Horoscope: ಸಂದೇಹಗಳ ಕಾರಣದಿಂದ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 22, 2023 | 12:10 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಸಂದೇಹಗಳ ಕಾರಣದಿಂದ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವಿರಿ
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 22 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಶುಕ್ಲ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:43 ರಿಂದ 05:16ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:02ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:35 ರಿಂದ 02:09ರ ವರೆಗೆ.

ಮೇಷ ರಾಶಿ: ಉನ್ನತ ಶಿಕ್ಷಣಕ್ಕಾಗಿ ಮನೆಯಿಂದ ಹೊರಗೆ ಇರಬೇಕಾಗುವುದು. ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಸೃಷ್ಟಿಸುವರು. ಸೌಂದರ್ಯಕ್ಕೆ ಇಂದು ಬೆಲೆಕೊಡಲಿದ್ದೀರಿ. ನಿಮ್ಮಿಂದ ಉಪಕಾರವನ್ನು ಪಡೆದು ಶತ್ರಗಳಾಗುವರು. ಸಂಗಾತಿಯಿಂದ .ನೀವು ನಿರ್ಲಕ್ಷ್ಯಕ್ಕೆ ಒಳಗಾಗುವಿರಿ. ನಿಮ್ಮ ಕುರಿತು ನೀವು ನಕಾರಾತ್ಮಕ ಆಲೋಚನೆಯನ್ನು ಮಾಡುವಿರಿ. ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಸಂಗತಿಗಳು ಬರಬಹುದು. ಸ್ವಂತ ವಾಹನದಿಂದ ದೂರ ಪ್ರಯಾಣವನ್ನು ಮಾಡುವಿರಿ. ನಿಮ್ಮ ಹಾಸ್ಯ ಸ್ವಭಾವವು ಕೆಲವರಿಗೆ ಇಷ್ಟವಾಗದು. ಮಾತು ನೇರವಾಗಿದ್ದರೂ ಮೃದುವಾಗಿರಲಿ. ನಿಮ್ಮ‌ ನಡತೆಯನ್ನು ಯಾರಾದರೂ ಅನುಕರಿಸುವರು.

ವೃಷಭ ರಾಶಿ: ಕಛೇರಿಯ ಕೆಲಸವು ನಿಮಗೆ ಸಾಕೆನಿಸಬಹುದು. ಸಮಾಧಾನದ ಚಿತ್ತವು‌ ಅನೇಕ ಸಂಗತಿಗಳಿಗೆ ಪೂರಕವಾಗಲಿದೆ. ಆರೋಗ್ಯದ ವಿಚಾರದಲ್ಲಿ‌ ನಿರ್ಲಕ್ಷಿಸುವುದು ಸೂಕ್ರವಲ್ಲ. ನಿಮ್ಮ‌ ಬಲದ ಪ್ರದರ್ಶನವನ್ನು ಮಾಡಬೇಕಾದೀತು. ಮಾನಸಿಕವಾಗಿ ನೀವು ದುರ್ಬಲವಾಗಲಿದ್ದು ಏಕಾಂತದಿಂದ ಇರುವುದು ಉತ್ತಮ. ಸುಮ್ಮನೇ ವಾದವನ್ನು ಮಾಡಲು ಹೋಗಿ ನಿಮ್ಮ ಸಮಯವನ್ನು ಹಾಗೂ ಇತರರ‌‌ ಸಮಯವನ್ನೂ
ವ್ಯರ್ಥ ಮಾಡುವಿರಿ. ನಿಮ್ಮ ಗುರಿಯು ಬದಲಾಗಬಹುದು. ‌ಪ್ರಾಣಿಗಳಿಂದ ನಿಮಗೆ ಭೀತಿಯು ಬರಬಹುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ.

ಮಿಥುನ ರಾಶಿ: ಪ್ರೇಮಕ್ಕೆ ಮಿತ್ರರಿಂದ‌ ಸಹಕಾರವು ಸಿಗಲಿದೆ. ಸಹೋದ್ಯೋಗಿಗಳಿಂದಲೂ ಸಾಲಾವನ್ನು ಪಡೆಯಬೇಕಾಗಬಹುದು. ಸ್ನೇಹ ಸಂಬಂಧವನ್ನು ಹೆಚ್ಚು ಆಪ್ತವಾಗಸಿಕೊಳ್ಳುವಿರಿ. ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗಬಹುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ಎಲ್ಲವನ್ನೂ ಹೇಳಬೇಕೆಂದಿಲ್ಲ. ಸಂಗಾತಿಯ ಮೇಲೇ ಪ್ರೀತಿಯು ಹೆಚ್ಚುವುದು. ಸ್ವಲ್ಪ‌ ತಿಳಿಯದವರ ಮಾರ್ಗರ್ಶನ ನಿಮ್ಮ ಸ್ವಂತ ಅಲೋಚವನೆಯೇ ಸೂಕ್ತ. ಏಕಾಂಗಿ ಇರುವುದು ನಿಮಗೆ ಇಷ್ಟವಾಗದೇ ಇರಬಹುದು. ಸಮಾರಂಭಗಳಿಗೆ ಭಾಗವಹಿಸುವಿರಿ.

ಕರ್ಕ ರಾಶಿ: ಯಾವದೂ ನೀವಂದುಕೊಂಡಷ್ಟು ಸುಲಭವಾಗಿ ಆಗದು ಎಂಬುದರ ಮನವರಿಕೆ ಆಗುವುದು. ಬೇರೆಯವರ ಮೇಲೆ ದೋಷಗಳ ಪಟ್ಟಿಯನ್ನೇ ಮಾಡುವಿರಿ. ನಿಮ್ಮ ಮಾತುಗಳೇ ನಿಮಗೆ ಪುನಃ ಬರಲಿದೆ. ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಖರೀದಿಯನ್ನು ಬಹಳ ಭರದಿಂದ ಮಾಡುವಿರಿ. ಸಂದೇಹದ ಕಾರಣದಿಂದ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವುರಿ. ಸಂಗಾತಿಯ ಮಾತು ನಿಮ್ಮೊಳಗೆ ನಾಟಬಹುದು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ತಂದೆಯಿಂದ ಸಹಾಯವನ್ನು ಪಡೆಯುವಿರಿ. ಸಾಲದ ವಿಚಾರದಲ್ಲಿ ಹೆಚ್ಚಿನ ತಿಳಿವಳಿಕೆ ಅಗತ್ಯ. ದೂರ‌ಪ್ರಯಾಣವು ಸುಖ ಎನಿಸಬಹುದು.