ಜ್ಯೋತಿಷ್ಯವನ್ನು ಅಥವಾ ನಿತ್ಯ ಭವಿಷ್ಯವನ್ನು (Horoscope) ಕೆಲ ಜನರು ನಂಬುತ್ತಾರೆ. ಮತ್ತೆ ಕೆಲ ಜನರು ನಂಬುವುದಿಲ್ಲ. ಆದಾಗ್ಯೂ ಮತ್ತೆ ಕೆಲ ಜನರು ಹವ್ಯಾಸಕ್ಕಾಗಿ ಅಥವಾ ಇಂದು ಅವರ ಜೀವನದಲ್ಲಿ ಏನು ಘಟಿಸಲಿದೆ ಎಂಬುವುದನ್ನು ತಿಳಿಯಲು ನಿತ್ಯ ತಮ್ಮ ರಾಶಿ ಭವಿಷ್ಯವನ್ನು ನೋಡುತ್ತಾರೆ. ವ್ಯಕ್ತಿಯ ಜನನದ ಸಮಯವನ್ನು ಅವರ ವ್ಯಕ್ತಿತ್ವವನ್ನು, ಸಂಬಂಧಗಳು ಅವರ ಭವಿಷ್ಯದ ಮೇಲೆ ಪ್ರಭಾವ ಬೀರಬಹುದು ಎಂಬ ಪರಿಕಲ್ಪನೆ ಇದೆ. ಹಾಗಾದ್ರೆ ಜುಲೈ 08ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:28 ರಿಂದ 07:05ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ.
ಮೇಷ ರಾಶಿ: ಕೆಲವು ಘಟನೆಗಳನ್ನು ನೀವು ಮರೆಯಲಾಗದು. ಸವಾಲುಗಳು ಬೇಡವೆಂದರೂ ಬರುತ್ತವೆ. ಕೆಲಸದ ಸ್ಥಳದಲ್ಲಿ ಭಿನ್ನಾಭಿಪ್ರಾಯ ಇರಲಿದೆ. ಸ್ನೇಹಿತರ ಮಾತು ನಿಮಗೆ ಸಿಟ್ಟನ್ನು ತರಿಸಬಹುದು. ಆತ್ಮೀಯರ ಸಲಹೆಯನ್ನು ಸ್ವೀಕರಿಸುವಿರಿ. ಕಳೆದುಹೋದ ಸಮಯವನ್ನು ಮತ್ತೆ ನೆನಪಿಸಿಕೊಳ್ಳಲು ಹೋಗುವುದಿಲ್ಲ. ವಾಹನದ ವಿಚಾರದಲ್ಲಿ ಸಂತೃಪ್ತಿ ಇರಲಿದೆ. ನಿಮ್ಮ ಹೆಸರು ಬರಬೇಕೆಂದು ಬಹಳ ಶ್ರಮವಹಿಸುವಿರಿ. ಆದರೆ ಅದೆಲ್ಲವೂ ವ್ಯರ್ಥವಾಗಬಹುದು. ಇರುವುದನ್ನು ಹಾಗೆಯೇ ಹೇಳಿದ್ದರಿಂದ ನೀವು ನಿಷ್ಠುರರಾಗುವಿರಿ. ದಾಂಪತ್ಯದಲ್ಲಿ ಹೆಚ್ಚು ಖುಷಿಯನ್ನು ಅನುಭವಿಸಲಿದ್ದೀರಿ. ಆರ್ಥಿಕತೆಯ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ. ಜಲೋದ್ಯಮದಲ್ಲಿ ತೊಡಗಿದವರಿಗೆ ಅಲ್ಪ ಲಾಭ ಆಗಲಿದೆ. ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು. ಸಹವಾಸವು ಉತ್ತಮರ ಜೊತ ಇರಲಿ.
ವೃಷಭ ರಾಶಿ: ಅಕಾರಣವಾಗಿ ಉದ್ವೇಗ ಒಳಗಾಗುವುದು ನಿಮ್ಮವರಿಗೆ ಅಚ್ಚರಿಯಾದೀತು. ಸಂಪತ್ತು ಬರುವುದು ಮಾತ್ರ ಕಾಣಿಸುತ್ತದೆ. ನೋಡು ನೋಡುತ್ತಿದ್ದಂತೆ ಎಲ್ಲವೂ ಖಾಲಿಯಾಗುವುದು. ಕೂಡಿಟ್ಟ ಹಣವೆಲ್ಲವೂ ಕರಗುತ್ತಿದೆ ಎನ್ನುವ ಭಯವು ಉಂಟಾಗಲಿದೆ. ನಿಮ್ಮ ನೆಚ್ಚಿನವರ ಭೇಟಿಯಾಗಬಹುದು. ಅವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಅವಕಾಶಗಳಿದ್ದರೂ ಬಳಸಿಕೊಳ್ಳುವ ಮನಸ್ಸು ಇರದು. ಸಾಲದ ಭಯವೇ ನಿಮ್ಮನ್ನು ಕಾಡುವುದು. ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯಬಹುದು. ವಿದ್ಯಾರ್ಥಿಗಳು ಉತ್ತಮವಾದ ಲಕ್ಷ್ಯವನ್ನು ಇಟ್ಟುಕೊಂಡಿದ್ದರೂ ನಿಮಗೆ ತಲುಪಲು ಕಷ್ಟವಾದೀತು. ಕೃಷಿ ಕಾರ್ಯಗಳೇ ನಿಮಗೆ ಹಿತವೆನಿಸುವುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು.
ಮಿಥುನ ರಾಶಿ: ಇಂದು ನಿಮ್ಮ ಮುಂದಿನ ಒಳ್ಳೆಯ ಕಾಲವನ್ನು ಎದುರುನೋಡುತ್ತ ಕುಳಿತಿರುವಿರಿ. ನಿಮ್ಮ ತೊಂದರೆಗಳೇ ಸಾವಿರವಿದ್ದರೂ ಇನ್ನೊಬ್ಬರಿಗೆ ಸಹಾಯವನ್ನು ಮಾಡುವಿರಿ. ವಿದ್ಯಾರ್ಥಿಗಳು ಅಧಿಕ ಅಧ್ಯಯನವನ್ನು ಮಾಡಬೇಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುವ ತವಕವಿರುವುದು. ತಂದೆಯವರಿಗೆ ಎದುರು ಮಾತನಾಡುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ನಿಮ್ಮ ಅಂತರಂಗದಲ್ಲಿ ನಿಮ್ಮ ಕೆಲಸಕ್ಕೆ ಪಶ್ಚಾತ್ತಾಪಭಾವವು ಮೂಡಬಹುದು. ಯಾರ ಸಹಾಯವನ್ನೂ ಒಡೆಯದೇ ಸ್ವತಂತ್ರವಾಗಿ ಇಂದಿನ ಕೆಲಸವನ್ನು ಮಾಡಿ ಮುಗಿಸುವಿರಿ. ಯಾರಿಗೋ ಸಮಾನವಾಗಿ ನಿಲ್ಲುವ ದುಸ್ಸಾಹಸ ಬೇಡ. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನಾಚಿಕೆಯ ಸ್ವಭಾವವು ನಿಮ್ಮ ಕಾರ್ಯಗಳಿಗೆ ಅಡ್ಡಿಯಾಗುವುದು.
