ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್ 15 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಮೇಷ: ಸಮಸ್ಯೆಗಳು ಬಂದಾಗ ಉದ್ವೇಗಕ್ಕೆ ಒಳಗಗಾದೇ ಬಗೆಹರಿಸಿಕೊಳ್ಳಿ. ರಾಜಕೀಯ ವ್ಯಕ್ತಿಗಳ ಸಹವಾಸದಿಂದ ನಿಮ್ಮ ಕಾರ್ಯಗಳು ಸಲೀಸಾಗಿ ಆಗಲಿದೆ. ಅಪಮಾನವಾಗುವ ಘಟನೆಗಳು ನಡೆಯಬಹುದು. ಬಟ್ಟೆ ವ್ಯಾಪಾರಗಳು ಲಾಭವನ್ನು ಗಳಿಸಲಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ನಿಮ್ಮ ಉಪಾಯಗಳನ್ನು ಆರಂಭಿಸುವಿರಿ. ಆಸ್ತಿ ವ್ಯವಹಾರದಲ್ಲಿ ಸ್ವಲ್ಪಮಟ್ಟಿಗೆ ಕಲಹಾದಿಗಳು ಆಗಿ ಬಗೆ ಹರಿಯುವುದು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಸರ್ಕಾರಿ ಕೆಲಸವು ನಿಧಾನಗತಿಯಲ್ಲಿ ಆಗಲಿದೆ. ತೃತೀಯದ ಕುಜನಿಂದ ನಿಮ್ಮ ಪರಾಕ್ರಮವು ತಿಳಿಯಲ್ಪಡುವುದು.
ವೃಷಭ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮವಹಿಸಬೇಕಾದೀತು. ಉದ್ಯೋಗದಲ್ಲಿ ಹೆಚ್ಚು ಬದಲಾವಣೆಯಾಗುವ ಸಾಧ್ಯತೆ ಇದೆ. ಸ್ವತಂತ್ರವಾಗಿ ತೀರ್ಮಾನವನ್ನು ತೆಗದುಕೊಳ್ಳಲು ಕಷ್ಟವಾದರೂ ನೀವೇ ತೆಗೆದುಕೊಳ್ಳಿ. ನಿಮ್ಮ ಇಚ್ಛೆಗೆ ಅನುಸಾರವಾಗಿಯೂ ಕುಟುಂಬದಲ್ಲಿ ನಡೆದುಕೊಳ್ಳುವರು. ಹಣಕಾಸಿನ ವಿಚಾರದಲ್ಲಿ ನಿಮ್ಮ ನಿರೀಕ್ಷೆ ಸುಳ್ಳಾಗದು. ಇಂದು ಕಷ್ಟಕರವಾಗಿದ್ದರೂ ಪ್ರಯಾಣವನ್ನು ಮಾಡಲೇ ಬೇಕಾಗಿದೆ. ಸರ್ಕಾರಿ ನೌಕರಿಗೆ ಇಷ್ಟವಿಲ್ಲದ ಸ್ಥಳಕ್ಕೆ ವರ್ಗಾವಣೆ ಆಗಲಿದೆ. ದ್ವಾದಶದ ರಾಹುವು ಅನಾರೋಗ್ಯದಿಂದ ಸಂಪತ್ತನ್ನು ಖಾಲಿ ಮಾಡಿಸುವನು. ಸುಬ್ರಹ್ಮಣ್ಯನ ಸ್ತೋತ್ರ ಮಾಡಿ.
ಮಿಥುನ: ನಿಮ್ಮ ಪ್ರಯತ್ನಕ್ಕೆ ಯೋಗ್ಯವಾದ ಫಲವು ಸಿಗಬಹುದು. ವೃತ್ತಿಯಲ್ಲಿ ಹೆಚ್ಚಿನ ಪ್ರಗತಿ ಇರಲಿದೆ. ದುಡುಕಿನ ನಿರ್ಧಾರದಿಂದ ದುಃಖಪಡಬೇಕಾದೀತು. ಶತ್ರುಗಳು ನಿಮ್ಮ ಸಂಪತ್ತನ್ನು ಕರಗಿಸಲು ತಂತ್ರವನ್ನು ಹೆಣೆಯಬಹುದು. ನೂತನ ಯಂತ್ರೋಪಕರಣವನ್ನು ಖರೀದಿಸಲಿದ್ದೀರಿ. ಬಾಕಿ ಇರುವ ಕೆಲಸವನ್ನು ಇಂದೇ ಮಾಡಿ ಮುಗಿಸಿಕೊಳ್ಳಿ. ಹೊಸ ಕೆಲಸಗಳತ್ತ ನಿಮ್ಮ ಮನಸ್ಸು ಹರಿಯುವುದು. ಇಂದಿನ ಕಛೇರಿಯ ಕೆಲಸದಲ್ಲಿ ಪೂರ್ಣ ಮನಸ್ಸು ಇರಲಾರದು. ದ್ವಾದಶದ ಶುಕ್ರನು ನಿಮಗೆ ಅಲ್ಪ ಅನುಕೂಲಕರನಲ್ಲ.
ಕರ್ಕ: ನಿಮ್ಮ ಕರ್ಮಗಳು ಇತರರಿಗೆ ಮಾದರಿಯಾದೀತು. ಯಾರ ಮಧ್ಯದಲ್ಲಿಯೂ ನೀವು ವಾದದ ನಿರ್ಣಾಯಕರಾಗಿ ಹೋಗಬೇಡಿ. ಸಂಗಾತಿಯ ತಪ್ಪುಗಳನ್ನು ಹೇಳುವ ರೀತಿಯಲ್ಲಿ ಹೇಳಿ. ನೋವಾಗದ ರೀತಿಯಲ್ಲಿ ಹೇಳಿದರೆ ಸಂಬಂಧವು ಚೆನ್ನಾಗಿರುವುದು. ಇರುವುದರಲ್ಲಿ ತೃಪ್ತಿ ಇರಲಿ. ಅತಿಯಾದ ಅಸೆಯಿಂದ ಇರುವುದೂ ನಷ್ಟವಾದೀತು. ಮಕ್ಕಳ ಸಂತೋಷದಲ್ಲಿ ಭಾಗಿಯಾಗುವಿರಿ. ನಿಮ್ಮ ಬಗ್ಗೆ ಇರುವ ಪ್ರಶಂಸೆಯು ಕೆಲಸಕ್ಕೆ ಉತ್ತೇಜಕವಾದೀತು. ಆಗದವರಿಗೆ ನೀವು ಇಂದು ಸಹಾಯ ಮಾಡಲಿದ್ದೀರಿ. ಶತ್ರುವಿನ ಆಗಲಿಕೆಯಿಂದ ಸಂತೋಷವಾಗುವುದು. ಅನಾರೋಗ್ಯದಿಂದ ಷಷ್ಠಾಧಿಪತಿಯು ನವಮದಲ್ಲಿರುವುದರಿಂದ ಬಹಳ ಅನುಕೂಲ ಎನ್ನಲಾಗದು. ಧಾರ್ಮಿಕ ಆಚರಣೆ ಹಾಗು ದೇವರ ಆರಾಧನೆ ಮುಖ್ಯ.