ಮುಂಜಾನೆ ಎದ್ದ ಕೂಡಲೇ ಮಕ್ಕಳಿಂದ ಪ್ರಾರಂಭಿಸಿ ಹಿರಿಯರವರೆಗೂ ದಿನಭವಿಷ್ಯ ನೋಡುತ್ತಾರೆ. ಹಿರಿಯಾದರೆ ನಿತ್ಯ ಪಂಚಾಂಗವನ್ನೂ ಗಮನಿಸುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 9) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣಮ, ವಾರ: ಶನಿ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಶೋಭನ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 47 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:36 ರಿಂದ 11ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:49 ರಿಂದ 03:14ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:47 ರಿಂದ 08:12ರ ವರೆಗೆ.
ಮೇಷ ರಾಶಿ: ಕೆಲವರ ಕೆಲವು ಮಾತುಗಳಿಗೆ ನಿಮ್ಮ ಮನಸ್ಸನ್ನು ಹಾಳು ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಅಧಿಕಾರ ಪ್ರಾಪ್ತಿಗೆ ಓಡಾಟವನ್ನು ಮಾಡುವಿರಿ. ಹೇಳಿದ ಸಮಯಕ್ಕೆ ಕೆಲಸವನ್ನು ಮಾಡಿಕೊಡಲಾಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ನಿಮ್ಮ ಪ್ರಗತಿಗೆ ಶತ್ರುಗಳು ಅಡ್ಡಗಾಲು ಹಾಕಬಹುದು. ತಪ್ಪಿಗೆ ಪ್ರಯಶ್ಚಿತ್ತ ಮಾಡಿಕೊಳ್ಳುವಿರಿ. ಬೇಸರದಿಂದ ಹೊರಬರಲು ಮಾರ್ಗವನ್ನು ಹುಡುಕಿಕೊಳ್ಳುವಿರಿ. ನಕಾರಾತ್ಮಕ ಆಲೋಚನೆಗಳನ್ನು ತಲೆಯಿಂದ ತೆಗೆಯಿರಿ. ಕೋಪವನ್ನು ಅಧಿಕಾರಿಗಳಿಂದ ನಿಯಂತ್ರವಿಟ್ಟು ಮಾಡನಾಡಬ ಮೆಚ್ಚುಗೆ ಗಳಿಸುವಿರಿ. ನಿಮ್ಮ ಮಕ್ಕಳ ಬಗ್ಗೆ ಗಮನ ಹೆಚ್ಚು ಬೇಕು. ತಿಳಿವಳಿಕೆ ಇಲ್ಲದವರ ಮುಂದೆ ನಿಮ್ಮ ಉದ್ಯೋಗವನ್ನು ಹೇಳಿಕೊಳ್ಳುವಿರಿ. ಎಲ್ಲವನ್ನೂ ನೀವು ಸಮಾಜಮುಖೀಯಾಗಿ ನೊಡಿಕೊಳ್ಳಿರಿ.
ವೃಷಭ ರಾಶಿ: ನಿರಂತರ ವೃತ್ತಿಪರತೆಯ ನಿಮ್ಮ ಖುಷಿಯನ್ನು ಇಮ್ಮಡಿಸೀತು. ಪ್ರಾಮಾಣಿಕ ಪ್ರಯತ್ನದಲ್ಲಿ ಯಶಸ್ಸನ್ನು ಕಾಣುವಿರಿ. ವಿನಾಕಾರಣ ಸುತ್ತಾಟದಿಂದ ಆಯಾಸವಾಗುವುದು. ಪ್ರಭಾವಿಗಳ ಭೇಟಿಯಿಂದ ಸಂತೋಷವಾಗಲಿದೆ. ಅನ್ಯಸ್ಥಳದಲ್ಲಿ ನಿಮ್ಮ ವಾಸವು ಇರಲಿದೆ. ಯಾರದೋ ಒತ್ತಡಕ್ಕಾಗಿ ನೀವು ನಿಮ್ಮ ತತ್ತ್ವ ಮರೆತು ವರ್ತಿಸಬೇಕಾಗುತ್ತ. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ಸರಿಮಾಡಿಕೊಳ್ಳುವಿರಿ. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಬೇಡ. ಯಂತ್ರಗಳ ವ್ಯಾಪಾರಿಗಳಿಗೆ ಲಾಭದ ದಿನ. ಆಚರಣೆಗಳನ್ನು ಮಾಡಲು ನಿಮಗೆ ಅಧಿಕ ಆಸಕ್ತಿಯು ಬರಬಹುದು. ಉತ್ಸಾಹವು ಎಷ್ಟೇ ಇದ್ದರೂ ನೆಮ್ಮದಿಯ ಮನಸ್ಸಿನಿಂದ ನಿರ್ಧಾರಿಸಿ. ಹಿರಿಯರಿಂದ ಉತ್ತಮ ವಿಚಾರಗಳನ್ನು ತಿಳಿಯುವಿರಿ. ನಾಯಕರ ಗುಣಗನ್ನು ನೀವು ರೂಡಿಸಿಕೊಳ್ಳುಬಹುದು. ಇಂದು ನಿಮ್ಮ ಪರಿಶ್ರಮವು ವ್ಯರ್ಥವಾದಂತೆ ತೋರುವುದು.
