ತಿನ್ನುವ ವಿಷಯದಲ್ಲಿ ಯಾವ ರಾಶಿಯವರು ಹೇಗೆ ಗೊತ್ತಾ? ಇಲ್ಲಿದೆ ಮೇಷದಿಂದ ಮೀನ ತನಕ ಯಾರು, ಹೇಗೆ?

ಪ್ರತಿಯೊಂದು ಜೀವಿಗೂ ಆಹಾರ ತುಂಬಾ ಮುಖ್ಯ. ಕೆಲವರು ಆಹಾರವನ್ನು ಆಸ್ವಾದಿಸುತ್ತಾ ತಿನ್ನುತ್ತಾರೆ. ಅದೇ ರೀತಿ ಮತ್ತೆ ಕೆಲವರು ಗಬಗಬನೆ ತಿಂದು ಮುಗಿಸುತ್ತಾರೆ. ಪ್ರತಿಯೊಬ್ಬರ ರಾಶಿಚಕ್ರವು ಅವರವರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಅದೇ ರೀತಿಯಾಗಿ ಆಹಾರ ಸೇವನೆ ವಿಚಾರಕ್ಕೆ ಬಂದರೆ ಯಾವ ರಾಶಿಯವರು ಹೇಗೆ ಎಂಬ ಬಗ್ಗೆ ಆಸಕ್ತಿಕರವಾದ ಮಾಹಿತಿ ಇಲ್ಲಿದೆ.

ತಿನ್ನುವ ವಿಷಯದಲ್ಲಿ ಯಾವ ರಾಶಿಯವರು ಹೇಗೆ ಗೊತ್ತಾ? ಇಲ್ಲಿದೆ ಮೇಷದಿಂದ ಮೀನ ತನಕ ಯಾರು, ಹೇಗೆ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 14, 2023 | 7:57 PM

ಆಹಾರ ಸೇವನೆ ವಿಚಾರಕ್ಕೆ ಬಂದರೆ ಯಾವ ರಾಶಿಯವರು (zodiac signs) ಹೇಗೆ ಎಂಬ ಬಗ್ಗೆ ಆಸಕ್ತಿಕರವಾದ ಮಾಹಿತಿ ಇಲ್ಲಿದೆ. ಜ್ಯೋತಿಷ್ಯ ಆಧಾರದಲ್ಲಿ ಮೇಷದಿಂದ ಮೀನ ರಾಶಿ ತನಕ ಯಾರಿಗೆ ಎಂಥ ಅಭ್ಯಾಸ ಇರುತ್ತದೆ ಹಾಗೂ ಅವರು ಬದಲಾಯಿಸಿಕೊಳ್ಳಬೇಕಾದದ್ದು ಏನು ಎಂದು ಜ್ಯೋತಿಷ್ಯ ರೀತಿಯಲ್ಲಿ ಈ ಲೇಖನದಲ್ಲಿ ವಿವರಿಸಲಾಗಿದೆ. ಇನ್ನೇಕೆ ತಡ, ಓದಿ ಬಿಡಿ.

ಮೇಷ: ಈ ರಾಶಿಯವರು ಬಹುತೇಕ ಒಂದೇ ರೀತಿ ಮೆನುವನ್ನು ಅನುಸರಿಸುತ್ತಾರೆ. ಸಮತೋಲನ ಆಹಾರ ಪದ್ಧತಿಯನ್ನು ಅನುಸರಿಸುವುದರ ಕಡೆಗೆ ಹೆಚ್ಚಿನ ಗಮನವನ್ನು ಇವರು ನೀಡಬೇಕು. ಸೊಪ್ಪು- ತರಕಾರಿ, ಹಣ್ಣು ಇಂಥವುಗಳನ್ನು ತಿನ್ನುವ ಕಡೆಗೂ ಗಮನ ಕೊಡಬೇಕು. ಒಂದು ವೇಳೆ ಇವರೊಬ್ಬರೇ ಇದ್ದಾರೆ, ತಮಗಾಗಿ ಮಾತ್ರ ಅಡುಗೆ ಮಾಡಿಕೊಳ್ಳುವುದು ಅಂತಾದಲ್ಲಿ ಅದಿನ್ನೂ ಸಿಂಪಲ್ ಅಡುಗೆ ಆಗಿರುತ್ತದೆ. ಆದ್ದರಿಂದ ಇವರು ಊಟ- ತಿಂಡಿ ಅಂತ ಬಂದಾಗ ಕಾಳು, ತರಕಾರಿ, ಸೊಪ್ಪು ಎಲ್ಲವೂ ಇರುವಂಥ ಆಹಾರ ಪದ್ಧತಿಯನ್ನು ಅನುಸರಿಸಬೇಕು.

ವೃಷಭ: ಈ ರಾಶಿಯವರು ಕರಿದ ಪದಾರ್ಥಗಳ ಕಡೆಗೆ ಜಾಸ್ತಿ ಪ್ರೀತಿ ಇಟ್ಟುಕೊಂಡಿರುತ್ತಾರೆ. ಊಟ ಮಾಡುತ್ತಾರೋ ಇಲ್ಲವೋ ಅಥವಾ ತಿಂಡಿ ತಿನ್ನುತ್ತಾರೋ ಇಲ್ಲವೋ ಕರಿದ ಪದಾರ್ಥಗಳಾದ ಬಜ್ಜಿ, ಬೋಂಡಾ, ಸಮೋಸ, ಕಚೋರಿ, ಚಿಪ್ಸ್, ಚೌಚೌ ಇಂಥದ್ದನ್ನು ಹೆಚ್ಚು ತಿನ್ನುತ್ತಾರೆ. ಇವರು ಪದೇ ಪದೇ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಅದಕ್ಕೆ ಮುಖ್ಯ ಕಾರಣ ಕರಿದ ಪದಾರ್ಥಗಳನ್ನು ತಿನ್ನು ಅಭ್ಯಾಸ.

ಮಿಥುನ: ಈ ರಾಶಿಯವರಿಗೆ ಮಾತನಾಡುತ್ತಾ ಮಾತನಾಡುತ್ತಾ ಎಷ್ಟು ತಿಂದೆ ಎಂಬುದರ ಅಳತೆ ಗೊತ್ತಾಗಲ್ಲ. ಹೊಸ ಜಾಗದಲ್ಲಿ ವಿಪರೀತ ಸಂಕೋಚಕ್ಕೆ ಒಳಗಾಗುವ ಇವರು, ಒಂದು ಸಲ ಆ ಜಾಗಕ್ಕೆ ಹೊಂದಿಕೊಂಡರು ಅಂದರೆ ಆ ಮೇಲೆ ಅಳತೆಯೇ ಗೊತ್ತಾಗಲ್ಲ. ಇನ್ನೊಂದು ವಿಷಯ ಏನೆಂದರೆ, ಇವರಿಗೆ ಮಧ್ಯರಾತ್ರಿ ಯಾವಾಗಲೋ ಹಸಿವಾಗುತ್ತೆ. ಹೀಗಾಗುತ್ತದಲ್ಲಾ ಎಂಬ ಆತಂಕದಲ್ಲಿ ಬೆಳಗ್ಗೆ ತುಂಬ ತಿಂದುಬಿಡುತ್ತಾರೆ. ರಾತ್ರಿ ಹೊತ್ತು ತಿಂದರೆ ಹಸಿವಾಗಲ್ಲ ಎಂದು ಇವರಿಗೆ ನೆನಪಿಸಬೇಕು. ಗೊತ್ತಾಯಿತಲ್ಲಾ, ಇವರ ಸಮಸ್ಯೆ ಮರೆವು ಮತ್ತು ಹಸಿವು.

