Horoscope: ದಿನಭವಿಷ್ಯ, ಈ ರಾಶಿಯವರು ಆತ್ಮವಿಶ್ವಾಸದ ಕೊರತೆ ನೀಗಿಸಿಕೊಳ್ಳುವುದು ಮುಖ್ಯ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಸೆಪ್ಟೆಂಬರ್ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರು ಆತ್ಮವಿಶ್ವಾಸದ ಕೊರತೆ ನೀಗಿಸಿಕೊಳ್ಳುವುದು ಮುಖ್ಯ
ರಾಶಿಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on:Sep 19, 2023 | 10:03 PM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 19 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಆಯುಷ್ಮಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 30 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 3:28 ರಿಂದ 04:59 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:25 ರಿಂದ 10:56ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:27 ರಿಂದ 1:57ರ ವರೆಗೆ.

ಮೇಷ ರಾಶಿ: ವಿದ್ಯಾರ್ಥಿಗಳು ಪರೀಕ್ಷೆಯ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ಬಂಧುಗಳ ಆರೋಗ್ಯದ ಆರೈಕೆಯಲ್ಲಿ ನೀವು ತೊಡಗುವಿರಿ. ಅವಾಚ್ಯ ಮಾತುಗಳಿಂದ ನಿಂದನೆಗೆ ಒಳಗಾಗಬಹುದು.‌ ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ. ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯಲ್ಲಿ ಮಗ್ನರಾಗುವುದು ಬೇಡ. ನಾಯಕತ್ವವನ್ನು ನೀವು ಸ್ವತಂತ್ರದ ಕಾರಣ ನಿರಾಕರಿಸುವಿರಿ. ಹುಡುಗಾಟಿಕೆಯಿಂದ ಏನಾದರೂ ಅವಗಡವಾದೀತು. ನಿಮ್ಮ ನೋವಿಗೆ ಸ್ಪಂದಿಸಿದವರ ಜೊತೆ ಸಮಯ ಕಳೆಯುವಿರಿ. ಹೊಸತನ್ನು ಕಲಿಯಲು ಹಿಂದೇಟು ಹಾಕುವುದಿಲ್ಲ.

ವೃಷಭ ರಾಶಿ: ಆರ್ಥಿಕ‌ ಸಂಕಷ್ಟವನ್ನು ಎದುರಿಸುತ್ತಿದ್ದು ಸ್ಥಿರಾಸ್ತಿಯನ್ನು ಮಾರಾಟ ಮಾಡಲೂ ನಿಮಗೆ ಕಷ್ಟವಾದೀತು. ನಿಮ್ಮ ಜೊತೆಗಿರುವವರೇ ನಿಮ್ಮ ವಸ್ತುವನ್ನು ಅಪಹರಿಸುವರು. ಇಂದು ಏನಾದರೂ ಆಗುತ್ತದೆ ಎಂಬ ಅಪಾಯವು ಇರಲಿದೆ. ವೃತ್ತಿಯ ಏಕತಾನತೆಯಿಂದ ಹೊರಬರಲು ಬಯಸುವಿರಿ. ನೀವು ನಿಜವನ್ನು ಅಷ್ಟು ಸುಲಭವಾಗಿ ನಂಬಲಾರಿರಿ. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿಕೊಳ್ಳುವಿರಿ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಪ್ರಶಂಸನೀಯವೇ. ಬಂಧುಗಳ ಮನೆಯಲ್ಲಿ ನೀವು ಇಂದು ಭೋಜನ ಮಾಡುವಿರಿ. ಪ್ರಾರಂಭಿಸಿದ ಕೆಲಸದಲ್ಲಿ ಉತ್ಸಾಹ ಹೆಚ್ಚಿದ್ದರೂ ಮಾರ್ಗದಲ್ಲಿ ಗೊಂದಲವೂ ಇರುವುದು.‌ ಗಣಪತಿಯ ಆರಾಧನೆಯಿಂದ ನಿಮಗೆ ಪರಿಹಾರವು ಗೋಚರಿಸುವುದು.

ಮಿಥುನ ರಾಶಿ: ಮಕ್ಕಳ ಕುರಿತು ನಿಮಗೆ ಅಭಿಮಾನ ಮೂಡಬಹುದು. ಪ್ರಯಾಣವು ಅಹಿತವೆನಿಸಬಹುದು. ನಿಮಗೆ ಬೇಕಾದುದನ್ನು ಕೇಳಿ ಪಡೆಯುವಿರಿ. ವೃತ್ತಿಯ ಸ್ಥಳದಲ್ಲಿ ನಿಮ್ಮನ್ನು ಗುರುತಿಸುವರು. ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮುಗಿಸುವಿರಿ. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯವಾಗುವುದು. ನಿಮ್ಮ ಸಾಮಾಜಿಕ ಕಾರ್ಯಕ್ಕೆ ಬೆಂಬಲವನ್ನು ಅಪೇಕ್ಷಿಸುವಿರಿ. ಖುಷಿಯಾಗಿರಲು ನಾನಾ ಮಾರ್ಗಗಳನ್ನು ಹುಡುಕುವಿರಿ. ಪ್ರಾಮಾಣಿಕತೆಯು ನಿಮಗೆ ಇಷ್ಟವಾದರೂ ಇದರಿಂದ ಪ್ರಯೋಜನವಿಲ್ಲ ಎಂದು ಅನ್ನಿಸಬಹುದು. ತಾಳ್ಮೆಯಲ್ಲಿ ಇಂದು ನೀವು ಉತ್ತೀರ್ಣರಾಗುವುದು ಕಷ್ಟ.

ಕಟಕ ರಾಶಿ: ಗೌಪ್ಯವಾಗಿ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ಕೆಲವು ವಿಚಾರಕ್ಕೆ ಬುದ್ಧಿಯು ಸೂಚಿಸದೇ ಇರಬಹುದು. ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದು ಬೇಡ. ನಿಮ್ಮ ಶ್ರಮಕ್ಕೆ ಯೋಗ್ಯ ವರಮಾನ ಇಲ್ಲ ಎನಿಸಬಹುದು. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ನಿಮಗೆ ಇಂದು ವಾದದಲ್ಲಿ ಸೋಲಾಗಬಹುದು. ನಿಮ್ಮ ಸಾಮರ್ಥ್ಯವನ್ನು ಎಲ್ಲಿಯೋ ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ಇಂದು ಮೋಸದ ಕರೆಗಳಿಂದ ವಂಚನೆಯ ಜಾಲಕ್ಕೆ ಸಿಕ್ಕಿಕೊಳ್ಳಬಹುದು. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳು ತಿರಸ್ಕರಿಸಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:15 am, Tue, 19 September 23

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