ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (2023 ಡಿಸೆಂಬರ್ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ವಿಷ್ಕಂಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 57 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 12 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:46 ರಿಂದ 11:11 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:59 ರಿಂದ 03:24ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:58 ರಿಂದ 08:22ರ ವರೆಗೆ.
ಮೇಷ ರಾಶಿ: ನಿಮ್ಮ ಸಹಾಯವನ್ನು ಪಡೆದವರು ನಿಮ್ಮನ್ನು ಮರೆಯಬಹುದು. ಒಮ್ಮೆಲೆ ಹಲವಾರು ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗುವುದು. ನಿಮ್ಮ ಪ್ರೀತಿಗೆ ವಂಚನೆಯಾಗುವ ಸಾಧ್ಯತೆ ಇದೆ. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳುವಿರಿ. ಮಕ್ಕಳ ಮೇಲಿಟ್ಟ ಭರವಸೆಯು ಫಲಿಸಬಹುದು. ಇನ್ನೊಬ್ಬರಿಗೆ ಕೊಡುವ ಸಮಯು ವ್ಯರ್ಥವಾಗುವುದು. ಸಣ್ಣ ಮಟ್ಟಿನ ಸಾಲವನ್ನು ನೀವು ಮಾಡಬೇಕಾದ ಸ್ಥಿತಿಯು ಬರಬಹುದು. ತಂದೆಯ ಕಡೆಯಿಂದ ನಿಮಗೆ ಯಾವ ಸಹಾಯವೂ ಸಿಗದೇಹೋಗಬಹುದು. ನಿರಂತರ ಕೆಲಸದಿಂದ ನಿಮಗೆ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇದೆ. ಯಾವ ಬಂಧನಕ್ಕೂ ಒಳಪಡದೇ ಮನಸ್ಸು ಮುಕ್ತವಾಗಿರಲು ಬಯಸುವುದು. ಸಾಮರಸ್ಯದ ಅಭಾವವು ದ್ವೇಷಕ್ಕೆ ಕಾರಣವಾಗಬಹುದು. ಅಭ್ಯಾಸ ವಿಷಯದಲ್ಲಿ ನಿಮಗೆ ಪೂರ್ಣ ತೃಪ್ತಿ ಇರದು. ಸಿಕ್ಕ ವಸ್ತುವನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮನ್ನು ಸ್ನೇಹಿತರು ಕಡೆಗಣಿಸಬಹುದು. ಸರ್ಕಾರಿ ಉದ್ಯೋಗಿಗಳು ನಿಮಗೆ ತೊಂದರೆಯನ್ನು ಕೊಡಬಹುದು. ಧೈರ್ಯವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ.
ವೃಷಭ ರಾಶಿ: ಇಂದು ಆಸ್ತಿಯ ವಿಚಾರವಾಗಿ ಕುಟುಂಬದಲ್ಲಿ ಮಾತುಕತೆಗಳು ನಡೆಯಬಹುದು. ಹಿತಶತ್ರುಗಳನ್ನು ನೀವು ನಿಭಾಯಿಸುವುದು ಕಷ್ಟವಾದೀತು. ಅಮೂಲ್ಯ ವಸ್ತುವನ್ನು ನಿರ್ಲಕ್ಷ್ಯದಿಂದ ಎಲ್ಲಿಯೋ ಇಟ್ಟು ಕಳೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳಿಂದ ನೀವು ಸಾಮಾಜಿಕ ಕಾರ್ಯಕ್ಕೆ ಹಣವನ್ನು ಪಡೆಯುವಿರಿ. ನಿಮ್ಮ ವಿಶ್ರಾಂತಿಯ ಸಮಯವು ಬದಲಾಗಿ ಆರೊಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದು. ಬಹಳ ದಿನಗಳಿಂದ ಕೆಟ್ಟಿದ್ದ ಆರೋಗ್ಯವು ಸರಿಯಾದರೂ ಆರೋಗ್ಯ ಪೂರ್ಣ ಮನಸ್ಸು ಸರಿಯಾಗಲು ಸಮಯು ಬೇಕು. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಅನುಮಾನದ ಬುದ್ಧಿಯನ್ನು ಕಡಿಮೆ ಮಾಡಿ, ಯಾವುದಾದರೂ ಸದ್ವಿಚಾರಕ್ಕೆ ಗಮನಕೊಡಿ. ನಿಮ್ಮವರು ನಿಮ್ಮನ್ನು ಬೇರೆ ಕೆಲಸಗಳಿಗೆ ಕರೆದುಕೊಂಡು ಹೋಗುವರು. ನಿಮ್ಮ ಪಕ್ಷಪಾತವು ಕೆಲವರಿಗೆ ಇಷ್ಟವಾಗದು. ನೀವು ವಹಿಸಿಕೊಂಡ ನಿರ್ಮಾಣ ಕೆಲಸಗಳು ನಿಧಾನವಾಗುವುದು.
ಮಿಥುನ ರಾಶಿ: ವೃತ್ತಿಯಲ್ಲಿ ಸುಲಭದ ಕಾರ್ಯವನ್ನು ನೀವು ಆರಿಸಿಕೊಳ್ಳುವಿರಿ. ಆತ್ಮವಿಶ್ವಾಸದ ಕೊರೆತೆಯು ಕಾಣಿಸುವುದು. ಮಾತನ್ನು ಅಧಿಕವಾಗಿ ಆಡಿ ಇತರರಿಗೆ ಬೇಸರವನ್ನು ತರಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನ ಮುಖ್ಯವಾಗಿರಲಿ. ಸ್ನೇಹಿತರ ಜೊತೆ ಮೋಜಿನಲ್ಲಿ ಕಾಲ ಕಳೆಯುವಿರಿ. ಮನಸ್ಸು ಬಹಳ ಖಿನ್ನತೆಗೆ ಹೋಗಬಹುದು. ಯಾವ ವಿಚಾರವನ್ನೂ ತೀರ್ಮಾನಿಸಲಾಯಿತು ಆಗದು. ವ್ಯಾಪಾರದಲ್ಲಿ ನಿಮ್ಮ ಜಾಣ್ಮೆಯನ್ನು ತೋರಿಸುವಿರಿ. ಮಕ್ಕಳ ಶಿಕ್ಷಣದ ವಿಚಾರದಲ್ಲಿ ನಿಮಗೆ ಸಮಾಧಾನವು ಪೂರ್ಣವಾಗಿ ಇರದು. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು. ತಾಯಿಯ ಆರೋಗ್ಯದ ವ್ಯತ್ಯಾಸದಿಂದ ಚಿಕಿತ್ಸೆ ಕೊಡಿಸಿ. ಸ್ನೇಹಿತರು ನಿಮ್ಮ ಬಳಿ ಧನಸಹಾಯವನ್ನು ಕೇಳಬಹುದು. ಪ್ರಖ್ಯಾತ ವ್ಯಕ್ತಿಗಳ ಭೇಟಿಯಾಗಬಹುದು. ದೊಡ್ಡ ಅಪಾಯದಿಂದ ನೀವು ಸುರಕ್ಷಿತರಾಗಿರುವಿರಿ. ಸಂಗಾತಿಯ ಇಂಗಿತವನ್ನು ತಿಳಿಯಲು ಪ್ರಯತ್ನಿಸಿ.
ಕಟಕ ರಾಶಿ: ಹಠದಿಂದ ಏನನ್ನೂ ಸಾಧಿಸಲಾಗದು ಎಂಬುದು ನಿಮಗೇ ಮನವರಿಕೆಯಾಗಲಿದೆ. ವಾಹನವನ್ನು ಪರೀಕ್ಷಿಸಿ ಖರೀದಿಸಿ. ಶತ್ರುಗಳು ನಿಮ್ಮ ಮೇಲೆ ಆರೋಪಗಳನ್ನು ಮಾಡಬಹುದು. ಎಲ್ಲದರಲ್ಲಿಯೂ ನೀವೇ ಬುದ್ಧಿವಂತರು ಎಂದು ತೋರಿಸಿಕೊಳ್ಳುವುದು ಬೇಡ. ಅಧಿಕಾರದಿಂದ ಕೂಡಿದ ಮಾತು ನಿಮಗೆ ಪ್ರಯೋಜನವಾಗದು. ನೀರಿನ ಉತ್ಪನ್ನಗಳನ್ನು ಮಾಡುವವರಿಗೆ ಲಾಭವು ಸಿಗುವ ಸಾಧ್ಯತೆ ಇದೆ. ನಿಮ್ಮ ಸ್ವಭಾವದಲ್ಲಿ ಆದ ಬದಲಾವಣೆಯುಂದ ಅಚ್ಚರಿಯಾದೀತು. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಮನೆಯ ಕೆಲಸವು ಬಹಳ ಆಯಾಸವನ್ನು ಕೊಡಬಹುದು. ಆಸಮಯದಲ್ಲಿ ನೀವು ಭೋಜನವನ್ನು ಮಾಡಿದರೆ ಆರೋಗ್ಯವನ್ನು ಕೆಡಸಿಕೊಳ್ಳಬೇಕಾದೀತು. ಉದ್ಯಮದ ಹೊಸ ಕೇಂದ್ರವನ್ನು ನಿರ್ಮಿಸುವ ಸಾಧ್ಯತೆ ಇದೆ.
ಸಿಂಹ ರಾಶಿ: ಮಾನಸಿಕ ಸ್ಥೈರ್ಯದಿಂದ ಎಲ್ಲ ಕೆಲಸವನ್ನು ಮಾಡಿಕೊಳ್ಳುವಿರಿ. ಸಂಸ್ಥೆಯ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಂಭವವಿದೆ. ಉದ್ಯಮದಲ್ಲಿ ಎದುರಾಳಿಗಳು ತಯಾರಾಗುವ ಸಾಧ್ಯತೆ ಇದೆ. ಗೊತ್ತಿಲ್ಲದೇ ಕೆಟ್ಟ ಮಾರ್ಗವನ್ನು ನೀವು ಅನುಸರಿಸಬಹುದು. ನಿಮ್ಮ ಪ್ರಾಮಾಣಿಕತೆಗೆ ಬೆಲೆ ಇಲ್ಲವೆನಿಸುವುದು. ಹೂಡಿಕೆಗೆ ನಿಮ್ಮದಾದ ತಂತ್ರವನ್ನು ಬಳಸುವಿರಿ. ಉದ್ಯೋಗದ ಹುಡುಕಾಟಕ್ಕೆ ಓಡಾಡುವುದು ನಿಮಗೆ ಕಷ್ಟವಾದೀತು. ಆರೋಗ್ಯದ ರಕ್ಷಣೆಯಲ್ಲಿ ಹಿನ್ನಡೆಯಾದೀತು. ಅಪರಿಚಿತರ ವಿದ್ಯಾಭ್ಯಾಸಕ್ಕೆ ನಿಮ್ಮಿಂದ ಸಹಾಯವು ಸಿಗಲಿದೆ. ಅಧಿಕಾರಿಗಳು ವೃತ್ತಿಯನ್ನು ಸರಿಯಾಗಿ ನಿರ್ವಹಿಸುವರು. ಒತ್ತಾಯಪೂರ್ವಕವಾಗಿ ಯಾರ ಸ್ನೇಹವನ್ನೂ ಬಯಸದಿರಿ.
