Astrology: ಸಂಗಾತಿಯ ಮಾತು ನಿಮಗೆ ನೋವುಂಟಾಗುವುದು, ತಾಳ್ಮೆಯಿಂದ ಇರುವಿರಿ

ರಾಶಿ ಭವಿಷ್ಯ, ಮಂಗಳವಾರ(ಅಕ್ಟೋಬರ್: 22): ಸೌಂದರ್ಯಕ್ಕೆ ಇಂದು ಬೆಲೆಕೊಡಲಿದ್ದೀರಿ. ನಿಮ್ಮಿಂದ ಉಪಕಾರವನ್ನು ಪಡೆದು ಶತ್ರಗಳಾಗುವರು. ನಿಮ್ಮ ಕಾರ್ಯಕ್ಕೆ‌ ಅಡ್ಡಿಬಂದರೆ ಆ ಕಾರ್ಯವನ್ನು ಮುಂದೂಡಿ. ಹಾಗಾದರೆ ಅಕ್ಟೋಬರ್: 22ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಸಂಗಾತಿಯ ಮಾತು ನಿಮಗೆ ನೋವುಂಟಾಗುವುದು, ತಾಳ್ಮೆಯಿಂದ ಇರುವಿರಿ
ಸಂಗಾತಿಯ ಮಾತು ನಿಮಗೆ ನೋವುಂಟಾಗುವುದು, ತಾಳ್ಮೆಯಿಂದ ಇರುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 22, 2024 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಪರಿಘ​​, ಕರಣ: ಗರಜ, ಸೂರ್ಯೋದಯ ಬೆಳಗ್ಗೆ  06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:12 ರಿಂದ ಸಂಜೆ 04:40 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:22 ರಿಂದ 10:49ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:17 ರಿಂದ 01:45 ರವರೆಗೆ.

ಧನು ರಾಶಿ: ಸಾಲವನ್ನು ವಸೂಲಿ ಮಾಡಲು ಯಾರನ್ನಾದರೂ ಸಾಲ ಕೊಟ್ಟವರು ಕಳುಹಿಸಬಹುದು. ಯಾವದೂ ನೀವಂದುಕೊಂಡಷ್ಟು ಸುಲಭವಾಗಿ ಆಗದು ಎಂಬುದರ ಮನವರಿಕೆ ಆಗುವುದು. ಬೇರೆಯವರ ಮೇಲೆ ದೋಷಗಳ ಪಟ್ಟಿಯನ್ನೇ ಮಾಡುವಿರಿ. ನಿಮ್ಮ ಮಾತುಗಳೇ ನಿಮಗೆ ಪುನಃ ಬರಲಿದೆ. ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಮನೆಯ ಬಾಗಿಲಿಗೆ ಅಪರಿಚಿತರ ಹಾವಳಿ ಹೆಚ್ಚಾಗುವುದು. ಸಂಗಾತಿಯ ಮಾತು ನಿಮ್ಮೊಳಗೆ ನಾಟಬಹುದು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ತಂದೆಯಿಂದ ಸಹಾಯವನ್ನು ಪಡೆಯುವಿರಿ. ಸಾಲದ ವಿಚಾರದಲ್ಲಿ ಹೆಚ್ಚಿನ ತಿಳಿವಳಿಕೆ ಅಗತ್ಯ. ದೂರ‌ಪ್ರಯಾಣವು ಸುಖ ಎನಿಸಬಹುದು. ಸುಲಭವೆಂದು ಕೆಲಸವು ಕಷ್ಟವೆನಿಸಬಹುದು. ನಿಮಗೆ ಬೇಕಾದವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ನೀವು ವಹಿಸಿಕೊಂಡ ಕಾಮಗಾರಿಯ ಬಗ್ಗೆ ಪೂರ್ಣ ವಿಶ್ವಾಸ ಬರದು. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು.

ಮಕರ ರಾಶಿ; ನಿಮ್ಮ‌ದೇಹದ ಸೂಕ್ಷ್ಮಪ್ರದೇಶಗಳ ಬಗ್ಗೆ ಎಚ್ವರಿಕೆ ಇರಲಿ.‌ ಶಸ್ತ್ರಗಳಿಂದ ಘಾಸಿಯಾಗುವ ಸಾಧ್ಯತೆ ಇರಲಿದೆ. ಪ್ರೇಮಕ್ಕೆ ಮಿತ್ರರಿಂದ‌ ಸಹಕಾರವು ಸಿಗಲಿದೆ. ಸಹೋದ್ಯೋಗಿಗಳಿಂದಲೂ ಸಾಲಾವನ್ನು ಪಡೆಯಬೇಕಾಗಬಹುದು. ಸ್ನೇಹ ಸಂಬಂಧವನ್ನು ಹೆಚ್ಚು ಆಪ್ತವಾಗಸಿಕೊಳ್ಳುವಿರಿ. ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗಬಹುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ತಂದೆ ತಾಯಿಯರನ್ನು ಇಂದು ಸಂತೋಷಪಡುಸುವಿರಿ. ಏಕಾಂಗಿ ಇರುವುದು ನಿಮಗೆ ಇಷ್ಟವಾಗದೇ ಇರಬಹುದು. ಸಮಾರಂಭಗಳಿಗೆ ಭಾಗವಹಿಸುವಿರಿ. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ಬಹಳ ದಿನಗಳಿಂದ ಹೋಗಬೇಕು ಎಂದುಕೊಂಡಲ್ಲಿಗೆ ಹೋಗಬಹುದು.

