Horoscope Today 02 December: ಇಂದು ಈ ರಾಶಿಯವರಿಗೆ ಸಣ್ಣ ಅಂತರದಲ್ಲಿ ದೊಡ್ಡ ಅವಕಾಶ ನಷ್ಟ

ಮಂಗಳವಾರದ ರಾಶಿ ಭವಿಷ್ಯ: ಶಾಲಿವಾಹನ ಶಕವರ್ಷ 1948ರ ಮಾರ್ಗಶೀರ್ಷ ಶುಕ್ಲ ದ್ವಾದಶಿ, ಮಂಗಳವಾರದ ದೈನಂದಿನ ರಾಶಿ ಭವಿಷ್ಯ ಇಲ್ಲಿದೆ. ಮೇಷ, ವೃಷಭ, ಮಿಥುನ ರಾಶಿಗಳ ಇಂದಿನ ಭವಿಷ್ಯವನ್ನು ವಿವರವಾಗಿ ತಿಳಿಯಿರಿ. ಹಣಕಾಸು, ಕುಟುಂಬ, ಆರೋಗ್ಯ, ವೃತ್ತಿ ಮತ್ತು ಪ್ರೀತಿ ಜೀವನದ ಬಗ್ಗೆ ಪ್ರಮುಖ ಮಾಹಿತಿಗಳನ್ನು ಒಳಗೊಂಡಿದೆ. ಇಂದು ನೀವು ಎದುರಿಸಬಹುದಾದ ಸವಾಲುಗಳು ಮತ್ತು ಅದಕ್ಕೆ ಪರಿಹಾರಗಳ ಬಗ್ಗೆ ಜ್ಯೋತಿಷ್ಯ ಸಲಹೆಗಳನ್ನು ಪಡೆಯಿರಿ. ನಿಮ್ಮ ದಿನವನ್ನು ಯೋಜಿಸಲು ಇದು ಸಹಾಯಕವಾಗಿದೆ.

Horoscope Today 02 December: ಇಂದು ಈ ರಾಶಿಯವರಿಗೆ ಸಣ್ಣ ಅಂತರದಲ್ಲಿ ದೊಡ್ಡ ಅವಕಾಶ ನಷ್ಟ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Dec 02, 2025 | 12:00 AM

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ದ್ವಾದಶೀ ತಿಥಿ ಮಂಗಳವಾರ ಇಷ್ಟಾರ್ಥ ಸಿದ್ಧಿ, ಇಬ್ಬಂದಿತನ, ಈರ್ಷೆ, ಆತ್ಮಾವಲೋಕನ, ಇನ್ನೊಬ್ಬರ ಸಂಪತ್ತಿಗೆ ಇಚ್ಛೆ, ನಕಾರಾತ್ಮಕ ಯೋಚನೆ, ದೂರದೃಷ್ಟಿ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಭರಣೀ, ಯೋಗ : ಸಿದ್ಧಿ, ಕರಣ : ಬವ, ಸೂರ್ಯೋದಯ – 06 – 27 am, ಸೂರ್ಯಾಸ್ತ – 05 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:59 – 16:25, ಯಮಗಂಡ ಕಾಲ 09:18 – 10:44, ಗುಳಿಕ ಕಾಲ 12:09 – 13:34

ಮೇಷ ರಾಶಿ :