ಕಟಕ ರಾಶಿ: ನಿಮ್ಮ ಆಸೆಗಳು ಕೈಗೂಡುವಾಗ ಅದನ್ನು ಅನುಭವಿಸುವ ಮಾನಸಿಕತೆಯೂ ಬೇಕಾಗುವುದು. ಪ್ರವಾಸಕ್ಕೆ ಮನಸ್ಸು ಮಾಡುವಿರಿ. ಮನಸ್ಸಿಗೆ ಹಿತವಾದ ಸಂಗತಿಗಳು ನಡೆಯಲಿದೆ. ಎಲ್ಲದಕ್ಕೂ ಸಿಟ್ಟುಗೊಳ್ಳುವ ಅಗತ್ಯವಿಲ್ಲ. ಕೆಲವೊಂದನ್ನು ಹಾಗಯೇ ಬಿಡುವುದು ಒಳ್ಳೆಯದು. ನಿಮ್ಮ ಆರೋಗ್ಯವೂ ಚೆನ್ನಾಗಿರಲಿದೆ. ಹಣವನ್ನು ಹೊಂದಿಸಲು ಹೆಚ್ಚು ಕಷ್ಟವಾದೀತು. ಏಕಕಾಲದಲ್ಲಿ ಎಲ್ಲವನ್ನೂ ಮಾಡಲಾಗದು. ಧಾರ್ಮಿಕವಾಗಿ ಶ್ರದ್ಧೆ ಉಳ್ಳವರಾದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ಹಾಗಾಗಿ ನಿಮ್ಮನ್ನು ನಾಸ್ತಿಕರು ಎಂದುಕೊಂಡಾರು. ವಿವಾದಕ್ಕೆ ಆದಷ್ಟು ಆಸ್ಪದ ಕೊಡದಿದ್ದರೇ ಉತ್ತಮ. ಕೆಲಸದಿಂದ ನೀವು ನಿರೀಕ್ಷಿಸಿರುವುದು ಸಾಕಾರಗೊಳ್ಳಬಹುದು. ಉದ್ಯೋಗಿಗಳಿಗೆ ವೇತನ ಸಿಗುವುದು. ಸಾಲವನ್ನು ತೀರಿಸುವ ಭರದಲ್ಲಿ ಖರ್ಚಿಗೂ ಹಣವನ್ನು ಇಟ್ಟುಕೊಳ್ಳುವುದನ್ನು ಮರೆಯಬಹುದು. ಆಸ್ತಿಯ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ. ಭೌತಿಕ ವಸ್ತುಗಳು ನಿಮಗೆ ಅಲ್ಪಸಂತೋಷವನ್ನು ಕೊಟ್ಟೀತು.
ಸಿಂಹ ರಾಶಿ: ನಿಮ್ಮ ವಸ್ತುವನ್ನೆ ನೀವು ಮರಳಿ ಪಡೆಯಲು ಮುಜುಗರ ಪಡುವಿರಿ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಇರಲಿವೆ. ವೃತ್ತಿಯಲ್ಲಿ ನೀವು ಜಾಣ್ಮೆಯಿಂದ ಕೆಲಸ ಮಾಡುವಿರಿ. ಅಪವಾದಗಳನ್ನು ಧೈರ್ಯದಿಂದ ಎದುರಿಸುವ ಛಾತಿಯನ್ನು ಹೊಂದಿರುವಿರಿ. ನಿಮ್ಮ ಜ್ಞಾನವನ್ನು ಕಂಡು ಅಚ್ಚರಿಗೊಳ್ಳಬಹುದು. ರಾಜಕೀಯ ಒತ್ತಡದಿಂದ ನಿಮ್ಮ ಕೆಲಸವನ್ನು ಮಾಡಬೇಕಾಗಬಹುದು. ಸಂವೇದನಾಶೀಲ ವ್ಯಕ್ತಿತ್ವವನ್ನು ಹೊಂದಿದ್ದೀರಿ. ಚೌಕಟ್ಟಿನಲ್ಲಿ ಕೆಲಸ ಮಾಡುವುದು ನಿಮಗೆ ಬಹಳ ಕಷ್ಟವಾದೀತು. ನಿಮ್ಮ ಇಂದಿನ ಸಂಭ್ರಮಕ್ಕೆ ಕಾರಣ ಬೇಕಾಗಿರುವುದಿಲ್ಲ. ದೂರದ ಬಂಧುಗಳ ಆಗಮನವಾಗಲಿದೆ. ವಿವಾಹಕ್ಕೆ ಸಂಬಂಧಪಟ್ಟ ಮಾತುಕತೆ ನಡೆಯಬಹುದು. ವ್ಯಾಪಾರದಲ್ಲಿ ಸಾಮಾನ್ಯ ಲಾಭವಾಗಲಿದೆ. ಉದ್ಯೋಗಿಗಳಾಗಿದ್ದರೆ ವೃತ್ತಿಯನ್ನು ಬಿಡುವ ಆಲೋಚನೆಯಲ್ಲಿ ನೀವಿರುವಿರಿ. ನಿಮ್ಮ ಬೆನ್ನನ್ನೇ ತಟ್ಟಿಕೊಂಡು ಸುಖಿಸುವ ದಿನ. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ಕೆಲವು ವಿಚಾರದಲ್ಲಿ ನಿಮ್ಮ ಊಹೆಯು ತಪ್ಪಾದೀತು.