ಇದನ್ನೂ ಓದಿ: ನಿಮ್ಮ ಜೀವನದಲ್ಲಿ ಅದೃಷ್ಟ ತರುವ 7 ವಿಷಯಗಳು; ದಿನನಿತ್ಯ ಇದನ್ನು ಅನುಸರಿಸುವ ಮೂಲಕ ಅದೃಷ್ಟವಂತರಾಗಿ ಬಾಳಿ

ಕರ್ಕಾಟಕ: ರಾಶಿ ಚಕ್ರದಲ್ಲಿ ಯಾರಿಗಾದರೂ ಆಹಾರ ಸೇವನೆ ವಿಚಾರದಲ್ಲಿ ತುಂಬ ಅಲರ್ಜಿಗಳಾಗುವ ಅವಕಾಶ ಇದೆ ಅಂದರೆ, ಅದು ಕರ್ಕಾಟಕ ರಾಶಿಯವರಿಗೆ. ಸೂಕ್ಷ್ಮ ದೇಹ ಪ್ರಕೃತಿಯ ಇವರಿಗೆ ಪ್ಯಾಕೆಟ್ ಹಾಲು ಕುಡಿದರೆ ಆಗಲ್ಲ. ಊಟ ಮಾಡುವ ಜಾಗದಲ್ಲಿ ಸ್ವಲ್ಪ ದೂಳಿದ್ದರೂ ಹಿಂಸೆ ಎನ್ನುತ್ತಾರೆ. ಜತೆಗೆ ಎಷ್ಟೇ ಶುದ್ಧವಾದ ನೀರು ಕುಡಿದರೂ ಗಂಟಲು, ಧ್ವನಿ ಪೆಟ್ಟಿಗೆಯ ಸಮಸ್ಯೆ ಜಾಸ್ತಿ. ಆದ್ದರಿಂದ ಊಟ- ತಿಂಡಿ ವಿಚಾರದಲ್ಲಿ ಇವರಿಗೆ ನೆಮ್ಮದಿ ಕಡಿಮೆ.

ಸಿಂಹ: ಇಂಥದ್ದೇ ತರಕಾರಿ ಹಾಕಬೇಕು, ಇಂಥದ್ದೇ ಬಣ್ಣ ಇರಬೇಕು, ತರಕಾರಿ ಇಷ್ಟೇ ಬೆಂದಿರಬೇಕು…ಹೀಗೆ ಬಹಳ ನಿರ್ದಿಷ್ಟವಾಗಿ ಇಂಥದ್ದೇ ಬೇಕು ಎನ್ನುವ ಜನ ಇವರು. ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹುಡುಕಿಕೊಂಡು ಹೋಗಿ ತಿನ್ನುವವರನ್ನು ಗಮನಿಸಿ, ಈ ಸಿಂಹ ರಾಶಿಯವರು ಹೆಚ್ಚು ಇರುತ್ತಾರೆ. ಜತೆಗೆ ಇವರಿಗೆ ಅಡುಗೆ ಬಡಿಸುವ ವಿಚಾರದಲ್ಲೂ ಹೀಗೆಯೇ ಇರಬೇಕು ಎಂಬ ನಿರೀಕ್ಷೆ ಇರುತ್ತದೆ. ಊಟ ಮಾಡುವಾಗ ಒಂಚೂರು ಹೆಚ್ಚು- ಕಡಿಮೆ ಆದರೂ ಕೂಗಾಟ- ಕಿರುಚಾಟ ಮಾಡಿಬಿಡುತ್ತಾರೆ. ಇವರು ದೇಹದ ತೂಕದ ಬಗ್ಗೆ ಹೆಚ್ಚು ಗಮನ ಕೊಡಬೇಕು.

