ಗೆಳೆಯರೇ ನಮಸ್ತೇ! ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿಯುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ : ಮೃಗಶಿರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಹರ್ಷಣ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:11 ರಿಂದ 03:48ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:06 ರಿಂದ 07:43ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:20 ರಿಂದ 10:57ರ ವರೆಗೆ.
ಮೇಷ: ನಿಮ್ಮಿಂದ ಸಹಾಯವನ್ನು ಪಡೆದರೂ ಅದನ್ನು ಮರೆಯುವ ಹಿತಶತ್ರುಗಳು ಇರಬಹುದು. ನಿಮ್ಮ ಕಾರ್ಯವನ್ನು ನಕಾರಾತ್ಮಕವಾಗಿ ತಿಳಿಯಬಹುದು. ಮೇಲಧಿಕಾರಿಗಳ ಜೊತೆ ವಿವಾದಗಳು ಆಗಬಹುದು. ನಿಮ್ಮ ಸಮಯವು ಏನೂ ಆಗದೇ ಕಳೆದುಹೋಗಬಹುದು. ಹೆಚ್ಚಿನ ಅಧ್ಯಯನವನ್ನು ನೀವು ಇಷ್ಟಪಡುವಿರಿ. ನಿಮ್ಮ ಸಹಾಯವನ್ನು ಕೇಳಿ ಬಂದವರಿಗೆ ನಕಾರಾತ್ಮಕ ಪ್ರತಿಕ್ರಿಯೆ ಕೊಟ್ಟು ಕಳುಹಿಸುವುದು ಬೇಡ. ಕಲಾವಿದರಿಗೆ ಬೆಂಬಲವು ಕಡಿಮೆ ಆದಂತೆ ಅನ್ನಿಸೀತು. ಮನೆಗೆ ಸಹಾಯವನ್ನು ಮಾಡಲು ಮನಸ್ಸು ಇರಲಿದೆ.
ವೃಷಭ: ಮಾನಸಿಕವಾಗಿ ನೀವು ದುರ್ಬಲವಾದರೆ ಸ್ವಲ್ಪ ಸಮಯ ಏಕಾಂತವಾಗಿ ಇರಿ. ನಿಮಗೆ ಯಾರಾದರೂ ಸಾಲಕೊಡುವುದಾಗಿ ಬಂದರೆ ಖಂಡಿತ ನಿರಾಕರಿಸಿ. ಇಂದು ನಿಮಗೆ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಉಂಟಾಗಬಹುದು. ಅದೃಷ್ಟದ ಕೊರತೆ ಇದ್ದು ಪುರುಷಪ್ರಯತ್ನವು ಅಧಿಕವಾಗಿ ಬೇಕಾದೀತು. ನಿಮ್ಮನ್ನು ಯಾರದರೂ ಆಡಿಕೊಂಡಾರು. ಅದನ್ನು ಲೆಕ್ಕಿಸದೆ ನಿಮ್ಮ ಗುರಿಯ ಕಡೆ ಗಮನವಿರಲಿ. ಹೆಚ್ಚು ಮನೋರಂಜನೆಯಿಂದ ಸಮಯವನ್ನು ಕಳೆಯಬಹುದು. ಮಕ್ಕಳ ವಿವರಗಳನ್ನು ಕೇಳಿ ಅವರಿಗೆ ಸಹಕರಿಸಿ. ಗುರುಸ್ತೋತ್ರವನ್ನು ಮಾಡುವುದು ಉತ್ತಮ.
ಮಿಥುನ: ನೀವು ಸಂಗಾತಿಯ ಮೇಲೆ ಭಾವನಾತ್ಮಕವಾಗಿ ಇರುವಿರಿ. ಉದ್ಯೋಗದ ನಿಮಿತ್ತ ಸಂಗಾತಿಯನ್ನು ಬಿಡಲು ನಿಮಗೆ ಕಷ್ಟವಾದೀತು. ಆರ್ಥಿಕ ಸ್ಥಿತಿಯನ್ನು ಬಹಳ ಪರಿಶ್ರಮದಿಂದ ಸರಿಮಾಡಿಕೊಳ್ಳುವಿರಿ. ಇಂದಿನ ಜೀವನದ ಬಗ್ಗೆ ದೈವಜ್ಞರ ಬಳಿ ಕೇಳಿ ಅಗತ್ಯವಾದ ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು. ಸಂಗಾತಿಯ ಕಾಡುವ ಮಾತುಗಳನ್ನು ಬಿಟ್ಟು ಮುಂದೆ ಆಲೋಚಿಸಿ. ನಿಮ್ಮದೇ ಆದ ಸ್ನೇಹಿತ ಬಳಗಕ್ಕೆ ನಿಮ್ಮ ಸಹಾಯವು ಸೀಮಿತವಾಗಿರಬಹುದು. ಅತಿಥಿಗಳ ಜೊತೆ ಇಂದಿನ ಸಮಯವನ್ನು ಕಳೆಯಬಹುದು. ತ್ರಿಪುರಸುಂದರಿಯ ಸ್ತೋತ್ರವನ್ನು ಪಠಿಸಿ.
ಕರ್ಕ: ಮನೆಯಲ್ಲಿ ಆಡಿದ ಮಾತುಗಳಿಂದ ನೀವು ಹೊರಬರಲು ಸಮಯಬೇಕಾದೀತು. ಸಂಗಾತಿಯ ಮೇಲೆ ಅನುಮಾನದ ದೃಷ್ಟಿ ಇರಲಿದೆ. ಮನಸ್ಸನ್ನು ಹಾಳುಮಾಡಿಕೊಳ್ಳುವ ಸಂಗಾತಿಯನ್ನು ನೀವು ಬಿಡುವುದು ಉತ್ತಮ. ವಿದ್ಯಾಭ್ಯಾಸವು ಪೂರ್ತಿಯಾದರೂ ಕೆಲಸದ ಚಿಂತೆಯು ಕಾಡಬಹುದು. ದೇವರ ಮೊರೆ ಹೋಗದೇ ಬೇರೆ ದಾರಿ ಇಲ್ಲ ಅನ್ನಿಸಬಹುದು. ಸಾಲವು ಸಿಗುವುದು ಎಂದು ನಂಬಿದ್ದರೆ ನಿಮಗೆ ದುಃಖವಾದೀತು. ಉದ್ಯೋಗದ ವಿಚಾರದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಾದೀತು. ಸಹೋದ್ಯೋಗಿಗಳ ಮಾತನ್ನು ಕೇಳಿ ನೀವು ಕೆಡುವಿರಿ. ಶನೈಶ್ಚರನಿಗೆ ತೈಲದೀಪವನ್ನು ಬೆಳಗುವುದು ಉತ್ತಮ.