AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿತ್ಯ ಭವಿಷ್ಯ; ಕೆಲಸದ ಸ್ಥಳದಲ್ಲಿ ಹಿರಿಯರ ಮಾರ್ಗದರ್ಶನ ಪಡೆಯಿರಿ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 16 ಮೇ​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯ ಭವಿಷ್ಯ; ಕೆಲಸದ ಸ್ಥಳದಲ್ಲಿ ಹಿರಿಯರ ಮಾರ್ಗದರ್ಶನ ಪಡೆಯಿರಿ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 16, 2024 | 12:02 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಮಘಾ, ಯೋಗ: ವೃದ್ಧಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ 14:05ರಿಂದ 15:41ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:06 ರಿಂದ 07:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:18ರಿಂದ 10:53ರ ವರೆಗೆ.

ಮೇಷ ರಾಶಿ: ಒಂದೇ ರೀತಿಯ ಕೆಲಸದಿಂದ ಆಸಕ್ತಿ ಕುಂದಬಹುದು.‌ ಮಧ್ಯ ಸಣ್ಣ ವಿರಾಮವನ್ನು ನೀವು ಬಯಸುವಿರಿ. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಹೇಳಿದ ಸಮಯಕ್ಕೆ ನಿಮ್ಮ ಕಾರ್ಯವನ್ನು ಮಾಡಲಾಗದು. ನಿಮ್ಮ ಪ್ರಯತ್ನವನ್ನು ಇತರರಿಗೂ ತಿಳಿಸುವ ಸಮಯ ಇಂದು. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ನಿಮ್ಮ ಕೈಲಾಗುವ ಕೆಲಸವನ್ನು ಮಾಡಿ ಕಿಂಚಿತ್ ಆದಾಯವನ್ನು ಮಾಡಿಕೊಳ್ಳುವಿರಿ. ನಿಮ್ಮ ಪ್ರಗತಿಯ ಬಗ್ಗೆ ಇತರರು ಪ್ರಶಂಸಿಸಬಹುದು. ಉದ್ಯಮದ ವಿಚಾರದಲ್ಲಿ ನೌಕರರಿಂದ ಹಿನ್ನಡೆಯಾಗಲಿದೆ. ಅವಶ್ಯಕತೆ ಇರುವಷ್ಟನ್ನು ಮಾತ್ರ ಖರೀದಿಸಿ. ಇನ್ನೊಬ್ಬರನ್ನು ನೋಡುವುದು ಬೇಡ.

ವೃಷಭ ರಾಶಿ: ಇಂದು ನೀವು ಮನಸ್ಸಿಗೆ ಹಿಡಿಸಿದ್ಸನ್ನು ಮಾತ್ರ ಮಾಡುವಿರಿ. ನಿಮ್ಮ ಪೂರ್ವ ನಿಶ್ಚಿತ ಯೋಜನೆಯನ್ನು ಬದಲಾಯಿಸುವಿರಿ. ನಿಮ್ಮ ದೌರ್ಬಲ್ಯವನ್ನು ಉಪಯೋಗಿಸಿಕೊಳ್ಳಬಹುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ಯಾರ ಒತ್ತಾಯವೂ ನಿಮಗೆ ಇಷ್ಟವಾಗದು. ನಿಮ್ಮ ಏಳಿಗೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ. ಇನ್ನೊಬ್ಬರನ್ನು ನೀವು ನಯವಾಗಿ ವಂಚಿಸುವಿರಿ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ಮನೆಯ ವಾಸವನ್ನು ಬದಲಾಯಿಸುವಿರಿ. ಪ್ರೀತಿಯ ಸುಖದಿಂದ ವಂಚಿತರಾಗುವಿರಿ. ವಿದೇಶಪ್ರಯಾಣದ ಗುಂಗಿನಿಂದ ಹೊರ ಬನ್ನಿ. ನಿಮ್ಮ ಮೇಲೆ ವಿರೋಧಿಗಳ ಆಕ್ರಮಣವು ಆಗಬಹುದು.

ಮಿಥುನ ರಾಶಿ: ನಿಮ್ಮ ಬಗ್ಗೆ ಯಾರಾದರೂ ಪ್ರೀತಿ ತೋರಿಸಿದರೆ ಮುಜುಗರವಾಗುವುದು. ಯಾರನ್ನೇ ಆದರೂ ಅವರನ್ನು ಒಂದು ಹಂತದವರಗೆ ಮಾತ್ರ ಒಳಗೆ ಕರೆಯುವುದು ಸೂಕ್ತ. ನೆರೆಯವರು ನಿಮ್ಮ ವ್ಯವಹಾರದಲ್ಲಿ ಪ್ರವೇಶಪಡೆಯಬಹುದು. ಜಾಗರೂಕರಾಗಿ ಜನರಿಂದ ದೂರವಿರುವುದು ಒಳ್ಳೆಯದು. ನಿಮ್ಮ ಹುಸಿತನವು ಪ್ರಕಟವಾಗಬಹುದು. ಹಣವನ್ನು ಕೇಳಿ ಬಂದವರಿಗೆ ಇಲ್ಲ ಎನ್ನಲಾರಿರಿ. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಸಣ್ಣ ವಿಚಾರಕ್ಕೆ ದ್ವೇಷ ಸಾಧಿಸುವುದು ಸರಿಯಾಗದು. ಹೊಂದಾಣಿಕೆಯ ಕಡೆ ನಿಮ್ಮ ಗಮನವಿರಲಿ. ವಿದ್ಯಾಭ್ಯಾಸಕ್ಕೆ ಯಾರಿಂದಲಾದರೂ ಇನ್ಪ್ಲುಯನ್ಸ್ ಬೇಕಾಗುವುದು. ಪ್ರತ್ಯಕ್ಷವಾಗಿ ಕಾಣುವ ವ್ಯಕ್ತಿಗಳಿಗೆ ನಿಮ್ಮ ಬಗೆಗಿನ ದೃಷ್ಟಿಕೋನವೇ ಬದಲಾಗುವುದು.

ಕಟಕ ರಾಶಿ: ಇಂದು ನಿಮ್ಮ ಪ್ರೇಮವು ಸಫಲವಾಗುವುದು. ಕೆಲಸದ ಸ್ಥಳದಲ್ಲಿ ಹಿರಿಯರು ಮಾರ್ಗದರ್ಶನ ಪಡೆಯಿರಿ. ನಿಮಗೆ ಇಂದು ಬಹಳ ಸಮಯ ಇರುವಂತೆ ತೋರುತ್ತದೆ. ಮುಖ್ಯವಾಗುವುದು. ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಕುಟುಂಬದ ಸಮಸ್ಯೆಯನ್ನು ಹಾಗೆಯೇ ಬಿಟ್ಟುಬಿಡುವಿರಿ. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ಒತ್ತಡವನ್ನು ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮಗೆ ಸಂಬಂಧಿಸಿದ ವಿಚಾರದಲ್ಲಿ ಮಾತ್ರ ನಿಮ್ಮ ಹಸ್ತಕ್ಷೇಪ ಇರಲಿ. ಪೋಷಕರಿಗೆ ಮಹತ್ವಾಕಾಂಕ್ಷೆಯನ್ನು ಬಹಿರಂಗಪಡಿಸುವಿರಿ. ಇಂದು ತಲ್ಲೀನರಾಗಿ ಎಲ್ಲ ಕಾರ್ಯವನ್ನು ಮಾಡುವಿರಿ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು.

ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು