Weekly Horoscope:ಏಪ್ರಿಲ್‌ 16ರಿಂದ ಏ. 22ವರೆಗೆ ವಾರ ಭವಿಷ್ಯ, ಯಾವ ರಾಶಿಗೆ ಏನು ಫಲ?

Weekly Horoscope: ಏಪ್ರಿಲ್‌ 16ರಿಂದ ಏಪ್ರಿಲ್‌ 22ವರೆಗೆ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ.

Weekly Horoscope:ಏಪ್ರಿಲ್‌ 16ರಿಂದ ಏ. 22ವರೆಗೆ ವಾರ ಭವಿಷ್ಯ, ಯಾವ ರಾಶಿಗೆ ಏನು ಫಲ?
ಪ್ರಾತಿನಿಧಿಕ ಚಿತ್ರ
Follow us
ರಮೇಶ್ ಬಿ. ಜವಳಗೇರಾ
|

Updated on: Apr 16, 2023 | 5:50 AM

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ (Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಏಪ್ರಿಲ್​ 16ರಿಂದ ಏಪ್ರಿಲ್ 22ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

ಮೇಷ: ಏಪ್ರಿಲ್ ತಿಂಗಳ ಮೂರವು ಪರಿವರ್ತನೆಯ ವಾರವೆನ್ನಬಹುದು. ಶುಭಗ್ರಹಗಳು ಮುಖ್ಯವಾಗಿ ಎರಡು ಗ್ರಹಗಳು ಈ ಅವಧಿಯಲ್ಲಿ ಸ್ಥಾನವನ್ನು ಬದಲಿಸುತ್ತಿವೆ. ಗುರು ಮತ್ತು ರವಿ ಗ್ರಹರು ಈ ರಾಶಿಗೆ ಪ್ರವೇಶಿಸಲಿದ್ದಾರೆ. ಮೇಷರಾಶಿಯು ನಾಲ್ಕು ಗ್ರಹಗಳಿಂದ ತುಂಬಿದೆ. ಬುಧ ಹಾಗೂ ರಾಹು ಇವರಿಬ್ಬರೂ ಮೊದಲಿನಿಂದ ಇಲ್ಲಿಯೇ ಇದ್ದು ಅಲ್ಪ ಶುಭವನ್ನು ನೀಡುತ್ತಿದ್ದರು. ಸೂರ್ಯನು ಉಚ್ಚಕ್ಷೇತ್ರಕ್ಕೆ ಬರಲಿದ್ದು ಆರೋಗ್ಯದಲ್ಲಿ ಮುನ್ನಡೆ, ಸರ್ಕಾರಿ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ಪ್ರಗತಿ ಇರಲಿದೆ‌. ದ್ವೀತಿಯದ ಶುಕ್ರನು ನಿಮ್ಮಿಂದ ಶೃಂಗಾರೋಚಿತ ಮಾತುಗಳನ್ನು ಹೆಚ್ಚು ಆಡಿಸುವನು. ಪತಿಪತ್ನಿಯರ ನಡುವೆ ಸಣ್ಣ ಕಲಹವು ಆಗಲಿದೆ.

ವೃಷಭ: ಈ ತಿಂಗಳ ಮೂರನೇ ಸ್ವಲ್ಪ ಅಶುಭವೆಂದೇ ಹೇಳಬೇಕು. ಗುರು ಹಾಗೂ ಸೂರ್ಯರು ದ್ವಾದಶಸ್ಥಾನಕ್ಕೆ ಬರಲಿದ್ದಾರೆ. ಇದು ನಿಮ್ಮ ಆರ್ಥಿಕತೆ, ಆರೋಗ್ಯ, ಅಭಿಮಾನದ ಮೇಲೆ ಪರಿಣಾಮ ಬೀರಬಹುದು. ನೀವು ಅತ್ಯಂತ ಜೋಪಾನವಾಗಿ ನಡೆಯಬೇಕಿದೆ. ತಂದೆಯ ಪ್ರೀತಿಯಲ್ಲಿ ನಿಮಗೆ ಕೊರತೆ ಕಾಣಬಹುದು. ನಿಮಗೆ ಆತ್ಮಸ್ಥೈರ್ಯವು ಸಾಲದು. ಸ್ವಸ್ಥಾನದಲ್ಲಿರುವ ಶುಕ್ರನು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವನು. ಅಲಂಕಾರದ ಕಡೆಗೆ ಹೆಚ್ಚು ಒಲವು ಇರುವಂತೆ ಮಾಡುವನು. ಕುಜನು ಕ್ಲಿಷ್ಟಕರವಾದ ಮಾತುಗಳನ್ನು ಆಡಿಸುವನು. ನಿಮ್ಮ ಆರೋಗ್ಯದಲ್ಲಿ ದಾರ್ಢ್ಯವು ಇರಲಿದೆ. ಶಿವನಿಗೆ ಅಭಿಷೇಕವನ್ನು ಮಾಡಿಸುತ್ತಿರಿ.