ಕನ್ಯಾ: ಯಾವುದೇ ಬಡಾವಣೆಯ, ಸ್ಥಳದ, ಊರಿನ ಬೆಸ್ಟ್ ಹೋಟೆಲ್ ಗಳು, ಚಾಟ್ಸ್ ಗಳು, ಬೇಕರಿಗಳು ಹೀಗೆ ತಿನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಛಕಾ ಛಕ್ ಹೇಳುತ್ತಾರೆ ಅಂದರೆ ಅವರು ಕನ್ಯಾ ರಾಶಿಯವರು. ಇತರರಿಗೆ ಆರ್ಡರ್ ಮಾಡಲು ಸಹ ಬಿಡದೆ, ಇದನ್ನೇ ತಿನ್ನಿ, ಹೀಗೇ ತಿನ್ನಿ ಎಂದು ಯಾರಾದರೂ ನಿರ್ದೇಶನ ಮಾಡುತ್ತಿದ್ದಾರೆ ಅಂದರೆ ಅದು ಬಹುತೇಕ ಕನ್ಯಾ ರಾಶಿಯವರೇ ಅಂತ. ಊಟ- ತಿಂಡಿ ವಿಚಾರದಲ್ಲಿ ಇವರು ತೃಪ್ತಿ ಪಡೆಯುವುದೇ ಇಲ್ಲ. ಒಂದಿಲ್ಲೊಂದು ಸಮಸ್ಯೆ ಹೇಳಿ, ತಮ್ಮ ಮನಸ್ಸನ್ನು ಹಾಳು ಮಾಡಿಕೊಂಡು, ಇತರರೂ ತಿನ್ನದ ಹಾಗೆ ಮಾಡ್ತಾರೆ.

ತುಲಾ: ಎಲ್ಲದರಲ್ಲೂ ಕ್ವಾಂಟಿಟಿ, ಅಂದರೆ ಎಷ್ಟಿದೆ ಎಂದು ನೋಡುತ್ತಾರೆ ಅಂದರೆ ತುಲಾ ರಾಶಿಯವರು ಅಂತಲೇ ಅರ್ಥ. ತಾವು ಒಂದು ತುಂಡು ಖಾದ್ಯ ತಿನ್ನುವುದಾದರೂ ಬಟ್ಟಲಿನ ತುಂಬ ಮಾಡಿ ಅವರೆದುರು ಇಡಬೇಕು. ಒಂದು ವೇಳೆ ತಿನ್ನು- ತಿನ್ನು ಎಂದು ಬಲವಂತ ಮಾಡಿ, ತಟ್ಟೆಗೆ ಬಡಿಸಿದರೆ ಆಗಲೂ ಅದನ್ನು ಒಪ್ಪದ ಜನ ಇವರು. ಒಂದು ವೇಳೆ ಇವರು ಮಾಂಸಾಹಾರಿಗಳು ಆದರೋ ಆಗ ಇವರಿಗೆ ಮನಸ್ಸು ತೃಪ್ತಿ ಪಡಿಸುವಷ್ಟರಲ್ಲಿ ಮನೆಯವರು ಹೈರಾಣ. ಆದರೆ ಮೂವತ್ತೈದನೇ ವಯಸ್ಸಿನ ನಂತರ ಇವರ ಧೋರಣೆ ಪೂರ್ತಿ ಬದಲಾಗಿ, ಸಾಮಾನ್ಯಕ್ಕಿಂತ ಕಡಿಮೆ ತಿನ್ನುತ್ತಾರೆ.

