ರಾಶಿ ಭವಿಷ್ಯ: ಈ ರಾಶಿಯವರ ಮೇಲೆ ಅಪವಾದವನ್ನು ತರಲಿದ್ದಾರೆ-ಎಚ್ಚರ

ನಿಮ್ಮ ರಾಶಿ ಸಿಂಹ, ಕನ್ಯಾ, ತುಲಾ, ವೃಶ್ಚಿಕ ಆಗಿದ್ದರೆ, ಸೋಮವಾರ (ಜುಲೈ.08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ: ಈ ರಾಶಿಯವರ ಮೇಲೆ ಅಪವಾದವನ್ನು ತರಲಿದ್ದಾರೆ-ಎಚ್ಚರ
ದಿನಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 08, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸೋಮವಾರ (ಜುಲೈ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:28 ರಿಂದ 07:05ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ.

ಸಿಂಹ ರಾಶಿ: ನಿಮ್ಮ ವಸ್ತುವನ್ನೆ ನೀವು ಮರಳಿ ಪಡೆಯಲು ಮುಜುಗರ ಪಡುವಿರಿ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಇರಲಿವೆ. ವೃತ್ತಿಯಲ್ಲಿ‌ ನೀವು ಜಾಣ್ಮೆಯಿಂದ ಕೆಲಸ ಮಾಡುವಿರಿ. ಅಪವಾದಗಳನ್ನು ಧೈರ್ಯದಿಂದ ಎದುರಿಸುವ ಛಾತಿಯನ್ನು ಹೊಂದಿರುವಿರಿ. ನಿಮ್ಮ ಜ್ಞಾನವನ್ನು ಕಂಡು ಅಚ್ಚರಿಗೊಳ್ಳಬಹುದು. ರಾಜಕೀಯ ಒತ್ತಡದಿಂದ ನಿಮ್ಮ ಕೆಲಸವನ್ನು ಮಾಡಬೇಕಾಗಬಹುದು. ಸಂವೇದನಾಶೀಲ ವ್ಯಕ್ತಿತ್ವವನ್ನು ಹೊಂದಿದ್ದೀರಿ. ಚೌಕಟ್ಟಿನಲ್ಲಿ ಕೆಲಸ ಮಾಡುವುದು ನಿಮಗೆ ಬಹಳ ಕಷ್ಟವಾದೀತು. ನಿಮ್ಮ ಇಂದಿನ ಸಂಭ್ರಮಕ್ಕೆ ಕಾರಣ ಬೇಕಾಗಿರುವುದಿಲ್ಲ. ದೂರದ ಬಂಧುಗಳ ಆಗಮನವಾಗಲಿದೆ. ವಿವಾಹಕ್ಕೆ ಸಂಬಂಧಪಟ್ಟ ಮಾತುಕತೆ ನಡೆಯಬಹುದು. ವ್ಯಾಪಾರದಲ್ಲಿ ಸಾಮಾನ್ಯ‌ ಲಾಭವಾಗಲಿದೆ. ಉದ್ಯೋಗಿಗಳಾಗಿದ್ದರೆ ವೃತ್ತಿಯನ್ನು ಬಿಡುವ ಆಲೋಚನೆಯಲ್ಲಿ ನೀವಿರುವಿರಿ. ನಿಮ್ಮ ಬೆನ್ನನ್ನೇ ತಟ್ಟಿಕೊಂಡು ಸುಖಿಸುವ ದಿನ. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ಕೆಲವು ವಿಚಾರದಲ್ಲಿ ನಿಮ್ಮ ಊಹೆಯು ತಪ್ಪಾದೀತು.

ಕನ್ಯಾ ರಾಶಿ: ಇಂದು ನಿಮಗೆ ಒತ್ತಡದಿಂದ ದೂರವಾಗಲು ಕಷ್ಟವಾಗುವುದು. ಇಂದು ನಿಮ್ಮವರ ಬಗ್ಗೆ ಅನುಮಾನ ಕಾಡಬಹುದು. ಪರೀಕ್ಷಿಸದೇ ಯಾವ ತೀರ್ಮಾನಕ್ಕೂ ಬರುವುದು ಬೇಡ. ಮನೆಯ ವಾತಾವರಣವು ಈ ದಿನದ ಕೆಲಸವನ್ನು ಹಾಳುಮಾಡಿಸುವುದು. ಮನಸ್ಸಿಲ್ಲದ‌ ಮನಸ್ಸಿನಿಂದ ಇಂದು ನೀವು ಅಧ್ಯಾತ್ಮದ ಚಿಂತನೆಯಲ್ಲಿ ತೊಡಗಿಕೊಳ್ಳಬೇಕಾಗಬಹುದು. ಶುಭವಾರ್ತೆಯು ನಿಮ್ಮ ಕೆಲಸಕ್ಕೆ ಬೆಂಬಲವನ್ನು ಕೊಡುವುದು‌. ಜವಾಬ್ದಾರಿಯುತ ಸ್ಥಾನವು ನಿಮಗೆ ಬರಬಹುದು. ಜವಾಬ್ದಾರಿಯಿಂದ ಬಿಡುಗಡೆ ಬಯಸುವಿರಿ. ವಿನಮ್ರತೆಯು ನಿಮ್ಮ ಕೆಲಸಕ್ಕೆ ಜಯವನ್ನು ಕೊಟ್ಟೀತು. ಆದ್ಯತೆಯ ಮೇರೆಗೆ ಕೆಲಸವನ್ನು ಮಾಡಿ ಮುಗಿಸಿ. ಶಿಸ್ತಿನ ಸ್ವಭಾವವು ಇಷ್ಟವಾದೀತು. ಸತ್ಯವನ್ನು ಹೇಳಿ ತೊಂದರೆ ಸಿಕ್ಕಿಹಾಕಿಕೊಳ್ಳಬೇಕಾದೀತು. ಆಸ್ತಿ ಖರೀದಿಯನ್ನು ಮಾಡುವಿರಿ. ಸಂಗಾರಿಯ ಮೇಲಿನ ಪ್ರೀತಿಯು ಕಡಿಮೆಯಾದಂತೆ ತೋರುವುದು. ಕೆಲವರಿಗೆ ಸೌಕರ್ಯಗಳು ಕಡಿಮೆಯಾದಂತೆ ಅನ್ನಿಸುವುದು.

