Daily Horoscope: ನಿಮ್ಮ ಪ್ರಾಮಾಣಿಕತೆಗೆ ಯಶಸ್ಸು ಸಿಗಲಿದೆ, ಆತುರ ಬೇಡ

ಇಂದಿನ (2023 ಏಪ್ರಿಲ್​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ನಿಮ್ಮ ಪ್ರಾಮಾಣಿಕತೆಗೆ ಯಶಸ್ಸು ಸಿಗಲಿದೆ, ಆತುರ ಬೇಡ
ಪ್ರಾತಿನಿಧಿಕ ಚಿತ್ರImage Credit source: patrika.com
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 14, 2023 | 5:00 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ನವಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಸಿದ್ಧಿ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06-20 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ 10:59 – 12:33ರ ವರೆಗೆ, ಯಮಘಂಡ ಕಾಲ 03:39 – 05:12ರ ವರೆಗೆ, ಗುಳಿಕ ಕಾಲ 07:54 – 09:27 ರ ವರೆಗೆ.

ಮೇಷ: ಮಹಿಳಾ ಅಧಿಕಾರಿಯಿಂದ ಅಪಮಾನವಾಗಲಿದ್ದು ಸಮಾಧನಾದಿಂದ ಉತ್ತರಿಸಿ. ದೂರದ ಊರಿಗೆ ಪ್ರಯಾಣ ಮಾಡುವಿರಿ. ದಾಂಪತ್ಯದಲ್ಲಿ ಜಗಳಗಳು ಆಗಲಿದ್ದು, ನೀವದನ್ನು ಮುಂದುವರಿಸಲು ಹೋಗಬೇಡಿ. ಕೋಪವು ಅಧಿಕವಾಗಿ ಇದ್ದರೂ ಸಹನೆಯನ್ನು ತಂದುಕೊಳ್ಳಿ. ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಮುಂದುವರಿಯಿರಿ. ಕುಟುಂಬ ವಿಚಾರಗಳು ನಿಮಗೆ ತಿಳಿಯದು ಎಂಬ ಬಗ್ಗೆ ಚಿಂತೆ ಇರಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ಹೊರಗಿನ ತಿಂಡಿಯನ್ನು ಕಡಿಮೆ ಬಳಸಿ.

ವೃಷಭ: ಅನಾರೋಗ್ಯದಿಂದ ಕಂಗೆಟ್ಟ ನಿಮಗೆ ವೈದ್ಯ ಭೇಟಿ, ಅವರ ಚಿಕಿತ್ಸೆಯು ಸ್ವಲ್ಪ ಪರಿಣಾಮಕಾರಿಯಾಗಿ ಆಗಲಿದೆ. ಕೈಬಿಡಬೇಕಂದು ಅಂದುಕೊಂಡಿದ್ದ ನೀವು ಕೆಲಸ ಮಾಡುವ ಸಂಸ್ಥೆಯು ಮತ್ತೆ ನಿಮ್ಮನ್ನು ಸೇರಿಸಿಕೊಳ್ಳಲಿದೆ. ಸಂಗಾತಿಯ ಜೊತೆ ಅನಾಯಾಸವಾದ ದಿನವನ್ನು ಕಳೆಯಿರಿ. ರಾತ್ರಿಯು ನಿಮಗೆ ಬೀಳುವ ಕನಸು ಭವಿಷ್ಯವನ್ನೂ ಸೂಚಿಸಲಿದೆ. ಮರುದಿನ ದೇವರಿಗೆ ತುಪ್ಪದ ದೀಪವನ್ನು ಬೆಳಗಿ. ನಿಮಗೆ ಸಲಹೆಯನ್ನು ಕೊಡುವವರು ಹತ್ತಾರು ಮಂದಿ ಇರುವರು. ಅವರ ಸಲಹೆಯನ್ನು ತಳ್ಳಿಹಾಕದೇ ನಯವಾಗಿ ಜಾರಿಕೊಳ್ಳಿ.