ಕನ್ಯಾ ರಾಶಿ: ಇಂದು ನಿಮಗೆ ಒತ್ತಡದಿಂದ ದೂರವಾಗಲು ಕಷ್ಟವಾಗುವುದು. ಇಂದು ನಿಮ್ಮವರ ಬಗ್ಗೆ ಅನುಮಾನ ಕಾಡಬಹುದು. ಪರೀಕ್ಷಿಸದೇ ಯಾವ ತೀರ್ಮಾನಕ್ಕೂ ಬರುವುದು ಬೇಡ. ಮನೆಯ ವಾತಾವರಣವು ಈ ದಿನದ ಕೆಲಸವನ್ನು ಹಾಳುಮಾಡಿಸುವುದು. ಮನಸ್ಸಿಲ್ಲದ ಮನಸ್ಸಿನಿಂದ ಇಂದು ನೀವು ಅಧ್ಯಾತ್ಮದ ಚಿಂತನೆಯಲ್ಲಿ ತೊಡಗಿಕೊಳ್ಳಬೇಕಾಗಬಹುದು. ಶುಭವಾರ್ತೆಯು ನಿಮ್ಮ ಕೆಲಸಕ್ಕೆ ಬೆಂಬಲವನ್ನು ಕೊಡುವುದು. ಜವಾಬ್ದಾರಿಯುತ ಸ್ಥಾನವು ನಿಮಗೆ ಬರಬಹುದು. ಜವಾಬ್ದಾರಿಯಿಂದ ಬಿಡುಗಡೆ ಬಯಸುವಿರಿ. ವಿನಮ್ರತೆಯು ನಿಮ್ಮ ಕೆಲಸಕ್ಕೆ ಜಯವನ್ನು ಕೊಟ್ಟೀತು. ಆದ್ಯತೆಯ ಮೇರೆಗೆ ಕೆಲಸವನ್ನು ಮಾಡಿ ಮುಗಿಸಿ. ಶಿಸ್ತಿನ ಸ್ವಭಾವವು ಇಷ್ಟವಾದೀತು. ಸತ್ಯವನ್ನು ಹೇಳಿ ತೊಂದರೆ ಸಿಕ್ಕಿಹಾಕಿಕೊಳ್ಳಬೇಕಾದೀತು. ಆಸ್ತಿ ಖರೀದಿಯನ್ನು ಮಾಡುವಿರಿ. ಸಂಗಾರಿಯ ಮೇಲಿನ ಪ್ರೀತಿಯು ಕಡಿಮೆಯಾದಂತೆ ತೋರುವುದು. ಕೆಲವರಿಗೆ ಸೌಕರ್ಯಗಳು ಕಡಿಮೆಯಾದಂತೆ ಅನ್ನಿಸುವುದು.
