Nithya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯ ಪ್ರೇಮಿಗಳು ಇಂದು ಒಂದಾಗುವ ಸಾಧ್ಯತೆ ಇದೆ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 21) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯ ಪ್ರೇಮಿಗಳು ಇಂದು ಒಂದಾಗುವ ಸಾಧ್ಯತೆ ಇದೆ
ಇಂದಿನ ರಾಶಿಭವಿಷ್ಯImage Credit source: istock
Follow us
Rakesh Nayak Manchi
|

Updated on: Jun 21, 2023 | 12:45 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 21 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ : ಮೃಗಶಿರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಪುಷ್ಯ, ಯೋಗ : ಧೃತಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:34 ರಿಂದ 02:11ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:43 ರಿಂದ 09:20ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:57 ರಿಂದ ಮಧ್ಯಾಹ್ನ 12:34ರ ವರೆಗೆ.

ಧನುಸ್ಸು: ಒತ್ತಡದ ಕಾರಣದಿಂದ ಅನಾರೋಗ್ಯ ತಲೆನೋವು ಬರಬಹುದು. ಕುಳಿತುಕೊಳ್ಳುವ ವ್ಯತ್ಯಾಸದಿಂದ ನಿಮಗೆ ಸೊಂಟ ನೋವು ಬರಬಹುದು. ಇಂದು ನೀವು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪ ಪಡಬಹುದು. ಬೇಸರದ ಸಂಗತಿಗಳು ಇಂದು ನಡೆಯುವ ಸಾಧ್ಯತೆ ಇದೆ. ವಿರೋಧದ ನಡುವೆಯೂ ನಿಮ್ಮ ಹಣವನ್ನು ಸಾಧಿಸುವಿರಿ. ಅನ್ಯರ ಕೆಲಸದಲ್ಲಿ ನೀವು ಮಗ್ನರಾಗಿ ನಿಮ್ಮ ಕೆಲಸವನ್ನು ಕೈ ಬಿಡಬೇಕಾಗಬಹುದು. ಕಲಾವಿದರಿಗೆ ತೊಂದರೆಯಾಗಲಿದೆ. ನಿಮಗೆ‌‌ ಸಂಬಂಧಿಸದ ಕೆಲಸದಲ್ಲಿ ನೀವು ಮೂಗು ತೂರಿಸುವುದು ಬೇಡ. ನಿಮ್ಮ‌ ಮನಸ್ಸು ಎಷ್ಟೇ ಪ್ರಯತ್ನಿಸಿದರೂ ನಕಾರಾತ್ಮಕವಾಗಿ ಇರಲಿದೆ.

ಮಕರ: ನಿಮ್ಮ ಜವಾಬ್ದಾರಿಯುತ ನಡೆಗೆ ನಿಮಗೆ ಹೆಚ್ಚಿನ ಕೆಲಸಗಳು, ಜವಾಬ್ದಾರಿಗಳು ಬರಬಹುದು. ನೀವು ಅದನ್ನು ಕಲಿಯಲು ಇಚ್ಛಿಸುವಿರಿ. ಕಲಿಕೆ ನಿಮ್ಮದೇ ಆದ ವಿಧಾನವನ್ನು ಬಳಸಿಕೊಳ್ಳಲಿದ್ದೀರಿ. ಪ್ರೇಮದ ಸೆಳೆತಕ್ಕೆ ಸಿಲುಕುವಿರಿ. ಪ್ರೇಮಿಗಳು ಇಂದು ಒಂದಾಗುವ ಸಾಧ್ಯತೆ ಇದೆ. ಮನೆಯಲ್ಲಿ ಪ್ರಸ್ತಾಪ‌ ಮಾಡಿ ನಿಮ್ಮ ಮಾರ್ಗವನ್ನು ಸರಿ ಮಾಡಿಕೊಳ್ಳಿ. ವ್ಯಾಪಾರದಲ್ಲಿ ಕೆಲವು ಕೊರತೆಗಳನ್ನು ನೀಗಿಸಿಕೊಂಡರೆ ನೀವು ಲಾಭವನ್ನು ಗಳಿಸಬಹುದು. ಗ್ರಾಹಕರ ಜೊತೆ ಸಂಬಂಧ ಚೆನ್ನಾಗಿರಲಿ. ಆರೋಗ್ಯದ ವಿಚಾರದಲ್ಲಿ ನೀವು ನಿರ್ಲಕ್ಷ್ಯ ಮಾಡದೇ ಇರುವುದು ಒಳ್ಳೆಯದು.