ವೃಶ್ಚಿಕ: ತಮ್ಮ ತಟ್ಟೆಯಲ್ಲಿ ನಾಲ್ಕು ಇಡ್ಲಿ ಇದ್ದು, ಪಕ್ಕದಲ್ಲಿ ಮಸಾಲೆ ದೋಸೆ ಇದ್ದರೂ ಈಗಾಗಲೇ ಒಂದು ವಡೆ ತಿಂದಿದ್ದರೂ ಇನ್ನೇನಾದರೂ ರುಚಿ ನೋಡೋಣವಾ ಎಂದು ಗೊಂದಲ ಕಣ್ಣುಗಳಲ್ಲಿ ನೋಡುತ್ತಾ ಇದ್ದವರು ವೃಶ್ಚಿಕ ರಾಶಿಯವರು. ಇವರೊಂಥರ ವಿಚಿತ್ರ. ರುಚಿ ಇದೆಯೋ ಬಿಟ್ಟಿದೆಯೋ ಕೆಲವು ಸಲ ಸಿಕ್ಕಾಪಟ್ಟೆ ತಿನ್ನುತ್ತಾರೆ. ಕೆಲವು ಸಲ ರುಚಿಯಾಗಿಲ್ಲವೇ ಎಂದು, ಏನೋ ನೆಪ ಮಾಡಿ ತಿನ್ನುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಇವರಿಗೆ ಫ್ಯಾಟಿ ಲಿವರ್ ನಂಥ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಧನುಸ್ಸು: ಬೇರೆಯವರ ಹೆಸರು ಹೇಳುತ್ತಲೇ ಸದಾ ಒಂದಿಲ್ಲೊಂದು ತಿಂಡಿ, ಊಟ ಮಾಡಿಕೊಂಡು ಎಂಜಾಯ್ ಮಾಡುವಂಥ ಜನ ಇವರು. ಆದರೆ ತಮಗೆ ಇಷ್ಟವಾಯಿತು, ಮಾಡಿಕೊಂಡೆ ಅಂತ ಹೇಳುವುದಿಲ್ಲ. ಇವರ ದೇಹದ ಆಕಾರ ಆಗಾಗ ಬದಲಾಗುತ್ತಲೇ ಇರುತ್ತದೆ. ಅದಕ್ಕೆ ಕಾರಣ ಏನು ಅಂದರೆ, ಹೆಚ್ಚು ದುಃಖವೋ ಸಂತೋಷವೋ ಕೈಯಲ್ಲಿ ಒಂದು ಚಿಪ್ಸ್ ಪಾಕೆಟ್ ಇರುತ್ತದೆ. ಮುಖದಲ್ಲಿ ಯಾವ ಭಾವನೆಯೂ ತೋರಿಸದೆ ಒಂದೊಂದೋ ತಿಂಡಿಗಳಿಗೆ ಮೋಕ್ಷ ಕರುಣಿಸುತ್ತಾ ಇರುತ್ತಾರೆ. ಉಪ್ಪು- ಖಾರ ಹೆಚ್ಚು ತಿನ್ನುವ ಇವರಿಗೆ ರಕ್ತದೊತ್ತಡ ಸಮಸ್ಯೆ ಜಾಸ್ತಿ.

ಇದನ್ನೂ ಓದಿ: ವಿಶಾಖದಿಂದ ರೇವತಿಯ ತನಕ ಹನ್ನೆರಡು ನಕ್ಷತ್ರಗಳ ಗುಣ- ಸ್ವಭಾವ, ನಕ್ಷತ್ರಾಧಿಪತಿಯ ವಿವರ ಇಲ್ಲಿದೆ

ಮಕರ: ತಮಗೆ ಬೇಕಾದ್ದನ್ನು ಪಡೆದುಕೊಳ್ಳುವುದರಲ್ಲಿ ಇವರು ಮಹಾನ್ ಜಾಣರು. ಒಂದೋ ಅಡುಗೆ ಮಾಡಿದವರನ್ನು ಸಿಕ್ಕಾಪಟ್ಟೆ ಅಟ್ಟಕ್ಕೆ ಏರಿಸಿ, ತಮಗೆ ಬೇಕಾದ್ದನ್ನು ತೆಗೆದುಕೊಂಡು ಬಿಡುತ್ತಾರೆ. ಇಲ್ಲದಿದ್ದರೆ ಅವರಿಂದಲೇ ಅದೇ ಅಡುಗೆಯನ್ನು ಮಾಡಿಸುತ್ತಾರೆ. ತಮಗೆ ಏನೂ ಬೇಡ ಎಂಬಂತೆ ಮುಖ ಮಾಡಿ, ಕೂತು ಬಿಡುತ್ತಾರೆ. ತಮ್ಮ ಆಸೆಯನ್ನು ಬೇರೆಯವರಲ್ಲೂ ಬರುವಂತೆ ಮಾಡಿ, ಅವರೇ ಇವರನ್ನು ಕರೆದುಕೊಂಡು ಹೋಗುವಂತೆಯೂ ಮಾಡಬಲ್ಲರು. ಇವರಿಗೆ ಮಧುಮೇಹ ಸಮಸ್ಯೆ ಕಾಣಿಸಿಕೊಂಡು, ಹೆಚ್ಚು ತೊಂದರೆ ಕೊಡುತ್ತದೆ.

