AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

2023 ಮಾರ್ಚ್ 25 ಶನಿವಾರದ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರImage Credit source: amarujala.com
ಗಂಗಾಧರ​ ಬ. ಸಾಬೋಜಿ
|

Updated on: Mar 25, 2023 | 5:30 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 25 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ: ಶನಿ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಭರಣೀ, ಯೋಗ : ವಿಷ್ಕಂಭ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 34 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 09 :36 ರಿಂದ 11:07ರವರೆಗೆ, ಯಮಘಂಡ ಕಾಲ 02:09 ರಿಂದ 03:40ರ ವರೆಗೆ, ಗುಳಿಕ ಕಾಲ 06:34 ರಿಂದ 08: 05ರ ವರೆಗೆ.

ಮೇಷ: ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವದಿಂದ ಕಾಣಲಿದ್ದೀರಿ. ನಿಮ್ಮ ಹತ್ತಾರು ಕನಸುಗಳಲ್ಲಿ ಒಂದು ಸಾಕಾರಗೊಳ್ಳುವುದು. ಬಂಧುಗಳ ವಿಯೋಗವಾರ್ತೆಯು ಬರಬಹುದು. ನೀವಂದು ಅಶಕ್ತರಿಗೆ ಸಹಾಯ ಮಾಡುವಿರಿ. ಅವರ ದೃಷ್ಟಿಯಲ್ಲಿ ನೀವೇ ದೇವರಾಗುವಿರಿ.ಆಲಸ್ಯದಿಂದ ಬಂದಿರುವ ಅವಕಾಶವನ್ನು ಕೈಚೆಲ್ಲಿ ಕುಳಿತುಕೊಳ್ಳಬೇಡಿ. ನಿಮ್ಮ ನಿರ್ಧಾರಕ್ಕೆ ಹಿಂದಿನ ಅನುಭವಗಳೇ ನಿಮಗೆ ಸಹಾಯವಾಗಲಿವೆ. ಇರುವವರನ್ನು ಬಿಟ್ಟು ಇನ್ನೊಬ್ಬರ ನಂಬಿ ಮೋಸಹೋಗಬೇಡಿ. ಪೂಜ್ಯರ ಭೇಟಿಯಾಗಲಿದೆ.

ವೃಷಭ: ನಿಮ್ಮ ಏಳ್ಗೆಯನ್ನು ಕಂಡು ಸಂಕಟಪಡುವವರಿರುತ್ತಾರೆ. ಅವರನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ಹತ್ತಿರದೂರಿಗೆ ಪ್ರಯಾಣವನ್ನು ಮಾಡಲಿದ್ದೀರಿ. ರಾಜಕೀಯ ನಾಯಕರ ಭೇಟಿಯಾಗಿ, ನಿಮಗೊಂದು ಮಾರ್ಗವು ಸಿಗಲಿದೆ. ಅಚ್ಚರಿಯ ಕೆಲವು ಸಂಗತಿಗಳು ನಿಮಗೆ ಕಾದಿರಬಹುದು. ಅಪರಿಚಿತರ ಭೇಟಿಯಿಂದ ಸ್ವಲ್ಪ ಹಿಂದುಳಿಯಿರಿ. ನಿಮ್ಮ ಕೆಲಸಗಳು ಅಚ್ಚುಕಟ್ಟಾಗಿ ಇದ್ದು ಪ್ರಂಶಸೆಯೂ ಸಿಗಬಹುದು. ನಿಯಮಗಳನ್ನು ಮುರಿಯಬೇಕು ಎನ್ನುವ ಮನಃಸ್ಥಿತಿಯು ಇರಲಿದೆ. ದಾಂಪತ್ಯದಲ್ಲಿ ಸಣ್ಣ ಕಿರಿಯಾಗಬಹುದು. ಆರೋಗ್ಯದ ಬಗ್ಗೆ ಗಮನವಿರಲಿ.

ಮಿಥುನ: ಇಂದು ಹಿಂದೆ ಆಗಿಹೋದ ಘಟನೆಗಳನ್ನು ನೆನೆಸಿಕೊಂಡು ವ್ಯಥೆಪಡುವಿದರಲ್ಲಿ ಅರ್ಥವಿಲ್ಲ. ಸಹೋದರರ ಜೊತೆ ಪ್ರೀತಿಯಿಂದ ಇರುವಿರಿ. ಬದಲಾಗಬೇಕು ಎನ್ನುವ ಹಂಬಲವು ನಿಮ್ಮಲ್ಲಿ ಅತಿಯಾಗಿರಬಹುದು. ಸರಿಯಾದ ಬದಲಾವಣೆಯನ್ನು ಹೊಂದಿರಿ. ಉದ್ಯೋಗದಲ್ಲಿ ನಷ್ಟವಾಗಬಹುದು ಅಥವಾ ಉದ್ಯೋಗವು ನಷ್ಟವಾಗುವ ಭೀತಿಯೂ ಇರಲಿದೆ. ಮನಸ್ಸನ್ನು ಏಕಾಗ್ರಗೊಳಿಸಲು ಬೇಕಾದ ಧ್ಯಾನ, ಯೋಗವನ್ನು ಮಾಡಿ. ವಿದ್ಯಾಭ್ಯಾಸದ ಕುರಿತು ಮಕ್ಕಳಿಗೆ ಪಾಠವನ್ನು ಮನೆಯಲ್ಲಿ ಮಾಡುವರು. ನಿಮಗದು ಅಸಹ್ಯ ವಿಷಯವಾಗುವುದು. ನಿಮ್ಮ ಬೆಳವಣಿಗೆಗೆ ಸಹಕರಿಸಿದವರ ನೆನಪನ್ನು ಮಾಡಿಕೊಳ್ಳವಿರಿ. ಗಣಪತಿಗೆ ಪ್ರಿಯವಾದ ತಿಂಡಿಯನ್ನು ನೈವೇದ್ಯ ಮಾಡಿ.

ಕಟಕ: ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸಕ್ಕೆ ಹಣವನ್ನು ಕೊಡಬೇಕಾಗಿ ಬರಬಹುದು. ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ನೂತನ ಗೃಹನಿರ್ಮಾಣದ ಕನಸು ಕಾಣುವಿರಿ.‌ಒಳ್ಳೆಯ ಕೆಲಸವನ್ನು ಮಾಡುವ ಚಿಂತನೆಯನ್ನು ಮಾಡುವಿರಿ. ಎಲ್ಲವೂ ಕ್ಷಣದಲ್ಲಿ ಆಗಬೇಕು ಎನ್ನುವ ಉದ್ವೇಗವವನ್ನು ಬಿಟ್ಟು ಬಿಡಿ. ಭವಿಷ್ಯಕ್ಕೋಸ್ಕರ ಹಣವನ್ನು ಕೂಡಿಡುವ ಯೋಚನೆಯನ್ನು ಮಾಡುವಿರಿ. ಸಮಾಜದಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ಅನಾರೋಗ್ಯದಿಂದ ಕಂಗೆಡಬಹುದು. ತೈಲವ್ಯಾಪಾರಿಗಳು ಹೆಚ್ಚು ಲಾಭವನ್ನು ಪಡೆವರು. ರಾಮನಿಗೆ ಪರಮಾನ್ನ ನೈವೇದ್ಯವನ್ನು ಮಾಡಿ.

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು