Horoscope: ಇಂದು ಈ ರಾಶಿಯವರಿಗೆ ಸಂಯಮವು ಮುಖ್ಯ, ಹಿರಿಯರ ಮಾತಿಗೆ ಬೆಲೆ ಇರಲಿ

| Updated By: Rakesh Nayak Manchi

Updated on: Sep 05, 2023 | 12:15 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಸೆಪ್ಟೆಂಬರ್ 5) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಇಂದು ಈ ರಾಶಿಯವರಿಗೆ ಸಂಯಮವು ಮುಖ್ಯ, ಹಿರಿಯರ ಮಾತಿಗೆ ಬೆಲೆ ಇರಲಿ
ಪ್ರಾತಿನಿಧಿಕ ಚಿತ್ರ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 5 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಧ್ರುವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:36 ರಿಂದ 05:09 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:27 ರಿಂದ 10:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:31 ರಿಂದ 02:04ರ ವರೆಗೆ.

ಮೇಷ ರಾಶಿ: ನಿಮ್ಮ ಮಾತುಗಳಿಗೆ ತೂಕವು ಕಡಿಮೆ‌ ಆಗಬಹುದು. ಸ್ಥಾನಕ್ಕಾಗಿ ನೀವು ಎದುರುನೋಡುತ್ತಿದ್ದರೆ ನಿಮಗೆ ಅದು ಸಿಗಬಹುದು. ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ನಿಮ್ಮನ್ನು ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ನಿರ್ಧಾರವನ್ನು ಮಕ್ಕಳು ಒಪ್ಪದೇ ಇರುವುದು ನಿಮಗೆ ಕೋಪಬರಬಹುದು. ನೀವು ಇಂದು‌ ಪ್ರೀತಿಯನ್ನು ಹೇಳಿಕೊಳ್ಳುವಿರಿ. ಸಂಬಂಧವಿಲ್ಲದ ವಿಚಾರದಲ್ಲಿ ಮೂಗುತೂರಿಸುವುದು ಬೇಡ. ನಿಮ್ಮ ಆಸೆಯನ್ನು ಪೂರೈಸಿಕೊಳ್ಳಲು ಖರ್ಚು ಮಾಡುವಿರಿ.

ವೃಷಭ ರಾಶಿ: ಇಂದು ಕುಟುಂಬದಲ್ಲಿ ಆತಂಕವು ಇರಲಿದ್ದು ದೈವದ ಮೊರೆ ಹೋಗುವಿರಿ. ನೀವು ಇಂದು ಮಾನಸಿಕವಾಗಿ ಕುಗ್ಗುವಿರಿ. ಯಾರ ಸಮಾಧಾನವೂ ನಿಮಗೆ ಸಾಂತ್ವನ‌ವನ್ನು ನೀಡದು. ನಿಮ್ಮ ಇಂದಿನ‌ ಕಾರ್ಯದಲ್ಲಿ ಸಾವಧಾನತೆ ಇರಲಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವಿರಿ. ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿ ಪ್ರಯೋಜನವಾಗದು. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ವ್ಯಾಪಾರವು ಮಧ್ಯಮ‌ ಲಾಭವನ್ನು ಗಳಿಸಬಹುದು.

ಮಿಥುನ ರಾಶಿ: ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಅತಿಥಿಗಳ ಆಗಮನದಿಂದ‌ ಸಂತೋಷವಾಗುವುದು. ಸಂಗಾತಿಯ ಜೊತೆ ಸಣ್ಣ ವಿಚಾರಕ್ಕೂ ಕಲಹ ಮಾಡಿಕೊಳ್ಳುವಿರಿ. ನಿಮ್ಮ‌ ಚಂಚಲವಾದ ಸ್ವಭಾವವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಕಷ್ಟವಾದೀತು.‌ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದೂರ ಹೋಗುವ ಮನಸ್ಸು ಮಾಡುವಿರಿ. ಸುಲಭವಾದ ಮಾರ್ಗವನ್ನು ನೀವು ಕ್ಲಿಷ್ಟ ಮಾಡಿಕೊಳ್ಳುವಿರಿ. ದೈವಭಕ್ತಿಯು ಅಧಿಕವಾಗುವುದು. ಇಂದು ಸಂಯಮವು ಮುಖ್ಯ. ಹಿರಿಯರ ಮಾತಿಗೆ ಬೆಲೆ ಇರಲಿ.

ಕಟಕ ರಾಶಿ: ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ಮೇಲಧಿಕಾರಿಗಳು ನಿಮ್ಮ ಮೇಲೆ‌ ಒತ್ತಡ ಹೇರಬಹುದು. ನಿಮ್ಮ ಮೇಲೆ ಪಿತೂರಿ ಮಾಡಿದ ಅನುಮಾನ ಇರಲಿದೆ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ. ಕೆಲಸವು ಪೂರ್ಣವಾಗದೇ ಒದ್ದಾಡಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ಸಂಗಾತಿಯ ಕೋಪವನ್ನು ನೀವು ಕಡಿಮೆ ಮಾಡುವಿರಿ. ಪಾಲುದಾರಿಕೆಯಲ್ಲಿ ನಿಮ್ಮ ನಿಮಗೆ ವ್ಯಥೆಯು ಇರಲಿದೆ. ಉಪಕರಿಸಿದವರ ಮೇಲೆ ನಿಮಗೆ ಸ್ಮರಣೆ ಇರಲಿ. ಮನೆಯ ಕೆಲಸವನ್ನು ಮಾಡಲು ಉತ್ಸಾಹವೇ ಇರದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