ಕುಂಭ: ಹನ್ನೆರಡು ರಾಶಿಗಳ ಪೈಕಿಯೇ ಸ್ವಲ್ಪ ಆಸೆ ಹೆಚ್ಚಿಗೆ ಅಂದರೆ ಅದು ಕುಂಭ ರಾಶಿಯವರಿಗೆ. ಜಂಕ್ ಫುಡ್ ತುಂಬ ಆಸೆಪಟ್ಟು ತಿನ್ನುತ್ತಾರೆ. ಹೀಗೆ ಬರೆಯುವುದು ಸಹ ತಪ್ಪಾಗುತ್ತದೆ. ಏಕೆಂದರೆ ಇವರು ಇಷ್ಟಪಟ್ಟು ಏನನ್ನು ತಿನ್ನೋದಿಲ್ಲ ಅಂತ ಪ್ರಶ್ನೆ ಮಾಡಿಕೊಳ್ಳಬೇಕು. ಒಂದು ಪ್ಲೇಟ್ ನಲ್ಲಿ ಹತ್ತು ಬಜ್ಜಿ ಮುಂದಿಟ್ಟು, ನಾಲ್ಕು ಜನ ಮಾತನಾಡುವುದಕ್ಕೆ ಶುರು ಮಾಡಿದರೆ ಏಳು ಬಜ್ಜಿಯನ್ನು ಈ ಕುಂಭ ರಾಶಿಯವರೇ ತಿಂದಿರುತ್ತಾರೆ. ತಮ್ಮನ್ನು ಬೈದುಕೊಳ್ಳಬಾರದು ಎಂದು ಇತರರಿಗೆ ಒಂದೊಂದು ಇಟ್ಟಿರುತ್ತಾರೆ. ಥೈರಾಯ್ಡ್, ಬೊಜ್ಜಿನ ಸಮಸ್ಯೆ ಇವರಿಗೆ ಹೆಚ್ಚು.

ಮೀನ: ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, ಖರ್ಜೂರ ಇಂಥದ್ದನ್ನೇ ಸದಾ ಬಾಯಾಡಿಸುವ ವ್ಯಕ್ತಿಗಳು ಅಂತ ಇದ್ದರೆ ಮೀನ ರಾಶಿಯವರು ಅದರಲ್ಲಿ ನಂಬರ್ ಒನ್. ಇವರ ಆರೋಗ್ಯ ಕಾಳಜಿ ನೋಡಿ, ಎಂಥವರೂ ತಲೆದೂಗಬೇಕು. ಮೇಂಟೇನೆನ್ಸ್ ದೃಷ್ಟಿಯಿಂದ ಇವರು ಪರಮ ದುಬಾರಿ. ಬ್ರ್ಯಾಂಡ್, ಕ್ವಾಲಿಟಿ ಅಂತ ನೋಡುವುದು ಹೆಚ್ಚು. ಇನ್ನು ತಮಗೆ, ತಮಗೆ ಬೇಕಾದವರಿಗೆ ಏನಾದರೂ ಮಾಡಬೇಕು ಅಂತಾದರೆ ಇನ್ನೂ ನಿರ್ದಿಷ್ಟವಾಗಿ ಹೇಳುತ್ತಾರೆ. ಇವರಿಗೆ ಮಾನಸಿಕ ಖಿನ್ನತೆ ಹೆಚ್ಚಾದಾಗ ತಿನ್ನುವ ಪ್ರಮಾಣ ಸಿಕ್ಕಾಪಟ್ಟೆ ಆಗುತ್ತದೆ. ದೇಹದ ತೂಕದ ಮೇಲೆ ಪರಿಣಾಮ ಬೀರಿ, ಬೆನ್ನು ನೋವು, ಕಾಲು ನೋವು ಅನುಭವಿಸುತ್ತಾರೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:56 pm, Mon, 14 August 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