Horoscope Today 20 July: ಇಂದು ಈ ರಾಶಿಯವರು ಮುಕ್ತ ಸ್ವಭಾವದಿಂದ ಮನಸ್ಸು ಗೆಲ್ಲುವರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಕೃಷ್ಣ ಪಕ್ಷದ ದಶಮೀ ತಿಥಿ ಭಾನುವಾರ ಆಭರಣ ಖರೀದಿ, ಮಂಗಲ ಕಾರ್ಯದಲ್ಲಿ ಭಾಗಿ, ತಂದೆಗೆ ಸಹಕಾರ, ರೋಗದ ತೀವ್ರ ಪರಿಣಾಮ ಇವೆಲ್ಲ ಇಂದಿನ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 20 July: ಇಂದು ಈ ರಾಶಿಯವರು ಮುಕ್ತ ಸ್ವಭಾವದಿಂದ ಮನಸ್ಸು ಗೆಲ್ಲುವರು
ದಿನ ಭವಿಷ್ಯ
Edited By:

Updated on: Jul 20, 2025 | 1:23 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ಗ್ರೀಷ್ಮ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಪುನರ್ವಸು, ವಾರ: ಭಾನು, ತಿಥಿ : ದಶಮೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಶೂಲಿ ಕರಣ: ಗರಜ, ಸೂರ್ಯೋದಯ – 06 : 14 am, ಸೂರ್ಯಾಸ್ತ – 07 : 03 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 17:28 – 19:04 ಗುಳಿಕ ಕಾಲ 12:39 – 14:15, ಯಮಗಂಡ ಕಾಲ 15:52 – 17:28

ಮೇಷ ರಾಶಿ: ಕಬ್ಬಿಣದ ಕೆಲಸದವರಿಗೆ ಒತ್ತಾಯ ಹೆಚ್ಚಾಗುವುದು. ಪಾಲುದಾರಿಕೆಯಲ್ಲಿ ಹೊಸ ಉದ್ಯಮವನ್ನು ಆರಂಭಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಕಂಡು ಖುಷಿಯಾಗುವುದು. ಸ್ತ್ರೀಯರಿಂದ ಧನಸಹಾಯವು ಆಗಲಿದೆ. ಇಂದು ನಿಮಗೆ ಸಾಕಷ್ಟು ಸಮಯವಿರಲಿದ್ದು ಸದುಪಯೋಗ ಮಾಡಿಕೊಳ್ಳಬೇಕಿದೆ. ದೇಹವಿಂದು ನಿಮ್ಮ ನಿಯಂತ್ರಣದಲ್ಲಿ ಇರದು. ಸಂಗಾತಿಯ ನಡೆವಳಿಕೆಯನ್ನು ಪ್ರಶಂಸಿಸುವರು. ನಿಮ್ಮವರು ನಿಮಗೆ ಕೆಲವು ಕಿವಿಮಾತನ್ನು ಹೇಳಬಹುದು. ವ್ಯಾಪಾರದಲ್ಲಿ ಸ್ವಲ್ಪ ನಷ್ಟವಾಗಲಿದೆ. ನಿಮ್ಮ ಮಕ್ಕಳ ಬಗ್ಗೆ ಅತಿಯಾದ ಚಿಂತೆನೆ ಬೇಡ. ಆಭರಣ ಖರೀದಿಗೆ ಹಣವನ್ನು ಖರ್ಚು ಮಾಡುವಿರಿ. ಇಂದಿನ ಅನುಭವವನ್ನು ಹೇಳಿಕೊಳ್ಳುವ ತವಕವಿರಲಿದೆ. ದ್ವೇಷವನ್ನು ಬೆಳೆಸಿಕೊಳ್ಳುವುದು ಯೋಗ್ಯವೆನಿಸದು. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇ ಇರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವಿರಿ.

ವೃಷಭ ರಾಶಿ: ನಂಬಿದವರಿಗೆ ಸರಿಯಾದ ದಾರಿ ತೋರಿಸುಬಿರಿ. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ. ನಿಮ್ಮ ಗುರಿಯನ್ನು ಬಹಳ ಪ್ರಯತ್ನದಿಂದ ಇಂದು ಮುಟ್ಟುವಿರಿ. ರಾಜಕೀಯವಾಗಿ ಪ್ರಭಾವವಿರುವ ವ್ಯಕ್ತಿಗಳ ಸಂಪರ್ಕವು ಇಂದು ಆಗಲಿದೆ. ವೈವಾಹಿಕ ಜೀವನದಲ್ಲಿ ಮನಸ್ತಾಪ ಇರಲಿದೆ. ತಿಳಿವಳಿಕೆಯ ಕೊರತೆಯಿಂದ ವ್ಯವಹಾರದಲ್ಲಿ ನಷ್ಟವಾದೀತು. ಧಾರ್ಮಿಕವಾಗಿ ಶ್ರದ್ಧೆ, ಭಕ್ತಿಗಳು ಕಡಿಮೆ ಆದೀತು. ಅನುಭವಿಗಳ ಮುಂದೆ ಶರಣಾಗದೇ ಗತಿ ಇರದು. ಈ ದಿನ ನೀವು ಸಕಾರಾತ್ಮಕವಾಗಿ ಚಿಂತನೆಯನ್ನು ಮಾಡುವಿರಿ. ನಿಮ್ಮ ಬಂಧುಗಳು ನಿಮ್ಮ ಯೋಜನೆಗಳನ್ನು ಇಷ್ಟ ಪಡುವರು. ದೂರ ಪ್ರಯಾಣದ ಉತ್ಸಾಹ ಇರಲಿದೆ. ಪ್ರೇಮಪಾಶವು ನಿಮಗೆ ಹಿತಕರವಾದ ಅನುಭವವನ್ನು ನೀಡೀತು. ಅವಶ್ಯಕ ವಸ್ತುಗಳು ಕಣ್ಮರೆಯಾದಾವು. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ದುಃಖವನ್ನು ಹಂಚಿಕೊಳ್ಳಲು ವ್ಯಕ್ತಿಯನ್ನು ಹುಡುಕುವಿರಿ.

ಮಿಥುನ ರಾಶಿ: ಹಲವು ಆಯಾಮಗಳಿಂದ ಧನ ಸಂಗ್ರಹದ ಸಾಧ್ಯತೆ. ನೀವು ಇಂದು ಅಸಾಧ್ಯವೆಂದು ಬಿಟ್ಟ ಕಾರ್ಯಗಳನ್ನು ಪುನಃ ಕೈಗೆತ್ತಿಕೊಳ್ಳುವಿರಿ. ಇದಕ್ಕೆ ಧನ ಸಹಾಯ ಹಾಗೂ ಜನ ಸಹಾಯವೂ ಸಿಗಲಿದೆ. ಧಾರ್ಮಿಕ ಮತ್ತು ನಿಮ್ಮ ಮಕ್ಕಳು ನಿಮ್ಮನ್ನು ಸಂತೋಷವಾಗಿ ಇಡುವರು. ದೇಹವನ್ನು ಬಲ ಮಾಡಿಕೊಳ್ಳಲು ಕಸರತ್ತು ಮಾಡುವಿರಿ. ಅನಿವಾರ್ಯವಾಗಿ ಖರ್ಚು ಮಾಡಬೇಕಾದ ಸಂದರ್ಭ ಬಂದಾಗ ಸ್ನೇಹಿತರ ಸಹಾಯವನ್ನು ಕೇಳುವಿರಿ. ಮಂಗಲ ಕಾರ್ಯವನ್ನು ಸರಿಯಾದ ಸಮಯಕ್ಕೆ ಮಾಡಲಾಗದು. ಇಬ್ಬರ ಮನಸ್ಸೂ ಹಗುರಾಗಲು ಇಷ್ಟವಾದುದನ್ನು ಮಾಡುವುದು ಒಳ್ಳೆಯದು. ನಿಮ್ಮ ಚಾರಿತ್ರ್ಯದ ಬಗ್ಗೆ ಪ್ರಶ್ನೆ ಮಾಡಬಹುದು. ಒಮ್ಮೆ ಹೇಳಿದ ಮಾತ್ರಕ್ಕೆ ನಿಮ್ಮ ಕೆಲಸವಾಗುವುದು. ನಿಮ್ಮದೇ ಕೆಲಸದದಲ್ಲಿ ನೀವು ಬಹಳ ಚುರುಕಿನಿಂದ ವ್ಯವಹಾರವನ್ನು ಮಾಡುವಿರಿ. ಬದಲಾವಣೆಗಳನ್ನು ಕಾತರದಿಂದ ಕಾಯುವಿರಿ. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ಆಸ್ತಿಯ ವಿಚಾರಕ್ಕೆ ದಾಯಾದಿ ಕಲಹವಾಗಬಹುದು.

