Horoscope: ನೋವನ್ನು ನುಂಗಿ ಬದುಕುವ ರೀತಿಯು ಈ ರಾಶಿಯವರಿಗೆ ಗೊತ್ತಾಗಲಿದೆ

| Updated By: Rakesh Nayak Manchi

Updated on: Sep 27, 2023 | 12:15 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಸೆಪ್ಟೆಂಬರ್ 27) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ನೋವನ್ನು ನುಂಗಿ ಬದುಕುವ ರೀತಿಯು ಈ ರಾಶಿಯವರಿಗೆ ಗೊತ್ತಾಗಲಿದೆ
ರಾಶಿಭವಿಷ್ಯ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 27 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಧನಿಷ್ಠಾ / ಶತಭಿಷಾ, ಯೋಗ: ಧೃತಿ / ಶೂಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 24 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:24 ರಿಂದ 01:54ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:53 ರಿಂದ 09:23ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:24ರ ವರೆಗೆ.

ಮೇಷ ರಾಶಿ: ಇಂದು ನೀವು ನಿಮ್ಮ ಉದ್ದೇಶಿಸಿದ್ದಕ್ಕಿಂತ ಅಧಿಕ ಮುನ್ನಡೆ ಸಾಧಿಸುವಿರಿ. ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು. ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳಿ. ಸ್ನೇಹಿತರಿಂದ ಅಲ್ಪ ಆರ್ಥಿಕ ಲಾಭವು ನಿಮಗೆ ಸಿಗುವುದು. ಆರಾಮಾಗಿ ಇರಲು ನೀವು ಹೆಚ್ಚು ಇಷ್ಟಪಡುವಿರಿ. ಅತಿಯಾದ ಆಯಾಸವನ್ನು ಮಾಡಿಕೊಳ್ಳದೇ ಕಾರ್ಯವನ್ನು ಮಾಡುವಿರಿ. ಕಛೇರಿಯಲ್ಲಿ ಸಹೋದ್ಯೋಗಿಗಳಿಂದ ಇಂದು ನಿಮಗೆ ಸಹಾನುಭೂತಿಯು ಸಿಗುವುದು. ಸಂಬಂಧಗಳನ್ನು ಬಳಸಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಹಂಬಲವು ಇರಲಿದೆ.

ವೃಷಭ ರಾಶಿ: ಉತ್ಸಾಹದಿಂದ ಏನನ್ನಾದರೂ ಮಾಡಲು ಹೋಗುವಿರಿ. ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ನೋವನ್ನು ನುಂಗಿ ಬದುಕುವ ರೀತಿಯು ನಿಮಗೆ ಗೊತ್ತಾಗಲಿದೆ. ಇನ್ನೊಬ್ಬರನ್ನು ನೋಯಿಸುವುದು ನಿಮಗೆ ಇಷ್ಟವಾಗದು. ನೂತನ ವಸ್ತುಗಳನ್ನು ಖರೀದಿಸುವಿರಿ. ಮನೋರಂಜನೆಯಲ್ಲಿ ನಿಮ್ಮ ಹೆಚ್ಚಿನ ಸಮಯವನ್ನು ಕಳೆಯಬೇಕಾದೀತು. ಕಛೇರಿಯ ಇಂದಿನ ಕಾರ್ಯವನ್ನು ಕಾರಣಾಂತರಗಳಿಂದ ಮುಂದೆ ಹಾಕುವಿರಿ. ನಿಮ್ಮ ಸ್ವಭಾವವನ್ನು ಸರಿ ಮಾಡಿಕೊಳ್ಳಬೇಕಾದೀತು. ಮೇಲಧಿಕಾರಿಗಳ ಬೆಂಬಲವು ನಿಮಗೆ ಬಲವನ್ನು ಕೊಡಬಹುದು.

ಮಿಥುನ ರಾಶಿ: ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ಇರುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಹೊಸ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯವು ಸಾಲದು. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾದಂತೆ ತೋರುವುದು. ಹೊಂದಾಣಿಕೆಯ ಮನೋಭಾವವು ಇರಬೇಕಾದೀತು. ಹಣವನ್ನು ಉಳಿಸಿಕೊಳ್ಳಲು ನಿಮ್ಮ ಪ್ರಯತ್ನವು ಫಲಕೊಡುವುದು. ಇಂದಿನ ನಿಮ್ಮ ವರ್ತನೆಯು ಗಾಂಭೀರ್ಯದಿಂದ ಇರಲಿದೆ. ಅನಾರೋಗ್ಯದ ಸಮಸ್ಯೆಯನ್ನು ನೀವು ನಿರ್ಲಕ್ಷಿಸುವುದು ಬೇಡ. ಇಂದು ನೀವು ಮಾತನ್ನು ಅಧಿಕವಾಗಿ ಆಡುವಿರಿ.

ಕಟಕ ರಾಶಿ: ಅತಿಯಾದ ಪ್ರಯಾಣದಿಂದ ನೀವು ದುರ್ಬಲರಾಗುವಿರಿ. ಇತ್ತೀಚಿನ ಕೆಲವು ಸ್ಥಿತಿಗಳು ಒತ್ತಡವನ್ನು ತಂದಿರಬಹುದು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಆತಂಕ ಇರುವುದು. ಕಳೆದುಕೊಂಡದ ವಸ್ತುವಿನ ಬಗ್ಗೆ ಮೋಹವಿರುವುದು. ಗೊಂದಲವನ್ನು ಮಾಡಿಕೊಳ್ಳದೇ ಕೆಲಸವನ್ನು ಸರಳ ಮಾಡಿಕೊಳ್ಳಿ. ಬಿಡುವಿನ ಸಮಯವನ್ನು ಅಧಿಕ ಸಂಪಾದನೆಗಾಗಿ ಬಳಸಿಕೊಳ್ಳುವಿರಿ. ಒಂದಕ್ಕಿಂತ ಹೆಚ್ಚು ಕೆಲಸವನ್ನು ಒಟ್ಟಿಗೇ ಮಾಡಲು ಹೋಗಿ ಅಸ್ತವ್ಯಸ್ತ ಮಾಡಿಕೊಳ್ಳುವಿರಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