Horoscope: ರಾಶಿಭವಿಷ್ಯ, ಈ ರಾಶಿಯವರು ಸಂಗಾತಿಯ ಮಾತಿಗೆ ಎದುರು ಮಾತನಾಡಬೇಡಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 05, 2023 | 12:20 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಅಕ್ಟೋಬರ್ 05) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರು ಸಂಗಾತಿಯ ಮಾತಿಗೆ ಎದುರು ಮಾತನಾಡಬೇಡಿ
ಪ್ರಾತಿನಿಧಿಕ ಚಿತ್ರ
Follow us on

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ವ್ಯತಿಪಾತ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06-23ಕ್ಕೆ, ಸೂರ್ಯಾಸ್ತ ಸಂಜೆ 06 – 18ಕ್ಕೆ, ರಾಹು ಕಾಲ ಮಧ್ಯಾಹ್ನ 01:50 – 03:20ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:24 – 07:53ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:22 – 10:52ರ ವರೆಗೆ.

ಮೇಷ ರಾಶಿ : ನಿಮ್ಮ ವೃತ್ತಿ ಸ್ಥಳವು ಬದಲಾಗಬಹುದು. ಹೊಸದಾಗಿ ಉದ್ಯೋಗವನ್ನು ಮಾಡುವವರಿಗೆ ಆಯ್ಕೆಯಲ್ಲಿ ಗೊಂದಲವು ಕಾಣಿಸಿಕೊಂಡೀತು. ಮಕ್ಕಳ ಬಗ್ಗೆ ಕಾಳಜಿ ಇರಲಿದೆ. ತಂದೆಯ ಸೇವೆಯನ್ನು ಮಾಡುವಿರಿ. ಕೆಲವು ವಿಚಾರದಲ್ಲಿ ನೀವು ನಿಯಂತ್ರಣವನ್ನು ತಪ್ಪಬಹುದು. ಆಪ್ತರ ಮಾತು ನಿಮ್ಮ ಮನಸ್ಸಿಗೆ ಬಾರದು. ಸರ್ಕಾರದ ಉದ್ಯೋಗದಲ್ಲಿ ನಿಮಗೆ ಅಸಮಾಧಾನ ಉಂಟಾಗಬಹುದು. ಸಂಗಾತಿಯ ಮಾತಿಗೆ ಎದುರು ಮಾತನಾಡಬೇಡಿ. ಅಲ್ಪ ವಸ್ತುಗಳಿಂದ ಸಂತೋಷವಾಗಿ ಇರಲು ಬಯಸುವಿರಿ. ಹಳೆಯ ವಸ್ತುಗಳನ್ನು ಯಾರಿಗಾದರೂ ಕೊಡುವಿರಿ. ಸ್ತ್ರೀಯರ ಜೊತೆ ಹೆಚ್ಚು ಸಮಯ ಇರುವಿರಿ. ಕೃಷಿಯಲ್ಲಿ ಆಸಕ್ತಿಯು ಹೆಚ್ಚಾಗಬಹುದು. ಸಾಕಷ್ಟು ಪ್ರಯತ್ನದ ಫಲವಾಗಿ ಉದ್ಯಮದ ದಾರಿಯು ಸುಗಮವಾಗುವುದು. ಪ್ರೇಮವಿವಾಹವು ತೀರ್ಮಾನವಾಗುವುದು.

ವೃಷಭ ರಾಶಿ : ಯಾರಿಗಾದರೂ ದಾನವನ್ನು ಮಾಡುವಿರಿ. ವಾಹನ ಚಾಲನೆ ಮಾಡುವಾಗ ಸ್ವಲ್ಪ ಹಿಂಜರಿಕೆ ಇರುವುದು. ಮನಶ್ಚಾಂಚಲ್ಯದಿಂದ ಕೆಲಸದಲ್ಲಿ ತೊಂದರೆ ಆಗುವುದು. ಸಾವಧಾನತೆಯನ್ನು ನೀವು ರೂಢಿಸಿಕೊಳ್ಳಬೇಕಾದೀತು. ನಿಮ್ಮ ನಾಟಕೀಯ ಮನೋಭಾವವು ಇತರರಿಗೆ ಗೊತ್ತಾದೀತು. ಮಗಳಿಗೆ ತಂದೆಯಿಂದ ಬೇಕಾದ ಸಹಾಯವು ಸಿಗಬಹುದು. ಆರ್ಥಿಕ ಬೆಳವಣಿಗೆಗೆ ಹೆಚ್ಚು ಸಮಯವನ್ನು ಕೊಡುವಿರಿ. ಅನಾರೋಗ್ಯದಿಂದ ನೀವು ಗುಣಮುಖರಾದರೂ ಪೂರ್ಣ ಹೊರ ಬರಲು ಆಗದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಇಂದಿನ ಪ್ರಯಾಣವನ್ನು ಅನಿವಾರ್ಯವಾದರೆ ಮಾತ್ರ ಮಾಡಿ.‌ ಅನಾರೋಗ್ಯವನ್ನು ಮನೆಮದ್ಸಿನಿಂದ ಕಡಿಮೆ ಮಾಡಿಕೊಳ್ಳಿ. ಗುರುಚರಿತ್ರೆಯನ್ನು ಪಠಿಸಿ.

ಮಿಥುನ ರಾಶಿ : ಬೇಕೆಂದೇ ಕಲಹವನ್ನು ತಂದುಕೊಳ್ಳುವಿರಿ. ಜೀವನದ ಬಗ್ಗೆ ಒಂಟಿಯಾಗಿ ಕುಳಿತು ಗಂಭೀರ ಚಿಂತನೆಯನ್ನು ಮಾಡುವಿರಿ. ಬಂಧುಗಳು ನಿಮ್ಮ ಬಗ್ಗೆ ಔದಾರ್ಯ ತೋರಿಸುವರು. ಸಹಾಯವೂ ಸಿಗಬಹುದು. ನಿಮ್ಮ ಸರಳತೆಯನ್ನು ಆಡಿಕೊಳ್ಳುವರು. ಯಾರನ್ನೂ ದೂಷಿಸುತ್ತ ಇರಬೇಡಿ.‌ ನಿಮ್ಮ ತಪ್ಪನ್ನು ತಿದ್ದಿಕೊಳ್ಳುವ ಸ್ವಭಾವವು ಉತ್ತಮವಾದುದು. ಲಾಭಕ್ಕಾಗಿ ದೇಹವನ್ನು ದಂಡಿಸಬೇಕಾದೀತು. ಪಾಲುದಾರಿಕೆಯಲ್ಲಿ ನಿಮ್ಮ ಮಾತೇ ಅಂತಿಮವಾಗುವುದು. ಇನ್ನೊಬ್ಬರಿಗೆ ಹಣವನ್ನು ಕೊಡುವಾಗ ವ್ಯಕ್ತಿತ್ವದ‌ ಬಗ್ಗೆ ಗಮನವಿರಲಿ. ಎಲ್ಲವೂ ನಿಮ್ಮ ಮೂಗಿನ‌ ನೇರಕ್ಕೆ ನಡೆಯದು. ಪ್ರೇಮ ಸಂಬಂಧದಿಂದ ನಿಮಗೆ ಇಂದು ಹಾಯೆನಿಸುವುದು. ಒತ್ತಡದ ನಡುವೆಯೂ ನಿಮ್ಮ ಕೆಲಸವನ್ನು ಸರಳ ಮಾಡಿಕೊಳ್ಳುವಿರಿ. ನಿಮ್ಮ ಸಾಮರ್ಥ್ಯಕ್ಕೆ ಸರಿಯಾದ ಕೆಲಸವನ್ನು ಮಾಡಿ.

ಕಟಕ ರಾಶಿ : ಮೇಲಧಿಕಾರಿಗಳ ಮಾತಿಗೆ ನೀವು ಅನಾದರ ತೋರಿಸುವಿರಿ. ಮಾತನ್ನು ಮಿತವಾಗಿ ಆಡಬೇಕಾದೀತು. ಯಾರ ಸಹವಾಸವೂ ಬೇಡವೆನಿಸಬಹುದು. ಮೋಹದಲ್ಲಿ ನೀವು ಬೀಳುವಿರಿ. ಖರ್ಚಿನಿಂದ ನೀವು ಆತಂಕಗೊಳ್ಳುವಿರಿ. ನಿಮ್ಮ ಸಮಯವನ್ನು ಸಹೋದ್ಯೋಗಿಗಳು ಹಾಳು ಮಾಡುವರು. ಕೋಪವನ್ನು ಕಡಿಮೆ ಮಾಡಿಕೊಳ್ಳಲು ತಂತ್ರವನ್ನು ಕಂಡುಕೊಳ್ಳಿ. ನಿಮ್ಮ ಬಗ್ಗೆ ನಿಮ್ಮೆದುರೇ ಆಡಿಕೊಳ್ಳುವರು. ಸಿಟ್ಟು ಬಂದರೂ ನಿಯಂತ್ರಣ ಮಾಡಿಕೊಳ್ಳುವಿರಿ. ಶ್ರಮಕ್ಕೆ ಯೋಗ್ಯವಾದ ಫಲವನ್ನೇ ನಿರೀಕ್ಷಿಸಿ. ಇನ್ನೊಬ್ಬರ ಯೋಚನೆಯನ್ನು ಕದಿಯಬಹುದು. ಸಹೋದರನಿಂದ ಅರ್ಥಿಕ ಸಹಾಯವನ್ನು ಪಡೆಯುವಿರಿ. ತಂದೆಯ ಆರೋಗ್ಯದ ಬಗ್ಗೆ ಗಮನವಿರಲಿ. ನಿಜವನ್ನು ಹೇಳಲು ಕಷ್ಟವಾಗಬಹುದು. ದುರ್ಗಾದೇವಿಯ ಉಪಾಸನೆಯನ್ನು ಮಾಡಿ.