ತುಲಾ ರಾಶಿ: ವೃತ್ತಿಯನ್ನು ನಂಬಿ ಬದುಕುವವರು ಚಿಂತೆಗೆಡಬೇಕಾಗುವುದು. ಅವಿವಾಹಿತರಿಗೆ ವಿವಾಹವಾಗುವ ಸೂಚನೆಯು ಗೊತ್ತಾಗಬಹುದು. ಬಂಧುಗಳ ಭೇಟಿಯಾಗಲಿದ್ದೀರಿ. ಇದು ನಿಮ್ಮ ಮುಂದಿನ ಕಾರ್ಯಕ್ಕೆ ಅನುಕೂಲಕರವಾಗಿರಲಿದೆ. ಎಲ್ಲ ಕೆಲಸ ಅಪೂರ್ಣವಾಗಲಿದ್ದು ಬಹಳ ಖೇದ ಉಂಟಗಬಹುದು. ನಿಮ್ಮವರನ್ನು ಅನಿರೀಕ್ಷಿತವಾಗಿ ಕಳೆದುಕೊಳ್ಳುವಿರಿ. ಸಂಗಾತಿಯೂ ನಿಮ್ಮ ಮಾತನ್ನು ಕೇಳದೇ ಸ್ವತಂತ್ರವಾಗಿ ವರ್ತಿಸುವಳು. ಸಾಮರ್ಥ್ಯವಿದ್ದರೂ ಅವಕಾಶದ ಕೊರತೆ ಇರಲಿದೆ. ಕಾರ್ಯದಲ್ಲಿ ಇರುವ ಶಿಸ್ತು ನಿಮ್ಮನ್ನು ಎತ್ತರಕ್ಕೆ ಒಯ್ಯವುದು. ಹಿರಿಯರ ಮಾತಿಗೆ ಗೌರವ ಕೊಡಿ. ತಂದೆಗೆ ಎದುರಾಡಬೇಕಾದ ಸ್ಥಿತಿಯನ್ನು ತಂದುಕೊಳ್ಳಬೇಡಿ. ಒತ್ತಡ ನಿವಾರಣೆಗೆ ಧ್ಯಾನವನ್ನು ಮಾಡಿ. ಅಪರಿಚಿತರು ವೇಗವಾಗಿ ಆಪ್ತರಾದಾರು. ಅಂದುಕೊಂಡಿದ್ದು ಆಗಲಿಲ್ಲ ಎಂಬ ಬೇಸರವು ಉಂಟಾದೀತು. ನಿಮ್ಮ ವರ್ತನೆಯು ಯಾರ ಮೇಲಾದರೂ ಪ್ರಭಾವ ಬೀರಬಹುದು.
ವೃಶ್ಚಿಕ ರಾಶಿ: ಇಂದು ನೀವು ಬಹಳ ನಿಧಾನವಾಗಿ ಇರುವಿರಿ. ನಿಮ್ಮ ಮೇಲೆ ಅಪವಾದವನ್ನು ತರಲಿದ್ದಾರೆ. ನಿಃಸ್ವಾರ್ಥವಾಗಿ ಇಚಮಷ್ಟಪಡುವವರನ್ನು ಸಂಶಯಿಸಬೇಡಿ. ಸ್ನೇಹಿತರ ಮಾತು ನಿಮ್ಮನ್ನು ಕೆರಳಿಸೀತು. ಉದ್ವೇಗದಲ್ಲಿ ನೀವು ಮಾತನಾಡುವಿರಿ. ಇದು ನಿಮ್ಮನ್ನು ಅಪಹಾಸ್ಯಕ್ಕೆ ದಾರಿ ಮಾಡಿಕೊಟ್ಟೀತು. ನಿಮ್ಮ ಪ್ರೇಮಪ್ರಕರಣವು ಸುಖಾಂತ್ಯವಾಗಲಿದೆ. ಮನೆಯಲ್ಲಿ ವಿವಾಹಕ್ಕೆ ಒಪ್ಪಿಗೆ ಸಿಗಬಹುದು. ಸಿಕ್ಕಿರುವುದನ್ನು ಪ್ರೀತಿಯಿಂದ ಸ್ವೀಕರಿಸಿ. ಎಲ್ಲದರಲ್ಲಿ ಹಾಳು ಇದ್ದೇ ಇದೆ. ಸುಮ್ಮನೇ ಕೊರಗುವ ಅವಶ್ಯಕತೆ ಇಲ್ಲ. ಬಂದ ಹಣವನ್ನು ಖಾಲಿ ಮಾಡದೇ ರಕ್ಷಣೆ ಮಾಡಿ. ಭವಿಷ್ಯದ ಸಂಪತ್ತಾಗಬಹುದು. ನಿಮ್ಮ ಮಿತಿಯಲ್ಲಿ ಸಿಕ್ಕಿದ್ದನ್ನು ಬಳಸಿಕೊಳ್ಳಿ. ಯಾರನ್ನೂ ಅತಿಯಾಗಿ ಕಾಯಿಸಬೇಡಿ. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು. ಆದಾಯದ ಸ್ವಲ್ಪ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವಿರಿ.
