
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಬುಧ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಐಂದ್ರ, ಕರಣ: ಬವ, ಸೂರ್ಯೋದಯ – 06 : 18 am, ಸೂರ್ಯಾಸ್ತ – 06 : 58 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 12:39 – 14:14 ಗುಳಿಕ ಕಾಲ 11:03 – 12:39 ಯಮಗಂಡ ಕಾಲ 07:53 – 09:28
ಮೇಷ ರಾಶಿ: ಯಾರ ಮೇಲೂ ಅತಿಯಾದ ಒತ್ತಡ ಹೇರದೇ ಸ್ವತಂತ್ರವಾಗಿ ಇರಲು ಬಿಡುವಿರಿ. ನಿಮ್ಮ ಹಣವು ಹೋಗಬೇಕಾದ ವ್ಯಕ್ತಿಗೆ ಹೋಗದೇ ತಪ್ಪಿ ಇನ್ನೊಬ್ಬರಿಗೆ ಹೋಗಿ ನಿಮಗೆ ತೊಂದರೆ ಆದೀತು. ಹಿರಿಯರ ಮಾತಿಗೆ ಅಗೌರವ ಬೇಡ. ಸಮೂಹದಲ್ಲಿ ಇರುವಾಗ ಎಲ್ಲರ ಮಾತಿಗೂ ಬೆಲೆ ಕೊಡಬೇಕಾಗುವುದು. ಒಂದು ಉದ್ಯೋಗದಲ್ಲಿ ಮನವು ಸ್ಥಿರವಾಗಿರಲಿ. ಗುಂಪಾಗಿ ಕೆಲಸ ಮಾಡುವಾಗ ಅದರ ಕೆಲವು ದೋಷಗಳು ವೈಯಕ್ತಿಕ ವಿಚಾರಕ್ಕೆ ಆಚರಣೆಗೆ ಬಾಧೆಯನ್ನು ತರುವುದು. ಅವಮಾನವಂತೆ ಕಂಡರೆ ಅಲ್ಲಿಂದ ದೂರನಡೆಯಿರಿ. ಬಂಧುಗಳ ಜೊತೆ ನಿಮ್ಮ ಮಾತುಕತೆ ಅಸಹಜವಾಗಿ ಇರಬಹುದು. ಸ್ನೇಹಕ್ಕೆ ಅನುಗುಣವಾಗಿ ನಿಮ್ಮ ಪ್ರತ್ಯುಪಕಾರವಿರಲಿದೆ. ಅಪರಿಚಿತರನ್ನು ಮಾತಿನಿಂದ ಹತ್ತಿರ ಮಾಡಿಕೊಳ್ಳುವಿರಿ. ಧನಾಗಮನದ ನಿರೀಕ್ಷೆಯಲ್ಲಿ ನೀವಿರುವಿರಿ. ಸತ್ಯಾಸತ್ಯತೆಗಳ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಸಿಗದೇ ಇದ್ದೀತು. ಪತ್ನಿಯ ಸಹಕಾರವನ್ನು ಅತಿಯಾಗಿ ತೆಗದುಕೊಳ್ಳುವುದು ಬೇಡ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು.
ಮಿಥುನ ರಾಶಿ: ನಿಮ್ಮ ಪ್ರೀತಿಯನ್ನು ಸಂಗಾತಿಗೆ ವ್ಯಾಖ್ಯಾನದ ರೀತಿಯಲ್ಲಿ ಹೇಳಬೇಕಾಗಿ ಬಂದರೆ ಅದು ಪ್ರಯೋಜನವಾಗದು. ಅಸ್ಪಷ್ಟ ಮಾಹಿತಿಗಳು ನಿಮ್ಮ ದಿಕ್ಕು ತಪ್ಪಿಸಬಹುದು. ಅದೃಷ್ಟವನ್ನು ಹುಡುಕುತ್ತಿದ್ದರೆ ಅದಕ್ಕೆ ನಿಮ್ಮ ಅನುವರ್ತಿತ್ವವೂ ಇರಲಿ. ಅತಿಯಾದ ಪ್ರಯಾಣದಿಂದ ಆಯಾಸ ಮತ್ತು ಒತ್ತಡಗಳು ನಿರ್ಮಾಣವಾಗುವುದು. ಹಣದಿಂದ ಮನೆಯನ್ನು ಖದೀದಿಸಬಹುದು ನೆಮ್ಮದಿ, ಸಂತೋಷ, ಬಾಂಧವ್ಯವನ್ನಲ್ಲ. ಆರೋಪದ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗದುಕೊಳ್ಳಲಾರಿರಿ. ಆಕಸ್ಮಿಕ ಧನದಿಂದ ಸಂತೋಷವಾಗಲಿದೆ. ಕೃಷಿಯಲ್ಲಿ ನೀವು ನಿರೀಕ್ಷಿತ ಲಾಭವನ್ನು ಗಳಿಸಲು ಅಸಾಧ್ಯ. ಅಂತಸ್ಸತ್ತ್ವವನ್ನು ಬೆಳೆಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಸಂಗಾತಿಯ ಮಾತನ್ನು ನೀವು ನಿರಾಕರಿಸಿದ ಕಾರಣ ಸಿಟ್ಟಾಗುವ ಸಾಧ್ಯತೆ ಇದೆ. ನೀವು ಇಂದು ಮಿತ ಬಳಕೆಯನ್ನು ಇಷ್ಟೊಡವಹುದು. ಭೂಮಿಯ ವ್ಯವಹಾರವನ್ನು ಒಬ್ಬೊಂಟಿಯಾಗಿ ನಿರ್ವಹಿಸುವಿರಿ. ಬೇಕಾದಾಗ ಬಳಸಿಕೊಳ್ಳುವ ಪ್ರವೃತ್ತಿಯನ್ನು ಬಿಡುವುದು ಉತ್ತಮ.
ಮಿಥುನ ರಾಶಿ: ನೀವು ಬಿಡುವ ದೀರ್ಘವಾದ ನಿಟ್ಟುಸಿರು ನಿಮ್ಮ ಹತ್ತಾರು ಸಮಸ್ಯೆಗಳನ್ನು ಹೊರ ಕಳಿಸುವುದು. ಅಧಿಕಾರವನ್ನು ನಡೆಸಲು ಕೇವಲ ಬುದ್ಧಿ ಜ್ಞಾನ ಸಾಲದು. ಎದೆಗಾರಿಕೆ ಹಾಗೂ ತಂತ್ರವೂ ಬೇಕು. ನಿಯಮಗಳು ನಿಮಗೆ ತೊಂದರೆಯಾದೀತು. ಅದನ್ನು ಮುರಿಯಲು ನೀವು ಪ್ರಯತ್ನಿಸಬಹುದು. ನಿಮಗೆ ಮಾರ್ಗದರ್ಶನ ಮಾಡಲು ಯಾರಾದರೂ ಬರಬಹುದು. ನಿಮ್ಮ ಮಾತನ್ನು ಯಾರೂ ಕೇಳದೇಹೋಗಬಹುದು. ಮಕ್ಕಳನ್ನು ಬಹಳ ಪ್ರೀತಿಸುವಿರಿ. ಅವರಿಗೆ ಬೇಕಾದುದನ್ನು ಕೊಡುವಿರಿ. ಅವರಿಂದ ಪ್ರತಿಸ್ಪಂದ ಸಿಗದೇ ಇರಿಸುಮುರಿಸಾಗಲಿದೆ. ದೂರಪ್ರಯಾಣವನ್ನು ಬಹಳ ಎಚ್ಚರಿಕೆಯಿಂದ ಮಾಡಿ. ವ್ಯವಹಾರವನ್ನು ಮಾಡುವಾಗ ಜಾಗರೂಕತೆ ಇರಲಿ. ಸಕಾರಾತ್ಮಕ ವಿಷಯಗಳು ವೇಗವನ್ನು ಪಡೆಯುತ್ತವೆ. ಮಕ್ಕಳಿಗಾಗಿ ನೀವು ಹೊಸ ವಾಹನವನ್ನು ಖರೀದಿಸಬಹುದು. ನಿಮ್ಮ ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಲು ನೀವು ಯೋಚಿಸುತ್ತಿದ್ದರೆ, ಈಡೇರುತ್ತದೆ.
ಕರ್ಕಾಟಕ ರಾಶಿ: ನಿರ್ಣಯ ವಿಳಂಬವಾದರೆ ಪ್ರಗತಿಯೂ ವಿಳಂಬವಾಗಲಿದೆ. ಮೇಲಧಿಕಾರಿಗಳಿಂದ ನಿಮಗೆ ಒತ್ತಡ ಹೆಚ್ಚಾಗುವುದು. ನಿಮ್ಮ ಎಲ್ಲ ಕಾರ್ಯವನ್ನೂ ಗಮನಿಸುವರು. ಇಂದು ನಿಮಗೆ ಬೆಳಗ್ಗೆಯಿಂದ ಮನಸ್ಸು ಜಾಡ್ಯದಿಂದ ಇರಲಿದೆ. ಸ್ವಾಭಿಮಾನದ ವಿಚಾರಕ್ಕೆ ಬಂದರೆ ನೀವು ಬಹಳ ನಿಷ್ಠುರರು. ಯಾರ ಸಹಾಯವನ್ನೂ ಬಾಯೊಡೆದು ಕೇಳುವ ಜಾಯಮಾನವಲ್ಲ. ಅತಿಯಾದ ಆಯಾಸವು ನಿಮ್ಮನ್ನು ವಿಶ್ರಾಂತಿಗೆ ತಳ್ಳಬಹುದು. ಮನೆಯವರನ್ನು ಕೇಳಿ ಪ್ರೀತಿಗೆ ಸಂಬಂಧಿಸಿದಂತೆ ಏನನ್ನೂ ಮಾಡಲಾಗದು. ವಿವಾಹವು ನಿಮಗೆ ವಿಳಂಬ ಎಂದು ಯಾರಾದರೂ ಹೇಳುವುದು ಬೇಸರ ತರಿಸಬಹುದು. ಶತ್ರುಗಳನ್ನು ನೀವೇ ಸೃಷ್ಟಿ ಮಾಡಿಕೊಳ್ಳುವುದು ಸರಿಯಲ್ಲ. ಈ ದಿನ ಬೇಸರ ಎನಿಸಿದರೆ ಹೊರಗೆ ಒಂಟಿಯಾಗಿ ಸುತ್ತಾಡಿ ಬನ್ನಿ. ಅಪರಿಚಿತರ ನಂಬಿ ವ್ಯವಹಾರವನ್ನು ಮಾಡಲು ಯೋಜಿಸುವುದು ಬೇಡ. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು.
ಸಿಂಹ ರಾಶಿ: ನಿಮ್ಮ ನಡೆಯೇ ಗೆಲವನ್ನು ಹೇಳುತ್ತದೆ. ಹಿತ್ತಾಳೆ ಕಿವಿಯಿಂದ ಸಂಬಂಧವು ಹಾಳಾಗುವುದು. ಹೊಸ ಉದ್ಯಮಕ್ಕೆ ಬಂಡವಾಳ ಹಾಕುವುದು ಸದ್ಯ ಮುಂದುವರಿಯುವುದು ಬೇಡ. ನ್ಯಾಯಾಲಯದ ಮೆಟ್ಟಲೇರುವ ಸಂದರ್ಭವನ್ನು ನೀವು ತಂದುಕೊಳ್ಳುವುದು ಬೇಡ. ಬೆಟ್ಟ ಗುಡ್ಡಗಳನ್ನು ಸುತ್ತುವುದು ನಿಮಗೆ ಪ್ರಿಯವಾದ ಸಂಗತಿಯಾದೀತು. ಹಲವು ದಿನಗಳ ಅನಂತರ ಜನ್ಮ ಭೂಮಿಯ ಕಡೆ ಬರುವ ಒಲವಿರಲಿದೆ. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆಯ ಕೊರತೆ ಹೆಚ್ಚು ಕಾಣುವುದು. ಇನ್ನೊಬ್ಬರ ಸಹಾಯವನ್ನೇ ಎಲ್ಲದಕ್ಕೂ ನಿರೀಕ್ಷಿಸುವಿರಿ. ಇನ್ನೊಬ್ಬರ ಮೇಲೆ ನಿಮಗೆ ಬಹಳ ಅಕ್ಕರೆ ಉಂಟಾಗಬಹುದು. ಸಹೋದರಿಯ ಆನಾರೋಗ್ಯದಲ್ಲಿ ನೀವು ಬಹಳ ಶ್ರಮವಿಸುವಿರಿ. ಪ್ರೇಮದಲ್ಲಿ ಸಭ್ಯತೆ ಇರಲಿ. ಒತ್ತಡಗಳಿಗೆ ಸಿಲುಕಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದು ಬೇಡ. ಮನೆಯಲ್ಲಿಯೇ ವಾಸಿಸುವವರು ಸಣ್ಣ ಆದಾಯದ ಬಗ್ಗೆ ಆಲೋಚಿಸುವರು. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು.