ಕರ್ಕಾಟಕ ರಾಶಿ: ತಾತ್ಕಾಲಿಕ ಸ್ಥಾನದಿಂದ ಕೆಳಗಿಳಿಯುವಿರಿ. ಇಂದು ನಿಮ್ಮ ಕಷ್ಟಕರ ಸಂದರ್ಭದಲ್ಲಿಯೂ ಧೈರ್ಯವನ್ನು ಬಿಡದೇ ಎದುರಿಸಬೇಕು. ಇಂದು ನೀವು ದೈವಕ್ಕಿಂತ ಪುರುಷಪ್ರಯತ್ನವೇ ಹೆಚ್ಚು ಪ್ರಭಾವೀ ಎಂದು ಅನ್ನಿಸಬಹುದು. ದೂರಪ್ರಯಾಣದಲ್ಲಿ ಸ್ನೇಹಿತರ ಮನೆಯಲ್ಲಿ ವಾಸ ಮಾಡಬೇಕಾಗಬಹುದು. ಒಳ್ಳೆಯ ರೂಢಿಯನ್ನು ತಪ್ಪಿಸಿಕೊಳ್ಳುವುದು ಬೇಡ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಹಿರಿಯರ ಮಾತಿನಿಂದ ನಿಮ್ಮ ಸಂವೇದನಾ ಕೇಂದ್ರವು ತೆರೆದುಕೊಳ್ಳಬಹುದು. ಆಲಸ್ಯದಿಂದ ಮನೆಯಲ್ಲಿ ಬೈಗುಳವನ್ನು ಕೇಳಬೇಕಾಗುವುದು. ಸಹೋದರರ ನಡುವೆ ಸಂಘರ್ಷವಾಗುವ ಸಾಧ್ಯತೆ ಇದೆ. ದಾಂಪತ್ಯದ ಕಲಹವು ಮನೆಯಲ್ಲಿ ಆತಂಕವನ್ನು ಉಂಟುಮಾಡೀತು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹುಟ್ಟಿಕೊಂಡೀತು. ನಂಬಿಕೆ ದ್ರೋಹವು ನಿಮಗೆ ಕಷ್ಟವಾದೀತು. ನಿಮ್ಮ ಕೋಪಕ್ಕೆ ಒಂದು ಮಿತಿ‌ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಮಕ್ಕಳ‌ ಮೇಲಿನ ಮೋಹವನ್ನು ಕಡಿಮೆ‌ ಮಾಡಿಕೊಳ್ಳಬೇಕಾಗುವುದು.