ಧನು ರಾಶಿ: ಇಂದು ನಿಮ್ಮವರ ಮಾತೇ ನಿಮಗೆ ಕಷ್ಟವಾಗುವುದು. ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ನಿಮಗಿಂತ ಹಿರಿಯರಿಗೆ ಗೌರವವನ್ನು ಕೊಡಿ. ಮಕ್ಕಳ ಜೊತೆ ಶಾಂತ ರೀತಿಯಿಂದ ವರ್ತಿಸಿ. ಹೊಸತನ್ನು ಕಲಿಯುವ ಹುಮ್ಮಸ್ಸು ಇರುವುದು. ನಿಮ್ಮ ಸಂಗಾತಿಯನ್ನು ಮತ್ತಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳುವಿರಿ. ಸ್ತ್ರೀಯರು ಆಲಂಕಾರಿಕ ವಸ್ತುಗಳನ್ನು ಖರೀದಿಸಬಹುದು. ಕುಟುಂಬದಲ್ಲಿ ಹಳೆಯ ಘಟನೆಯನ್ನು ನೆನಪಿಸಿಕೊಂಡು ವಾದಗಳನ್ನು ಮಾಡಬಹುದು. ಪುಣ್ಯಸ್ಥಳಗಳ ದರ್ಶನವನ್ನು ಮಾಡಲಿದ್ದೀರಿ. ಬೆಳಗಿನ ಉತ್ಸಾಹವು ಸಂಜೆಯ ತನಕ ಇರಲಿದೆ. ಸ್ನೇಹಿತರಿಂದ ಅಮೂಲ್ಯವಾದ ಉಡುಗೊರೆ ಸಿಗಲಿದೆ. ಋಣವಿದ್ದರೆ ಸಿಗುತ್ತದೆ ಎಂಬ ಭಾವದಲ್ಲಿ ಇರುವಿರಿ. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ಚರಾಸ್ತಿಯ ಗಳಿಕೆಯಲ್ಲಿ ಗೊಂದಲವಿರವುದು.
ಮಕರ ರಾಶಿ: ಇಂದು ನಿಮ್ಮನ್ನು ವಿರೋಧಿಸುವವರು ನಿಮ್ಮ ಬಗ್ಗೆ ಬೇಡದ ಸಂಗತಿಗಳನ್ನು ಹರಿದುಬಿಡುವರು. ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿ. ಇಲ್ಲವಾದರೆ ಭಿನ್ನಾಭಿಪ್ರಾಯಗಳು ಸವಕಾಶ ಸಿಗುತ್ತದೆ. ಎಲ್ಲ ಸೃಜನಶೀಲತೆಯಿಂದ ದೂರವುಳಿಯುವಿರಿ. ಆಭರಣವನ್ನು ಖರೀದಿಸುವ ಮನಸ್ಸು ಉಂಟಾಗಬಹುದು. ಸದ್ಯಕ್ಕೆ ಅದು ಬೇಡ. ಉಳಿಸಿದ ಹಣವು ನಿಮ್ಮ ಆಪತ್ತಿಗೆ ನೆರವಾಗುವುದು. ಕಷ್ಟವಾದರೂ ಕಛೇರಿಯಲ್ಲಿ ಕೆಲಸವನ್ನು ಮಾಡಬೇಕಾದೀತು. ಸರ್ಕಾರಿ ನೌಕರರು ಬಡ್ತಿ ಪಡೆಯಬಹುದು. ಸಂದರ್ಭಕ್ಕೆ ಅನುಸಾರವಾಗಿ ನಿಮ್ಮ ಮಾತುಗಳಿರಲಿ. ಕುಟುಂಬ ಜೊತೆ ಆರೋಗ್ಯದ ಬಗ್ಗೆ ಹಂಚಿಕೊಳ್ಳಿ. ಎಲ್ಲದಕ್ಕೂ ಕಾರಣವನ್ನು ಹುಡುಕುತ್ತ ಕಾಲಹರಣ ಮಾಡಬೇಡಿ. ಸಾಲದಿಂದ ಬಿಡುಗಡೆ ಹೊಂದಲು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಿರಿ. ಕಷ್ಟವಾದರೂ ತಗ್ಗಿ ನಡೆಯುವುದು ಅನಿವಾರ್ಯ. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಕೊಡುಕೊಳ್ಳುವ ವ್ಯವಹಾರದಲ್ಲಿ ದಾಖಲೆಗಳು ಸರಿಯಾಗಿರಲಿ.