ಭಾವನೆಗಳು ತೀವ್ರವಾಗಿದ್ದರೂ ಅದೇ ನಿಮ್ಮ ಕಲೆ ಹಾಗೂ ಬುದ್ಧಿಗೆ ಪ್ರೇರಣೆ. ನಿಮ್ಮವರೇ ಆದರೂ ಸಲುಗೆ ಅತಿಯಾದೀತು. ನಿಮ್ಮ ಇಂದಿನ ಕಾರ್ಯವು ಜನರಿಂದ‌ ಮೆಚ್ಚುಗೆ ಪಡೆಯಬಹುದು. ಇಂದು ನಿಮ್ಮ ಜೀವನ ಸಂಗಾತಿಯನ್ನು ಆಶ್ಚರ್ಯಗೊಳಿಸುವಿರಿ. ಸಮಯ ನೋಡಿ ಸರಿಯಾದ ಮಾತನ್ನು ಆಡುವಿರಿ. ನಿಮ್ಮ ಎಲ್ಲ ಕಾರ್ಯವನ್ನು ಬಿಟ್ಟು ಇಂದು ನೀವು ಅವರ ಜೊತೆ ಸಮಯವನ್ನು ಕಳೆಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಆರೋಗ್ಯವು ಉತ್ತಮಗೊಳಗಳುತ್ತ ಸಾಗುವುದು ತೃಪ್ತಿ ಕೊಡುವುದು. ಆಸ್ತಿಯನ್ನು ಮಾರಾಟ‌ಮಾಡುವ ಆಲೋಚನೆ ಇರಲಿದೆ. ನಿಮ್ಮ ಸ್ನೇಹಿತರಲ್ಲಿ ಇಂದು ದೊಡ್ಡ ಸಾಲವನ್ನು ಕೇಳುವಿರಿ. ಸ್ವೋದ್ಯೋಗವನ್ನು ಮಾಡುತ್ತಿದ್ದರೆ ಸ್ವಲ್ಪ ನಷ್ಟವಾಗಬಹುದು. ಕುಟುಂಬವು ನಿಮ್ಮ ಜೊತೆಗೆ ನಿಲ್ಲುವುದು. ಆಪ್ತರ ಸಲಹೆಯನ್ನು ಪಡೆದುಕೊಳ್ಳುವಿರಿ. ನಿಮ್ಮ ಮಾತುಗಳಲ್ಲಿ ಪರಿಷ್ಕಾರವು ಇತರರಿಗೆ ಕಾಣಿಸುವುದು. ಮನೆಯನ್ನು ಸುಂದರವಾಗಿಸಿಕೊಳ್ಳುಬಿರಿ.

ವೃಷಭ ರಾಶಿ :

ನಿರ್ಧಾರಗಳಲ್ಲಿ ಸ್ವಾತಂತ್ರ್ಯ ಹೆಚ್ಚಾಗುತ್ತದೆ. ಅವಕಾಶಗಳು ತಕ್ಷಣ ಹಿಡಿದರೆ ಲಾಭ. ಪರರ ಪಾಲಾಗುವ ಮೊದಲು ಎಚ್ಚೆತ್ತುಕೊಳ್ಳಿ. ಗಂಧದ ಜೊತೆ ಗುದ್ದಾಟ‌ಮಾಡಿದರೆ ಮೈ ಸುಗಂಧವಾಗುವುದು. ಯಾವ ತೊಂದರೆಯನ್ನೂ ಹಂಚಿಕೊಳ್ಳಲಾರಿರಿ. ಕಛೇರಿಯ ಕಡೆಯಿಂದ ಭಡ್ತಿ ಸಿಗುವ ಸಂಭವವಿದೆ. ರಪ್ತು ಉದ್ಯಮದಲ್ಲಿ ನಿಮಗೆ ಲಾಭವಾಗುವುದು. ಮನಸ್ಸು ಬಹಳ ಉತ್ಸಾಹದಿಂದ ಇರಲಿದೆ. ಮನೆಯ ಹಿರಿಯರ ಸೇವೆಯನ್ನು ಮಾಡುವಿರಿ. ಪರೀಕ್ಷೆಯಲ್ಲಿ ನೀವು ಅಂದುಕೊಂಡಷ್ಟು ಫಲಿತಾಂಶ ಸಿಗದು. ಸಂಗಾತಿಯು ನಿಮಗೆ ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ಬೇಸರ ತರಿಸುವರು. ಮೈ ಚಳಿಯನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ. ನಿಮಗಾದ ಸಹಾಯವನ್ನು ನೀವು ಸ್ಮರಿಸಿಕೊಳ್ಳುವಿರಿ. ಅಧಿಕಾರಿಗಳ ಪ್ರಶ್ನೆಗೆ ನಿಮ್ಮ ಉತ್ತರವು ಸರಿಯಾಗಿ ಇರಲಿ. ಸಿಟ್ಟನ್ನು ಬಿಟ್ಟು ಶಾಂತವಾಗಿ ಸಮಾಧಾನ ಚಿತ್ತದಿಂದ ಮಾತನಾಡಿ. ನೆರಹೊರೆಯರ ಸಂಕಷ್ಟಕ್ಕೆ ನೀವು ಇಂದು ನೆರವಾಗುವಿರಿ. ಅತಿಯಾದ ಆತ್ಮವಿಶ್ವಾಸದ ಜೊತೆ ಪೂರ್ವಾಪರಜ್ಞಾನವೂ ಇರಲಿ.

ಮಿಥುನ ರಾಶಿ :

ಹಣಕಾಸಿನ ವಿಚಾರಕ್ಕೆ ಯಾರಾದರೂ ಒಗ್ಗರಣೆ ಹಾಕಬಹುದು. ಮನೆಯ ಹಿರಿಯರಿಂದ ಶುಭಾಶಯ ಸಿಗುತ್ತದೆ. ಕಟ್ಟುನಿಟ್ಟಾಗಿ ನಡೆದ ಸಮಯಪಾಲನೆ ಹಾಗೂ ದೈವಸಹಾಯ ಮೇಳೈಸುವ ಸಮಯ. ನಿಧಾನವಾದರೂ ಇಂದಿನ ಕೆಲಸವನ್ನು ಮಾಡಿ.‌ ಆಪ್ತರಿಂದ ನಿಮಗೆ ಇಷ್ಟವಾದ ವಸ್ತುವು ಪ್ರಾಪ್ತವಾಗುವುದು. ಆಕಸ್ಮಿಕವಾಗಿ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಸಾಲ‌ಪಡೆದವರು ನಿಮ್ಮನ್ನು ಪೀಡಿಸಬಹುದು. ಪಾಲುದಾರಿಕೆಯಲ್ಲಿ ಇಂದು ಸಣ್ಣ ವಿಚಾರಕ್ಕೆ ಕಲಹವಾಗುವುದು. ಇಂದು ಅಗತ್ಯವಿರುವಷ್ಟು ಮಾತ್ರವೇ ಮಾತನಾಡಿ. ನಿಮ್ಮದಲ್ಲದ ವಸ್ತುಗಳನ್ನು ಯಾರಿಗಾದರೂ ಕೊಡುವ ಮೊದಲು ಯೋಚಿಸಿ. ಶ್ರಮಿಸಿದಷ್ಟೇ ಫಲ ಸಿಗುವುದು. ಜವಾಬ್ದಾರಿಗಳು ಹೆಚ್ಚಾದರೂ ಅದೇ ನಿಮ್ಮ ಗೌರವವನ್ನು ಮೇಲೆತ್ತುವುದು. ಹೊಸ ಯೋಜನೆಗಳನ್ನು ಶುರು‌ ಮಾಡಲು ಆಪ್ತರ ಜೊತೆ ಚರ್ಚಿಸಿ. ಹಣಕಾಸಿನ ವ್ಯವಹಾರದಲ್ಲಿ ನೀವು ಸಹೋದರರ ಜೊತೆ ಕುಳಿತು ಮಾತನಾಡಿ. ಕುಟುಂಬದವರ ಎಲ್ಲರ ಭೇಟಿಯಾಗಿ ಅವರ ಜೊತೆ ಸಮಯವನ್ನು ಕಳೆಯುವಿರಿ.

ಕರ್ಕಾಟಕ ರಾಶಿ :

ಗುರಿಯ ಕಡೆ ಸ್ಥಿರತೆಗೆ ದೇವದೃಷ್ಟಿ ಬೆಂಬಲ. ಹೊಸ ಅವಕಾಶಗಳ ತಾಕತ್ತು ಸ್ಪಷ್ಟವಾಗುತ್ತದೆ. ವ್ಯವಹಾರದ ಪ್ರಜ್ಞೆ ಇಲ್ಲದವರ ಜೊತೆ ವ್ಯಾಪಾರ ಕಷ್ಟವಾಗಬಹುದು. ಇನ್ನೊಬ್ಬರನ್ನು ಬೆಳೆಸುವ ಉತ್ಸಾಹ ಯೋಜನೆ ನಿಮ್ಮಲ್ಲಿ ಇರುವುದು. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ಕೆಲವು ಕಾರ್ಯವನ್ನು ನೀವೇ ಹೋಗಿ ವಹಿಸಿಕೊಳ್ಳುವುದು ಸುಖ. ನಿಮಗೆ ಯಾವುದಾದರೂ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಕರೆ ಬರಬಹುದು. ಇಂದು ಸಾಲದಿಂದ ನೀವು ಮುಕ್ತರಾಗಿ ಸ್ವಲ್ಪ ನೆಮ್ಮದಿ ಪಡೆಯುವಿರಿ. ಕೃಷಿಕರು ತಮ್ಮ ಉತ್ಪನ್ನದಿಂದ ಅಲ್ಪ ಲಾಭ ಪಡೆವರು. ವಿನಾಕಾರಣ ಇನ್ನೊಬ್ಬರ ಮೇಲೆ ಸಿಟ್ಟಾಗುವುದು ಬೇಡ. ಇನ್ನೊಬ್ಬರ ಮಾತನ್ನು‌ ಕೇಳುವ ಸಹನೆ ಇರಲಿ. ಹೊರಗಿನ ಸಂಚಾರ ಹೆಚ್ಚಾಗುವ ದಿನ. ಜ್ಞಾನ, ಅಧ್ಯಯನ, ಪರಿಚಯಗಳ ವೃದ್ಧಿ. ನಿಮ್ಮ ಪ್ರೇಮ ಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು. ದೂರ ಪ್ರಯಾಣವನ್ನು ಇಂದು ಮಾಡಬೇಡಿ. ಧಾರ್ಮಿಕ ಕ್ಷೇತ್ರಗಳ ದರ್ಶನವನ್ನು ಪಡೆಯುವಿರಿ. ಹಂಗಿನಿಂದ ಹೊರಬರಲು ನಿಮಗೆ ದಾರಿ ಸಿಗದು.

ಸಿಂಹ ರಾಶಿ :

ಒಬ್ಬರ ಮಾತು ನಿಮ್ಮ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸಬಹುದು. ಅಂತರ್ದೃಷ್ಟಿಯು ತೀವ್ರವಾಗಿರಲಿ. ಅಧಿಕಾರಿ ವರ್ಗದಿಂದ ಒತ್ತಡ ಹೆಚ್ಚಾಗುವುದು. ಪ್ರಯಾಣದಲ್ಲಿ ನಿಮಗೆ ಏನಾದರೂ ತೊಂದರೆ ಕಾಣಿಸೀತು. ನಿಮ್ಮ ಬಲವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ವಾಹನದ ಕಾರಣಕ್ಕೆ ಮನೆಯಲ್ಲಿ ಕಲಹವಾಗಬಹುದು. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು. ಯಾರನ್ನೋ ಸಂಶಯಿಸುತ್ತ ಕುಳಿತುಕೊಳ್ಳುವಿರಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿ ಮಾತ್ರ ಹೇಳಿ.‌ ಇಂದಿನ ನಿಮ್ಮ ವ್ಯವಹಾರವು ಅಧಿಕವಾದ ಯಾವ ಲಾಭವನ್ನೂ ತಂದುಕೊಡದು. ಶಿಸ್ತನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಎದುರಾದೀತು. ರಹಸ್ಯವಾಗಿ ಮಾಡುತ್ತಿದ್ದ ಕೆಲಸಗಳು ಫಲ ತೋರಿಸುತ್ತವೆ. ಆಕಸ್ಮಿಕ ಶುಭಲಾಭ ಸಾಧ್ಯ. ಧಾರ್ಮಿಕ ವಿಚಾರದಲ್ಲಿ ನೀವು ನಂಬಿಕೆಯನ್ನು ಕಳೆದುಕೊಳ್ಳುವಿರಿ. ನೀವು ಹೋಗುವ ಪ್ರಯಾಣವು ಸ್ಥಗಿತಗೊಂಡಿದ್ದು ನಿಮಗೆ ಒಳ್ಳೆಯದೇ.‌

ಕನ್ಯಾ ರಾಶಿ :

ಕಲಾತ್ಮಕ ಆಲೋಚನೆ ಉತ್ತಮ ಫಲ ಕೊಡಬಹುದು. ಅದನ್ನು ಪ್ರಯೋಗದಿಂದ ಯಶಸ್ಸು ಕಾಣುವುದು. ಮನಸ್ಸಿಗೆ ಶಾಂತಿ ಬರಿಸುವ ಘಟನೆ ಸಂಭವ. ಬಹಳ ದಿನಗಳ ಅನಂತರ ಬಂಧುಗಳ ಭೇಟಿಯಾಗಲಿದೆ. ನಿಮ್ಮ ವಿರಾಮ ಸಮಯವನ್ನು ಯಾರಾದರೂ ಕಸಿದುಕೊಳ್ಳಬಹುದು. ನಿಮಗೆ ಸಂಬಂಧವಿಲ್ಲದ ವಿಚಾರದಲ್ಲಿ‌ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ. ಯಾರದೋ ಮಾತನ್ನು ಕೇಳಿ ಇಂದು ಕುಟುಂಬದವರ ಜೊತೆ ಕಲಹವಾಡುವಿರಿ. ನಿಮ್ಮ ತಿಳಿವಳಿಕೆಯನ್ನೇ ಪೂರ್ಣ ಸತ್ಯ ಎಂದು ತಿಳಿಯುವುದು ಬೇಡ. ಇಂದು ನಿಮಗೆ ಕಛೇರಿಯ ಕಾರ್ಯಗಳು ಅತಿಯಾಗುವುದು. ಸಂಗಾತಿಗೆ ನಿಮ್ಮ ನಡವಳಿಕೆಯಲ್ಲಿ ವ್ಯತ್ಯಾಸವು ಕಾಣಿಸುವುದು. ಹಣಕಾಸಿನಲ್ಲಿ ಅಸ್ಥಿರತೆ. ಹೊಸ ಸಂಪರ್ಕಗಳಿಂದ ಲಾಭದ ಬಾಗಿಲು ತೆರೆದುಕೊಳ್ಳುತ್ತದೆ. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ದಾರಿ ಹುಡುಕಿ. ನಿಮ್ಮ ಪ್ರತಿಭೆಯಿಂದ ಉನ್ನತ ಹುದ್ದೆಗೆ ಏರುವಿರಿ.‌

ತುಲಾ ರಾಶಿ :

ಚಿಂತನೆಯ ಸ್ಪಷ್ಟತೆ ಹೆಚ್ಚಾಗಿ, ಗೊಂದಲಗಳು ಪರಿಹಾರವಾಗುತ್ತವೆ. ಕೆಲಸದಲ್ಲಿ ನಿಖರತೆ ಮೆಚ್ಚುಗೆ ತರಲಿದೆ. ಭಿನ್ನ ಮನಸ್ಸುಗಳ ಜೊತೆ ನಿಮಗೆ ಹೊಂದಾಣಿಕೆ ಅಸಾಧ್ಯನಿಮ್ಮ ಮೇಲೆ ಇತರರ ದೃಷ್ಟಿ ಬೀಳುವ ಸಾಧ್ಯತೆ ಇರದು. ಜಾಣ್ಮೆಯು ಇಂದು ನಿಮ್ಮ ಉಪಯೋಗಕ್ಕೆ ಬರುವುದು. ಸ್ತ್ರೀಯರು ಅವರಿಗೆ ಬೇಕಾದ ಕಾರ್ಯವನ್ನು ಬಹಳ ನಾಜೂಕಿನಿಂದ ಮಾಡಿಸಿಕೊಳ್ಳುವರು. ಸಾರ್ವಜನಿಕ ಕ್ಷೇತ್ರದಲ್ಲಿ ಇಂದು ಹೆಚ್ಚು ಕಾಣಿಸಿಕೊಳ್ಳುವಿರಿ. ಅತಿಯಾದ ಪ್ರೀತಿಯಿಂದ ನಿಮಗೇ ತೊಂದರೆಯಾಗುವುದು. ಹಣದ ಸಂಪಾದನೆಗೆ ವಿವಿಧ ಮಾರ್ಗಗಳು ಇದ್ದರೂ ಅದಾವುದೂ ನಿಮಗೆ ಸರಿ ಕಾಣಿಸದು. ಆರೋಗ್ಯದಲ್ಲಿ ಲಘುವಾದ ಸುಧಾರಣೆ ಕಾಣಿಸುವುದು. ಒಂದು ಹಳೆಯ ಯೋಜನೆ ಪುನಃ ಚೇತರಿಸಿಕೊಳ್ಳುವ ಲಕ್ಷಣ. ಇಡೀ ದಿನದ ನಿಮ್ಮ ಶ್ರಮವು ವ್ಯರ್ಥವಾಗಬಹುದು. ಸ್ನೇಹ ಬಳಗವನ್ನು ದೊಡ್ಡದಾಗಿಸಿಕೊಳ್ಳುವಿರಿ. ನಿರ್ಮಾಣದ ಕಾರ್ಯವು ಬಹಳ ನಿಧಾನವಾಗುವುದು. ಯಾರೋ ಮಾಡಿದ ತಪ್ಪಿಗೆ ನಿಮ್ಮ ಕುತ್ತಿಗೆಗೆ ಬರುವುದು. ಅನಿರೀಕ್ಷಿತ ಗೆಲುವು ನಿಮಗೆ ಖುಷಿಕೊಡುವುದು. ಅಧಿಕಾರಿಗಳು ನಿಮ್ಮ ಬಗ್ಗೆ ತಪ್ಪಾದ ಭಾವನೆಗಳನ್ನು ಇಟ್ಟುಕೊಳ್ಳುವರು.

ವೃಶ್ಚಿಕ ರಾಶಿ :

ನಿಮ್ಮ ಪ್ರಭಾವ ಹೆಚ್ಚಾಗಿ, ಜನರಿಂದ ಮರ್ಯಾದೆ ದೊರೆಯುವ ದಿನ. ನೇತೃತ್ವ ಪಡೆಯಬೇಕಾದ ಕೆಲಸಗಳು ನಿಮಗೆ ಬರುತ್ತವೆ. ವಿದೇಶದ ವ್ಯವಹಾರದಲ್ಲಿ ನಿಮಗೆ ವ್ಯಾಪಕತೆ ಸಿಗಲಿದೆ. ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ. ಖರ್ಚಿನ ಮೇಲೆ‌‌ ನಿಯಂತ್ರಣ ಸಾಧಿಸಬೇಕೆಂದಿದ್ದರೂ ಮತ್ತೆಲ್ಲೋ ಹರಿದು ಹೋಗುವುದು. ವೈವಾಹಿಕ ಜೀವನದ ಸುಖವು ಸಪ್ಪೆ ಎನಿಸಬಹುದು. ಭೂಮಿಯ ವ್ಯವಹಾರಕ್ಕೆ ಯಾರ ಜೊತೆಗಾದರೂ ಸೇರಿಕೊಳ್ಳುವಿರಿ. ಮಕ್ಕಳನ್ನು ಪಡೆಯುವ ಬಯಕೆ ಇರುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಣವನ್ನು ಹೂಡಿಕೆ ಮಾಡಿ. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡುವಿರಿ. ಶುಭಕಾರ್ಯ ಆರಂಭಕ್ಕೆ ಸೂಕ್ತ ಸಮಯ. ಮನಸ್ಸಿಗೆ ಅನ್ಯರಿಂದ ಬಲ ಮತ್ತು ಉತ್ಸಾಹ. ನಿಮ್ಮನ್ನು ಗುರುತಿಸಬೇಕು ಎನ್ನುವ ಆಸೆ ಇರುವುದು. ಅನುಪಯುಕ್ತ ಆಹಾರವನ್ನು ಸೇವಿಸುವುದು ಬೇಡ. ನಿಮ್ಮ ಬಗ್ಗೆ ಅನುಕಂಪ ಬರುವುದು.

ಧನು ರಾಶಿ :

ಮನಸ್ಸಿನಲ್ಲಿ ಸ್ವಲ್ಪ ಭಾವನಾತ್ಮಕತೆ ಹೆಚ್ಚಾದರೂ ಅದನ್ನು ಹಿಮ್ಮೆಟ್ಟಿಸಿ ವ್ಯವಹಾರಕ್ಕೆ ಒತ್ತು ಕೊಡಬೇಕು.. ಚರಾಸ್ತಿಯ ವಿಷಯಗಳಲ್ಲಿ ಶುಭ. ಮಕ್ಕಳು ಧೃತಿಗೆಡದಂತೆ ಅವರಿಗೆ ಧೈರ್ಯವನ್ನು ತುಂಬುವ ಅನಿವಾರ್ಯತೆ ಇದೆ. ಪ್ರಭಾವೀ ವ್ಯಕ್ತಿಗಳಿಂದ ಇಂದಿನ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸ ಸಿಗುವ ಸಾಧ್ಯತೆ ಇದೆ. ನಂಬಿಕೆಯನ್ನು ಕಳೆದುಕೊಳ್ಳಬಹುದು. ನಿಮಗೆ ಸಂಬಂಧಿಸದ ವಿಚಾರದಲ್ಲಿ ಹೆಚ್ಚು ಮಾತನಾಡುವಿರಿ. ಭೂವಿವಾದವಾಗುವ ಸಾಧ್ಯತೆ ಇದೆ. ಸಿಕ್ಕಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಚಿಂತಿಸುವುದು ಉತ್ತಮ. ಕುಟುಂಬ ಸದಸ್ಯರಿಂದ ಮಾನಸಿಕ ಬೆಂಬಲ ಸಿಗುತ್ತದೆ. ಸ್ತ್ರೀಯರು ಹೆಚ್ಚಿನ ಸಮಯವನ್ನು ಸೌಂದರ್ಯ ವರ್ಧನೆಗೆ ಮೀಸಲಿಡುವಿರಿ. ಹೆಚ್ಚು ಆಡಂಬರವನ್ನು ನೀವು ಇಷ್ಟಪಡುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಅಧಿಕವಾಗಿ ಖರೀದಿಸುವಿರಿ. ಸ್ವೇಚ್ಛೆಯಿಂದ ಇಂದಿನ ವ್ಯವಹಾರವು ಇರುವುದು.

ಮಕರ ರಾಶಿ :

ನಿಮ್ಮ ಮಾತಿನಲ್ಲಿ ಮೌಲ್ಯ ದೊಡ್ಡದಾಗಿರುತ್ತದೆ. ನಿಷ್ಪಕ್ಷಪಾತವಾದ ಮಾತಿನಿಂದ ಕೆಲಸ ಆಗುವ ದಿನ. ದೈವಾನುಗ್ರಹವಿದ್ದರೆ ಏನನ್ನೂ ಸಾಧಿಸಬಹುದು ಎಂಬ ಆತ್ಮವಿಶ್ವಾಸವು ಇರುವುದು. ಇಂದು ನಿಮ್ಮ ಮನಸ್ಸು ಭಯದಿಂದ ಹಿಂದೇಟು ಹಾಕಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೋಪವು ಹೆಚ್ಚಾಗಿರುವುದು. ದೇಹಾರೋಗ್ಯವು ಸರಿಯಾಗಿ ಇಲ್ಲದ ಕಾರಣ ಮನಸ್ಸು ಸರಿಯಾಗಿ ಕೆಲಸ ಮಾಡದು. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಕಾಡುವುದು. ಉದ್ಯೋಗವು ಸಾಕು ಎನಿಸಬಹುದು.‌ ಅತಿಯಾದ ಒತ್ತಡದಿಂದ ಹೊರಬರಲು ಸಹೋದ್ಯೋಗಿಗಳ ಸಹಾಯವನ್ನು ಪಡೆಯುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಓದು ಹೆಚ್ಚು ಫಲಿಸುವುದು. ಮನಸ್ಸಿನಲ್ಲಿ ಹುಟ್ಟುವ ಕಲ್ಪನೆಗಳನ್ನು ಕ್ರಿಯಾತ್ಮಕವಾಗಿಸಿದರೆ ಉತ್ತಮ ಫಲ. ಸಣ್ಣ ವಿಚಾರದಿಂದಲೂ ದೊಡ್ಡ ಬದಲಾವಣೆ ಸಾಧ್ಯ. ಸಂಗಾತಿಯನ್ನು ನೀವು ಇಂದು ದೂರ ಮಾಡಿಕೊಳ್ಳುವಿರಿ. ಒಂಟಿಯಾಗಿ ಇರಲು‌ ನಿಮಗೆ ಆಗದು.

ಕುಂಭ ರಾಶಿ :

ಶಾಂತವಾಗಿರುವ ಮನೋಭಾವ ದಿನವಿಡೀ ನಿಮ್ಮನ್ನು ಕಾಪಾಡುತ್ತದೆ. ಹಣಕಾಸು ವಿಷಯಗಳಲ್ಲಿ ವಹಿಸಿದ ಜಾಗ್ರತೆ ಫಲಕಾರಿಯಾಗಲಿದೆ. ನಿಮ್ಮ ಉನ್ನತ ಅಭ್ಯಾಸಕ್ಕೆ ಎಲ್ಲಿಂದಲಾದರೂ ಆರ್ಥಿಕ ಸಹಾಯವು ಬರಬಹುದು. ಇಂದಿನ‌ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ‌ ಉತ್ಸಾಹವನ್ನು ಜಾಗರೂಕಗೊಳಿಸುವುದು. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ‌ ಸಮಯವನ್ನು ವ್ಯರ್ಥ ಮಾಡುವಿರಿ. ಮಾತಿನಲ್ಲಿ ಮಾರ್ದವವು ಇಲ್ಲವಾಗುವುದು. ಅತಿಯಾದ ಭಾರದ ವಸ್ತುಗಳನ್ನು ಒಯ್ಯುವಿರಿ. ನಿಮ್ಮ ಚೌಕಟ್ಟನ್ನು ಮೀರಿ ವರ್ತಿಸುವುದು ಬೇಡ. ಮನೆತನದಲ್ಲಿ ಬರುವ ಸಣ್ಣ ವಿಷಯಗಳು ಸಮಾಧಾನದಿಂದ ಪರಿಹಾರಗೊಳ್ಳುತ್ತವೆ. ಹಳೆಯ ಪರಿಚಯದಿಂದ ಶುಭಸುದ್ದಿ ಬಂದರೂ ಆಶ್ಚರ್ಯವಿಲ್ಲ. ಇಂದು ಕೆಲವು ವಿಚಾರಕ್ಕೆ ನಿಮ್ಮ ಆಲಸ್ಯವು ವರವಾಗುವುದು. ಉದ್ಯೋಗದ ಸ್ಥಳದಲ್ಲಿ ಯಾರ ಜೊತೆಯೂ ಕಲಹ ಮಾಡಿಕೊಳ್ಳುವುದು ಬೇಡ. ನಿಮ್ಮ ಪರಿಸ್ಥಿತಿಯನ್ನು ಆಪ್ತರಿಗೆ ಹೇಳಿ ಸಮಾಧಾನ ಪಡುವಿರಿ. ಯಾವ ಕಾರ್ಯಕ್ಕೂ ಧೈರ್ಯದಿಂದ ಮುನ್ನುಗ್ಗುವುದು ಬೇಡ. ಹಿರಿಯರ‌ ಮಾತನನ್ನು ಅನಿಸರಿಸಲು ನೀವು ಹಿಂದೇಟು ಹಾಕಬಹುದು.

ಮೀನ ರಾಶಿ :

ಧೈರ್ಯವು ಹೆಚ್ಚಾಗಿದ್ದರೆ ಕಾರ್ಯಸಿದ್ಧಿಗೆ ದಾರಿಯಾಗುತ್ತದೆ. ಮನಸ್ಸಿನಲ್ಲಿ ಹೊಮ್ಮುವ ಹಠವು ಒಳ್ಳೆಯ ದಿಕ್ಕಿನಲ್ಲಿ ಬಳಿಸಿದ್ದರೆ ಲಾಭ. ನಿಮ್ಮ ನಿಮ್ಮಲ್ಲಿ ವಿನೀತ ಸ್ವಭಾವವಿದ್ದರೆ ಏನನ್ನೂ ಪಡೆಯಲು ಸಾಧ್ಯ. ನಿಮ್ಮನ್ನು ಭೇಟಿಯಾಗಲು ಬಂದವರನ್ನು ಸ್ತ್ರೀಯರು ನಿಮ್ಮ ಮೇಲೆ ಏನಾದರೂ ಆರೋಪ ಮಾಡಿಯಾರು. ಪಕ್ಷಪಾತ ಮಾಡುವುದು ಬೇಡ. ಸಂಬಂಧಿಸಿದ ವಿಚಾರಕ್ಕೆ ನಿಮ್ಮ ಸಮರ್ಥನೆ ಇರಲಿ. ಯಾರ ಮೇಲೂ ನಿಮ್ಮದೇ ಆದ ನಿಲವು ಬೇಡ. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ.‌ ನಿಮ್ಮ ಮನಸ್ಸು ಬಹಳ ದುರ್ಬಲವಾಗಿದ್ದು ಬಲಮಾಡಿಕೊಳ್ಳು ಮಾರ್ಗವನ್ನು ಕಂಡುಕೊಳ್ಳಿ. ವ್ಯಾಪಾರದಲ್ಲಿ ಲಾಭವನ್ನೇ ಗಮನದಲ್ಲಿಟ್ಟು ಉಳಿದುದನ್ನು ಮರೆಯುವಿರಿ. ಆಪ್ತರನ್ನು ಬಿಟ್ಟುಕೊಡಲು ಮನಸ್ಸು ಒಪ್ಪದು. ಹಿರಿಯರ ಮಾತು ಕೇಳುವುದರಿಂದ ಬಂದ ಅಡಚಣೆ ದೂರಾಗುತ್ತದೆ. ಹೊಸ ಮಾರ್ಗದರ್ಶನ ದೊರೆಯುವ ಸಾಧ್ಯತೆ. ಆಕಸ್ಮಿಕ ಅದೃಷ್ಟವೂ ಬೆಂಬಲ ನೀಡುತ್ತದೆ. ತಾಯಿಯು ನಿಮ್ಮ ಪರವಾಗಿ ನಿಲ್ಲುವಳು. ವಾಹನ ಖರೀದಿಸುವ ಯೋಚನೆ ಮಾಡವಿರಿ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)