ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 15 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಸಿದ್ಧ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ರಿಂದ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 53 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:45 ರಿಂದ 05:20 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:02ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:37 ರಿಂದ 02:11ರ ವರೆಗೆ.
ಮೇಷ ರಾಶಿ: ಇರುವ ಸಂಪತ್ತನ್ನು ಉಳಿಸಿಕೊಳ್ಳಲು ಯೋಜನೆಯನ್ನು ರೂಪಿಸಿ. ಅನಿರೀಕ್ಷಿತ ಹಣದ ಕಲ್ಪನೆಯನ್ನು ನೀವು ಬಿಡುವುದು ಉತ್ತಮ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಕಲಹವಾಗಬಹುದು. ನಿಮ್ಮ ಬಂಧುಗಳು ಭೇಟಿ ಮಾಡಿ ನಿಮ್ಮ ಸಮಯವನ್ನು ಹಾಳುಮಾಡಬಹುದು. ಹಿರಿಯರ ಮೇಲಿದ್ದ ನಿಮ್ಮ ಪೂರ್ವಾಗ್ರಹವು ಬದಲಾಗಬಹುದು. ಹೊಸ ಉದ್ಯೋಗಕ್ಕೆ ಅವಕಾಶಗಳು ಹುಡುಕಿಕೊಂಡುಬರಬಹುದು. ನಿಮ್ಮ ವಿವೇಚನಾ ಶಕ್ತಿಯಿಂದ ಅದನ್ನು ಸರಿಯಾಗಿ ತೀರ್ಮಾನಿಸಿ. ಗೊಂದಲವನ್ನು ಇಟ್ಟುಕೊಂಡು ಮುಂದುವರಿಯುವುದು ಬೇಡ.
ವೃಷಭ ರಾಶಿ: ದೀರ್ಘಕಾಲದ ಸ್ನೇಹವು ಇಂದು ಮಾತಿನಿಂದ ಒಡೆದುಹೋಗುವುದು. ಅದಕ್ಕಾಗಿ ನೀವು ಏಕಾಂತವನ್ನು ಹೆಚ್ಚು ಇಷ್ಟಪಡುವಿರಿ. ಹೂಡಿಕೆಯ ಬಗ್ಗೆ ನಿಮ್ಮ ಗಮನವು ಹೋಗುವುದು. ಸ್ವಂತ ಕೆಲಸಗಳಿಗೆ ಸಮಯ ಹೊಂದಿಲಾಣಿಕೆ ಮಾಡುವುದು ಕಷ್ಟವದೀತು. ಸಂಗಾತಿಯಿಂದ ನಿಮಗೆ ಯಾವ ಬೆಂಬಲವೂ ಸಿಗದು. ಯಾರದೋ ಮಾತು ನಿಮಗೆ ನಾಟಬಹುದು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುವಿರಿ. ಸಹೋರರು ನಿಮ್ಮ ಕಾರಣಕ್ಕೆ ಪಶ್ಚಾತ್ತಾಪ ಪಡಬಹುದು. ಆರೋಗ್ಯದ ಸ್ಥಿತಿಯು ಯಥಾಪ್ರಕಾರವಾಗಿ ಬಲಿಷ್ಠವಾಗಿಯೇ ಇರುವುದು. ಪ್ರಾಣಿಗಳ ಜೊತೆ ಸಖ್ಯಮಾಡುವ ಮನಸ್ಸಾಗುವುದು.
ಮಿಥುನ ರಾಶಿ: ಕಛೇರಿಯಲ್ಲಿ ಇಂದು ಮೇಲಿನವರು ಹೇಳಿದ್ದಷ್ಟನ್ನೇ ಮಾಡುವುದು ಒಳ್ಳೆಯದು. ನಿಮ್ಮ ಯೋಚನೆಯನ್ನೂ ಸೇರಿಸುವುದರಿಂದ ವ್ಯತ್ಯಾಸವಾಗಿ ನಿಮ್ಮ ಮೇಲೆ ಅಪವಾದವು ಬರಬಹುದು. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿ ಸಂಗಾತಿಗೆ ನಿಮ್ಮ ಮೇಲೂ ವಿಷಯದ ಮೇಲೂ ಜಿಗುಪ್ಸೆ ಬರುವಂತೆ ಮಾಡುವಿರಿ. ಆರ್ಥಿಕ ವಿಚಾರವನ್ನು ನೀವು ಆಳವಾಗಿ ಆಲೋಚಿಸುವಿರಿ. ಪ್ರೇಮದಲ್ಲಿ ಸಿಕ್ಕಿಕೊಂಡು ನುಂಗಲೂ ಉಗುಳಲೂ ಆಗದ ತುಪ್ಪದಂತೆ ಒದ್ದಾಡಬೇಕಾದೀತು. ಒತ್ತಡದಿಂದ ಇಂದಿನ ಕೆಲಸವನ್ನು ಮಾಡುವಿರಿ. ಆಸ್ತಿಯ ವಿಚಾರವನ್ನು ಕುಳಿತು ಬಗೆಹರಿಸಿಕೊಳ್ಳಿ.
ಕರ್ಕ ರಾಶಿ: ಸಾಮಾಜಿಕ ಗೌರವವನ್ನು ಪಡೆಯುವ ಅವಕಾಶಗಳು ಇದ್ದರೂ ಕಾರಾಣಾಂತರಗಳಿಂದ ಅದು ಸಾಧ್ಯವಾಗದು. ಇಂದಿನ ಕೆಲಸವು ನಿರೀಕ್ಷಿತ ಮಟ್ಟವನ್ನು ತಲುಪುವುದು ಕಷ್ಟವಾದೀತು. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆ ಭಾಸವಾದೀತು. ಸಣ್ಣ ವಿಚಾರಗಳಿಗೂ ನೀವು ಪ್ರತಿಯೊಬ್ಬರ ಮೇಲೂ ಸಿಟ್ಟಾಗುವಿರಿ. ನಿಮಗೆ ಬೇಕಾದ ಹಣವು ಸರಿಯಾದ ಸಮಯಕ್ಕೆ ಸಿಗದೆ ಉದ್ವೇಗಕ್ಕೆ ಒಳಗಾಗಬೇಕಾದೀತು. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಇಂದು ಕಡಿಮೆ ಇರುವುದು. ಸಂಗಾತಿಯ ಸಂತೋಷಕ್ಕೆ ಏನಾದರೂ ಉಡುಗೊರೆಯನ್ನು ನೀಡುವಿರಿ. ವ್ಯಾಪಾರದಲ್ಲಿ ನಿಮ್ಮ ನಿರೀಕ್ಷೆಯು ತಕೆಕೆಳಗಾಗುವುದು.