ಸಿಂಹ ರಾಶಿ: ಸುಳ್ಳಿನ ಮೂಲಕ ಇಂದಿನ ಕೆಲಸ ಆಗುವುದು. ಇಂದು ನಿಮ್ಮ ನಿಮಗೆ ಹಣವನ್ನು ಉಳಿಸುಕೊಳ್ಳಬೇಕು ಎಂಬ ಇಚ್ಛೆ ಇದ್ದರೂ ಬಂದ ಹಣವು ನಿಲ್ಲದೆ ಖಾಲಿಯಾಬಹುದು. ಕಛೇರಿಯಲ್ಲಿ ನಿಮ್ಮನ್ನು ಸೂಕ್ತ ವ್ಯಕ್ತಿ ಎಂದು ಆಯ್ಕೆ ಮಾಡಿದ್ದರೂ ನಿಮಗೆ ಹಿಂಜರಿಕೆ ಉಂಟಾಗಲಿದೆ. ಒಣ ಭೂಮಿಯ ಮಾರಾಟದಿಂದ ಲಾಭವಿರಲಿದೆ. ವೃತ್ತಿಯ ಸಾಧನೆಯನ್ನು ಮನೆಯಲ್ಲಿ ಹೇಳಿಕೊಳ್ಳುವಿರಿ. ಇಂದು ನಿಮ್ಮ ತಾಯಿ ನಿಮಗೆ ಮಾನಸಿಕ ಬಲವನ್ನು ತುಂಬುವಳು. ಸುಳ್ಳು ವ್ಯವಹಾರಗಳು ಹೆಚ್ಚು ಕಾಲ ನಡೆಯದು. ಶತ್ರುಗಳ ಬಗ್ಗೆ ಮಾತನಾಡಿ ಸುಮ್ಮನೇ ಕಾಲಹರಣ ಮಾಡಬೇಡಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಅಪರೂಪದ ವ್ಯಕ್ತಿಗಳ ಜೊತೆ ಇಂದು ಸಮಯವನ್ನು ಕಳೆಯುವಿರಿ. ಮನೆಯೇ ನಿಮಗೆ ಸಮಾಧಾನದ ಸ್ಥಳವಾಗಬಹುದು. ನಿಮ್ಮ ಸಮಯ ಬಂದಾಗ ಅದನ್ನು ಚರ್ಚಿಸಲು ಅವಕಾಶ ಬರುವುದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಪಕ್ಷಪಾತ ಧೋರಣೆಯಿಂದ ನಿಮಗೇ ನಷ್ಟ.

ಕನ್ಯಾ ರಾಶಿ: ಬಂಧುಗಳಿಗಾಗಿ ಕೆಲವು ಸಮಯವನ್ನು ಮೀಸಲಿಡಬೇಕಾಗುವುದು. ನಿಮ್ಮ ಶಿಕ್ಷಣದಿಂದ ಪ್ರತಿಷ್ಠಿತ ಕಂಪೆನಿಯ ಉದ್ಯೋಗವನ್ನು ಪಡೆಯುವಿರಿ. ನಿಮ್ಮ ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸುತ್ತದೆ. ನಿಮ್ಮನ್ನು ನೀವೇ ಹೊಗಳಿಕೊಳ್ಳುವುದು ವಿಚಿತ್ರ ಎನಿಸಬಹುದು. ಹಣ ಬಲವು ಪ್ರಯೋಜನಕ್ಕೆ ಬಾರದೇ ಸೋಲಬಹುದು. ಇಂದು ಹೂಡಕೆ‌ ಮಾಡಿ ಬಹುದಿನದ ಬಯಕೆಯನ್ನು ತೀರಿಸಿಕೊಳ್ಳುವಿರಿ. ಬೇರೆಯವರ ಬಗ್ಗೆ ಅಭಿಪ್ರಾಯಗಳನ್ನು ಹೇಳುವ ದುರಭ್ಯಾಸ ಒಳ್ಳೆಯದಲ್ಲ. ತಾಳ್ಮೆಯಿಂದ ಆಗುವ ಕೆಲಸವನ್ನು ತಣ್ಣಗೇ ಮಾಡಿ ಮುಗಿಸಿ. ನಿಮ್ಮವರಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳುವ ತುಡಿತ ಅತಿಯಾದೀತು‌. ಸಕಾಲದಲ್ಲಿ ಭೋಜನವನ್ನು ಮಾಡಲು ಕಷ್ಟವಾಗುವುದು. ಅಸದರೆ ಸ್ನೇಹಿತರ ಮನೆಯಲ್ಲಿ ಉತ್ತಮ‌ ಭೋಜನ ಮಾಡುವಿರಿ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ. ರಕ್ಷಣೆಯ ಜವಾಬ್ದಾರಿಯವರಿಗೆ ಆರೋಗ್ಯದ ಕೆಡಬಹುದು. ಕುಚೋದ್ಯ ಮಾಡಲು ಹೋಗಿ ಕೆಂಗಣ್ಣಿಗೆ ಗುರಿಯಾಗುವಿರಿ.