ಮಿಥುನ: ತಾಯಿಯ ಬಳಿ ನಿಮ್ಮ ನೋವನ್ನು ಹೇಳಿಕೊಳ್ಳುವಿರಿ. ಧನಲಾಭವಿದ್ದರೂ ತಪ್ಪಿಸುವವರ‌ ಕಾರಣ ಅದು ಸಿಗದೇ ಹೋಗಬಹುದು. ನಿಮ್ಮ ತಾಳ್ಮೆಗೆ ಸಹೋದ್ಯೋಗಿಗಳು ಮೆಚ್ಚುಗೆ ಕೊಡುವರು. ಕಛೇರಿಯಲ್ಲಿ ನಿಮ್ಮ ಬಾಸ್ ಕರೆದರೆಂದು ಹೆದರುವ ಅವಶ್ಯಕತೆ ಇಲ್ಲ. ಧೈರ್ಯವಾಗಿರಿ. ಎಲ್ಲದಕ್ಕೂ ಬೇರೆಯವರನ್ನು ದೂಷಿಸುವ ಅಗತ್ಯವಿಲ್ಲ. ನಿಮ್ಮ ತಪ್ಪೂ ಕಾರಣವಾಗಿರಬಹುದು. ಪರಿಶೀಲಿಸಿ. ಸಾಲವನ್ನು ತುಂಬಲು ಇನ್ನೊಂದು ಕಡೆ ಸಾಲಮಾಡಬೇಕಾಗಿ ಬರಬಹುದು. ಆಯುಧದಿಂದ ಗಾಯವಾಗಬಹುದು. ಸುಬ್ರಹ್ಮಣ್ಯನ ಸ್ತೋತ್ರಮಾಡಿ.

ಕರ್ಕ: ಕೆಟ್ಟ ಅಭ್ಯಾಸವನ್ನು ಸ್ನೇಹಿತರಿಂದ ಕಲಿತಿದ್ದು ಬಿಡಲಾರಿರಿ. ಮನೆಯಲ್ಲಿ ಇದು ತಿಳಿಯುತ್ತದೋ ಎಂಬ ಆತಂಕವೂ ಇರುವುದು. ಸ್ವಂತ ಉದ್ಯೋಗವನ್ನು ಮಾಡುತ್ತಿರಮದ್ದರೆ ಶುಭವಾರ್ತೆಯ ಬರಬಹುದು. ವಿದ್ಯಾರ್ಥಿಗಳಿಗೆ ಮುಂದೆ ಯಾವ ವಿಷಯವನ್ನು ತೆಗೆದುಕೊಳ್ಳಬೇಕು ಎಂಬ ಗೊಂದಲಗಳು ಇರಬಹುದು. ಮಂಗಲಕರವಾದ ಸಮಾರಂಭಗಳಿಗೆ ಭೇಟಿಯಾಗುವಿರಿ. ನಿಮಗಾಗದವರು ನಿಮ್ಮ ಬಗ್ಗೆ ಹೊಂಚುಹಾಕುತ್ತ ಇರಬಹುದು. ಹಠಾತ್ ಕ್ರೋಧವು ಒಳ್ಳೆಯದಲ್ಲ. ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಯಂತ್ರೋಪಕರ ಅಥವಾ ವಾಹನದಿಂದ ಧನವು ನಷ್ಟವಾಗಿ ಬೇಸರವೂ ಆಗಲಿದೆ.

ಸಿಂಹ: ಆಲಸ್ಯದ ಕಾರಣ ನೀವು ಎಲ್ಲಿಗೂ ಹೋಗಲು ಇಷ್ಟಪಡುವುದಿಲ್ಲ. ಇಂದು ಪ್ರಯಾಣ ಮಾಡದ ಲೆಕ್ಕಕ್ಕೆ ಒಳ್ಳೆಯದೇ ಆಗಿದೆ. ನೀವು ಅದನ್ನು ಬದಲಾಯಿಸಲು ಹೋಗಿ ಇನ್ನೊಂದು ಸಂಕಷ್ಟವನ್ನು ತಂದುಕೊಳ್ಳುವಿರಿ. ಅನೇಕ ದಿನಗಳಿಂದ ಒಂದೇ ಖಾಯಿಲೆಯಿಂದ ಬಳಲುತ್ತಿದ್ದು ನಿಮಗೆ ಕಿರಿಕಿರಿಯು ಅತಿಯಾಗಬಹುದು. ಅನಾರೋಗ್ಯವು ನೀವು ವಿಶ್ರಾಂತಿ ಪಡೆಯುವಿರಿ. ನಿಮ್ಮ ಕಠೋರತೆ, ಒರಟುತನವು ನಿಮ್ಮವರಿಗೆ ಹಿಂಸೆಯನ್ನು ಕೊಡಬಹುದು. ಮಕ್ಕಳು ನಿಮ್ಮನ್ನು ಪ್ರಶ್ನಿಸುವರು. ನಿಮಗೆ ಸಂತೋಷವೂ ಬೇಸರೂ ಆಗಬಹುದು.

ಕನ್ಯಾ: ನಿಮ್ಮವರು ನಿಮಗೆ ಅಪಮಾನವನ್ನು ಮಾಡಬಹುದು. ಅದರಿಂದ ಬೇಸರವೂ ಆಗಬಹುದು. ಏಕಾಗ್ರತೆಯ ಕೊರತೆ ಕಾಣಬಹುದು. ಮನೆಯಲ್ಲಿ ಜಗಳವಾಡಿ ದೂರ ಹೋಗುವಿರಿ. ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣುವರು. ಆಟದಲ್ಲಿ ಗೆಲ್ಲಲು ಮಾಡಲು ಹೋಗಬೇಡಿ. ಭೂಮಿಯ ಖರೀದಿಗೆ ಕುಟುಂಬದವರ ಸಲಹೆಯನ್ನು ಪಡೆಯುವಿರಿ. ಸಮಾಜಕ್ಕೆ ಏನನ್ನಾದರೂ ಮಾಡಬೇಕು ಎಂಬ ಹಂಬಲವಿರಲಿದೆ. ನಿಮ್ಮ ಪ್ರಾಮಾಣಿಕತೆಯು ನಿಮಗೆ ಯಶಸ್ಸನ್ನು ತರುವುದು. ಏಕಾಂತವು ನಿಮಗಿಂದು ಇಷ್ಟವಾಗುವುದು.

ತುಲಾ: ವಾಹನವನ್ನು ಖರೀದಿಸಿ ಹೊಸ ಉದ್ಯೋಗವನ್ನು ಆರಂಭಿಸಬಹುದು. ಪತ್ನಿಯು ನಿಮ್ಮ ಉದ್ಯೋಗಕ್ಕೆ ಸಹಕಾರ ಕೊಡುವಳು. ಆಲಂಕಾರಿಕ ವಸ್ತುವಿನ‌ಮೇಲೆ ಹೆಚ್ಚು ಆಸಕ್ತಿ ಇರುವುದು. ಬೆಂಕಿಯಿಂದ ಸ್ವಲ್ಪ ದೂರವಿರಿ ಅಥವಾ ಜಾಗರೂಕರಾಗಿರಿ. ನಿಮ್ಮವರ ಬಗ್ಗೆ ನಿಮಗೆ ತಿಳಿವಳಿಕೆ ಬಹಳ ಕಡಿಮೆ ಇದ್ದು ಏನನ್ನೂ ಹೇಳಬೇಡಿ. ವಿದ್ಯುದುಪಕರಣದಿಂದ ಹಣವು ವ್ಯಯವಾಗಲಿದೆ. ದುಃಸ್ವಪ್ನವು ನಿಮಗೆ ಚಿಂತನೆಯನ್ನು ಕೊಡುವುದು‌ ಸಂಬಂಧಗಳ ಬೆಲೆಯನ್ನು ಅರಿಯಲಿದ್ದೀರಿ. ಕುತೂಹಲಕ್ಕೆ ಏನನ್ನಾದರೂ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳುವಿರಿ.

