
ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಸೋಮವಾರ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಶೋಭನ, ಕರಣ: ಭದ್ರ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06 : 55 pm, ಇಂದಿನ ಶುಭಾಶುಭಕಾಲ : ರಾಹು ಕಾಲ 07:41 – 09:17, ಯಮಘಂಡ ಕಾಲ 10:53 – 12:30, ಗುಳಿಕ ಕಾಲ 14:06 – 15:43
ಮೇಷ ರಾಶಿ: ನೀವು ಅಂದುಕೊಂಡಿದ್ದು ಪೂರ್ಣವಾಗುವ ಲಕ್ಷಣ ಕಾಣಿಸಿದ್ದು, ನಿಮ್ಮೊಳಗಿನ ಅವ್ಯಕ್ತ ಆನಂದ ತಿಳಿಸುತ್ತದೆ. ಇಂದು ನಿಮಗೆ ಬರಬೇಕಾದ ಹಣವನ್ನು ಬಲವಂತದಿಂದ ಪಡೆಯಬೇಕಾದೀತು. ಅತ್ಯಂತ ಶ್ರಮವಹಿಸಿ ಕಾರ್ಯವನ್ನು ಮಾಡಲಿದ್ದೀರಿ. ಸ್ನೇಹಿತರ ಸಹಾಯವೂ ದೊರೆಯಲಿದೆ. ದಾಂಪತ್ಯದಲ್ಲಿ ಪರಸ್ಪರ ಮನಸ್ತಾಪವೆದ್ದು ತಣ್ಣಗಾಗಲಿದೆ. ಮಾತಮಾಡುವಿದೇ ಸಾಧನೆಯೆಂದುಕೊಳ್ಳುವುದು ಬೇಡ. ನಾಚಿಕೆಯನ್ನು ಬಿಟ್ಟು ಕೇಳಿದರೆ ನಿಮಗೆ ಬೇಕಾದ ವಸ್ತುಗಳು ಸಿಗಬಹುದು. ಯಾವುದೇ ಕಾರ್ಯದಲ್ಲಿ ಮುಂದುವರಿಯಲು ಹೆದರಿಕೆಯು ಇರಲಿದೆ. ನಿಮಗೆ ನಿಮ್ಮ ಕೆಲಸದಿಂದ ಆದ ತಪ್ಪುಗಳು ಕಾಡಬಹುದು. ನಿಮ್ಮ ಕುಶಲತೆಗೆ ಸರಿಯಾದ ಸ್ಥಾನ ಸಿಗಬಹುದು. ಅಪ್ರಯೋಜನದ ಮಾತುಗಳಿಂದ ನೀವು ಅಪಹಾಸ್ಯಕ್ಕೆ ಒಳಗಾಗುವಿರಿ. ಯಾರ ಮೇಲಿರುವ ಬೇಸರವನ್ನು ಮತ್ಯಾರದೋ ಮೇಲೆ ತೋರಿಸಿ ನಿಮ್ಮವರ ದ್ವೇಷಕ್ಕೆ ಕಾರಣವಾಗಬೇಡಿ. ನೀವು ಇಂದು ಅಸಹಾಯಕರಂತೆ ತೋರುವಿರಿ. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಅನ್ವೇಷಿಸಬೇಕಾದೀತು.