ಮಿಥುನ: ಈ ವಾರವು ನಿಮಗೆ ಶುಭದ ಸಾಲುಗಳು ಬರಲಿವೆ. ಏಕಾದಶಸ್ಥಾನವು ನಾಲ್ಕು ಗ್ರಹಗಳಿಂದ ಕೂಡಿದೆ. ಪೂರ್ಣಶುಭವಲ್ಲದಿದ್ದರೂ ಅಧಿಕ ಶುಭವನ್ನೇ ನಿರೀಕ್ಷಿಸಬಹುದು. ಗೌರವಗಳು, ಸಮ್ಮಾನಗಳು ಪ್ರಾಪ್ತಿಯಾಗುತ್ತದೆ. ಸರ್ಕಾರಿ ಉದ್ಯೋಗಕ್ಕೆ ನೀವು ಅರ್ಜಿ ಹಾಕಿದ್ದರೆ ನಿಮಗೆ ಕರೆಬರಬಹುದು. ನಿಮ್ಮ ಪ್ರತಿಭೆಯೂ ಗೊತ್ತಾಗಲಿದೆ. ಮಕ್ಕಳ ವಿಚಾರದಲ್ಲಿ ನಿಮಗೆ ಅಸಮಾಧಾನವಿರಲಿದೆ. ನವಮಸ್ಥಾನದಲ್ಲಿ ಶನಿಯು ಇದ್ದು ಧಾರ್ಮಿಕಕಾರ್ಯದಲ್ಲಿ ಶ್ರದ್ಧೆಯನ್ನು ಕಡಿಮೆ ಮಾಡಿಸುವನು. ದ್ವಾದಶದಲ್ಲಿರುವ ಶುಕ್ರನು ಆಲಂಕಾರಿಕ ವಸ್ತುಗಳಿಂದ ಧನವ್ಯಯವನ್ನು ಮಾಡಿಸವನು.

ಕಟಕ: ಈ ರಾಶಿಯವರಿಗೆ ಮಿಶ್ರಫಲಗಳು ಇರಲಿವೆ. ದಶಮಸ್ಥಾನದಲ್ಲಿ ಸೂರ್ಯ ಹಾಗು ಗುರುವು ಬರಲಿದ್ದು ಅಸಾಧ್ಯವನ್ನು ನೀವು ಸಾಧಿಸುವಿರಿ. ಕರ್ಮದಿಂದ ಅಲ್ಪ ಶ್ರೇಯಸ್ಸು ಸಿಗಲಿದೆ. ಏಕಾದಶದಲ್ಲಿರುವ ಶುಕ್ರನು ಸೌಂದರ್ಯಪ್ರಜ್ಞೆಯನ್ನೂ ಹೆಚ್ಚಿಸುವನು ಹಾಗೂ ಕಲೆಗಳಿಗೆ ಸಂಬಂಧಪಟ್ಟಂತೆ ಅನುಕೂಲತೆಗಳನ್ನು ಮಾಡಿಸಿಕೊಡುವನು. ಕಲಾವಿದರಿಗೆ ಸಮ್ಮಾದಿಗಳನ್ನು ಮಾಡಿಸುವನು. ದ್ವಾದಶದ ಕುಜನು ನಿಮಗೆ ಯಂತ್ರಗಳ ನಷ್ಟವನ್ನೂ ಭೂಮಿಗೆ ಸಂಬಂಧಪಟ್ಟ ತೊಂದರೆಯನ್ನು ಹೆಚ್ಚು ಮಾಡುವನು. ಅಷ್ಟಮದ ಶನಿಯ ಪ್ರಭಾವವು ಅಧಿಕವಾಗಿದ್ದು ಎಚ್ಚರಿಕೆಯ ಹೆಜ್ಜೆ ಇಡುವುದು ಉತ್ತಮ. ಶಿವನ ಸ್ತೋತ್ರವನ್ನು ಶುದ್ಧರಾಗಿ, ಶುದ್ಧ ಮನಸ್ಸಿನಿಂದ ಪಠಿಸುವುದು ಉತ್ತಮ.

ಸಿಂಹ: ಏಪ್ರಿಲ್ ತಿಂಗಳ ಮೂರನೇ ವಾರ ಗ್ರಹಗತಿಗಳ ಬದಲಾವಣೆಯಿಂದ ಅನುಕೂಲ ವಾತಾವರಣವು ಇರಲಿದೆ. ನವಮಸ್ಥಾನದಲ್ಲಿ ಗುರು ಹಾಗೂ ಸೂರ್ಯರು ಇರಲಿದ್ದು ಬುಧ ಹಾಗೂ ರಾಹುಗಳು ಮೊದಲೇ ಇದ್ದಾರೆ‌‌. ದೇವತಾಕರ್ಯಗಳಿಗೆ ಮನಸ್ಸಿದ್ದರೂ ಪ್ರತಿಕೂಲ ಸಂದರ್ಭಗಳು ಇರುವುದರಿಂದ ಅದು ಸಾಧ್ಯವಾಗದು. ಸ್ವಲ್ಪ ಕಾಲ ಇದೇ ಸ್ಥಿತಿಯಿದ್ದು ಮನಸ್ಸಿನಲ್ಲಿ ಶುಭಕಾರ್ಯವನ್ನು ಮಾಡಲು ಬೇಕಾದ ಮನಃಸ್ಥಿತಿಯನ್ನು ಇಟ್ಟುಕೊಳ್ಳಿ. ಏಕಾದಶದಲ್ಲಿರುವ ಕುಜನು ಇಂಜಿನಿಯರಿಂಗ್ ಮುಂತಾದ ಉದ್ಯೋಗಕ್ಕೆ ಪೂರಕವಾದ ಸಂದರ್ಭಗಳನ್ನು ಮಾಡಿಸುವನು. ಈ ಮೂಲಕ ಧನಲಾಭವಾಗುವಂತೆ ಮಾಡುವನು.

ಕನ್ಯಾ: ಈ ರಾಶಿಯವರಿಗೆ ಏಪ್ರಿಲ್ ತಿಂಗಳ ಮೂರನೇ ವಾರ ಕಡಿಮೆ ಶುಭವಿರುವ ವಾರವೆಂದೇ ಹೇಳಬಹುದು‌. ಇಷ್ಟು ದಿನ ಸಪ್ತಮದಲ್ಲಿರುವ ಗುರುವು ಅಷ್ಟಮಕ್ಕೆ ಪ್ರವೇಶಿಸಲಿದ್ದು ಇಷ್ಟು ದಿನದ ಸುಖ, ಸಂತೋಷ, ಗೌರವಗಳು ಇಲ್ಲದೇ ದುಃಖಪಡಯವಿರಿ. ಅಸಮಾಧನವು ನಿಮಗೆ ಆಗಲಿದೆ. ಅಷ್ಟಮಕ್ಕೆ ಸೂರ್ಯನೂ ಬರಲಿದ್ದು ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದಾಗಿದೆ. ಬುಧ ಹಾಗೂ ರಾಹುವಿನ ಸಂಚಾರವೂ ಅಷ್ಟಮದಲ್ಲಿರುವುದರಿಂದ ದೂರಪ್ರಯಾಣ ಮಾಡುವ ನಿಮಗೆ ಮರಣಭೀತಿಯೋ ಅಪಘಾತಭೀತಿಯೋ ಇರಲಿದೆ‌‌. ದ್ವಿತೀಯದಲ್ಲಿ ಕೇತುವಿದ್ದು ಮಾತಿನ ಮೇಲೆ ನಂಬಿಕೆ ಇರದು. ಗುರುವಿನ ದರ್ಶನ, ಅವರ ಆಶೀರ್ವಾದವು ಮುಖ್ಯವಾಗಲಿದೆ.

ತುಲಾ: ಇಷ್ಟು ದಿನ ಬಹಳ ಸಂಕಷ್ಟದ ದಿನಗಳಾಗಿದ್ದವು. ಸಂಪತ್ತಿನ ಕೊರತೆ, ಬಂಧುಗಳು ದೂರವಾಗುವುದು, ಕೆಲಸವು ಕೈಗೂಡದೇ ಎಲ್ಲವೂ ಅರ್ಧಕ್ಕೆ ನಿಲ್ಲುವುದು, ಅಪಮಾನ ಎಲ್ಲವೂ ನಡೆದಿದ್ದು ಜೀವನವು ದುರ್ಬರವೆನಿಸುವಷ್ಟು ಹದತಪ್ಪಿ ಹೋಗಬಹುದು. ಅದರೆ ಇನ್ನು ನಿಮಗೆ ಅನುಕೂಲದ ವಾತಾವರಣವು ಇರಲಿದ್ದು ನಿಧಾನವಾಗಿ ಚೇತರಿಸಿಕೊಳ್ಳುವಿರಿ. ನಿಮ್ಮ ಕನಸುಗಳು ಒಂದೊಂದಾಗಿಯೇ ಸಾಕಾರಗೊಳ್ಳುವುದು. ಅಷ್ಟಮದಲ್ಲಿರುವ ಶುಕ್ರನಿಂದ ಪತ್ನಿಗೆ ಅನಾರೋಗ್ಯವಾಗಬಹುದು ಅಥವಾ ಸ್ತ್ರೀಯರಿಂದ ಅಪಮಾನವೂ ಆಗುವ ಸಾಧ್ಯತೆ ಇದೆ. ನವಮದ ಕುಜನು ಕುಕರ್ಮಕ್ಕೆ ಪ್ರೋತ್ಸಾಹ ಕೊಡುವನು. ಗುರುಹಿರಿಯರ ವಿಚಾರದಲ್ಲಿ ಅನಾದರ ತೋರಿಸುವನು. ಪಂಚಮದ ಶನಿಯು ನಿಮ್ಮ ವೇಗಕ್ಕೆ ಕಡಿವಾಣ ಹಾಕುವನು.

ವೃಶ್ಚಿಕ: ಇಷ್ಟು ದಿನ ಪಂಚಮದಲ್ಲಿರುವ ಗುರುವು ಈಗ ಷಷ್ಠಕ್ಕೆ ಬಂದಿರುವನು. ಪ್ರತಿಭೆ, ಕೆಲಸಗಳಲ್ಲಿ ಹೆಸರು ಪಡೆದ ನೀವು ಇವುಗಳಿಂದ ದೂರವಿರುವಿರಿ. ನೀವು ಮಾಡಿದ ಕೆಲಸಕ್ಕೆ ನಿಮಗೇ ಕೀರ್ತಿ ಸಿಗುತ್ತದೆ ಎಂದುಕೊಳ್ಳಬೇಡಿ. ಅದನ್ನು ಬೇರೆಯವರು ಪಡೆದುಕೊಳ್ಳುವರು. ನಿಮಗೆ ಅದು ಸಂಕಟವಾಗುತ್ತದೆ. ಹೇಳಿಕೊಳ್ಳಲೂ ಅನುಭವಿಸಲೂ ಆಗದ ಸ್ಥಿತಿ ಎದುರಾಗುವುದು‌‌. ಆನಾರೋಗ್ಯವೂ ಕಾಡಲಿದೆ ನಿಮ್ಮನ್ನು. ವಿವಾವಾಹವಾಗುವ ಸಂಕಲ್ಪ ಮಾಡಿದ್ದರೆ ನಿಮಗೆ ಉತ್ತಮ ವಧೂ ಸಿಗಬಹುದು. ಅಷ್ಟಮದಲ್ಲಿರುವ ಕುಜನು ನಿಮಗೆ ಅನುಕೂಲಕರನಾಗಿರುವನು. ಅಕಾರ್ಯಕ್ಕೆ ಮನಸ್ಸು ಮಾಡುವಿರಿ. ಚತುರ್ಥದಲ್ಲಿರುವ ಶನಿಯಿಂದ ಕುಟುಂಬದಲ್ಲಿ ಸಣ್ಣ ಕಲಹವಾಗಲಿದೆ.