ವೃಶ್ಚಿಕ: ಇತ್ತಸಂಬಂಧವಾದ ತುರಿಕೆ ಬರಬಹುದು. ಮಕ್ಕಳಿಂದ ನಿಮಗೆ ಶುಭವಾರ್ತಯು ಇರಬಹುದು. ಮುಸುಕಿನ ಗುದ್ದಾಟ ನಿಮ್ಮ ಮತ್ತು ಪತಿಯ ನಡುವೆ ನಡೆಯತ್ತದೆ. ಹಿತಶತ್ರುಗಳು ಅರಿತುಕೊಳ್ಳಿ‌ ನಿಮಗೆ ಹೆಚ್ಚು ಸಮಯಬೇಕಾಗದು. ಇಂದಿನ‌ ಪ್ರಯಾಣವು ನಿಮಗೆ ಆಯಾಸವನ್ನು ಕೊಡುತ್ತದೆ. ನಿಮಗೆ ಕೆಲವರು ಆಮಿಷವನ್ನು ತೋರಿಸುವರು. ಅದಕ್ಕೆ ಬಲಿಯಾಗಿ ಸಂಪತ್ತನ್ನು ಕಳೆದುಕೊಳ್ಳಬೇಡಿ. ದೇವರ ಉತ್ಸವಗಳಲ್ಲಿ ಭಾಗಿಯಾಗುವಿರಿ. ನಿಮ್ಮ ಮಾತು ಸ್ಪಷ್ಟವಾಗಿದ್ದರೂ ಅಪಾರ್ಥಕ್ಕೆ ಕಾರಣವಾಗಲಿದೆ. ಕೃಷಿಯನ್ನು ನೀವು ಇಷ್ಟಪಡುವುದಿಲ್ಲ.

ಧನುಸ್ಸು: ಯಾವುದನ್ನೂ ಕಷ್ಟ ಎಂದುಕೊಂಡರೆ ಯಾವಾಗಲೂ ಕಷ್ಟವೇ. ಅದನ್ನು ಸರಳವಾಗಿಸುವ ವಿಧಾನವನ್ನು ಕಂಡುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಪಿರ್ತಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಕಲಹವಾಗಬಹುದುಗಬಹುದು. ಅನಿರೀಕ್ಷಿತವಾಗಿ ಅತಿಥಿಗಳು ಆಗಮನದಿಂದ ಸಂತೋಷವಾಗಲಿದೆ. ನೀವು ನಡೆದುಕೊಳ್ಳುವ ರೀತಿಯು ಕೆಲವರಿಗೆ ಆದರ್ಶವಾಗಬಹುದು. ಸ್ವಲ್ಪ ಅಂತರದಲ್ಲಿ ನಿಮಗೆ ದೊಡ್ಡ ಅಪಾಯವು ತಪ್ಪಿಹೋಗಬಹುದು. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಬಹುದು.

ಮಕರ: ನಕಾರಾತ್ಮಕ ಆಲೋಚನೆಯನ್ನು ಬಲವಂತವಾಗಿ ಕಡಿಮೆ ಮಾಡಿ. ಇಲ್ಲವಾದರೆ ನಿಮಗೆ ಸಂತೋಷವೇ ಇರದಾಗುತ್ತದೆ. ನಿಮ್ಮ ಉದ್ಯೋಗಕ್ಕೆ ಬಂಧುಗಳ ಬೆಂಬಲವನ್ನು ಇರಬಹುದು. ಆರ್ಥಿಕ ಸಂಕಷ್ಟವೆಂದು ಚಿಂತೆಗೆ ಒಳಗಾದರೆ ತೊಂದರೆಯಾದೀತು. ಎಂದೋ ಮರೆತ ಹಾಡು ಇಂದು ನೆನಪಾಗಿ ಸಂತೋಷವಾಗುವುದು. ಕೆಲಸವನ್ನು ಸಮರ್ಥವಾಗಿ ಮುಗಿಸಿದ ಸಂತೋಷವಿರಲಿದೆ. ವಿದೇಶದ ಕಂಪೆನಿಯು ನಿಮ್ಮನ್ನು ಕೆಲಸಕ್ಕೆ ಕರೆಯಬಹುದು. ನಿಮ್ಮ ಇಷ್ಟಪಟ್ಟವರು ಇಂದು ದೂರಾಗಬಹುದು.

ಕುಂಭ: ನಿಮ್ಮ ಇಂದಿನ ಕೆಲಸದಿಂದ ಅಧಿಕಾರಿಗಳು ಸಂತೋಷಪಡುವಿರಿ. ನಿಮಗೆ ಹೆಚ್ಚಿನ ಸ್ಥಾನವೂ ಸಿಗಬಹುದು. ನ್ಯಾಯಾಲಯದಲ್ಲಿ ಇಂದು ನಿಮಗೆ ಜಯ ಸಿಗುವುದೋ ಇಲ್ಲವೋ ಎಂಬ ಬಗ್ಗೆ ಅನುಮಾನವಿರಲಿದೆ. ಪ್ರಾಮಾಣಿಕ ವ್ಯವಹಾರಕ್ಕೆ ಇಂದು ಫಲವು ಸಿಗಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವು ದೂರಾಗುವುದು. ಯಾರನ್ನೋ ನಂಬಿ ಮೋಸ ಹೋಗಬಹುದು. ಫಲಾಪೇಕ್ಷೆಯಿಲ್ಲದೇ ಕರ್ತವ್ಯಗಳನ್ನು ಮಾಡಿರಿ. ಸಂತೋಷವಿರಲಿದೆ. ಹೆಚ್ಚು ಸಮಯವನ್ನು ಕುಟುಂಬದೊಂದಿಗೆ ಕಳೆಯುವಿರಿ. ಆಲೋಚನೆ ಮಾಡುವಷ್ಟರಲ್ಲಿ ಕೆಲಸವೇ ಮುಗಿಯಬಹುದು.

ಮೀನ: ನಿಮ್ಮ ಕಾರ್ಯಕೌಶಲಕ್ಕೆ ನಿಬ್ಬರಗಾಗುವರು. ಒಂದೇ ವಿಚಾರವನ್ನು ಕೇಳಿ ಮನಸ್ಸು ಭಾರವಗಲಿದೆ. ಸ್ವಂತ ಉದ್ಯೋಗವನ್ನು ನಡೆಸಲು ಕಷ್ಟವೆಂದು ಅನ್ನಿಸಬಹುದು. ಭೋಗಜೀವನಕ್ಕೆ ಇಂದು ಹೆಚ್ಚು ಒತ್ತು ನೀಡುವಿರಿ. ಇನ್ನೊಬ್ಬರಿಗೆ ಬೋರೆನಿಸುವಷ್ಟು ಮಾತನಾಡುವಿರಿ. ಹಿಂದಿನ ಆಚರಣೆಯ ಬಗ್ಗೆ ನಿಮಗೆ ಪ್ರೀತಿ ಬಂದು ಅದನ್ನು ಆಚರಿಸುವ ಮನಃಸ್ಥಿತಿ ಇರಲಿದೆ. ಗುರು ಹಾಗೂ ಸೂರ್ಯರು ದ್ವೀತಿಯಕ್ಕೆ ಹೋಗುವ ಸ್ಥಿಯಲ್ಲಿ ಇದ್ದಾರೆ. ಪರಿಶ್ರಮದಿಂದ ಸ್ವಲ್ಪ ಸಂಪತ್ತು ಬರಬಹುದು. ಸಾಡೇಸಾಥ್ ಶನಿಯು ನಿಮಗೆ ಸ್ವಲ್ಪಮಟ್ಟಿಗೆ ತೊಂದರೆ ಕೊಡುವನು. ಆದಷ್ಟು ಗುರುದರ್ಶನ, ಶನಿ ಸ್ತೋತ್ರವನ್ನು ಪಠಿಸಿ.

ಲೋಹಿತಶರ್ಮಾ ಇಡುವಾಣಿ – 8762924271 (what’s app only)

Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