ವೃಷಭ ರಾಶಿ: ಇಂದಿನ ನಷ್ಟಕ್ಕೆ ಕುಟುಂಬದವರು ಹೊಣೆಗಾರರು. ಅವರ ಬಗ್ಗೆ ಸಿಟ್ಟಾದರೆ ಸಿಗುವ ಕೆಲವು ಸಹಾಯಾವೂ ಇಲ್ಲವಾದೀತು. ನೋಡಿ, ವಿವೇಚಿಸಿ ಮಾತನಾಡಿದರೆ ಒಳ್ಳೆಯದು. ಇಂದು ನಿಮ್ಮ ಮಾತು ಎಲ್ಲರಿಗೂ ಪ್ರಿಯವಾದುದು. ಅಚಾತುರ್ಯದಿಂದ ಅನಾಹುತ ಮಾಡಿಕೊಳ್ಳುವಿರಿ. ಆಲಸ್ಯದಿಂದ ಮೇಲೆಳಬೇಕಾದ ಸ್ಥಿತಿ ಇದೆ. ನಿಮ್ಮ ಪ್ರತಿಭೆಯ ಅನಾವರಣಕ್ಕೆ ಸಕಾಲವಾಗಿದೆ. ನಿಮ್ಮವರನ್ನು ಬಂಧಿಸಿಡುವ ಕೆಲಸಕ್ಕೆ ಹೋಗಬೇಡಿ. ಪ್ರೀತಿಯಿಂದ ಕೊಟ್ಟ ಉಡುಗೊರೆಯನ್ನು ಸ್ವೀಕರಿಸುವಿರಿ. ನಿಮ್ಮ ಸಹಕಾರದ ಗುಣವು ಎಲ್ಲರಿಗೂ ಮೆಚ್ಚುಗೆಯಾಗುವುದು. ನಿಮ್ಮ ಕೆಲಸಕ್ಕೆ ಸರಿಯಾಗಿ ಹಣವು ಹರಿದು ಬರುವುದು. ಎಲ್ಲವೂ ಸರಿಯಾಗಿ ಆಗುವುದು. ಅತಿಯಾದ ನಿರೀಕ್ಷೆಯಿಂದ ದುಃಖವಾದೀತು. ಪ್ರೇಮದಲ್ಲಿ ಹಿನ್ನಡೆಯಾಗಲಿದೆ. ತಾಳ್ಮೆಯಿಂದ ಮುಖ್ಯ ಆಯುಧವಾಗಿರಲಿ. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು. ಒಂದೇ ವಿಚಾರವನ್ನು ಮನನ ಮಾಡುವಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ. ಪ್ರಯಾಣದಿಂದ ಆಯಾಸವಾಗಬಹುದು.
ಮಿಥುನ ರಾಶಿ: ಯಾರ ಕಷ್ಟವನ್ನೂ ನೋಡಲಾರಿರಿ. ಆದರೆ ನಿಮ್ಮಿಂದ ನೇರ ಸಹಾಯ ಅಸಾಧ್ಯ. ಪರೋಕ್ಷವಾಗಿ ಏನನ್ನಾದರೂ ಮಾಡಲು ಪ್ರಯತ್ನಿಸಿ. ಆಪ್ತರು ನಿಮಗೆ ಒದಗುವ ಸಂಕಟದಲ್ಲಿ ಜೊತೆಯಾಗುವರು. ಧೈರ್ಯದಿಂದ ನೀವು ಇರಬಹುದು. ತಂತ್ರಜ್ಞರಿಗೆ ಉತ್ತಮ ಕೆಲಸ ಸಿಗಲಿದೆ ಅಥವಾ ಈಗಾಗಲೇ ಕೆಲಸ ಮಾಡುತ್ತಿದ್ದರೆ ಬಡ್ತಿ ಸಿಗಲಿದೆ. ಹೊಸದಾದ ವಾಹನವನ್ನು ಖರೀದಿ ಮಾಡಲಿದ್ದೀರಿ. ಸಾಲದ ಹೊರೆಯನ್ನು ಕಂಡು ಚಿಂತೆಗೆ ಒಳಗಾಗಬೇಕಾಗಬಹುದು. ಅವಸರವನ್ನು ಬಿಟ್ಟು ನಿಧಾನವಾಗಿ ಆಲೋಚಿಸಿ. ರಕ್ಷಣಾ ಪಡೆಗೆ ಸೇರುವವರಿಗೆ ಅವಕಾಶಗಳು ಸಿಗಬಹುದು. ಒಂದೇ ಕೆಲಸ ನಿಮಗೆ ನಿರಾಸಕ್ತಿಯನ್ನು ಮೂಡಿಸೀತು. ಕಛೇರಿಯ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಇಂದು ಮಾನಸಿಕವಾಗಿ ನೀವು ಕುಗ್ಗುವಿರಿ. ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಒಂದೇ ಕೆಲಸದಿಂದ ಎರಡು ಪ್ರಯೋಜನವನ್ನು ಪಡೆಯುವಿರಿ. ಭೂಮಿಯ ವ್ಯವಹಾರವು ಸುಲಭಕ್ಕೆ ಕೈ ಹಿಡಿಯದು. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು.
