Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್​ 15ರ ಭವಿಷ್ಯ ಹೀಗಿದೆ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 15) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್​ 15ರ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯ
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 15, 2023 | 6:15 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶನಿ, ತಿಥಿ : ದಶಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಸಾಧ್ಯ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06-20 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ 09:26 – 10:59ರ ವರೆಗೆ, ಯಮಘಂಡ ಕಾಲ 02:06 – 03:39ರ ವರೆಗೆ, ಗುಳಿಕ ಕಾಲ 06:20 – 07:53 ರವರೆಗೆ.

ಧನುಸ್ಸು: ಎಲ್ಲರ ಜೊತೆ ಬೆರೆಯಬೇಕು ಎನ್ನುವ ಇಚ್ಛೆ ಇದ್ದರೂ ನಿಮ್ಮನ್ನು ಸೇರಿಕೊಳ್ಳದೇ ಇರುವರು. ಕೆಲಸವೂ ಇಲ್ಲದೇ ಸುಮ್ಮನೆಯೂ ಇರಲಾಗದೇ ಸುತ್ತಾಡುವಿರಿ. ಎಂದಿನ ಉತ್ಸಾಹವಿಲ್ಲದೇ ಇಂದು ಇರದು. ಆತ್ಮೀಯರ ಮಾತು ನಿಮಗೆ ಕಹಿ ಎನ್ನಿಸಲೂಬಹುದು. ಉದ್ಯೋಗವನ್ನು ಅರಸಿ ನೀವು ನಗರಕ್ಕೆ ಹೋಗುವಿರಿ. ದೇಹ ಆರೋಗ್ಯವಾಗಿದ್ದರೂ ಮನಸ್ಸು ನಿಮ್ಮನ್ನು ಕಟ್ಟಿಹಾಕುವುದು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಚಿಂತೆ ಇಲ್ಲದೇ ಆರಾಮಾಗಿ ಇರುವರು. ನೀವು ಸೇವಿಸುವ ಔಷಧವು ವಿಪರೀತ ಪರಿಣಾಮವಾಗಬಹುದು. ಪ್ರೇಮವು ಕಾಮಾವಾಗಿಯೂ ಪರಿವರ್ತನೆ ಆಗಬಹುದು.

ಮಕರ: ನಿಮಗೆ ಇನ್ನೊಬ್ಬರ ವ್ಯಕ್ತಿತ್ವ ಇಷ್ಟವಾಗದಿದ್ದರೆ ಅವರ ಬಳಿಯೇ ಹೇಳಿ. ಅದನ್ನು ಯಾರದೋ ಸಮೀಪ ಸಲ್ಲದ ಮಾತುಗಳನ್ನು ಆಡಿ ಅವರ ಮಾನವನ್ನು ಕಳೆಯಬೇಡಿ. ಅನಿರೀಕ್ಷಿತವಾಗಿ ಬಂದ ಹಣವನ್ನು ಜೇಬಿಗೆ ಇಳಿಸಿಕೊಳ್ಳಬೇಡಿ. ತನ್ನದಲ್ಲ ಎಂಬ ಭಾವದಲ್ಲಿ ಇರಿ. ದಾಂಪತ್ಯದ ಕಲಹದಲ್ಲಿ ಮಕ್ಕಳು ನಿಮ್ಮ ಪರವಾಗಿ ಇರುವರು.ಕಣ್ಣಿನ ತೊಂದರೆಯು ಸ್ವಲ್ಪ ಕಡಿಮೆ ಆದಂತೆ ತೋರುತ್ತದೆ. ನಿಮ್ಮ ಹಣವು ಕರಗುವ ಬಗ್ಗೆ ಚಿಂತೆ ಆಗಲಿದೆ. ನಿಮ್ಮ ಬಗ್ಗೆ ಆಡಿಕೊಳ್ಳುತ್ತಿರುವವರು ಸುಮ್ಮನಾಗುವರು. ವಾಹನದ ಮೇಲಿನ ವ್ಯಾಮೋಹ ಕಡಿಮೆಯಾಗುವುದು. ತಂದೆಯಿಂದ ನಿಮಗೆ ಗೌರವ ಸಿಗಬಹುದು.

ಕುಂಭ: ನಕಾರಾತ್ಮಕ ಪ್ರತಿಕ್ರಿಯೆಯನ್ನು ಕೊಟ್ಟು ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಅಧಿಕಾರದ ಆಮಿಷಕ್ಕೆ ತುತ್ತಾಗಿ ಇಲ್ಲದ ಕೆಲಸವನ್ನು ಮಾಡಬೇಕಾಗಬಹುದು. ಅಪಾಯವೆನಿಸಿದ ಕಡೆ ದೂರವಿರುವುದು ಉತ್ತಮ. ಸಂಗಾತಿಯ ಕೋಪವನ್ನು ಪ್ರೀತಿಯ ಮಾತಿನಿಂದ ಕಡಿಮೆ ಮಾಡಿ. ಉದ್ಯೋಗಿಗಳು ಬಹಳ ಪರಿಶ್ರಮದಿಂದ ಲಾಭವನ್ನು ಪಡೆಯಬೇಕಾಗಿದೆ. ಮಾಡಲು ಸಾಧ್ಯವಾಗುವ ಕೆಲಸಕ್ಕೆ ಕಾರಣವನ್ನು ಹುಡುಕುತ್ತ ಅವಕಾಶವಂಚಿತರಾಗಬೇಡಿ. ನೆಮ್ಮದಿಯು ಕೆಡಲು ಮಾರ್ಗಗಳು ಹಲವು ಇದ್ದರೂ ಅಲ್ಲಿ ಒಳ್ಳೆಯದನ್ನು ಆರಿಸಿಕೊಳ್ಳಿ.

ಮೀನ: ನಿಮ್ಮ ಮೇಲೆ ವಿಶ್ವಾಸವು ಮೂಡುವ ದಿನವಾಗಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಅನವರತ ಮಾಡಬೇಕಾದ ಸ್ಥಿತಿಯೂ ಇದೆ. ಕೃತಕವಾಗಿ ಬರುವ ಧಾರ್ಮಿಕ ಶ್ರದ್ಧೆಯಿಂದ ಯಾವ ಪರಿಣಾಮವಾಗದು. ನಿಮ್ಮ ಅನುಕೂಲಕ್ಕೆ ತಕ್ಕ ನಿಯಮಗಳನ್ನು ಬೇರೆಯವರ ಮೇಲೆ ಹೇರಬೇಡಿ. ಆಹಾರದ ಕ್ರಮದಲ್ಲಿ ವ್ಯತ್ಯಾಸವಾಗಿ ರೋಗಾದಿಗಳು, ನೋವು ಬರಬಹುದು. ನಿಮಗೆ ಸಹಕಾರ ನೀಡದವರೆಲ್ಲ ಕೆಟ್ಟವರಲ್ಲ. ಅಗೈ ಹುಣ್ಣನ್ನು‌ ನೋಡಲು ಕನ್ನಡಿಯ ಅವಶ್ಯಕತೆ ಇರಲಾರದು. ಅವರವರ ತಪ್ಪುಗಳನ್ನು ತಿದ್ದಿಕೊಂಡರೆ ಮನಸ್ತಾಪವು ಯಾರ ಮಧ್ಯದಲ್ಲಿಯೂ ಬಾರದು ಎಂಬದು ತಿಳಿದಿರಲಿ.

ಲೋಹಿತಶರ್ಮಾ ಇಡುವಾಣಿ – 8762924271 (what’s app only)

ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