ತುಲಾ ರಾಶಿ: ವೃತ್ತಿಯನ್ನು ನಂಬಿ ಬದುಕುವವರು ಚಿಂತೆಗೆಡಬೇಕಾಗುವುದು. ಅವಿವಾಹಿತರಿಗೆ ವಿವಾಹವಾಗುವ ಸೂಚನೆಯು ಗೊತ್ತಾಗಬಹುದು. ಬಂಧುಗಳ ಭೇಟಿಯಾಗಲಿದ್ದೀರಿ. ಇದು ನಿಮ್ಮ ‌ಮುಂದಿನ ಕಾರ್ಯಕ್ಕೆ ಅನುಕೂಲಕರವಾಗಿರಲಿದೆ. ಎಲ್ಲ ಕೆಲಸ ಅಪೂರ್ಣವಾಗಲಿದ್ದು ಬಹಳ ಖೇದ ಉಂಟಗಬಹುದು. ನಿಮ್ಮವರನ್ನು ಅನಿರೀಕ್ಷಿತವಾಗಿ ಕಳೆದುಕೊಳ್ಳುವಿರಿ. ಸಂಗಾತಿಯೂ ನಿಮ್ಮ ಮಾತನ್ನು ಕೇಳದೇ ಸ್ವತಂತ್ರವಾಗಿ ವರ್ತಿಸುವಳು. ಸಾಮರ್ಥ್ಯವಿದ್ದರೂ ಅವಕಾಶದ ಕೊರತೆ ಇರಲಿದೆ. ಕಾರ್ಯದಲ್ಲಿ ಇರುವ ಶಿಸ್ತು ನಿಮ್ಮನ್ನು ಎತ್ತರಕ್ಕೆ ಒಯ್ಯವುದು. ಹಿರಿಯರ‌ ಮಾತಿಗೆ ಗೌರವ ಕೊಡಿ. ತಂದೆಗೆ ಎದುರಾಡಬೇಕಾದ ಸ್ಥಿತಿಯನ್ನು ತಂದುಕೊಳ್ಳಬೇಡಿ. ಒತ್ತಡ ನಿವಾರಣೆಗೆ ಧ್ಯಾನವನ್ನು ಮಾಡಿ. ಅಪರಿಚಿತರು ವೇಗವಾಗಿ ಆಪ್ತರಾದಾರು. ಅಂದುಕೊಂಡಿದ್ದು ಆಗಲಿಲ್ಲ ಎಂಬ ಬೇಸರವು ಉಂಟಾದೀತು. ನಿಮ್ಮ ವರ್ತನೆಯು ಯಾರ ಮೇಲಾದರೂ ಪ್ರಭಾವ ಬೀರಬಹುದು.

ವೃಶ್ಚಿಕ ರಾಶಿ: ಇಂದು ನೀವು ಬಹಳ ನಿಧಾನವಾಗಿ ಇರುವಿರಿ. ನಿಮ್ಮ‌ ಮೇಲೆ ಅಪವಾದವನ್ನು ತರಲಿದ್ದಾರೆ. ನಿಃಸ್ವಾರ್ಥವಾಗಿ ಇಚಮಷ್ಟಪಡುವವರನ್ನು ಸಂಶಯಿಸಬೇಡಿ.‌ ಸ್ನೇಹಿತರ ಮಾತು ನಿಮ್ಮನ್ನು ಕೆರಳಿಸೀತು. ಉದ್ವೇಗದಲ್ಲಿ ನೀವು ಮಾತನಾಡುವಿರಿ. ಇದು ನಿಮ್ಮನ್ನು ಅಪಹಾಸ್ಯಕ್ಕೆ ದಾರಿ ಮಾಡಿಕೊಟ್ಟೀತು. ನಿಮ್ಮ ಪ್ರೇಮಪ್ರಕರಣವು ಸುಖಾಂತ್ಯವಾಗಲಿದೆ. ಮನೆಯಲ್ಲಿ ವಿವಾಹಕ್ಕೆ ಒಪ್ಪಿಗೆ ಸಿಗಬಹುದು. ಸಿಕ್ಕಿರುವುದನ್ನು ಪ್ರೀತಿಯಿಂದ ಸ್ವೀಕರಿಸಿ. ಎಲ್ಲದರಲ್ಲಿ ಹಾಳು ಇದ್ದೇ ಇದೆ. ಸುಮ್ಮನೇ ಕೊರಗುವ ಅವಶ್ಯಕತೆ ಇಲ್ಲ. ಬಂದ ಹಣವನ್ನು ಖಾಲಿ ಮಾಡದೇ ರಕ್ಷಣೆ ಮಾಡಿ. ಭವಿಷ್ಯದ ಸಂಪತ್ತಾಗಬಹುದು. ನಿಮ್ಮ ಮಿತಿಯಲ್ಲಿ ಸಿಕ್ಕಿದ್ದನ್ನು ಬಳಸಿಕೊಳ್ಳಿ. ಯಾರನ್ನೂ ಅತಿಯಾಗಿ ಕಾಯಿಸಬೇಡಿ. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು. ಆದಾಯದ ಸ್ವಲ್ಪ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವಿರಿ.