ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶುಕ್ರವಾರ (ಜೂನ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಆಯುಷ್ಮಾನ್, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 12:36ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:50 ರಿಂದ ಸಂಜೆ 05:27ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:45 ರಿಂದ 09:22ರ ವರೆಗೆ.
ಸಿಂಹ ರಾಶಿ: ಇಂದು ನಿಮಗೆ ಯಾವುದೋ ನಿಶ್ಚಿತ ಮೂಲದಿಂದ ಹಣ ಬರುವ ಖಾತ್ರಿ ಸಿಕ್ಕು, ಹೆಚ್ಚಿನ ಖರ್ಚು ಮಾಡಲು ಮುಂದಾಗುವಿರಿ. ನಿಮ್ಮ ಹಿತೈಷಿಗಳ ಸಹಕಾರದಿಂದ ನಿಮ್ಮ ಉದ್ಯಮವು ಅಭಿವೃದ್ಧಿ ಹೊಂದಲು ಸಾಧ್ಯ. ಒಂದಿಲ್ಲೊಂದು ಆರೋಪದಿಂದ ನೀವು ಬೇಸತ್ತು ಹೋಗಬಹುದು. ಮನಸ್ಸಿಗೆ ಒದು ಬಹಳ ಕಿರಿಕಿರಿಯ ವಿಚಾತವಾಗಿ ಪರಿಣಮಿಸುವುದು. ನಿಮಗೆ ಇಂದು ಸುಮ್ಮನೇ ಕುಳಿತಿರಲು ಸಾಧ್ಯವಾಗದು. ಇಂದು ನೀವು ನಿದ್ರೆಯನ್ನು ಹೆಚ್ಚು ಇಷ್ಟಪಡುವರು. ವಿವಾಹವು ಕೂಡಿಬರುವ ಸಾಧ್ಯತೆ ಇದೆ. ನಿರಾಕರಿಸದೇ ಒಪ್ಪಿಕೊಳ್ಳಿ. ಸಮೃದ್ಧವಾದ ಭೋಜನ ಸಿಗಲಿದೆ. ಸಾಲಬಾಧೆಯಿಂದ ಮುಕ್ತರಾಗುವ ತಂತ್ರವನ್ನು ಮಾಡುವಿರಿ. ಆಪ್ತರೇ ನಿಮ್ಮನ್ನು ಕೆಡಗಲು ಸಂಚನ್ನು ರೂಪಿಸಬಹುದು. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುವುದು. ಇಂದಿನ ಆರ್ಥಿಕತೆಯಿಂದ ನಿಮಗೆ ತೃಪ್ತಿಯು ಇರಲಿದೆ.
ಕನ್ಯಾ ರಾಶಿ: ಇಂದು ನಿಮ್ಮ ಆಸೆಗಳಿಗೆ ಪೂರಕವಾದ ಸನ್ನಿವೇಶಗಳು ತಾನಾಗಿಯೇ ತೆರೆದುಕೊಳ್ಳುತ್ತವೆ. ಯಾವುದೋ ಆತಂಕ ಇಡೀ ದಿನ ನಿಮ್ಮನ್ನು ಕಾಡಲಿದೆ. ಕುಟುಂಬದ ಹಿರಿಯರ ಸಲಹೆ ಪಡೆದು, ಮುಖ್ಯ ಕೆಲಸಗಳಲ್ಲಿ ಮುಂದುವರಿಯಿರಿ. ಸರಿಯಾದ ಅಭ್ಯಾಸವಿಲ್ಲದೇ ಮಕ್ಕಳು ಪರೀಕ್ಷೆಯಲ್ಲಿ ಸೋಲವ ಸಾಧ್ಯತೆ ಇದೆ. ಸ್ಥಳದಲ್ಲಿಯೇ ಸಿಕ್ಕ ಕೆಲಸವನ್ನು ಚೆನ್ನಾಗಿ ಮಾಡಿ. ನಿಮ್ಮ ಕಾಪಾಡುವ ಶಕ್ತಿ ಇನ್ನೊಂದಿದೆ ಎಂದು ಧೈರ್ಯವಾಗಿ ಸತ್ಕಾರ್ಯದಲ್ಲಿ ಮುನ್ನುಗ್ಗುವಿರಿ. ಹಠವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ ಧನಾತ್ಮವಾದ ಪರಿಣಾಮವನ್ನು ಪಡೆಯಿರಿ. ದಾಂಪತ್ಯದಲ್ಲಿ ಸುಖವು ಇರಲಿದೆ. ಮನಸ್ತಾಪಗಳು ದೂರವಾಗಿ ಕುಟುಂಬದಲ್ಲಿ ಅನ್ಯೋನ್ಯತೆ ಎದ್ದು ತೋರುವುದು. ಮಕ್ಕಳ ವಿಚಾರದಲ್ಲಿ ದುಂದು ವೆಚ್ಚ ಮಾಡಬೇಕಾದೀತು. ಹೂಡಿಕೆಯಲ್ಲಿ ಅತಿಯಾದ ನಿರೀಕ್ಷೆ ಬೇಡ. ಕಲಾವಿದರಿಗೆ ಹೊಸ ಅವಕಾಶಗಳು ತೆರೆಯುವುದು.
ತುಲಾ ರಾಶಿ: ನಿಮ್ಮ ಪಟ್ಟ ಶ್ರಮಕ್ಕೆ ಈಗ ಗೌರವವನ್ನು ಪಡೆದುಕೊಳ್ಳುವಿರಿ. ಹಣಕಾಸಿನ ಸಂಗತಿಗಳನ್ನು ಸಂಗಾತಿ ಜತೆಗೆ ಚರ್ಚಿಸಿ, ಅನಂತರ ಮುಂದಿನ ತೀರ್ಮಾನ ಕೈಗೊಳ್ಳಿ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಯಸಿದರೂ ಅದು ಅಕಾಲದಲ್ಲಿ ಪ್ರಕಟವಾಗುವುದು. ಸಾಲವನ್ನು ಹಿಂದಿರುಗಿಸಲು ಕಷ್ಟವಾಗಬಹುದು. ನಿಮ್ಮಿಂದಾದ ಕೆಲಸವನ್ನು ನೀವೇ ಹೊಗಳಿಕೊಳ್ಳಬೇಡಿ. ನಿಮ್ಮ ವೃತ್ತಿಯನ್ನು ನೀವು ಸರಿಯಾಗಿ ನಿಭಾಯಿಸುತ್ತೀರಿ ಎನ್ನುವುದಕ್ಕೆ ನಿಮಗೆ ಇಂದು ಬರುವ ಜವಾಬ್ದಾರಿಯೇ ಕಾರಣವಾಗಿರುತ್ತದೆ. ಸಂಗಾತಿಯ ಮಾತಿನಿಂದ ಮನಸ್ತಾಪ ಉಂಟಾಗಬಹುದು. ಸ್ನೇಹಿತರ ಬಳಗ ನಿಮ್ಮನ್ನು ಕೆಟ್ಟ ಕೆಲಸಕ್ಕೆ ಪ್ರೇರಿಸಬಹುದು. ಬೀಳುವ ನಿಮ್ಮನ್ನು ಯಾರಾದರೂ ರಕ್ಷಿಸಿಯಾರು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ. ಎಲ್ಲವನ್ನೂ ಸಮರಸದಿಂದ ಮಾಡುವಿರಿ. ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು.
ವೃಶ್ಚಿಕ ರಾಶಿ: ಇಂದು ನಿಮ್ಮ ಬಾಕಿ ಉಳಿದ ಸಾಲಗಳನ್ನು ಪೂರ್ಣ ಮಾಡಿ. ಅಧಿಕಾರವನ್ನು ಹೆಚ್ಚಿಸಿಕೊಳ್ಳಲು ಸಂಬಂಧಪಟ್ಟರ ಜೊತೆ ಮಾತನಾಡುವಿರಿ. ವಿಶ್ವಾಸಕ್ಕೆ ಘಾಸಿಯಾಗುವ ಘಟನೆಗಳು ನಿಮಗೆ ಹೊಸದಲ್ಲದಿದ್ದರೂ ಮತ್ತೆ ಮತ್ತೆ ನೆನಪಾಗಿ ದುಃಖವು ಬರಬಹುದು. ನಿಮ್ಮ ಹಿಂದಿನ ಜೀವನವನ್ನು ನೆನೆದು, ಈಗಿನ ಸಮೃದ್ಧಿಯನ್ನು ಕಂಡು ಬಹಳ ಆನಂದವಾಗುವುದು. ಯಾರದೋ ಕಾರಣಕ್ಕೆ ನೀವು ತಲೆತಗ್ಗಿಸಬೇಕಾಗಬಹುದು. ಸಾಲವನ್ನು ಮರುಪಾವತಿ ಮಾಡುವ ಬಗ್ಗೆ ಸ್ವಲ್ಪ ಆಲೋಚಿಸಿ. ಪರರನ್ನು ನಿಂದಿಸುವ ದುರಭ್ಯಾಸದಿಂದ ದೂರವಿರುವುದು ಒಳ್ಳೆಯದು. ಒಳ್ಳೆಯ ಕಡೆಯಿಂದ ಒಳ್ಳೆಯದನ್ನೇ ನಿರೀಕ್ಷಿಸಿ. ಎಲ್ಲವನ್ನೂ ನೀವು ನಿಶ್ಚಯ ಮಾಡಿಕೊಳ್ಳಲು ಆಗದು. ಎಂದೋ ಮಾಡಿದ ಕಾರ್ಯಕ್ಕೆ ಇಂದು ಪಶ್ಚಾತ್ತಾಪಪಡಬೇಕಾದೀತು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು. ನೀವು ಕೊಟ್ಟಿದ್ದೇ ನಿಮಗೆ ಸಿಗುವುದು ಎಂಬುದು ವಿಧಿ ನಿಯಮ.