ತುಲಾ ರಾಶಿ: ಅನಗತ್ಯ ವಸ್ತುಗಳ ಖರೀದಿಯಿಂದ ಧನ ಹಾನಿ. ನೀವು ಬಹಳ ನಾಜೂಕಿನಿಂದ ಕೆಲಸ ಮಾಡಿಕೊಂಡು ಎಲ್ಲಿಯೂ ಸಿಕ್ಕಿಹಾಕಿಕೊಳ್ಳಲಾರಿರಿ. ಇದರಿಂದ ನೀವು ಜಟಿಲವಾದ ಸಮಸ್ಯೆಯನ್ನು ಸರಾಗವಾಗಿ ಪರಿಹರಿಸಿಕೊಳ್ಳುವಿರಿ. ನಿಮ್ಮ‌ ಆಸಕ್ತಿಯನ್ನು ನೀವು ಬದಲಾಯಿಸಿಕೊಳ್ಳುವುದು ಬೇಡ. ಸಂಗಾತಿಯಿಂದ‌ ನಿರ್ಲಕ್ಷ್ಯಕ್ಕೆ‌ ಒಳಗಾಗುವಿರಿ. ನಿಮ್ಮ ಕೆಲಸದ ಮೇಲೇ ಹೆಚ್ಚು ಗಮನವಿಡುವುದು ಒಳ್ಳೆಯದು.‌ ಇನ್ನೊಬ್ಬರಿಗೆ ನೋವಾಗದಂತೆ ಹೇಳುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಂದ ಹೆಮ್ಮೆ ಪಡುವ ಸಂಗತಿಗಳು ನಿರೀಕ್ಷಿತವಾಗಿ ಬರಲಿದೆ. ಮಕ್ಕಳು ನಿಮಗೆ ಸಂತೋಷವನ್ನು ಕೊಟ್ಟಾರು. ತೀವ್ರತರವಾದ ಒತ್ತಡಗಳು ನಿಮಗೆ ಕಿರಿಕಿರಿ ಮಾಡೀತು. ಒಮ್ಮೆ ನಂಬಿಕೆಯನ್ನು ಇಟ್ಟುಕೊಂಡ ಅನಂತರ ಅನುಮಾನ ಬೇಡ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ನಿಮ್ಮ ಸದ್ಭಾವವನ್ನು ಆಡಿಕೊಳ್ಳಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಅಂತಃಕರಣವು ಶುದ್ಧವಿದ್ದರೆ ನಿಮಗೆ ಸಿಗದು ಸಿಕ್ಕಿಯೇ ಸಿಗುವುದು.

ವೃಶ್ಚಿಕ ರಾಶಿ: ನ್ಯೂನತೆಯನ್ನು ಸರಿ ಮಾಡಿಕೊಳ್ಳುವ ಬಗೆಗೆ ನಿಮ್ಮ ಪ್ರಯತ್ನ ಮಾಡುವಿರಿ. ಇಂದಿನ ನಿಮ್ಮ‌ ಶ್ರಮವು ಫಲಿಸಿ, ಉತ್ಸಾಹವನ್ನೂ ಹೆಚ್ಚಿಸುವುದು. ಅತಿಯಾಗಿ ಭಾವನಾತ್ಮಕವಾಗುವುದು ಮತ್ತು ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸದಿರುವುದು ಒಳ್ಳೆಯದು. ಅಸೂಯೆಯಿಂದ‌ ನಿಮ್ಮ ಕೆಲಸವು ಹಿಂದುಳಿಯುವುದು. ಆರಂಭದ ಶೂರತ್ವದಿಂದ ಅಪಮಾನವಾಗುವುದು. ಅನಗತ್ಯ ಕೆಲಸಗಳಿಗೆ ಕೈ ಹಾಕಿ ಹಣವನ್ನು ಕಳೆದುಕೊಳ್ಳಬಹುದು. ದುರಭ್ಯಾಸಕ್ಕೆ ಶರಣಾಗಿ ಹಣವನ್ನು ಕಳೆದುಕೊಳ್ಳಬಹುದು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವನ್ನು ಕೊಟ್ಟೀತು. ಕಲಹದ ಸ್ಥಳಕ್ಕೆ ನಿಮ್ಮ ಮಾತನ್ನೂ ಹೇಳುವಿರಿ. ಪೂರ್ಣ ಪ್ರಮಾಣದ ಅಧಿಕಾರ ಪಡೆಯುವ ಯೋಚನೆ ಬರಲಿದೆ. ದ್ವೇಷ ಸಾಧಿಸಲು ಹೋಗಿ ಸಮಯವನ್ನೂ ಹಣವನ್ನೂ ಜನರನ್ನೂ ಕಳೆದುಕೊಳ್ಳಬೇಕಾಗಬಹುದು. ಅತಿಯಾದ ನಂಬಿಕೆಯು ಮುಳುವಾದೀತು ನಿಮಗೆ. ಶಾರೀರಿಕ ಪೀಡೆಯಿಂದ ಚಿಂತೆ ಉಂಟಾಗಬಹುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು.

ಧನು ರಾಶಿ: ಗೌಪ್ಯ ವಿಚಾರಗಳು ಹೊರಬಾರದಂತೆ ತಡೆಯುವಿರಿ. ಇಂದು ನೀವು ಅಂದುಕೊಂಡಿದ್ದನ್ನು ಸಾಧಿಸಿಕೊಂಡು ನೆಮ್ಮದಿಯಿಂದ ನಿದ್ರಿಸುವಿರಿ. ನಿಮ್ಮ ಪ್ರತಿಭೆಗೆ ಇಂದು ಪರೀಕ್ಷಾಕಾಲವಾಗಲಿದೆ. ಇದರಿಂದ ನಿಮ್ಮ ಆತ್ಮಬಲವು ಅಧಿಕವಾಗುವುದು. ಸಣ್ಣ ವಿಚಾರಗಳಿಗೆ ದ್ವೇಷ ಸಾಧಿಸಿ ಏನು ಮಾಡುವುದಿದೆ. ಮರೆತು ಮುನ್ನಡೆದರೆ ಮಾರ್ಗ ಸುಗಮ. ಇಂದಿನ‌ ಸೋಲೂ ನಿಮಗೆ ಗೆಲುವಾಗಬಹುದು. ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಲು ಬಯಸುವಿರಿ. ಸಂಗಾತಿಯ ಜೊತೆ ಅಪರೂಪಕ್ಕೆ ದೂರಪ್ರಯಾಣವನ್ನು ಮಾಡಲು ಇಚ್ಛಿಸುವಿರಿ. ವೃತ್ತಿಯ ಸ್ಥಳದಲ್ಲಿ ಬೇರೆ ಜವಾಬ್ದಾರಿಗಳು ಬರುವಂತಿದ್ದರೂ ಅದನ್ನು ನಿರಾಕರಿಸುವಿರಿ. ಇನ್ನೊಬ್ಬರನ್ನು ಅನುಕರಿಸಲಿದ್ದೀರಿ. ಅತಿಯಾದ ಉತ್ಸಾಹದಲ್ಲಿ ಏನನ್ನಾದರೂ ಹೇಳುವ ಸಾಧ್ಯತೆ ಇದೆ. ವಿದೇಶದ ವಿನಿಮಯದಿಂದ ಹಠಾತ್ ಲಾಭವು ಕಾಣಿಸುವುದಿ. ಮಕ್ಕಳನ್ನು ನಯವಾದ ಮಾತುಗಳಿಂದ ಸರಿದಾರಿಗೆ ತರಬೇಕಾಗಬಹುದು. ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಓಡಾಡಬಹುದು. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು.

