Weekly Horoscope ವಾರ ಭವಿಷ್ಯ: ಮೇಷದಿಂದ ಮೀನವರೆಗಿನ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ
ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ (Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಏಪ್ರಿಲ್ 09ರಿಂದ ಏಪ್ರಿಲ್ 15ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ಮೇಷ: ಈ ವಾರ ಬುಧ ಹಾಗೂ ರಾಹುಗಳು ಒಟ್ಟಿಗೇ ಇರಲಿದ್ದಾರೆ. ತಲೆಯಲ್ಲಿ ಗಾಯಗಳಾಗಬಹುದು. ಹುಣ್ಣಾಗುವ ಸಾಧ್ಯತೆಯೂ ಇದೆ. ಶುಕ್ರನು ದ್ವಿತೀಯದಲ್ಲಿ ಇರಲಿದ್ದಾನೆ. ಸ್ತ್ರೀಸಂಬಂಧದಿಂದ ಹಣವು ಲಭ್ಯವಾಗಲಿದೆ. ತೃತೀಯದಲ್ಲಿರುವ ಕುಜನು ನಿಮ್ಮ ಸಾಹೋದರ್ಯಭಾವವನ್ನೂ ಪರಾಕ್ರಮವನ್ನೂ ತೋರಿಸುವನು. ಏಕಾದಶದಲ್ಲಿರುವ ಶನಿಯು ಪರಿಶದರಮದಿಂದ ಹಣವು ಮಾಡುವನು. ಭೂಮಿಯ ವ್ಯವಹಾರದಿಂದ ಲಾಭವು ಆಗಲಿದೆ. ದ್ವಾದಶದಲ್ಲಿರುವ ರವಿಯು ತಂದೆಯಿಂದ ನಷ್ಟವಾಗುವ ಸಾಧ್ಯತೆ ಇದೆ. ವಾರದ ಮಧ್ಯದಲ್ಲಿ ರವಿಯು ಮೇಷರಾಶಿಗೆ ಪ್ರವೇಶ ಪಡೆಯುವನು. ಸೂರ್ಯನು ಪೂರ್ಣಫಲವನ್ನು ಕೊಡುವ ರಾಶಿ ಇದಾಗಿದೆ.
ವೃಷಭ: ಈ ವಾರ ದ್ವಿತೀಯದಲ್ಲಿ ಕುಜನಿರುವನು. ಮಾತಿನ ಮೇಲೆ ಹಿಡಿತವಿರುವಂತೆ ಮಾಡುವನು. ಕಠೋರವಚನಗಳು ಬರಬಹುದು. ನಿಮ್ಮ ರಾಶಿಗೆ ಶುಕ್ರನ ಪ್ರವೇಶವಾಗಲಿದೆ. ಸ್ವಕ್ಷೇತ್ರ ಶುಕ್ರನು ಭೋಗಸುಖವನ್ನು ಕೊಡುವನು. ಷಷ್ಠದಲ್ಲಿರುವ ಕೇತುವು ಅನಾರೋಗ್ಯವನ್ನು ನಾಶ ಮಾಡಿ ಶಾರೀರಿಕ ಬಲವನ್ನು ಹೆಚ್ಚಿಸುವನು. ಏಕಾದಶದಲ್ಲಿರುವ ಗುರು ನಿಮ್ಮ ಕಾರ್ಯವನ್ನು ಸಾಧಿಸಿಕೊಡುವರು. ಸಂಪತ್ತು ಸಿಗುವಂತೆ ಮಾಡುವರು. ಸೂರ್ಯನು ವಾರದ ಮಧ್ಯದಲ್ಲಿ ಮೇಷವನ್ನು ಪ್ರವೇಶಿಸುವನು. ಜ್ವರಾದಿಗಳಿಂದ ಹಣವ್ಯಯವಾಗಲಿದೆ. ರಾಹು, ಬುಧರಿಂದ ಬುದ್ಧಿಗೆ ತಡೆಯಾಗಲಿದೆ.
ಮಿಥುನ: ನಿಮ್ಮ ರಾಶಿಯಲ್ಲಿಯೇ ಕುಜನಿದ್ದಾನೆ. ಎದೆಯ ಭಾಗಕ್ಕೆ ಯಂತ್ರೋಪಕರಣಸಿಂದ ಗಾಯಗಳಾಗಲಿವೆ. ಪಂಚಮದಲ್ಲಿರುವ ಕೇತುವಿನಿಂದ ಪ್ರತಿಭೆಯ ವಿಚಾರಕ್ಕಾಗಿ ನೋವಾಗಲಿದೆ. ನವಮದಲ್ಲಿರುವ ಶನಿಯು ನಿಮಗೆ ಅದೃಷ್ಟವನ್ನು ಕೊಡುವನು. ಮನೆಗೆ ಸಂಬಂಧಿಸಿದ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳುವಿರಿ. ದಶಮದಲ್ಲಿ ರವಿಯು ಏಕಾದಶಕ್ಕೆ ಬರಲಿದ್ದಾನೆ. ಸರ್ಕಾರಿ ಕೆಲಸಗಳಲ್ಲಿ ಜಯವಿದೆ ಹಾಗೂ ಗುರುವಿದ್ದು ಕಾರ್ಯದಲ್ಲಿ ನಿಷ್ಠೆ, ಶ್ರದ್ಧೆಯು ಬರುವಂತೆ ಮಾಡುವನು. ಕೃಷಿ ಮತ್ತು ಶಿಕ್ಷಕವೃತ್ತಿಯವರಿಗೆ ಅನುಕೂಲವಿದೆ. ಏಕಾದಶದಲ್ಲಿರುವ ರಾಹು ಅಪರಿಚಿರಿಂದ ಸಂಪತ್ತು ಸಿಗುವಂತೆ ಮಾಡುವನು. ಶುಕ್ರನು ಸ್ತ್ರೀಸಂಬಂಧದಿಂದ ಧನಸಹಾಯ ಸಿಗಲಿದೆ. ನಿಮ್ಮ ಕಾರ್ಯಗಳಿಗೆ ಅನಿರೀಕ್ಷಿತ ಧನಸಹಾಯವು ಆಗಲಿದೆ.
ಕಟಕ: ಈ ವಾರ ಚತುರ್ಥದಲ್ಲಿ ಕೇತುವಿರಲಿಸ್ದಾನೆ. ಕುಟುಂಬದಲ್ಲಿ ಸಣ್ಣ ಕಲಹಗಳಾಗಿ ಶಾಂತವಾಗಿದೆ. ಅಷ್ಟಮದಲ್ಲಿರುವ ಶನಿಯು ಪ್ರಭಾವವು ಅಧಿಕವಾಗಿದ್ದು ನಿಮ್ಮನ್ನು ಕಂಗೆಡಿಸುವನು. ನವಮದಲ್ಲಿರುವ ಗುರು ನಿಮಗೆ ಚಿತ್ತಚಾಂಚ್ಯಲ್ಯವನ್ನು ಕಡಿಮೆಮಾಡಿವನು. ಧಾರ್ಮಿಕ ಆಚರಣೆಯಾಗುವಂತೆ, ಪಿರ್ತಾರ್ಜಿತ ಆಸ್ತಿಯ ಭೋಗವನ್ನೂ ಮಾಡಿಸುವನು. ದಶಮದಲ್ಲಿರುವ ರಾಹು, ಬುಧರು ಕಛೇರಿಯಲ್ಲಿ ಕಿರಿಕಿರಿಯನ್ನು ತರುವರು. ಶುಕ್ರನು ಒಳ್ಳೆಯ ಸ್ಥಾನವನ್ನೂ ಕೆಲಸವನ್ನೂ ಕೊಟ್ಟು ಒತ್ತಡವನ್ನೂ ನೀಡುವರು. ದ್ವಾದಶದ ಕುಜನಿಂದ ನೀವು ಯಂತ್ರಗಳಿಂದ ತೊಂದರೆಯನ್ನು ಮಾಡಿಸಿಕೊಳ್ಳುವಿರಿ. ಸುಬ್ರಹ್ಮಣ್ಯನಿಗೆ ಪ್ರಿಯವಾದ ಭಕ್ಷ್ಯವನ್ನು ಸಮರ್ಪಣೆ ಮಾಡಿ.
