Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

|

Updated on: Apr 10, 2023 | 5:30 AM

2023 ಏಪ್ರಿಲ್​ 10 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Image Credit source: zeenews.india.com/marathi
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 10 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಸೋಮ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಅನೂರಾಧಾ, ಯೋಗ : ವ್ಯತಿಪಾತ್, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ 07:56 ರಿಂದ 09:29ರ ವರೆಗೆ, ಯಮಘಂಡ ಕಾಲ 11:01 ರಿಂದ 12:34ರ ವರೆಗೆಮ ಗುಳಿಕ ಕಾಲ 02:06 ರಿಂದ 03:39ರ ವರೆಗೆ.

ಮೇಷ: ಇಂದು ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು. ಸಂಗಾತಿಗಳ ನಡುವೆ ಕಲಹವಿರಲಿದೆ. ಆರ್ಥಿಕಸ್ಥಿತಿಯ ಸುಧಾರಣೆಯಾಗುವುದು. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳುವಿರಿ. ಸ್ನೇಹಿತರೊಂದಿಗೆ ಸುತ್ತಾಡಲು ಎಲ್ಲೋ ಹೋಗಬಹುದು. ಬೆನ್ನು ನೋವಿನ ಸಮಸ್ಯೆಯು ಕಾಣಿಸಿಕೊಳ್ಬಹುದು. ನೀವಿಂದು ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದೀರಿ. ನಿಮ್ಮ ಮಾತಿಗೆ ಮನ್ನಣೆ ಸಿಗಲಿಲಿದೆ. ಎಂದೋ ಪಟ್ಟ ಶ್ರಮದ ಫಲವನ್ನು ಅನುಭವಿಸುವ ಕಾಲ ಬರಲಿದೆ. ಜೀವನಕ್ಕೋಸ್ಕರ ನಾನಾ ಕೆಲಸಗಳನ್ನು ಮಾಡುವಿರಿ. ನಾಗದೇವರ ಪೂಜೆ ಮಾಡಿ.

ವೃಷಭ: ನಿಮಗೆ ನಿಮ್ಮ ಸಹೋದರನು ಧನಸಹಾಯ ಮಾಡುವನು. ಇದರಿಂದ ಕೊಂಚ ಸುಧಾರಿಸಿಕೊಳ್ಳುವಿರಿ. ಮನಸ್ಸನ್ನು ಆರೋಗ್ಯವಾಗಿ ಇಟ್ಟುಕೊಳ್ಳುವ ಕಡೆಗೆ ಗಮನವಿರಲಿ. ಕಲಹದ ವಿಚಾರದಲ್ಲಿ ರಾಜಿಯಾಗುವ ಸನ್ನಿವೇಶಗಳು ಬರಬಹುದು. ಹಿರಿಯರ ಸಮ್ಮುಖದಲ್ಲಿ ಮನೆಯ ಕಾರ್ಯವು ಮುನ್ನಡೆದರೆ ಸೊಗಸು. ನ್ಯಾಯಾಲಯದಲ್ಲಿ ಆಸ್ತಿಗೆ ಸಂಬಂಧಿಸಿದ ವಾದ-ವಿವಾದಗಳು ನಡೆಯಬಹುದು. ನೂತನ ವಾಹನ ಖರೀದಿಯನ್ನು ಮಾಡುವಿರಿ. ಗಣಪತಿಯ ಸ್ಮರಣೆಯನ್ನು ಮಾಡಿ.

ಮಿಥುನ: ನಿಮ್ಮ ತಂದೆ-ತಾಯಿಯರು ನಿಮಗೆ ಜೀವನದ ಬಗ್ಗೆ ಸಂಗಾತಿಯ ಸಲಹೆಯನ್ನು ತೆಗೆದುಕೊಳ್ಳುವಿರಿ. ನಿಮ್ಮ ದೇಹವು ನಿಮಗೆ ದುರ್ಬಲವಾಗಿದೆ. ದೇಹವನ್ನು ದೃಢವಾಗಿಸಿಕೊಳ್ಳುವ ಕುರಿತು ಪ್ರಯತ್ನಿಸುವಿರಿ. ನೀವು ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಪ್ರೀತಿಸಿ ಮೋಸಹೋಗುವ ಸಾಧ್ಯತೆ ಇದೆ. ಪ್ರೀತಿಸುವಾಗ ಪೂರ್ವಾಪರ ಯೋಚನೆ ಇರಲಿ. ಸಾಲವನ್ನು ಮಾಡಿ ವಾಹನವನ್ನು, ಖರೀದಿಸುದು ಬೇಡ. ಸಮಯಸ್ಫೂರ್ತಿಯಿಂದ ನೀವು ನಿಮ್ಮವರನ್ನು ಸಂತೋಷವಾಗಿರಿಸುವಿರಿ. ನಿಮ್ಮವರಿಗೆ ನಿಮ್ಮನ್ನು ನೋಡಿ ಮಾತನಾಡಬೇಕು ಎನ್ನಿಸಬಹುದು. ಕೇಳಿದವರಿಗೆ ಇಲ್ಲವೆನ್ನಬೇಡಿ. ಲಕ್ಷ್ಮೀಕೃಪೆಯು ಬೇಕಿದೆ. ಕನಕಧಾರಾಸ್ತೋತ್ರವನ್ನು ಪಠಿಸಿ.

ಕರ್ಕ: ನಿಮಗಿಂದು ಅದೃಷ್ಟದ ದಿನವೆಂದೇ ಹೇಳಬಹುದು. ನಿಮಗೆ ಒಳ್ಳೆಯ ಉದ್ಯೋಗದ ಕಂಪೆನಿಗೆ ಸೇರುವ ಅವಕಾಶವಿದೆ. ಗೊತ್ತಿಲ್ಲದೇ ನಿಮ್ಮ ಸಮಯವು ವ್ಯರ್ಥವಾಗಬಹುದು. ಅಪರಿಚಿತರನ್ನು ಎದುರುಹಾಕಿಕೊಳ್ಳಬೇಡಿ. ಹಳೆಯ ಪ್ರೇಮಪ್ರಕರಣವು ಮುನ್ನೆಲೆಗೆ ಬರಬಹುದು. ಅದನ್ನು ಶಾಂತವಾಗಿಸಿ. ಇಲ್ಲವಾದರೆ ಇದರಿಂದ ಕುಟುಂಬದಲ್ಲಿ ಆಶಾಂತಿ ಉಂಟಾಗಬಹುದು. ಕಳೆದುಕೊಂಡಿದ್ದರೆ ಬಗ್ಗೆ ಆಲೋಚಿಸುತ್ತ ಸಮಯವನ್ನು ವ್ಯರ್ಥಮಾಡಬೇಡಿ. ಮುಂದೆ ಆಗುವುದರ ಬಗ್ಗೆಯೂ ಯೋಚನೆ ಇರಲಿ.