ಮಕರ ರಾಶಿ: ಅಪರಿಚಿತರ ಜೊತೆ ಅನವಶ್ಯಕ ಮಾತುಗಳನ್ನು ಹೇಳುತ್ತ ಕಾಲ ಕಳೆಯುವುದು. ಇನ್ನೊಬ್ಬರಿಗೆ ಮಾಡುವ ಸಹಾಯದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಜೀವನದ ಎಲ್ಲ ಪರೀಕ್ಷೆಯನ್ನೂ ಪಾಸಾಗಬೇಕು ಎಂಬುದೇ ನಿಮ್ಮ‌ ನಿಶ್ಚಲ ನಿರ್ಧಾರ. ಹಣಕಾಸಿನ ತೊಂದರೆ ಬಂದರೂ ಅದನ್ನು ನಿಭಾಯಿಸುವ ಚಾಣಕ್ಷತನ ನಿಮಗೆ ಗೊತ್ತಿದೆ. ತಂದೆಯ ಮಾತನ್ನು ಶ್ರದ್ಧೆಯಿಂದ ಪಾಲಿಸುವಿರಿ. ನಿಮ್ಮ ಪ್ರಗತಿಯು ಸಂದೇಹಕ್ಕೆ ಕಾರಣವಾಗಲಿದೆ. ನಿರುದ್ಯೋಗ ಎಂಬ ಕೊರಗು ನಿಮ್ಮನ್ನು ಕಾಡಬಹುದು. ಸಿಕ್ಕ ಉದ್ಯೋಗವನ್ನು ಬಹಳ ಪ್ರೀತಿಸುವಿರಿ. ಸಂಸಾರದ ಬಿಕ್ಕಟ್ಟನ್ನು ಬಿಡಿಸುವ ಪ್ರಯತ್ನ ಮಾಡುವರಿದ್ದೀರಿ. ಸಾಲವನ್ನು ತೀರಿಸಲು ನಿಮಗೆ ಮಾರ್ಗವು ಕಾಣಿಸಬಹುದು. ಬಂಧುಗಳಿಂದಾದ ನೋವನ್ನು ನೀವು ಹೇಳಿಕೊಳ್ಳಲಾರಿರಿ. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ. ಕಾರ್ಯದ ಸ್ಥಳವನ್ನು ಒತ್ತಡದಿಂದ ಮುಕ್ತಮಾಡಿಕೊಳ್ಳಿ. ಉದ್ಯೋಗಕ್ಕಾಗಿ ಬಂದ ಬಂಧುವಿಗೆ ಮಾರ್ಗದರ್ಶನ ಮಾಡುವಿರಿ. ಸಹೋದರನ ಸಹಕಾರವು ಅನುಕೂಲವೇ ಆಗುವುದು.

ಕುಂಭ ರಾಶಿ: ಯಾವ ಸ್ಥಾನ ಮಾನ ಸಿಕ್ಕರೂ ಅದನ್ನು ಪ್ರೀತಿಯಿಂದ ಒಪ್ಪಿಕೊಳ್ಳಿ. ನೀವು ಕೆಲವು ಸಮಸ್ಯೆಗಳು ಇದ್ದರೂ ಅದನ್ನು ಬದಿಗೊತ್ತಿ ಏನೂ ಇಲ್ಲದವರ ತೋರುವಿರಿ. ಆಹಾರವನ್ನು ಕಡಿಮೆ ಮಾಡಲು ವೈದ್ಯರ ಸಲಹೆಯನ್ನು ಪಡೆಯುವಿರಿ. ಕುಟುಂಬದ ಒತ್ತಡವನ್ನು ಕಛೇರಿಗೆ ಒಯ್ಯವುದು ಬೇಡ. ಬಹು ಮುಖ್ಯ ಕೆಲಸಕ್ಕಾಗಿ ಕಾದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಮನೆಯಲ್ಲಿಯೇ ಇದ್ದು ಎಲ್ಲರಿಂದ ನಿಂದನೆಗೆ ಒಳಗಾಗುವಿರಿ. ಇಂದು ಮಾಡಬೇಕಾದುದನ್ನು ಮಾಡಿ ಮುಗಿಸಿ.‌ ದೈವವನ್ನು ನಂಬಿ ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ಕಾಣುವಿರಿ. ಹೊಸ ವಿಷಯವನ್ನು ತಿಳಿದುಕೊಳ್ಳಲು ನಿರ್ಧಾರವನ್ನು ಮಾಡುವಿರಿ. ಕುಟುಂಬದ ಪ್ರೀತಿಯನ್ನು ಇಂದು ಕಳೆದುಕೊಳ್ಳುವ ಸಾಧ್ಯತೆ ಇದೆ. ದೇಹವನ್ನು ದಂಡಿಸಲು ನಿಮಗೆ ಆಗದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ಸ್ವತಂತ್ರ ನಿರ್ಧಾರವು ನಿಮಗೆ ಭಯ ಹುಟ್ಟಿಸೀತು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಯಾರದೋ ತೊಂದರೆಯನ್ನು ನೀವು ಪರಿಹರಿಸಬೇಕಾಗಬಹುದು.

ಮೀನ ರಾಶಿ: ಯಾರಿಂದಲೂ ಅತಿಯಾದ ನಿರೀಕ್ಷೆ ಇಲ್ಲದ ಕಾರಣ ಸಂತೃಪ್ಥಿ ನಿಮ್ಮನ್ನು ಆವರಿಸುವುದು. ನೀವು ಉತ್ತಮ ಕ್ರಮವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿ ಶಿಸ್ತಿನ ವಾತಾವರಣವು ಸಂತೋಷವನ್ನು ತರುವುದು. ನಿಮ್ಮ ದುರಭ್ಯಾಸಗಳು ನಿಮ್ಮವರಿಗೆ ಅಪಮಾವನ್ನು ಮಾಡಿಸೀತು. ಆಯಾಸವಾಗಿದ್ದರೆ ವಿಶ್ರಾಂತಿಯನ್ನು ಸ್ವಲ್ಪ ಪಡೆಯಿರಿ. ಅತ್ಯಾಪ್ತರ ಕೆಲವು ವರ್ತನೆಗಳು ನಿಮಗೆ ಹಿಂಸೆಯನ್ನು ಕೊಡುತ್ತಿರುವುದು. ಪ್ರಾಪಂಚಿಕ ವಿಷಯದಲ್ಲಿ ಆಸಕ್ತಿ ಕಡಿಮೆ ಇರಲಿದೆ. ಯೋಗ್ಯ ಜನರನ್ನು ಭೇಟಿಯಾಗಿ ನಿಮ್ಮ ಬಗ್ಗೆ ತಿಳಿಸಿ. ಒತ್ತಾಯಕ್ಕೆ ಮಣಿದು ಏನನ್ನಾದರೂ ಮಾಡಲು ಹೋಗಬೇಕಾದೀತು. ಸಂದರ್ಭೋಚಿತ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರದು. ಮಕ್ಕಳನ್ನು ಬಹಳ ಪ್ರೀತಿಸುವಿರಿ. ಬಂದಿದ್ದನ್ನು ಸ್ವೀಕರಿಸುವ ಮನಃಸ್ಥಿತಿ ಇಂದು ಇರಲಿದೆ. ಬಹಳ ಹುಡುಕಾಟದ ಅನಂತರದ ಉತ್ತಮ‌ ವಿವಾಹ ಸಂಬಂಧವು ಬರುವುದು. ಕರ್ತವ್ಯದ ವಿಚಾರದಲ್ಲಿ ಆಲಸ್ಯವೋ ಬೇಜವಾಬ್ದಾರಿಯೋ ಒಳ್ಳೆಯದಲ್ಲ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು.

-ಲೋಹಿತ ಹೆಬ್ಬಾರ್-8762924271 (what’s app only)