಾಲಕ್ಕಾಗಿ ಕೂಡಿಟ್ಟ ಹಣವು ಇಂದು ತೆಗೆಯಬೇಕಾದೀತು. ಮುಖಂಡರ ಬಗ್ಗೆ ನಿಮಗೆ ಪೂರ್ಣತೃಪ್ತಿ ಇರದು. ದೃಷ್ಟಿಯಲ್ಲಿ ದೋಷವು ಕಾಣಿಸಿಕೊವಲಳ್ಳಬಹುದು. ನಿಮ್ಮ ಅರೋಗ್ಯ ಸಮಸ್ಯೆಯನ್ನು ಆಪ್ತರ ಜೊತೆ ಹೇಳಿಕೊಳ್ಳಿ. ನಿಮ್ಮದೇ ಆದ ಯೋಜನೆಯನ್ನು ಮೊದಲೇ ಸಿದ್ಧಪಡಿಸಿಕೊಳ್ಳಿ. ದಾಂಪತ್ಯದ ಸುಖದಲ್ಲಿ ಮಕ್ಕಳನ್ನು ಮರೆಯದಿರಿ. ಬೇಕಾದ ವಸ್ತುಗಳನ್ನು ಮುಚ್ಚುಮರೆಯಿಲ್ಲದೇ ಪಡೆಯುವಿರಿ.
ಕರ್ಕಾಟಕ ರಾಶಿ: ಆರ್ಥಿಕತೆಯಲ್ಲಿ ಸ್ವಲ್ಪ ಚೇತರಿಕೆಯು ನಿಮಗೆ ಧೈರ್ಯವನ್ನು ಕೊಡುವುದು. ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ. ದುರಭ್ಯಾಸದ ಕಾರಣದಿಂದ ಎಲ್ಲರ ಎದುರು ಮಾನವನ್ನು ಕಳೆದುಕೊಳ್ಳಬೇಕಾಗುವುದು. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದವು ಬರಬಹುದು. ನಿಮ್ಮ ನಿರುದ್ಯೋಗದ ಸಮಸ್ಯೆಯನ್ನು ಸರಿ ಮಾಡಿಕೊಳ್ಳುವಿರಿ. ಈಗಾಗಲೇ ವೃತ್ತಿಯಲ್ಲಿ ತೊಡಗಿದವರು ಬಡ್ತಿಯನ್ನು ನೀಡುವಂತೆ ಒತ್ತಾಯಿಸಬಹುದು. ನಿಮ್ಮದೇ ಆದ ವ್ಯಕ್ತಿತ್ವವು ನಿಮ್ಮ ಗೌರವವನ್ನು ಹೆಚ್ಚಿಸುವುದು. ನಿಮ್ಮ ಬಳಿ ಇಲ್ಲದಿರುವುದನ್ನು ಇನ್ನೊಬ್ಬರಿಂದ ಕೇಳಿ, ಕೊಟ್ಟರೆ ಮಾತ್ರ ಪಡೆಯಿರಿ. ವಿದ್ಯಾಭ್ಯಾಸದ ಬಗ್ಗೆ ನಿಮಗೆ ಬಹಳ ಆಸ್ಥೆಯು ಅಧಿಕವಾಗಿದ್ದು ಮಾರ್ಗವನ್ನು ನೀವು ನಿರೀಕ್ಷಿಸುವಿರಿ. ಯಾವುದನ್ನೂ ಅತಿಯಾಗಿ ಮಾಡಿಕೊಳ್ಳುವುದು ಬೇಡ. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ಬಲಾತ್ಕಾರದಿಂದ ಯಾವುದನ್ನೂ ಸರಿಮಾಡಿ ಇಡಲಾಗದು.