ಕುಂಭ ರಾಶಿ: ಇಂದು ವಿದ್ಯಾರ್ಥಿಗಳಿಗೆ ಎಲ್ಲರಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತದೆ. ಸಹಕಾರವೂ ಸಿಗಲಿದೆ. ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕಛೇರಿಗೆ ನಿಯತ್ತಾಗಿ ಹೋಗಿ. ನಿಮ್ಮ ಯಾವ ವಿಚಾರವನ್ನು ಅವರು ಕೇಳರು. ಮನೆಯ ಕೆಲಸವನ್ನು ಎಲ್ಲರ ಸಹಾಯದಿಂದ ಬೇಗ ಮುಗಿಸುವಿರಿ. ಯೋಗ್ಯತೆ ಇದ್ದರು ಯೋಗದ ಬಲ ಅಲ್ಪವಿದೆ. ಹಾಗಾಗಿ ಹೆಚ್ಚು ಪ್ರಯತ್ನದ ಅವಶ್ಯಕತೆ ಇದೆ. ಫಲವನ್ನೂ ಅತಿಯಾಗಿ ನಿರೀಕ್ಷಿಸಬೇಡಿ. ಒತ್ತಾಯದಿಂದ ನೀವಿಂದು ಪ್ರಯಾಣ ಮಾಡಲಿದ್ದೀರಿ. ನಿಮಗಿಷ್ಟವಾಗಿದ್ದು, ಬೇಕಾದ ಸಮಯಕ್ಕೆ ಸಿಗದು. ಅತಿಯಾದ ನಿದ್ರೆಯಿಂದ ಜಾಡ್ಯ ಉಂಟಾಗಬಹುದು. ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ಆಕಸ್ಮಿಕವಾಗಿ ತೊಂದರೆ ಆಗಬಹುದು.
ಮೀನ ರಾಶಿ: ಇಂದು ನೀವು ಕೆಲವರ ವಿಚಾರದಲ್ಲಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಬಹುದಿನದಿಂದ ಅಪೇಕ್ಷಿಸಿದ್ದ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗುವುದಿಲ್ಲ. ಕೆಲಸಕ್ಕೂ ಇನ್ನೊಬ್ಬರ ಮೇಲೆ ಅವಲಂಬಿಸಬೇಡಿ. ನಿಮ್ಮ ದುಡಿಮೆಯ ದಾರಿಯನ್ನು ಬಹಿರಂಗವಾದರೆ, ಇತರರು ಅಸೂಯೆ ಪಟ್ಟಾರು. ಅದು ನಿಮಗೆ ನಕಾರಾತ್ಮಕ ಪ್ರಭಾವವನ್ನು ಬೀರಬಹುದು. ಕಾನೂನಿನ ಭಯವು ನಿಮ್ಮನ್ನು ಕಾಡಬಹುದು. ವ್ಯಾಪರವು ಅಲ್ಪ ಲಾಭವನ್ನು ತಂದೀತು. ಕಛೇರಿಯಲ್ಲಿ ನಿಮ್ಮ ಹಂತದಲ್ಲಿ ಬಗೆ ಹರಿಯುವ ಸಮಸ್ಯೆಗಳನ್ನು ಮೇಲಕ್ಕೆ ಒಯ್ಯವುದು ಬೇಡ. ಅದು ಇನ್ನೊಂದು ಮುಖವನ್ನೂ ತೋರಿಸೀತು. ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿ ಭಡ್ತಿಗಾಗಿ ಪ್ರಯತ್ನಿಸುವಿರಿ. ಬೆರೆಯುವುದು ಕಷ್ಟವಾದೀತು. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ. ಸಾಲದ ವಿಚಾರದಲ್ಲಿ ಜಾಗರೂಕತೆ ಅತ್ಯವಶ್ಯಕ. ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಶತ್ರುತ್ವ ಬರಬಹುದು.
ಲೋಹಿತ ಹೆಬ್ಬಾರ್ – 8762924271 (what’s app only)
Published On - 7:49 pm, Sun, 7 July 24