ಆರ್ಥಿಕ ವಿಚಾರದಲ್ಲಿ ದಂಪತಿಗಳ ನಡುವೆ ಮನಸ್ತಾಪ ಬರಲಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಚತುರ್ದಶೀ ತಿಥಿ, ಸೋಮವಾರ ಕೋಪದಿಂದ‌ ಮನಸ್ತಾಪ, ಯಶಸ್ಸಿನಿಂದ ಅಭಿಮಾನ, ಪ್ರೀತಿಯಿಂಸ ಕಾಳಜಿ ಎಲ್ಲವೂ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಆರ್ಥಿಕ ವಿಚಾರದಲ್ಲಿ ದಂಪತಿಗಳ ನಡುವೆ ಮನಸ್ತಾಪ ಬರಲಿದೆ
ದಿನ ಭವಿಷ್ಯ
Edited By:

Updated on: May 26, 2025 | 1:29 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಸೋಮವಾರ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಶೋಭನ, ಕರಣ: ಭದ್ರ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06 : 55 pm, ಇಂದಿನ ಶುಭಾಶುಭಕಾಲ : ರಾಹು ಕಾಲ 07:41 – 09:17, ಯಮಘಂಡ ಕಾಲ 10:53 – 12:30, ಗುಳಿಕ ಕಾಲ 14:06 – 15:43

ತುಲಾ ರಾಶಿ: ಮಕ್ಕಳ‌ ಮೇಲಿನ ಪ್ರೀತಿ ಕುರುಡಾಗುವ ಸಾಧ್ಯತೆ ಇದೆ. ತಪ್ಪನ್ನು ಯಾವುದೇ ದಾಕ್ಷಿಣ್ಯವಿಲ್ಲದೇ ಸರಿಮಾಡುವಿರಿ ಅಥವಾ ಪ್ರಯತ್ನವಂತೂ ಮಾಡುವಿರಿ. ಇಂದು ಇಷ್ಟು ದಿನ ನಂಬಿ ಬಂದಿದ್ದ ಆಸ್ತಿಯು ಕೈ ತಪ್ಪುವ ಸಾಧ್ಯತೆ ಇದೆ. ಸಹನೆಯನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ನಿಮಗೆ ಎಚ್ಚರಿಕೆ ಇರಲಿ. ಸರ್ಕಾರಿ ಕಾರ್ಯಗಳು ಹಿಂದೆ ಬೀಳಲಿವೆ. ಅನಿವಾರ್ಯವಾಗಿ ಮಾಡಿದ ಸಣ್ಣ ಸಾಲವು ಇಂದು ದೊಡ್ಡದಾಗಿದೆ. ಇನ್ನೂ ಸಾಲಕ್ಕೆಂದು ಇನ್ನೊಬ್ಬರ ಬಳಿ ಕೈ ಚಾಚ ಬೇಕಾಗಬಹುದು.‌ ಮನೋಬಲವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಕ್ರಮಗಳನ್ನು ಇಟ್ಟುಕೊಳ್ಳಿ. ನಿಮ್ಮ ಸುತ್ತ ಆಗುವುದನ್ನು ಒಮ್ಮನಸ್ಸಿನಿಂದ ಒಪ್ಪಿಕೊಳ್ಳಿ. ಆರ್ಥಿಕವಿಚಾರದಲ್ಲಿ ದಂಪತಿಗಳ ನಡುವೆ ಮನಸ್ತಾವಿರಲಿದೆ. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲವು ಕೆಲಸವನ್ನು ಮರೆಯುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಬೇಕು ಎಂದು ಅನ್ನಿಸುವುದು. ಹವ್ಯಾಸಗಳು ನಿಮಗೆ ಪ್ರಯೋಜನವನ್ನು ಕೊಡುತ್ತದೆ. ಇಂದು ಖರೀದಿಸಿದ ಹೊಸ ವಸ್ತುವಿನಿಂದ ನಿಮಗೆ ಖುಷಿಯಾಗುವುದು.