ಕರ್ಕಾಟಕ ರಾಶಿ: ಏನನ್ನೂ ಮಾಡದೇ ಸುಮ್ಮನೇ ಸಿಗಲಿಲ್ಲ ಎಂದರೆ ತಪ್ಪು ನಿಮ್ಮದೇ. ಪ್ರಯತ್ನಿಸಿ ಸಿಗಿದ್ದರೆ ನಿಮ್ಮನ್ನು ಮೀರಿದ್ದಾಗಲಿದೆ. ನಿಮ್ಮ ಸಹೋದರಿಯರ ನಡುವೆ ಸಣ್ಣ ಭಿನ್ನಾಭಿಪ್ರಾಯ ಬರಬಹುದು. ಉದ್ಯೋಗದ ಸ್ಥಳದಿಂದ ನಿಮ್ಮನ್ನು ಕೈ ಬಿಡವ ಸಾಧ್ಯತೆ ಇದೆ. ನಿರಾಸೆಯು ಮೂಡಲಿದೆ. ಸರ್ಕಾರದ ಉದ್ಯೋಗ ಗಗನ ಕುಸಿಮದಂತೆ ಆಗಬಹುದು. ವ್ಯಾಪರವು ಅಧೋಗತಿಗೆ ಹೋಗಲಿದೆ. ಶತ್ರುಗಳ ಪಿತೂರಿಯ ಕುರಿತು ನಿಮಗೆ ಶಂಕೆ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಕುರಿತು ಆತಂಕವಿರಬಹುದು. ನಿಮಗೆ ಬೇಕಾದ ಭೂಮಿಯನ್ನು ನೀವು ಪಡೆಯುವಿರಿ. ಬುದ್ಧಿಗೆ ಸದ್ವಿಚಾರಗಳನ್ನು ನೀಡಿ. ಸಂಬಂಧ ಬೆಳೆಸುವ ವಿಚಾರದಲ್ಲಿ ನೀವು ಆತುರರಾಗುವಿರಿ. ಭವಿಷ್ಯದ ಬಗ್ಗೆ ಪತಿಯಾದ ಚಿಂತನೆ ಇರಲಿದೆ. ನಿಮ್ಮರನ್ನು ನೀವು ಕಳೆದುಕೊಳ್ಳುವ ಭೀತಿಯು ಇರುವುದು. ಆಲಸ್ಯದಿಂದ ನಿಮ್ಮ ಅನೇಕ ಕಾರ್ಯಗಳು ಹಿಂದುಳಿಯಬಹುದು. ಮಕ್ಕಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ಬೇಡದ ಇರುವ ವಸ್ತುಗಳನ್ನು ದಾನವಾಗಿ ಕೊಡುವಿರಿ.
ಸಿಂಹ ರಾಶಿ: ಸಂಗಾತಿಯ ಕಾಳಜಿ ನಿಮಗೆ ಹಿತವೆನಿಸಬಹುದು. ನೀವು ಕರ್ತವ್ಯಗಳನ್ನು ಮರೆತಿದ್ದು, ಯಾರೋ ಅದನ್ನು ನೆನಪಿಸಿಯಾರು. ಇದರಿಂದ ನಿಮಗೆ ಕೋಪಕ್ಕೆ ಬರಬಹುದು. ಕುಟುಂಬಕ್ಕೆ ಆಗಬೇಕಾದ ಕೆಲಸಗಳಿಂದ ಖರ್ಚುಗಳು ಹೆಚ್ಚಾಗಬಹುದು. ಯಾರದೋ ಅದೃಷ್ಟ ನಿಮಗೆ ದುರದೃಷ್ಟಕರವೆನಿಸಬಹುದು. ಖರ್ಚನ್ನು ನಿಯಂತ್ರಿಸುವುದಕ್ಕಾಗಿ ನಿಮ್ಮ ಅವಶ್ಯಕತೆಗಳನ್ನು ಸದ್ಯ ನಿಲ್ಲಿಸುವಿರಿ. ಕ್ರೀಡೆಯಲ್ಲಿ ಮನಸ್ಸು ಇಡುವಿರಿ. ಓಡಾಟದ ಸುಸ್ತು ನಿಮಗೆ ಅನಾರೋಗ್ಯವಾಗಲಿದೆ. ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಇದು ನಿಮಗೆ ಇಂದಿನ ಅಚ್ಚರಿಯ ವಿಚಾರವೇ ಆಗಲಿದೆ. ನಿಮ್ಮ ಮನಸ್ಸಿಗೆ ಹಿತವಾದುದನ್ನು ಮಾತ್ರ ಮಾಡುವಿರಿ. ಉದ್ಯೋಗದಲ್ಲಿ ಹೆಚ್ಚುಗಾರಿಕೆ ಇರುವುದು. ತಾಳ್ಮೆಯಿಂದ ಕಾರ್ಯವನ್ನು ಮಾಡಿ. ನೂತನ ಸ್ನೇಹವನ್ನು ಬೆಳೆಸಿಕೊಳ್ಳುವಿರಿ. ಬೇರೆಯವರ ಬಗ್ಗೆ ಯಾವುದೇ ಆತಂಕ ಬೇಡ. ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬದಲಿಸುವಿರಿ. ವಿದೇಶದ ಪ್ರಯಾಣಕ್ಕೆ ಆಯಾಸವು ಆಯಾಸವು ಅಡ್ಡಿಬರಬಹುದು.
ಕನ್ಯಾ ರಾಶಿ: ಬದುಕಿಗೆ ಬೇಕಾದ ಅಂಶಗಳು ಒಂದೊಂದೇ ಸೇರಿಕೊಳ್ಳುತ್ತದೆ. ನಿಮಗೆ ವಿದೇಶಕ್ಕೆ ಸಂಬಂಧಪಟ್ಟ ವ್ಯವಹಾರವನ್ನು ಪಾಲುದಾರಿಕೆಯಿಂದ ಪಡೆಯುವಿರಿ. ವ್ಯಾಪಾರದಲ್ಲಿ ಮಂದಗತಿ ಇರಲಿದೆ. ಅತಿಯಾದ ಸಂತೋಷ ದುಃಖಕ್ಕೂ ಕಾರಣವಾಗಬಹುದು. ಯಂತ್ರೋಪಕರಣದ ಮಾರಾಟಗಾರಿಗೆ ಲಾಭವು ಆಗುವುದು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಕೀರ್ತಿಯನ್ನು ಗಳಿಸುವರು. ನಿಮಗೆ ಅಪಮಾನವಾಗುವ ಕೆಲಸವು ನಡೆಯಬಹುದು. ಸ್ತ್ರೀಸಂಬಂಧವಾದ ಅಪವಾದಗಳು ಬರಬಹುದು. ಮಾನಸಿಕ ಕಿರುಕುಳವನ್ನು ಅನ್ಯರಿಂದ ಅನುಭವಿಸುವಿರಿ. ಹೊಸತನ್ನು ಮಾಡಲು ಹೋಗಿ ಮುಗ್ಗರಿಸುವಿರಿ. ಸದ್ಯ ನೀವು ಯಾವುದೇ ಸಾಹಸದ ಕಾರ್ಯಕ್ಕೆ ಹೋಗುವುದು ಬೇಡ. ಅತಿಯಾದ ಆಡಂಬರವು ನಿಮಗೆ ಇಷ್ಟವಾಗದು. ನಿಮ್ಮ ವಿದ್ಯಾಪ್ರಗತಿಯು ಬಹಳ ಯಶಸ್ವಿಯಾಗುವುದು. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಇಂದಿನ ನಿಮ್ಮ ಮಾರಾಟದಿಂದ ಅಧಿಕಲಾಭವೂ ಆಗದು. ಸತ್ಪಾತ್ರರಿಗೆ ದಾನವನ್ನು ಮಾಡಿ.