ಧನಸ್ಸು: ಈ ತಿಂಗಳ ಮೂರನೇ ವಾರವು ಗ್ರಹಗತಿಗಳು ಬದಲಾಗಲಿದ್ದು ನಿಮಗೆ ಶುಭಫಲಗಳು ಇರಲಿವೆ. ಚತುರ್ಥದಲ್ಲಿ ಇದ್ದ ಗುರುವು ಪಂಚಮಕ್ಕೆ ಬರಲಿದ್ದು ಚಿಂತಿತ ಕಾರ್ಯವು ಪೂರ್ಣವಾಗಲಿದೆ‌. ಮಕ್ಕಳು ನಿಮ್ಮನ್ನು ಪ್ರೀತಿಸುವರು. ತಂದೆಯೂ ನಿಮ್ಮನ್ನು ಇಷ್ಟಪಡುವರು. ಶುಕ್ರನು ಷಷ್ಠದಲ್ಲಿ ಇದ್ದು ಕಫಕ್ಕೆ ಸಂಬಂಧಿಸಿದ ರೋಗವು ಬರಲಿದೆ. ಸಪ್ತಮದಲ್ಲಿರುವ ಕುಜನು ವಿವಾಹಕ್ಕೆ ವಿಘ್ನವನ್ನು ತರುವನು. ಪತಿಯ ಜೊತೆ ಕಲಹವೂ ಆಗಬಹುದು. ತೃತೀಯದಲ್ಲಿ ಶನಿಯು ಮನಸ್ಸನ್ನು ವಿಕಾರಗೊಳಿಸುವನು. ತ್ರಿಪುರಸುಂದರಿಯನ್ನು ಪೂಜಿಸಿ. ಬರುವ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಬರುವುದು. ಏಕಾದಶದಲ್ಲಿರುವ ಕೇತುವು ನಿಮಗೆ ಕುಕರ್ಮದ ಹಣವನ್ನು ಕೊಡಿಸುವನು.

ಮಕರ: ಇಷ್ಟು ದಿನ ಅಂದರೆ ಒಂದು ವರ್ಷಗಳ‌ ಕಾಲ ತೃತೀಯದಲ್ಲಿ ಇದ್ದ ಗುರುವು ಚತುರ್ಥಕ್ಕೆ ಹೋಗುವನು. ಅಷ್ಟಾಗಿ ಅನುಕೂಲವಲ್ಲದಿದ್ದರೂ ಸ್ವಲ್ಪ ಶುಭಫಲವನ್ನು ಅನುಭವಿಸಿದ್ದೀರಿ. ಇನ್ನು ಮತ್ತಷ್ಟು ಶುಭವಾಗಲಿದೆ. ಬಂಧುಗಳ ಸಹಕಾರವೂ ನಿಮಗೆ ಸಿಗಲಿದೆ. ಪಂಚಮದಲ್ಲಿರುವ ಶುಕ್ರನು ಮಕ್ಕಳಿಂದ ಪ್ರೀತಿ ಸಿಗುವಂತೆ ಮಾಡುವನು. ಆಲಂಕಾರಿಕ ವಸ್ತುಗಳ ಕಡೆ ಗಮನವಿರಲಿದೆ. ಕುಜನು ಶತ್ರುಗಳನ್ನು ನಿಶ್ಶೇಷಗೊಳಿಸುವನು. ದಶಮದಲದಲ್ಲಿ ಕೇತುವಿದ್ದು ಯೋಗ್ಯತೆಗೆ ತಕ್ಕುದಾದ ಕೆಲಸವನ್ನು ಮಾಡುವುದಿಲ್ಲ. ದ್ವಿತೀಯದಲ್ಲಿರುವ ಶನಿಯು ನಿಮ್ಮ ಸಂಪತ್ತನ್ನು ಅಸ್ಥಿರವಾಗಿಸುವನು. ಸಾಡೇಸಾಥ್ ಶನಿಯ ಅಂತ್ಯಭಾಗದಲ್ಲಿ ನೀವಿದ್ದೀರಿ.

