Nithya bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

|

Updated on: Apr 14, 2023 | 5:30 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Image Credit source: naidunia.com
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 14 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ನವಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಸಿದ್ಧಿ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06-20 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ 10:59 – 12:33ರ ವರೆಗೆ, ಯಮಘಂಡ ಕಾಲ 03:39 – 05:12ರ ವರೆಗೆ, ಗುಳಿಕ ಕಾಲ 07:54 – 09:27 ರ ವರೆಗೆ.

ಮೇಷ: ಮಹಿಳಾ ಅಧಿಕಾರಿಯಿಂದ ಅಪಮಾನವಾಗಲಿದ್ದು ಸಮಾಧನಾದಿಂದ ಉತ್ತರಿಸಿ. ದೂರದ ಊರಿಗೆ ಪ್ರಯಾಣ ಮಾಡುವಿರಿ. ದಾಂಪತ್ಯದಲ್ಲಿ ಜಗಳಗಳು ಆಗಲಿದ್ದು, ನೀವದನ್ನು ಮುಂದುವರಿಸಲು ಹೋಗಬೇಡಿ. ಕೋಪವು ಅಧಿಕವಾಗಿ ಇದ್ದರೂ ಸಹನೆಯನ್ನು ತಂದುಕೊಳ್ಳಿ. ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಮುಂದುವರಿಯಿರಿ. ಕುಟುಂಬ ವಿಚಾರಗಳು ನಿಮಗೆ ತಿಳಿಯದು ಎಂಬ ಬಗ್ಗೆ ಚಿಂತೆ ಇರಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ಹೊರಗಿನ ತಿಂಡಿಯನ್ನು ಕಡಿಮೆ ಬಳಸಿ.

ವೃಷಭ: ಆನಾರೋಗ್ಯದಿಂದ ಕಂಗೆಟ್ಟ ನಿಮಗೆ ವೈದ್ಯ ಭೇಟಿ, ಅವರ ಚಿಕಿತ್ಸೆಯು ಸ್ವಲ್ಪ ಪರಿಣಾಮಕಾರಿಯಾಗಿ ಆಗಲಿದೆ. ಕೈಬಿಡಬೇಕಂದು ಅಂದುಕೊಂಡಿದ್ದ ನೀವು ಕೆಲಸ ಮಾಡುವ ಸಂಸ್ಥೆಯು ಮತ್ತೆ ನಿಮ್ಮನ್ನು ಸೇರಿಸಿಕೊಳ್ಳಲಿದೆ. ಸಂಗಾತಿಯ ಜೊತೆ ಅನಾಯಾಸವಾದ ದಿನವನ್ನು ಕಳೆಯಿರಿ. ರಾತ್ರಿಯು ನಿಮಗೆ ಬೀಳುವ ಕನಸು ಭವಿಷ್ಯವನ್ನೂ ಸೂಚಿಸಲಿದೆ. ಮರುದಿನ ದೇವರಿಗೆ ತುಪ್ಪದ ದೀಪವನ್ನು ಬೆಳಗಿ. ನಿಮಗೆ ಸಲಹೆಯನ್ನು ಕೊಡುವವರು ಹತ್ತಾರು ಮಂದಿ ಇರುವರು. ಅವರ ಸಲಹೆಯನ್ನು ತಳ್ಳಿಹಾಕದೇ ನಯವಾಗಿ ಜಾರಿಕೊಳ್ಳಿ.

ಮಿಥುನ: ತಾಯಿಯ ಬಳಿ ನಿಮ್ಮ ನೋವನ್ನು ಹೇಳಿಕೊಳ್ಳುವಿರಿ. ಧನಲಾಭವಿದ್ದರೂ ತಪ್ಪಿಸುವವರ‌ ಕಾರಣ ಅದು ಸಿಗದೇ ಹೋಗಬಹುದು. ನಿಮ್ಮ ತಾಳ್ಮೆಗೆ ಸಹೋದ್ಯೋಗಿಗಳು ಮೆಚ್ಚುಗೆ ಕೊಡುವರು. ಕಛೇರಿಯಲ್ಲಿ ನಿಮ್ಮ ಬಾಸ್ ಕರೆದರೆಂದು ಹೆದರುವ ಅವಶ್ಯಕತೆ ಇಲ್ಲ. ಧೈರ್ಯವಾಗಿರಿ. ಎಲ್ಲದಕ್ಕೂ ಬೇರೆಯವರನ್ನು ದೂಷಿಸುವ ಅಗತ್ಯವಿಲ್ಲ. ನಿಮ್ಮ ತಪ್ಪೂ ಕಾರಣವಾಗಿರಬಹುದು. ಪರಿಶೀಲಿಸಿ. ಸಾಲವನ್ನು ತುಂಬಲು ಇನ್ನೊಂದು ಕಡೆ ಸಾಲಮಾಡಬೇಕಾಗಿ ಬರಬಹುದು. ಆಯುಧದಿಂದ ಗಾಯವಾಗಬಹುದು. ಸುಬ್ರಹ್ಮಣ್ಯನ ಸ್ತೋತ್ರಮಾಡಿ.

ಕರ್ಕ: ಕೆಟ್ಟ ಅಭ್ಯಾಸವನ್ನು ಸ್ನೇಹಿತರಿಂದ ಕಲಿತಿದ್ದು ಬಿಡಲಾರಿರಿ. ಮನೆಯಲ್ಲಿ ಇದು ತಿಳಿಯುತ್ತದೋ ಎಂಬ ಆತಂಕವೂ ಇರುವುದು. ಸ್ವಂತ ಉದ್ಯೋಗವನ್ನು ಮಾಡುತ್ತಿರಮದ್ದರೆ ಶುಭವಾರ್ತೆಯ ಬರಬಹುದು. ವಿದ್ಯಾರ್ಥಿಗಳಿಗೆ ಮುಂದೆ ಯಾವ ವಿಷಯವನ್ನು ತೆಗೆದುಕೊಳ್ಳಬೇಕು ಎಂಬ ಗೊಂದಲಗಳು ಇರಬಹುದು. ಮಂಗಲಕರವಾದ ಸಮಾರಂಭಗಳಿಗೆ ಭೇಟಿಯಾಗುವಿರಿ. ನಿಮಗಾಗದವರು ನಿಮ್ಮ ಬಗ್ಗೆ ಹೊಂಚುಹಾಕುತ್ತ ಇರಬಹುದು. ಹಠಾತ್ ಕ್ರೋಧವು ಒಳ್ಳೆಯದಲ್ಲ. ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಯಂತ್ರೋಪಕರ ಅಥವಾ ವಾಹನದಿಂದ ಧನವು ನಷ್ಟವಾಗಿ ಬೇಸರವೂ ಆಗಲಿದೆ.