ಮಿಥುನ ರಾಶಿ: ವಿದೇಶಕ್ಕೆ ಹೋಗುವ ಬಗ್ಗೆ ಹತ್ತಾರು ಕನಸುಗಳನ್ನು ಕಾಣುವಿರಿ. ನಿರುದ್ಯೋಗವು ನಿಮ್ಮನ್ನು ಹಾಳು ಮಾಡೀತು. ನಿಮ್ಮ ವಿದ್ಯಾಭ್ಯಾಸಕ್ಕೆ ಯೋಗ್ಯವಾದ ಕೆಲಸದ ಅನ್ವೇಷಣೆಯಲ್ಲಿ ತೊಡಗುವಿರಿ. ಮಹಿಳೆಯರು ಉನ್ನತ ಅಧಿಕಾರವನ್ನು ಪಡೆದು ಅಹಂಕಾರ ಮಡುವುದು ಬೇಡ. ಸ್ವಪ್ರತಿಷ್ಠೆನ್ನಿಬ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಹಿರಿಯರೆದುರು ವಿನಯವಿರಲಿ. ದೇವತಾಕಾರ್ಯಗಳಲ್ಲಿ ಆಸಕ್ತಿಯು ಶ್ರದ್ಧೆಯಿಂದ ಭಾಗವಹಿಸುವಿರಿ. ಕಛೇರಿಯಲ್ಲಿ ಅಧಿಕಾರಿಗಳು ನಿಮ್ಮ ಕಾರ್ಯಕ್ಕೆ ಸಂಬಂಧಿಸಿದಂತೆ ವಾಗ್ವಾದ ಮಾಡಬಹುದು. ಯಾರಿಗೂ ಸಾಲವನ್ನು ಕೊಡುವುದು ಬೇಡ. ನಿಮಗೆ ಸಲ್ಲಬೇಕಾದುದರ ಬಗ್ಗೆ ಮಾತ್ರ ಗಮನವಿರಲಿ. ನಿಮ್ಮ ಸಂಬಂಧಗಳನ್ನು ಬಳಸದೇ ದೂರವಾಗುವುದು.
ಕರ್ಕ ರಾಶಿ: ಗುಣವನ್ನು ಗ್ರಹಿಸಿಕೊಂಡು ಮುಂದುವರಿಯುವುದು ಒಳ್ಳೆಯದು. ಪುಣ್ಯ ಸ್ಥಳಗಳು ನಿಮ್ಮ ಮನಸ್ಸನ್ನು ಉದ್ವೇಗದಿಂದ ಸರಿ ಮಾಡೀತು. ಚರಾಸ್ತಿಯಲ್ಲಿ ಗೊಂದಲ ಇರುವುದು. ಪ್ರಯತ್ನಿಸಿದ ಕಾರ್ಯಕ್ಕೆ ಫಲವನ್ನು ನಿರ್ದಿಷ್ಟ ಮಾಡಿಕೊಳ್ಳುವಿರಿ. ಮನೆಯ ಸ್ಥಳವನ್ನು ಬದಲಾಯಿಸುವಿರಿ. ಅನ್ಯಾನ್ಯ ಮಾರ್ಗಗಳಿಂದ ಹಣವು ಬರಬಹುದು. ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು. ಉತ್ಸಾಹಕ್ಕೆ ತೊಂದರೆ ಆಗುವ ಕಡೆ ನೀವು ಇರಲಾರಿರಿ. ನಿಮ್ಮ ಉದ್ಯೋಗದ ಸ್ಥಳವನ್ನು ನೀವು ಬದಲಾಯಿಸುವಿರಿ. ನಿಮ್ಮ ಕೆಲಸವನ್ನು ಬಿಟ್ಟು ಬೇರೆಯವತ ಕಾರ್ಯದ ಕಡೆ ಗಮನ ಇರುವುದು. ಉದ್ಯೋಗದಲ್ಲಿ ಅಧಿಕ ಲಾಭಕ್ಕಾಗಿ ಶ್ರಮಿರಿಸಿದರೂ ಲಾಭವು ಕಷ್ಟವಾದೀತು. ತಂದೆ-ತಾಯಿಯರನ್ನು ಗೌರವಿಸುವುದು ನಿಮಗೆ ಶ್ರೇಯಸ್ಸಿಗೆ. ಪ್ರಾಮಾಣಿಕತೆಯಿಂದ ನಿಮಗೆ ಉನ್ನತ ಸ್ಥಾನವನ್ನು ನಿರೀಕ್ಷಿಸುವಿರಿ. ದಾನವಾಗಿ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