ಕನ್ಯಾ ರಾಶಿ: ಅತಿಯಾದ ಆಡಂಬರವು ನಿಮಗೇ ಮುಜುಗರವನ್ನು ತಂದೀತು. ಹಿತಶತ್ರುಗಳ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆ. ಉದ್ಯಮದಲ್ಲಿ ಉಂಟಾದ ಬೆಳವಣಿಗೆಯನ್ನು ಸಕಾರಾತ್ಮಕವಾಗಿ ಆಲೋಚಿಸಿ. ರಾಜಕೀಯ ವ್ಯಕ್ತಿಗಳು ತಮ್ಮ ಲಾಭವನ್ನು ಪಡೆದುಕೊಳ್ಳುವರು. ಸಮ್ಮಾನಗಳನ್ನು ಪಡೆಯುವ ಆಸೆ ಇದ್ದರೂ ಯೋಗವು ಬೇಕಾಗುತ್ತದೆ. ಯಾರನ್ನೋ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಡುವಿರಿ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು. ಯಾರನ್ನೋ ಹೊಗಳಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಗುರುವನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆಯುವಿರಿ. ಆಗದವರು ನಿಮ್ಮ ರಹಸ್ಯ ವಿಚಾರಗಳನ್ನು ತಿಳಿದುಕೊಳ್ಳಲು ಇಚ್ಛಿಸುವರು. ನಿಮ್ಮ ವಿವಾಹದ ಬಗ್ಗೆ ತಂದೆಯವರೇ ನಿಮ್ಮ ಬಳಿ ಮಾತನಾಡಬಹುದು.
ತುಲಾ ರಾಶಿ: ವೃತ್ತಿಯಲ್ಲಿ ಪರಿಣಿತಿಯನ್ನು ಸಾಧಿಸಿಕೊಳ್ಳುವಿರಿ. ಸಹೋದ್ಯೋಗಿಗಳಿಂದ ಒತ್ತಡವು ಬರಬಹುದು. ಮರ ಮುಂತಾದ ಕೆಲಸಗಳಲ್ಲಿ ಆಸಕ್ತಿಯು ಹೆಚ್ಚುವುದು. ಹೊಸ ಕಲಿಕೆಯತ್ತ ನಿಮ್ಮ ಗಮನವಿರುವುದು. ಸಂಗಾತಿಯ ಜೊತೆ ವ್ಯವಹಾರದ ವಿಚಾರಕ್ಕೆ ಕಲಹವಾಗಬಹುದು. ಅಪರೂಪದ ಮಿತ್ರರ ಭೇಟಿಯಿಂದ ಸಂತೋಷವಾಗಲಿದೆ. ದ್ವಿಚಕ್ರದ ವಾಹನವನ್ನು ಚಲಾಯಿಸುವಾಗ ಜಾಗರೂಕತೆ ಇರಲಿ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು. ನಿಮ್ಮ ಗೌರವಕ್ಕೆ ತೊಂದರೆಯಾಗುವುದು. ಯೌವನಾವಸ್ಥೆಯಲ್ಲಿ ಇರುವವರಿಗೆ ಯಾರನ್ನಾದರೂ ಪ್ರೀತಿಸುವ ಇಚ್ಛೆಯು ಬರಬಹುದು. ಸಹೋದರರ ನಡುವೆ ಭಿನ್ನಾಭಿಪ್ರಾಯ ಬರಬಹುದು.
ವೃಶ್ಚಿಕ ರಾಶಿ: ಕಲಾವಿದರು ಸಿಕ್ಕ ಅವಕಾಶವನ್ನು ಬಹಳ ಸಂತೋಷದಿಂದ ಒಪ್ಪಿಕೊಳ್ಳುವಿರಿ. ಹೂಡಿಕೆಯಿಂದ ಲಾಭವು ಸಿಗುವ ನಿರೀಕ್ಷೆಯಲ್ಲಿ ಇರುವಿರಿ. ಅನಿರೀಕ್ಷಿತವಾಗಿ ದೂರಪ್ರಯಾಣ ಮಾಡಬೇಕಾದೀತು. ನಿಮ್ಮ ಕೆಲಸಕ್ಕೆ ವೃತ್ತಿಯಲ್ಲಿ ಉತ್ತಮ ಪ್ರಶಂಸೆಯು ಸಿಗುವುದು. ಇಂದು ನಿಮಗೆ ಉತ್ಸಾಹದ ದಿನವೂ ಆಗಲಿದೆ. ರಾಜಕೀಯವಾದ ಲಾಭದ ಗಳಿಕೆಯು ಇರಲಿದೆ. ಸ್ನೇಹಿತರಿಗಾಗಿ ಮಾಡಿದ ಸಾಲವು ಕೊನೆಗೆ ನಿಮಗೇ ಸುತ್ತಿಕೊಳ್ಳುವುದು. ಸಂಶೋಧನೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಸರ್ಕಾರಿ ಉದ್ಯೋಗಿಗಳ ಸ್ಥಾನವು ಹೆಚ್ಚಾಗಬಹುದು. ಅನಪೇಕ್ಷಿತ ಸ್ಥಳದಲ್ಲಿ ಇರಲು ಇಷ್ಟಪಡುವುದಿಲ್ಲ. ಎಲ್ಲ ತಪ್ಪುಗಳಿಗೂ ಸಂಗಾತಿಯನ್ನು ಬೊಟ್ಟು ಮಾಡಿ ತೋರಿಸುವಿರಿ. ಮಕ್ಕಳ ಹಠದ ಸ್ವಭಾವಕ್ಕೆ ನೀವು ಮಣಿಯುವಿರಿ.