ವೃಶ್ಚಿಕ ರಾಶಿ: ಏರುದನಿಯಲ್ಲಿ ಹೇಳಬೇಕಾದದ್ದನ್ನೂ ಹೇಳದಿದ್ದರೆ ಏನನ್ನೂ ಪಡೆಯಲಾಗದು, ಯಾವ ಸ್ಥಾನಕ್ಕೂ ಏರಲಾಗದು. ಸೌಮ್ಯತೆಯು ಇರಬೇಕಾದಲ್ಲಿ ಇರಲಿ. ನಿಮ್ಮ ಮಕ್ಕಳ ಬಗ್ಗೆ ನೀವು ಸರಿಯಾಗಿ ತಿಳಿದುಕೊಳ್ಳಿ. ಈಗಿರುವ ಕೆಲಸವನ್ನು ಬಿಟ್ಟು ಸ್ವಂತ ಉದ್ಯೋಗಕ್ಕೆ ತೊಡಗಬಹುದು. ಸಂತೋಷವಾಗಿರಲು ಬೇಕಾದಂತೆ ನಿಮ್ಮ ಶ್ರಮವನ್ನು ಇಟ್ಟುಕೊಳ್ಳಿ.‌ ಬಂಧುಗಳ ಭೇಟಿ ಸ್ವಲ್ಪ ಕಿರಿಕಿರಿ ಎನಿಸಿದರೂ ಅನಿವಾರ್ಯವಾಗಿ ಸುಮ್ಮನಿರುವಿರಿ. ಮನಸ್ಸಿಗೆ ಬುದ್ಧಿಗೆ ಕೆಲಸವನ್ನು ಕೊಡಬೇಡಿ. ಧನಾಗಮನದ ವಾರ್ತೆಯು ಇರಲಿದೆ. ಮರಗೆಲಸದವರಿಗೆ ಉತ್ತಮ ಕೆಲಸಗಳು ಸಿಗಲಿವೆ. ಜನರ ನಡುವೆ ಇರಲು ಬಯಸುವಿರಿ. ಗಂಭೀರವಾದುದನ್ನು ಬಹಳ ತಮಾಷೆಯಾಗಿ ಸ್ವೀಕರಿಸುವಿರಿ. ಹೂಡಿಕೆಯನ್ನು ಹಿಂಪಡೆಯುವ ಸಾಧಿಸುವಿರಿ ಇದೆ. ವೈಯಕ್ತಿಕ ವಿಚಾರಕ್ಕೆ ಯಾರನ್ನೂ ಸೇರಿಸಿಕೊಳ್ಳಲು ಬಯಸುವುದಿಲ್ಲ. ಆದಾಯಕ್ಕೆ ಯಾರಿಂದಲಾದರೂ ಅಡ್ಡಿಯಾಗಿ, ಸಿಟ್ಟುಗೊಳ್ಳುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು.

ಧನು ರಾಶಿ: ನಿಮ್ಮ ದುಃಖವನ್ನು ಹಂಚಿಕೊಂಡವರೆ ಬಗ್ಗೆ ಅಯ್ಯೋ ಪಾಪ‌ ಎನಿಸುವುದು.‌ ಪ್ರತಿಯಾಗಿ ಏನನ್ನಾದರೂ ಮಾಡಬೇಕೆನ್ನುವ ಆಸೆಯೂ ಇರುವುದು. ಇಂದು ನೀವು ಮಾಡಲೇಬೇಕಾದ ಕೆಲಸವನ್ನು ಮಾಡದೇ ಆಲಸ್ಯದಿಂದ ಕಳೆಯುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಅಕ್ಕಪಕ್ಕದವರ ಜೊತೆ ಅಸಮಾಧಾನ ವ್ಯಕ್ತವಾಗುವುದು. ಪ್ರಾಣಿಗಳ ಜೊತೆ ಸಮಯವನ್ನು ಕಳೆಯುವ ಮನಸ್ಸು ಮಾಡುವಿರಿ. ಊರಿನ ಉತ್ಸವದಲ್ಲಿ ಭಾಗಿಯಾಗುವಿರಿ. ರಾಜಕೀಯ ವ್ಯಕ್ತಿಗಳಾಗಿದ್ದರೆ ಇಂದು ಜನಸೇವೆಯನ್ನು ಮಾಡುವಿರಿ. ಮಕ್ಕಳು ನಿಮ್ಮನ್ನು ಇಷ್ಟ ಒಡುವರು.‌ ಅವರ ಜೊತೆ ಕಾಲ ಕಳೆಯಿರಿ. ಹಿರಿಯ ಅಧಿಕಾರಿಗಳ ಜೊತೆ ಸ್ನೇಹದಿಂದ ಮಾತನಾಡಿ ವಿಶ್ವಾಸ ಗಳಿಸುವಿರಿ. ನಿಮಗೆ ಆಗದವರನ್ನು ದೂರುವುದು ಬೇಡ. ಇಂದು ಬರುವ ಹಣದ ಆಧಾರದ ಮೇಲೆ ನೀವು ಯಾವ ವ್ಯವಹಾರವನ್ನೂ ಮಾಡುವುದು ಬೇಡ. ವಾಹನವನ್ನು ಚಾಲಾಯಿಸುವಾಗ ಅನೇಕ ಸಕಾರಾತ್ಮಕ ಯೋಚನೆಗಳು ಇರಲಿ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ಗೊಂದಲಗಳು ಬರುವುದು.