ಸಿಂಹ: ನಿಮ್ಮ ರಾಶಿಯಿಂದ ತೃತೀಯದಲ್ಲಿ ಕೇತುವಿನ ಸಂಚಾರವಿದೆ. ಸಹೋದರನ ಜೊತೆ ಕಲಹವಾಗಬಹುದು. ಅಷ್ಟಮದ ಗುರುವು ಪ್ರಗತಿಯನ್ನು ಮಾಡಿಸದೇ ಮಂದಗತಿ ಯಾಗುವಂತೆ ಮಾಡುವನು. ನವಮದಲ್ಲಿ ರಾಹು, ಬುಧ ಹಾಗೂ ರವಿಯು ವಾರದ ಮಧ್ಯದಲ್ಲಿ ಒಂದೇ ಕಾಣುಸುತ್ತಾರೆ. ಭಾಗ್ಯವು ನಿಮಗಿದ್ದರೂ ಅನುಭವಿಸಲು ರಾಹುವು ಬಿಡನು. ಏಕಾದಶದಲ್ಲಿರುವ ಕುಜನಿಂದ ಭೂಮಿಲಾಭ ಅಥವಾ ಭೂಮಿಯಲ್ಲಿ ಸಿಗುವ ಸವಸ್ತುಗಳಿಂದ ಲಾಭವಾಗಲಿದೆ. ಮನೆಯನ್ನೂ ನಿರ್ಮಿಸುವ ಬಯಕೆ ಇದೆ. ತಂತ್ರಜ್ಞರು ಯಶಸ್ಸು ಗಳಿಸುವರು.
ಕನ್ಯಾ: ಈ ವಾರ ನಿಮ್ಮ ರಾಶಿಯ ದ್ವಿತೀಯದಲ್ಲಿ ಕೇತುವಿರುವನು. ಸಾಲಗಾರಿಂದ ಸಂಪತ್ತು ಸಿಗಿವುದು. ಪೂರ್ವಾರ್ಜಿತ ಹಣವನ್ನು ಪಡೆಯಲು ಶ್ರಮವಹಿಸಬೇಕಾದೀತು. ಮಾತಿನ ಬಗ್ಗೆ ಎಚ್ಚರವಿರಲಿ. ದುಂದುವೆಚ್ಚವನ್ನು ಮಾಡಿ ಸಂಪತ್ತನ್ನು ಕಳೆದುಕೊಳ್ಳುವಿರಿ. ಷಷ್ಠದಲ್ಲಿ ಶನಿಯಿದ್ದು ನಿಮ್ಮ ಅನನುಕೂಲದೆಡೆಗೆ ಕರೆದೊಯ್ಯುವುದಿಲ್ಲ. ಸಪ್ತಮದಲ್ಲಿ ಗುರು ಹಾಗೂ ಸೂರ್ಯರಿದ್ದು, ಸೂರ್ಯನು ಅಷ್ಟಮಕ್ಕೆ ಹೋಗುವನು. ತಂದೆಯ ಆರೋಗ್ಯದ ಬಗ್ಗೆ ಗಮನವಿರಲಿ. ನಿರ್ಲಕ್ಷ್ಯಿಸಬೇಡಿ. ರಾಹು, ಬುಧರು ಶುಭಾಶುಭಫಲವನ್ನೇ ನೋಡುವರು. ದಶಮಸ್ಥಾನದ ಕುಜನಿಂದ ವೃತ್ತಿಯಲ್ಲಿ ಅಲೆದಾಟವಿರಲಿದೆ. ಉದ್ಯೋಗಕ್ಕೆ ಹೋಗಿವಾಗ ಸುಬ್ರಹ್ಮಣ್ಯನ ಸ್ತೋತ್ರ ಮಾಡಿ
ತುಲಾ: ಒಳ್ಳೆಯ ಮನಸ್ಸು ಇದ್ದರೂ ಸಹವಾಸದಿಂದ ಅದು ಬದಲಾಗುವುದು. ನವಮದ ಕುಜನು ಭೂಮಿಯ ವ್ಯವಹಾರವನ್ನು ಮಾಡುವವರಿಗೆ ಅನುಕೂಲ ಮಾಡುವನು. ನಿಮ್ಮ ರಾಶಿಯಲ್ಲಿಯೇ ಇರುವ ಕೇತುವು ದೇಹಾಲಸ್ಯವನ್ನು ಕೊಡುವನು. ಪಂಚಮದ ಶನಿಯು ಮಕ್ಕಳ ವಿಷಯವಾಗಿ ನೋವನ್ನು ಅಶುಭವಾರ್ತೆಯನ್ನೂ ಕೇಳಿಸುವನು. ಷಷ್ಠದಲ್ಲಿ ಗುರು ಹಾಗೂ ಸೂರ್ಯರಿದ್ದು ತಂದೆಯ ಮಾತಿನ ಅನಾದರ, ಗುರು-ಹಿರಿಯರಲ್ಲಿ ಅಶ್ರದ್ಧೆ ಮೂಡುವಂತೆ ಮಾಡುವನು. ಸಪ್ತಮದಲ್ಲಿ ರಾಹು, ಬುಧ, ಶುಕ್ರರಿದ್ದು ಬಂಧುವರ್ಗದ ವಧೂನಿಶ್ಚಯವಾಗಿದ್ದು ತಪ್ಪಿಹೋಗಬಹುದು. ದುರ್ಗಾ ಮಾತೆಯನ್ನು ಪೂಜಿಸಿ, ಜಪಿಸಿ.
ವೃಶ್ಚಿಕ: ಅಷ್ಟಮದಲ್ಲಿ ಕುಜನು ಭೂಮಿನಾಶವನ್ನೂ ಮಾನಸಿಕ ಅಶಾಂತಿಯನ್ನು ಕೊಡಿಸುವನು. ದ್ವಾದಶದ ಕೇತುವುದು ಅಧಾರ್ಮಿಕವಾದ ಕಾರ್ಯಗಳಿಗೆ ಹಣವು ನಷ್ಟವಾಗುವಂತೆ ಮಾಡುವನು.ಈ ವಾರದಲ್ಲಿ ನಿಮ್ಮ ರಾಶಿಯಿಂದ ನಾಲ್ಕರಲ್ಲಿ ಶನಿಯು ಇದ್ದು ಕುಟುಂಬದಲ್ಲಿ ಅಥವಾ ಬಂಧುವರದಗದಲ್ಲಿ ನಿಮ್ಮ ಬಗ್ಗೆ ಸಲ್ಲದ ಮಾತುಗಳು ಕೇಳಿಬರಬಹುದು. ಪಂಚಮದ ಗುರುವಿರದ್ದು ಪ್ರತಿಭೆಗೆ ಪುಷ್ಟಿ ಕೊಡುವನು. ಷಷ್ಠದಲ್ಲಿ ಇರುವ ಸೂರ್ಯನು ಜ್ವರದಿಂದ ಬಳಲುವಂತೆ ಮಾಡುವನು. ಷಷ್ಠದಲ್ಲಿ ರಾಹು, ಬುಧರಿದ್ದು ನಿಮಗೆ ಸ್ತ್ರೀಯರಿಂದ ಅಪಮಾನ, ಶರೀರಕ್ಕೆ ಸಂಬಂಧಿಸಿದ ನೋವುಗಳು ಇರಲಿವೆ. ನಾಗದೇವರ ಪೂಜೆಯನ್ನು ಮಾಡಿಸಿ.
ಧನಸ್ಸು: ಈ ವಾರ ನಿಮ್ಮ ಪರಾಕ್ರಮವು ಹೊರಬರಲು ಸಮಯ ತೆಗೆದುಕೊಳ್ಳಬಹುದು. ಶನಿಯು ನಿಮ್ಮ ವ್ಯಕ್ತಿತ್ವಕ್ಕೆ ಬಲವನ್ನು ತುಂಬುವನು. ಚತುರ್ಥದಲ್ಲಿ ಗುರುವಿದ್ದು ಈ ವಾರ ಗುರುಬಲವಿರುವುದಿಲ್ಲ. ಸೂರ್ಯನು ಪಂಚಮಕ್ಕೆ ಹೋಗಲಿದ್ದಾನೆ. ನಿಮ್ಮ ಕೌಶಲವು ಪ್ರಕಟಗೊಳ್ಳಬಹುದು. ಪಂಚಮದಲ್ಲಿ ಬುಧ, ರಾಹು, ಮಿಶ್ರಫಲವನ್ನು ಕೊಡುವರು. ಶುಕ್ರನು ಷಷ್ಠಕ್ಕೆ ಹೋಗಲಿದ್ದು ಆಲಂಕಾರಿಕ ವಸ್ತುಗಳಿಂದ ಹಾಗೂ ದುಷ್ಟ ಆಹಾರಸೇವನೆಯಿಂದ ಅನಾರೋಗ್ಯವು ಬರಲಿದೆ. ಸಪ್ತಮದ ಕುಜನು ಮಾನಸಿಕವಾದ ನೆಮ್ಮದಿಯನ್ನು ಹಾಳುಮಾಡುವನು. ಏನಾದರೂ ಕೆಟ್ಟ ಆಲೋಚನೆಗಳು ಬರುವಂತೆ ಮಾಡುವನು. ಏಕಾದಶದ ಕೇತುವು ಅಪರಿಚಿತ ವ್ಯಕ್ತಿಗಳಿಂದ ಹಣವು ಬರುವಂತೆ ಮಾಡುವನು.
ಮಕರ: ಈ ವಾರವು ನಿಮ್ಮ ರಾಶಿಯಿಂದ ದ್ವಿತೀಯದಲ್ಲಿ ಶನಿಯು ಇರಲಿದ್ದಾನೆ. ಪಿತ್ರಾರ್ಜಿತ ಸಂಪತ್ತು ನಿಧಾನವಾಗಿ ನಿಮ್ಮ ಬರಬಹುದು. ತೃತೀಯದ ಗುರು ಸಹೋದರರಿಂದ ಅನುಕೂಲವನ್ನು ಮಾಡಿಸುವನು. ಚತುರ್ಥದಲ್ಲಿ ರಚಿ, ರಾಹು, ಬುಧರಿದ್ದು ಮನೆಯ ನಿರ್ಮಾಣವನ್ನು ಆರಂಭಿಸಿದ್ದು ಕಾರಣಾಂತರಗಳಿಂದ ಸ್ಥಗಿತಗೊಂಡ ಕೆಲಸವು ಮತ್ತೆ ಆರಂಭವಾಗುವುದು. ಷಷ್ಠದಲ್ಲಿ ಕುಜನಿದ್ದು ಕಾಲುಗಳುಗೆ ಗಾಯವಾಗಬಹುದು. ಕೇತುವು ದಶಮದಲ್ಲಿದ್ದು ಕೆಟ್ಟ ಕೆಲಸಗಳಿಗೆ ಪ್ರೇರಣೆ ನೀಡುವನು. ಸಾಡೇಸಾಥ್ ಶನಿಯು ಉತ್ತರಾರ್ಧದಲ್ಲಿ ಇದ್ದುದರಿಂದ ದಿನವೂ ಶನಿಯ ಸ್ತೋತ್ರವನ್ನು ಮಾಡುವುದು ಉತ್ತಮ.
ಕುಂಭ: ನಿಮಗೆ ಸಾಡೇಸಾಥ್ ಶನಿಯು ಮಧ್ಯಭಾಗದಲ್ಲಿ ಇರುವನು. ಅಭಿವೃದ್ಧಿಯು ಆಮೆಗತಿಯಲ್ಲಿ ಸಾಗಲಿದೆ. ಇದು ನಿಮಗೆ ಬೇಸರವನ್ನೇ ತರಿಸುವುದು. ಜೀವನವೇ ಬೇಡ ಎನ್ನುವ ಮಾನಸಿಕಸ್ಥಿತಿಯು ನಿರ್ಮಾಣವಾಗಲಿದೆ. ದ್ವಿತೀಯದಲ್ಲಿ ಗುರುವಿದ್ದು ನಿಮಗೆ ಆಗಾಗ ಧೈರ್ಯವನ್ನು ತುಂಬುವನು. ಮನೆಯಲ್ಲಿ ಮಂಕಾದ ವಾತಾವರಣವಿರಲಿದೆ. ಕರ್ಮಾಧಿಪತಿಯು ಕರ್ಮದಲ್ಲಿ ಆಸಕ್ತಿಯು ಇಲ್ಲದಂತೆ ಮಾಡುವನು. ಶುಭಫಲವನ್ನು ನೋಡುವ ರವಿ ಮತ್ತು ಬುಧ, ರಾಹುವಿನಿಂದ ತಡೆಯಲ್ಪಟ್ಟಿದ್ದಾರೆ. ಪಂಚಮದಲ್ಲಿ ಕುಜನಿದ್ದು ಮಕ್ಕಳಿಂದ ಅಶುಭವಾರ್ತೆಯನ್ನು ಮಾಡಿಸುವನು.
ಮೀನ: ನಿಮ್ಮ ಮನೆಯಲ್ಲಿ ಗುರುವಿನ ಸಾನ್ನಿಧ್ಯವಿದೆ. ಸಣ್ಣ ದೋಷಗಳು ಎಲ್ಲವೂ ನಿವಾರಣೆ ಮಾಡುವವನು ಗುರು. ಆತನ ಜೊತೆಗಿದ್ದ ರವಿಯು ದ್ವಿತೀಯದಲ್ಲಿರುವುದರಿಂದ ದಾಯಾದಿಗಳು ಕಲಹವು ಈ ವಾರ ನಿಲ್ಲಲಿದೆ. ದ್ವಿತೀಯವು ರಾಹು, ಬುಧರ ಸಂಯೋಗದಿಂದ ಕೂಡಿದೆ. ನಾನಾ ಪ್ರಕಾರವಾಗಿ ಸಂಪತ್ತು ಸಿಗಲಿದೆ. ತೃತೀಯದಲ್ಲಿ ಶುಕ್ರನಿದ್ದು ಕಲಾವಿದರ ಸಾಮರ್ಥ್ಯವು ಜಗಜ್ಜಾಹಿರವಾಗಲಿದೆ. ಚತುರ್ಥದ ಕುಜನು ವಾಹನ ಖರೀದಿಗೆ ಪ್ರೋತ್ಸಾಹಿಸವನು. ಅಷ್ಟಮದಲ್ಲಿ ಕೇತುವು ಅನಾರೋಗ್ಯವನ್ನು ದೂರಮಾಡುವನು. ದ್ವಾದಶದ ಶನಿಯು ನಿಮಗೆ ದುಃಖವನ್ನು, ವಿಯೋಗವನ್ನೂ ವೈರಾಗ್ಯವನ್ನೂ ಕೊಡಿಸುವನು. ಎಲ್ಲವನ್ನೂ ಸಹಿಸುವ ಶಕ್ತಿಯನ್ನೂ ಕೊಡುವನು ಸ್ತೋತ್ರ, ಜಪ, ಪೂಜೆಗಳನ್ನು ಮಾಡಿದಾಗ.