ಧನು ರಾಶಿ: ಶೀಘ್ರಫಲಾಪೇಕ್ಷೆಯಿಂದ ಅನಾಹುತವು ಸಂಭವಿಸೀತು. ಗಾಯಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಆತ್ಮಸಂತೋಷವು ನಿಮ್ಮ ಕಾರ್ಯಕ್ಕೆ ಇನ್ನಷ್ಟು ಉತ್ಸಾಹವನ್ನು ಕೊಡುವುದು. ಸಂಗಾತಿಯ ಆರೋಗ್ಯದ ಸಮಸ್ಯೆಯನ್ನು ನೀವು ಬಗೆಹರಿಸುವುದು ಕಷ್ಟವಾದೀತು. ಶತ್ರುಗಳಿಂದ ನಿಮಗೆ ವಂಚನೆಯಾಗಿದ್ದು ವಿಳಂಬವಾಗಿ ಗೊತ್ತಾಗುವುದು. ಮಿತ್ರರಿಂದ ನಿಮ್ಮ ಇಚ್ಛೆಯು ಪೂರ್ಣವಾಗುವುದು. ಸಿಟ್ಟಿನ ಸ್ವಭಾವದಿಂದ ಮನೆಯಲ್ಲಿ ಅಸಮಾಧಾನ ಇರುವುದು. ಎಲ್ಲ ವಿಚಾರದಲ್ಲಿಯೂ ಒಂದಿಲ್ಲೊಂದು ಕಿರಿಕಿರಿ ಕಾಣಿಸೀತು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು. ನಿಮ್ಮ ಹಳೆಯ ವಸ್ತುಗಳನ್ನು ಮಾರಾಟ ಮಾಡುವಿರಿ. ಬಹಳ ದಿನಗಳ ಅನಂತರ ಬಂಧುಗಳ ಮನೆಗೆ ಹೋಗಲಿದ್ದೀರಿ. ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ.
ಮಕರ ರಾಶಿ: ಮಾಡುವ ಕಾರ್ಯದಲ್ಲಿರುವ ಆರಂಭಶೂರತ್ವವು ಕೊನೆಗೆ ಇರಲಾರದು. ಸಾಹಸಕ್ಕೆ ಹೆಚ್ಚು ಒತ್ತು ಬೇಡ. ಸಿದ್ಧವಸ್ತುಗಳ ಮಾರಾಟದಿಂದ ಲಾಭವನ್ನು ಕಾಣುವಿರಿ. ವಿದ್ಯಾರ್ಥಿಗಳು ಪ್ರೇಮದಲ್ಲಿ ಬೀಳುವ ಸಾಧ್ಯತೆ ಇದೆ. ಮನೆಯವರ ಮಕ್ಕಳ ಮೇಲೆ ಗಮನ ಇರಿಸುವುದು ಮುಖ್ಯ. ಮಾತುಗಾರರಿಗೆ ಅವಕಾಶವು ಸಿಗಲಿದೆ. ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಅದನ್ನು ನಿಮ್ಮ ಹಿಡಿತದಲ್ಲಿ ಇರುವಂತೆ ನೋಡಿಕೊಳ್ಳಿ. ಜನರನ್ನು ನಿರ್ವಹಿಸುವ ಕಾರ್ಯಕ್ಕೆ ನಿಮಗೆ ಪ್ರಶಂಸೆ ಸಿಗಲಿದೆ.
ಆಸ್ತಿಯ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಪಡೆಯಿರಿ. ಇನ್ನೊಬ್ಬರ ಸಂಕಷ್ಟವನ್ನು ನಿವಾರಿಸಲು ಉತ್ಸಾಹದಿಂದ ಇರುವಿರಿ. ಮನೆಯಲ್ಲಿ ಸಂತೋಷದಿಂದ ಕಾಲ ಕಳೆಯುವಿರಿ. ಸಂಗಾತಿಯ ಆರೋಗ್ಯವು ಕೆಡಲಿದ್ದು ಓಡಾಟ ಮಾಡಬೇಕಾದೀತು.
ಕುಂಭ ರಾಶಿ: ಇಂದು ನಿಮ್ಮ ಉದ್ಯಮದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಕಷ್ಟವಾದೀತು. ಉತ್ಪನ್ನಗಾರರಿಗೆ ಸಂತೋಷದ ದಿನವು ಇದಾಗಲಿದೆ. ನೂತನ ಗೃಹನಿರ್ಮಾಣದ ಬಗ್ಗೆ ಮನೆಯವರ ಜೊತೆ ಮಾತನಾಡುವಿರಿ. ಸ್ನೇಹವು ದೂರ ಮಾಡಿಕೊಳ್ಳುವಿರಿ. ಹೊಸ ಕೆಲಸಗಳ ಕಡೆ ಗಮನ ಇರುವುದು. ಅಹಂಕಾರವು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಯಾವ ಕಾರ್ಯವನ್ನೇ ಮಾಡುವುದಾದರೂ ಪ್ರಮಾಣದ ಅಗತ್ಯವಿರಲಿದೆ. ಮನೆಯ ಸದ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ. ಹಿತಶತ್ರುಗಳ ಬಾಧೆಯು ಕಾಣಿಸಿಕೊಳ್ಳುವುದು. ಪತ್ರ ವ್ಯವಹಾರಗಳಿಲ್ಲದೇ ಯಾವದನ್ನೂ ಒಪ್ಪಿಕೊಳ್ಳುವುದು ಬೇಡ.
ಮೀನ ರಾಶಿ: ಆಗಿಹೋದ ಕಾಯಗಳನ್ನು ನೆನೆದುಕೊಂಡು ಸಂತೃಪ್ತಿಪಡುವಿರಿ. ನಿಮಗೆ ನೀಡಿದ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಉದ್ಯೋಗದ ಸ್ಥಳದಲ್ಲಿ ಹೆಚ್ಚು ಲವಲವಿಕೆ ಇರಲಿದೆ. ಸಣ್ಣ ಕಾರ್ಯಕ್ಕೆ ಹೆಚ್ಚು ಶ್ರಮವಹಿಸಬೇಕಾದೀತು. ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ನೌಕರರಿಗೆ ನೀವು ಕೊಡುವ ವ್ಯವಸ್ಥೆಯಿಂದ ಸಂತೋಷವಾಗಲಿದೆ. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುವಿರಿ. ಹಣದ ವಿಚಾರದಲ್ಲಿ ನಿಮಗೆ ಇಂದು ಲೋಭವು ಇರದು. ನೀವು ಇಂದು ಯಾರ ಮಾತನ್ನೂ ನಂಬುವ ಮನಃಸ್ಥಿತಿಯಲ್ಲಿ ಇಲ್ಲ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪ್ರಯತ್ನಿಸುವರು.
-ಲೋಹಿತ ಹೆಬ್ಬಾರ್ – 8762924271 (what’s app only)