ಕುಂಭ: ಯುವಕರಿಗೆ ಇಂದು ಉತ್ಸಾಹದ ದಿನವಾಗಲಿದೆ. ಕಷ್ಟದ ಕೆಲಸವನ್ನು ನೀವು ಅನಾಯಾಸವಾಗಿ ಮಾಡಿ ಮುಗಿಸುವಿರಿ. ಇಂದಿನ‌ ನಿಮ್ಮ ಕೆಲಸವು ಪೂರ್ಣವಾಗಬಹುದು. ಧನದ ಆದಾಯವು ನಿಮ್ಮ ನಿರೀಕ್ಷೆಯನ್ನು ಪೂರ್ಣವಾಗಿ ತಲುಪುವುದು. ನಿಮ್ಮ ಪ್ರಯಾಣ ಇಂದು ಬಹಳ ಕಷ್ಟಕಾರವಾದೀತು. ಯಶಸ್ಸನ್ನು ಒಡೆದು ಜೀರ್ಣಿಸಿಕೊಳ್ಳಲಾಗದಷ್ಟು ನಿಶ್ಶಕ್ತರಾಗವಿರಿ. ಮನೆಯಿಂದ ಆಚೆ ಹೋಗಬೇಕು ಅನ್ನಿಸಬಹುದು. ಸಂಗಾತಿಯು ನಿಮ್ಮ ಯೋಚನೆಗೆ ಬೆಂಬಲವನ್ನು ಕೊಡುವಳು. ಮಾಧ್ಯಮದಲ್ಲಿ ನೀವು ಇಂದು ಕಾಣಿಸಿಕೊಳ್ಳಬಹುದು.

ಮೀನ: ಬಹಳ ದಿನಗಳ ಅನಂತರ ನಿಮ್ಮ ಮನೆಯಲ್ಲಿ ಸಂತೋಷದ ಸಂದರ್ಭವು ಇರುವುದು. ನಿತ್ಯ ಬಳಸುವ ವಸ್ತುವಿನಿಂದ ನಿಮಗೆ ಲಾಭವಿದೆ. ಬೆನ್ನಿಗೆ ಸಂಬಂಧಿಸಿದ ನೋವನ್ನು ಅನುಭವಿಸಬಹುದು. ನೀವು ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದ್ದು ನಿಮಗೆ ಒಮ್ಮೆಲೆ ಬಿಡಬೇಕಾದ ಸ್ಥಿತಿ ಬರಬಹುದು. ವ್ಯಾಪಾರವನ್ನು ನೀವು ಇಂದು ತಂತ್ರಗಾರಿಕೆಯ ಮೂಲಕ ಮಾಡಲಿದ್ದೀರಿ. ನೀವಿಂದು ತಂಡದ ನಾಯಕರಾಗಿ ಆಯ್ಕೆಯಾಗಿ ಅದನ್ನು ಮುನ್ನಡೆಸುವಿರಿ. ಎಲ್ಲರನ್ನೂ ಹತ್ತಿರದಿಂದ ತಿಳಿಯಲು ನೀವು ಇಷ್ಟಪಡುವಿರಿ.

-ಲೋಹಿತಶರ್ಮಾ ಇಡುವಾಣಿ

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್