ಕನ್ಯಾ ರಾಶಿ: ಕ್ಷಮೆಯನ್ನು ಕೇಳಿಯಾದರೂ ಪ್ರೀತಿಯನ್ನು ಉಳಿಸಿಕೊಳ್ಳುವಿರಿ. ಎಲ್ಲವನ್ನು ನೀವು ಕಲ್ಪಿಸಿಕೊಂಡು ಅನಂತರ ಸಂಕಟಪಡುವಿರಿ. ಇಂದು ಮನೆಯ ಸಣ್ಣ ಖರ್ಚುಗಳೂ ದೊಡ್ಡದಾದ ಮೊತ್ತವನ್ನು ಕಳೆಯುವುದು. ನಿಮಗೆ ದಂಪತಿಯ ಜೊತೆ ಪುಣ್ಯಸ್ಥಳಗಳ ಭೇಟಿ ಮಾಡುವ ಬಯಕೆ ಇರಲಿದೆ. ಭೂಮಯಿಂದ ಪಡೆಯುವ ವಸ್ತುಗಳ ಮಾರಾಟಕ್ಕೆ ಶ್ರಮ ಹೆಚ್ಚು ಬೇಕಾಗುವುದು. ಪತ್ನಿಗಾಗಿ ಅಚ್ಚರಿಯ ಉಡುಗೊರೆಯೊಂದನ್ನು ನೀವು ಕೊಡುವಿರಿ. ನೀವಿಂದು ಖರ್ಚಿನ ವಿಚಾರಕ್ಕೆ ಯಾವ ಹಿಂಜರಿಕೆಯನ್ನೂ ಇಟ್ಟಕೊಂಡಿರುವುದಿಲ್ಲ. ಆಗಬೇಕಾದ ಕಾರ್ಯಗಳು ಹಲವಿದ್ದರೂ ನಿಮಗೆ ಅದರ ಲಕ್ಷ್ಯವಿರದು. ಮಕ್ಕಳ ಜೊತೆ ಹರಟೆ ಹೊಡೆಯುತ್ತ ನಿಮ್ಮ ಕಾಲವನ್ನು ಸಂತೋಷದಿಂದ ಕಳೆಯುವಿರಿ. ನಿಮ್ಮಲ್ಲಿ ಒಂದು ರೀತಿ ನೆಮ್ಮದಿಯು ಸಹಜವಾಗಿ ಉತ್ಪತ್ತಿಯಾಗಲಿದೆ. ನಿಮ್ಮ ವರ್ತನೆಯನ್ನು ಗಮನಿಸುತ್ತಿರಬಹುದು. ವೈದ್ಯವೃತ್ತಿಯನ್ನು ಬಹಳ ನಾಜೂಕಾಗಿ ಮಾಡಬೇಕಾಗುವುದು. ಹಿರಿಯರು ನಿಮ್ಮ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು.