ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 20 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಚತುರ್ಥಿ, ನಿತ್ಯನಕ್ಷತ್ರ: ಹಸ್ತಾ, ಯೋಗ: ಸಾಧ್ಯ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 05:15 ರಿಂದ 06:51ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:36 ರಿಂದ 02:10ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:43 ರಿಂದ 05:17ರ ವರೆಗೆ.
ಮೇಷ ರಾಶಿ: ದೂರದ ಬಂಧುವನ್ನು ನೀವು ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ಕೇಳದೇ ಇದ್ದುದಕ್ಕೆ ಬೇಸರವಾಗಬಹುದು. ವಿವಾಹದ ಮಾತುಕತೆಗೆ ಕುಟುಂಬದ ಜೊತೆ ತೆರಳುವಿರಿ. ನೀವು ಸ್ವತಂತ್ರವಾಗಿದ್ದುದು ನೆಮ್ಮದಿಯಿಂದ ಇರುವಿರಿ. ಭೂಮಿಯ ವ್ಯವಹಾರದಿಂದ ಲಾಭವು ಕಡಿಮೆ ಆಗುವುದು. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮಗೆ ಬೇಡ ಎನಿಸಿದ ವಿಚಾರದ ಬಗ್ಗೆ ನೀವು ಏನನ್ನೂ ಹೇಳದೇ ಇರುವಿರಿ. ಕಲಾವಿದರಾಗುವ ಕನಸು ನನಸಾಗುವುದು. ಕಾರ್ತಿಕೇಯನ ದರ್ಶನವನ್ನು ಮಾಡಿ.
ವೃಷಭ ರಾಶಿ: ನಿದ್ರೆಯಲ್ಲಿ ಕಂಡ ಕನಸಿನಿಂದ ನಿಮಗೆ ಭಯವಾಗುವುದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಭಕ್ತಿಯು ಕಡಿಮೆ ಆಗಬಹುದು. ಆಹಾರದಿಂದ ಆರೋಗ್ಯವು ಕೆಡುವುದು. ನಿಮಗೆ ಬೇಕಾದ ವಸ್ತುವೇ ಆದರೂ ಅದನ್ನು ಕೇಳಿದವರಿಗೆ ಕೊಡುವಿರಿ. ನಿಮ್ಮ ನಂಬಿಕೆಗೆ ಘಾಸಿಯಾಗುವ ಸಾಧ್ಯತೆ ಇದೆ. ಖರ್ಚಿನ ಬಗ್ಗೆ ನಿರ್ದಿಷ್ಟ ಮಿತಿ ಇರಲಿ. ಸಹಾಯವನ್ನು ಕೇಳಿದವರಿಗೆ ಇಲ್ಲ ಎನ್ನಲು ಮನಸ್ಸು ಬಾರದು. ಯಾರನ್ನೋ ಹೋಲಿಸಿಕೊಂಡು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲರೂ ಇದ್ದರೂ ಏಕಾಂಗಿ ಎಂದು ಅನ್ನಿಸಬಹುದು. ನಾಗ ದೇವರ ಆರಾಧನೆಯನ್ನು ಮಾಡಿ.
ಮಿಥುನ ರಾಶಿ: ನಿಮ್ಮ ಕಾರ್ಯಕ್ಕೆ ವಿಘ್ನವು ಬರಲಿದ್ದು ನಕಾರಾತ್ಮಕ ನಿಮ್ಮಲ್ಲಿ ಆತಂಕವು ಸೃಷ್ಟಿಯಾಗಬಹುದು. ಕೆಲವು ವಿಚಾರಗಳನ್ನು ನೀವು ನಿರ್ಲಕ್ಷ್ಯಿಸದಿದ್ದರೆ ಅದು ದೊಡ್ಡದಾಗಬಹುದು. ಆಪ್ತರ ಸಲಹೆಯನ್ನು ಪಡೆಯಲು ನಿಮಗೆ ಮುಜುಗರವಾದೀತು. ಮಕ್ಕಳ ಬಗ್ಗೆ ನಿಮಗೆ ಅನುಕಂಪ ಬರುವುದು. ಎಲ್ಲರೂ ನಿಮ್ಮನ್ನೇ ಗುರಿ ಮಾಡಿಕೊಂಡು ಮಾತನಾಡುವರು. ಮರೆಯಾಗಿದ್ದ ಸ್ಥಿರಾಸ್ತಿಯ ಕಲಹವು ಮತ್ತೆ ಹುಟ್ಟಕೊಳ್ಳುವುದು. ಯಾರೂ ನಿಮ್ಮನ್ನು ನೋಡಿಕೊಳ್ಳುವುದಿಲ್ಲ ಎಂದು ಅನ್ನಿಸಬಹುದು. ಆಪ್ತರಿಗೆ ಅಮೂಲ್ಯವಾದ ಕೊಡುಗೆಯನ್ನು ಕೊಡುವಿರಿ. ಕಳೆದ ದುಃಖದ ಸಮಯವನ್ನು ಮತ್ತೆ ನೆನಪಿಸಿಕೊಳ್ಳುವಿರಿ.
ಕರ್ಕ ರಾಶಿ: ನಿಮ್ಮವರನ್ನು ಕಳೆದುಕೊಳ್ಳುತ್ತೇನೆ ಎಂಬ ಭಯವು ಇರುವುದು. ವಾಸ್ತವದಲ್ಲಿ ಬದುಕುವುದನ್ನು ಕಲಿಯಿರಿ. ನಿಮ್ಮ ನೋವನ್ನು ಕೇಳಲು ಯಾರೂ ಇಲ್ಲವೆಂದು ಬೇಸರವಾಗುವುದು. ಸಿಟ್ಟನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ. ಕೃಷಿಯಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ಇಂದಿನ ನಿಮ್ಮ ಕೆಲಸವು ನೆಮ್ಮದಿಯನ್ನು ಕೊಡುವುದು. ನಿಮ್ಮ ಉದ್ಯಮವನ್ನು ವಿಸ್ತರಿಸಲು ಯೋಚಿಸುವಿರಿ. ಸಂಗಾತಿಯಿಂದ ನಿಮಗೆ ಉಡುಗೊರೆಯು ಸಿಗುವುದು. ವಿದೇಶೀ ಬಂಧುಗಳ ಜೊತೆ ವ್ಯಾವಹಾರಿಕ ಮಾತುಕತೆಗಳು ನಡೆಯುವುದು. ದೇವರ ದರ್ಶನಕ್ಕೆ ಹೋಗುವ ಮನಸ್ಸಾಗುವುದು.