ಕುಂಭ: ಸಾಡೇಸಾಥ್ ಶನಿಯ ಪ್ರಭಾವವು ಪೂರ್ಣವಾಗಿ ನಿಮ್ಮ ಮೇಲಿದೆ. ನಿಮ್ಮದೇ ರಾಶಿಯಲ್ಲಿ ಶನಿಯು ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾನೆ. ದೇಹಾಲಸ್ಯ, ಅಲೋಚನೆಯಲ್ಲಿ ಅಸ್ಥಿರತೆ, ಮಾಡುವ ಕೆಲಸದಲ್ಲಿ ಅಪ್ರೀತಿ ಎಲ್ಲವೂ ಕಾಣಿಸುವುದು. ದ್ವಿತೀಯದ ಗುರುವು ತೃತೀಯಕ್ಕೆ ಹೋಗಲಿದ್ದಾನೆ. ಸಹೋದರರ ಮಧ್ಯದಲ್ಲಿ ಸಾಮರಸ್ಯವಿದ್ದರೂ ವೈಮನಸ್ಯವೂ ಸ್ವಲ್ಪ ಇರಲಿದೆ. ಪತ್ನಿಯ ಕಡೆಯಿಂದ ಅಥವಾ ತಾಯಿಯ ಕಡೆಯ ಬಂಧುಗಳಿಂದ ಸಹಾಯವು ಸಿಗಲಿದೆ. ಸದ್ಯ ನಿಮಗೆ ಗ್ರಹಗಳು ಅನನುಕೂಲರಾದರೂ ದೈವವು ನಿಮಗೆ ಸಹಾಯ ಮಾಡುವುದು. ನೀವಿರುವಲ್ಲಿಯೇ ಯಥಾಸಾಧ್ಯ ಪರಮೇಶ್ವರನನ್ನು ಪ್ರಾರ್ಥಿಸಿ. ಕರ್ಮಾಧಿಪತಿಯು ಸತ್ಕರ್ಮಕ್ಕೆ ಫಲಕೊಡುವನು.

ಮೀನ: ಒಂದು ವರ್ಷಗಳ ಕಾಲ ನಿಮ್ಮ ಮನೆಯಲ್ಲಿ ಇದ್ದ ಗುರುವು ದ್ವೀತೀಯಕ್ಕೆ ಹೋಗಲಿದ್ದಾನೆ. ರವಿಯೂ ಬುಧನೂ ರಾಹುವೂ ಇದ್ದು ಈ ವಾರವು ಮಿಶ್ರಫಲವಿರಲಿದೆ. ಸ್ವಲ್ಪ ದಿನಗಳು ಹೀಗೇ ಮುಂದುವಿರಿಯುವುದು. ಸಾಡೇಸಾಥ್ ಶನಿಯು ಆರಂಭವಾಗಿದ್ದು ಪ್ರತಿಕೂಲವು ಇದ್ದೇ ಇರಲಿದೆ. ಹಾಗಿದ್ದರೂ ಅನ್ಯ ಗ್ರಹಗಳು ನಿಮಗೆ ಅಶುಭವನ್ನು ಕಡಿಮೆ ಮಾಡಲಿವೆ. ಅಷ್ಟಮದಲ್ಲಿರುವ ಕೇತುವಿನಿಂದ ಆರೋಗ್ಯವು ಸುಧಾರಿಸಲಿದೆ. ಷಷ್ಠಾಧಿಪತಿಯಾದ ಸೂರ್ಯನು ದ್ವಿತೀಯಕ್ಕೆ ಬರಲಿದ್ದು ತಂದೆಯು ಶತ್ರುವಿಂತೆ ಕಾಣಬಹುದು‌.‌ ಸರ್ಕಾರಿ ಉದ್ಯೋಗವೂ ಕಷ್ಟವೆನಿಸಬಹುದು. ಶಿವನಿಗೆ ಶನಿವಾರ, ಅಮಾವಾಸ್ಯೆಯ ದಿನ ರುದ್ರಾಭಿಷೇಕ ಮಾಡಿಸಿ.

ಲೇಖನ: ಲೋಹಿತಶರ್ಮಾ ಇಡುವಾಣಿ

ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?