ಕುಂಭ ರಾಶಿ; ಎಲ್ಲೇ ಇದ್ದರೂ ಕಾರ್ಯದ ಪ್ರಗತಿಯನ್ನು ಪಡೆದುಕೊಳ್ಳಿ.‌ ಒಂದೇ ಉದ್ದೇಶ ಹೊಂದಿದ ಹಲವರನ್ನು ಭೇಟಿ ಮಾಡುವಿರಿ. ಕಛೇರಿಯ ಕೆಲಸವು ನಿಮಗೆ ಸಾಕೆನಿಸಬಹುದು. ಸಮಾಧಾನದ ಚಿತ್ತವು‌ ಅನೇಕ ಸಂಗತಿಗಳಿಗೆ ಪೂರಕವಾಗಲಿದೆ. ಆರೋಗ್ಯದ ವಿಚಾರದಲ್ಲಿ‌ ನಿರ್ಲಕ್ಷಿಸುವುದು ಸೂಕ್ರವಲ್ಲ. ನಿಮ್ಮ‌ ಬಲದ ಪ್ರದರ್ಶನವನ್ನು ಮಾಡಬೇಕಾದೀತು. ಕಾರ್ಯಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಸಡಿಲಿಕೆ ಬೇಡ. ನಿಮ್ಮ ಗುರಿಯು ಬದಲಾಗಬಹುದು. ‌ಪ್ರಾಣಿಗಳಿಂದ ನಿಮಗೆ ಭೀತಿಯು ಬರಬಹುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಎಲ್ಲದಕ್ಕೂ ಕೂಡಲೇ ಫಲ ಸಿಗಬೇಕು ಎಂಬ ಮಾನಸಿಕತೆಯಿಂದ ಹೊರಬರಬೇಕಾಗಬಹುದು. ವೃತ್ತಿಶೀಲರು ತಮ್ಮನ್ನು ಅತಿಮಾನುಷರಂತೆ ತೋರ್ಪಡಿಸುವರು. ಅಚ್ಚುಕಟ್ಟಾದ ಕಾರ್ಯದಿಂದ ಅಧಿಕಾರಿಗಳ ಮನಸ್ಸನ್ನು ಗೆಲ್ಲುವಿರಿ.

ಮೀನ ರಾಶಿ: ನಿಮ್ಮನ್ನು ಕಂಡರೆ ಆಗದವರ ಎದುರೇ ನೀವು ಗರ್ವದಿಂದ ಇರುವಿರಿ. ನೀವು ಇಂದು ಅಕಾರಣವಾಗಿ ಚಿಂತೆ ಮಾಡುವಿರಿ. ಉನ್ನತ ಶಿಕ್ಷಣಕ್ಕಾಗಿ ಮನೆಯಿಂದ ಹೊರಗೆ ಇರಬೇಕಾಗುವುದು. ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಸೃಷ್ಟಿಸುವರು. ಸೌಂದರ್ಯಕ್ಕೆ ಇಂದು ಬೆಲೆಕೊಡಲಿದ್ದೀರಿ. ನಿಮ್ಮಿಂದ ಉಪಕಾರವನ್ನು ಪಡೆದು ಶತ್ರಗಳಾಗುವರು. ನಿಮ್ಮ ಕಾರ್ಯಕ್ಕೆ‌ ಅಡ್ಡಿಬಂದರೆ ಆ ಕಾರ್ಯವನ್ನು ಮುಂದೂಡಿ. ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಸಂಗತಿಗಳು ಬರಬಹುದು. ಸ್ವಂತ ವಾಹನದಿಂದ ದೂರ ಪ್ರಯಾಣವನ್ನು ಮಾಡುವಿರಿ. ನಿಮ್ಮ ಹಾಸ್ಯ ಸ್ವಭಾವವು ಕೆಲವರಿಗೆ ಇಷ್ಟವಾಗದು. ಮಾತು ನೇರವಾಗಿದ್ದರೂ ಮೃದುವಾಗಿರಲಿ. ಹಿರಿತನದ ಆಧಾರದ ಮೇಲೆ ಅಧಿಕಾರ ಪ್ರಾಪ್ತಿಯಾಗುವುದು. ವ್ಯವಹಾರದಲ್ಲಿ ಇಂದು ನಿಮಗೆ ತುಂಬಾ ಒತ್ತಡದ ದಿನವಾಗಿರುತ್ತದೆ. ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯಬೇಕಾಗಬಹುದು. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ.

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