ಮಕರ ರಾಶಿ: ನಿಮ್ಮವರಿಗೆ ಆಗಿರುಬ ಘಟನೆಯನ್ನು ಹೇಳಲು ಭಯಪಡುವಿರಿ. ಏನೂ ಆಗದು ಎಂಬ ಗಟ್ಟಿ ನಿರ್ಧಾರದಿಂದ ಅಥವಾ ಏನೇ ಆದರೂ ಎದುರಿಸುತ್ತೇನೆ ಎಂಬ ಧೈರ್ಯದಿಂದ ಹೇಳಿಬಿಡಿ. ಇಂದು ಕುಟುಂಬದವರ ಮಾತಿನ ಅಲಕ್ಷ್ಯದಿಂದ ತೊಂದರೆಯಾದಂತೆ ಅನ್ನಿಸುವುದು. ಹಿರಿಯರಿಗೆ ತೊಂದರೆಯನ್ನು ಕೊಡಲು ಹೋಗಬೇಡಿ. ಯಶಸ್ಸು ನಿಮಗೆ ಬೇಡವೆಂದೆನಿಸಬಹುದು. ಯಾರ ಜೊತೆಗೂ ಇರಲು ನೀವು ಇಷ್ಟಪಡುವುದಿಲ್ಲ. ನಿದ್ರೆಯಲ್ಲಿ‌ ಬಿದ್ದ ದುಶಸ್ವಪ್ನವು ನಿಮ್ಮನ್ನು ಚಿಂತೆಗೆ ತಳ್ಳುವುದು. ನಿಮ್ಮದಲ್ಲದ್ದನ್ನು ಹಿಂದಿರುಗಿಸಿ. ಗೃಹನಿರ್ಮಾಣ ಕಾರ್ಯವನ್ನು ಆರಂಭಿಸಬಹುದು. ನಿಮ್ಮ ಕೆಲಸಕ್ಕೆ ಯೋಗ್ಯವಾದ ಪ್ರಶಂಸೆಗಳು ಸಿಗಲಿವೆ. ಅಹಾರದಿಂದ ಆರೋಗ್ಯವು ಕಡುವುದು. ಇನ್ನೊಬ್ಬರ ಬಗ್ಗೆ ಸಲ್ಲದ ಮಾತುಗಳನ್ನು ಆಡುವಿರಿ. ಅನವಶ್ಯಕವಾಗಿ ಚಿಂತನೆಯಿಂದ ನಿಮ್ಮ ಆತ್ಮವಿಶ್ವಾಸವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಇಂದು ನೀವು ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಸಹೋದ್ಯೋಗಿಗಳ ವರ್ತನೆಯಿಂದ ಸಿಟ್ಟಾಗುವ ಸಾಧ್ಯತೆ ಇದೆ.

ಕುಂಭ ರಾಶಿ: ಯಶಸ್ಸಿಗಾಗಿ ಏನನ್ನೂ ಮಾಡುವುದು ಬೇಡ.‌ ಮಾಡುವ ಕೆಲಸವನ್ನು ನಿಷ್ಠೆಯಿಂದ ಪ್ರೀತಿಯಿಂದ ಯಾವುದೇ ಗೌಪ್ಯತೆಯನ್ನು ಇಟ್ಟುಕೊಳ್ಳದೇ ಮಾಡಿ. ಇಂದು ನಿಮ್ಮ ಅಧಿಕವಾದ ಮಾತು ಕೇಳುವವರಿಗೆ ಹಿಂಸೆ ಕೊಡುವುದು. ಆಪ್ತರ ಜೊತೆ ಮಾತುಕತೆಗಳು ಆಗಬಹುದು. ಮನಸ್ಸಿಗೆ ಹಿತವಾದ ಕೆಲಸವನ್ನು ಮಾಡಿ. ಇಲ್ಲವಾದರೆ ಕೊರಗಬೇಕಾದೀತು. ಉತ್ತಮ ಆಹಾರವನ್ನು ಸೇವಸಲಿದ್ದೀರಿ. ಅಹಿತಕರವಾದ ಘಟನೆಯು ನಿಮ್ಮನ್ನು ಸ್ತಬ್ಧಗೊಳಿಸಬಹುದು. ನೂತನವಸ್ತ್ರಗಳ ಖರೀದಿಯನ್ನು ಮಾಡುವಿರಿ. ಉತ್ತಮವಾದ ಆಲೋಚನೆಗಳು ನಿಮಗೆ ಬರಲಿದ್ದು ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ. ದೇಹಕ್ಕೆ ತೊಂದರೆ ಮಾಡಿಕೊಳ್ಳುವ ಸನ್ನಿವೇಶವಿರಲಿದೆ. ಮನೆಯ ಬದಲಾವಣೆಯನ್ನು ಮಾಡುವಿರಿ. ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಭೂ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಚರಾಸ್ತಿಯನ್ನು ಮಾರಾಟ ಮಾಡಿ ಹಣ ಸಿಗುವುದು.

ಮೀನ ರಾಶಿ: ಮುಂಗೋಪವೂ ಯಾರನ್ನೂ ಶಾಂತವಾಗಿ ಇರಿಸಿದು. ನೀವೂ ಪ್ರಶಾಂತವಾಗಿ ಇರಲಾರಿರಿ. ಇಂದು ಸುತ್ತಾಟಕ್ಕೆಂದು ಮಕ್ಕಳ ಜೊತೆ ಹೋಗಲಿದ್ದೀರಿ. ಕಡಿಮೆ ವೆಚ್ಚದಲ್ಲಿ ಹೆಚ್ಚು ಸಂಪಾದಿಸುವ ಯೋಜನೆಯನ್ನು ಹಾಕಿಕೊಳ್ಳುವುದಕ್ಕೆ ಎಲ್ಲಿಂದಲಾದರೂ ನಿಮಗೆ ಐಡಿಯಾ ಸಿಗಬಹುದು. ತಂದೆಯ ಜೊತೆ ವಿವಾದ ಮಾಡಿಕೊಳ್ಳುವಿರಿ. ಹಿರಿಯರ ಹಾರೈಕೆ ನಿಮಗೆ ಸಿಗಲಿದೆ. ಕಛೇರಿಯ ಕೆಲಸಕ್ಕೂ ಸಮಯ ಸಿಗದೇ ಒತ್ತಡದಲ್ಲಿ ಇರುವಿರಿ. ಕಲಹವಾಗಿ ಸಂಗಾತಿಯಿಂದ ದೂರವಿರಬೇಕಾದೀತು. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಸಾವಾಗಲಿದೆ. ಕೃಷಿಯಲ್ಲಿ ಇಂದು ಎಂದಿಗಿಂತ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಖರ್ಚನ್ನು ಕಡಿಮೆ ಮಾಡಿಕೊಳ್ಳಿ. ವಿದ್ಯಾರ್ಥಿಗಳ ಕ್ರಿಯಾಶೀಲ ವ್ಯಕ್ತಿತ್ವದಿಂದ ಎಲ್ಲರ ಗಮನವನ್ನು ಸೆಳೆಯುವರು‌. ಆಪ್ತರ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಬಹುದು. ಪ್ರೀತಿಪಾತ್ರರಿಗೆ ಸಮಯ ವ್ಯರ್ಥ ಮಾಡುವಿರಿ. ಪ್ರೇಮವು ಯಾರಿಂದಲೋ ಬಹಿರಂಗವಾಗುವುದು. ಮಹಿಳಾ ಉದ್ಯೋಗಿಗಳು ಹೆಚ್ಚಿನ ಸ್ಥಾನವನ್ನು ಪಡೆಯುವಿರಿ.