ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 27 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ :ಸೋಮ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಆಯುಷ್ಮಾನ್, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 32 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 08 :04 ರಿಂದ 09:35ರವರೆಗೆ, ಯಮಘಂಡ ಕಾಲ 11:07ರಿಂದ 12:38ರ ವರೆಗೆ, ಗುಳಿಕ ಕಾಲ 02:09 ರಿಂದ 03:40ರ ವರೆಗೆ.
ಮೇಷ: ನಿಮಗೆ ಇಂದು ಉತ್ಸಾಹವು ಕಡಿಮೆ ಇದ್ದು, ಸ್ನೇಹಿತರು ನಿಮಗೆ ಉತ್ಸಾಹವನ್ನು ತುಂಬಲಿದ್ದಾರೆ. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ಸೋಲನ್ನು ಅನುಭವಿಸಬೇಕಾಗಬಹುದು. ನಿಮ್ಮ ಬುದ್ಧಿಯಿಂದ ನಿಮಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಳ್ಳುವಿರಿ. ಆರ್ಥಿಕವಾಗಿ ಸುಧಾರಣೆಯಾಗಲಿದೆ. ಆಕಸ್ಮಿಕವಾಗಿ ಬಂದ ವಾರ್ತೆಯು ನಿಮಗೆ ಖುಷಿಯನ್ನೂ ಬೇಸರವನ್ನೂ ತರಬಹುದು. ಆಪ್ತರ ಜೊತೆ ದೂರಪ್ರಯಾಣ ಮಾಡಲಿದ್ದೀರಿ. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಬೇಕಿದೆ.
ವೃಷಭ: ಮನೆಯಿಂದ ದೂರವಿರುವ ನಿಮಗೆ ಮನೆಯ ಹಂಬಲವಾಗಬಹುದು. ಎಂದೋ ಕೂಡಿಟ್ಟ ಹಣವು ಇಂದು ಉಪಯೋಗಕ್ಕೆ ಬರಲಿದೆ. ವಾಹನದಲ್ಲಿ ಸಂಚಾರವನ್ನು ಮಾಡುವುದರಿಂದ ನಿಮಗೆ ಕೆಲವು ಅನಾನುಕೂಲತೆಗಳು ಆಗಬಹುದು. ನಿಮ್ಮ ಅಜ್ಞಾನದಿಂದ ಆದ ಕೆಲಸಕ್ಕೆ ನೀವೇ ಹೊಣೆಗಾರರಾಗುವಿರಿ. ಮನಸ್ಸಿನಲ್ಲಿಯೇ ಸಂಕಟಪಟ್ಟುಕೊಳ್ಳುವುದನ್ನು ಬಿಟ್ಟು, ಆಪ್ತರ ಜೊತೆ ಹಂಚಿಕೊಳ್ಳಿ. ಮನಸ್ಸು ಹಗುರಾದೀತು. ಕಛೇರಿಯಲ್ಲಿ ನಿಮಗೆ ಹೊಸ ನಾಯಕನು ಬರಲಿದ್ದಾನೆ. ಅವರನ ಜೊತೆ ನಿಮ್ಮ ವರ್ತನೆಯು ಆಪ್ತವಾಗಿ ಇರಲಿದೆ.
ಮಿಥುನ: ಇಲ್ಲ ಸಲ್ಲದ ಯೋಚನೆಗಳಿಂದ ಮನಸ್ಸು ವಿಕಾರವಾಗಲಿದೆ. ಹಿರಿಯರ ಸಲಹೆಯನ್ನು ಪಡೆಯಿರಿ. ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಮನಸ್ಸು ಶಾಂತವಾಗುವುದು. ಒತ್ತಡದಲ್ಲಿ ಸಿಲುಕಿಕೊಳ್ಳಬೇಡಿ. ಕೆಲಸದಲ್ಲಿ ಎಂತಹ ಒತ್ತಡವಿದ್ದರೂ ನಿಮ್ಮ ಹತೋಟಿಯಲ್ಲಿ ನೀವಿರಿ. ಕೆಲಸಗಳು ಒಂದೊಂದಾಗಿಯೇ ಮುಗಿಯುವುವು. ನಿಮ್ಮ ಮಾತನ್ನು ಮನೆಯವರು ಒಪ್ಪುವರು. ಸಂತಸ ವಾತಾವರಣವು ಮನೆಯಲ್ಲಿ ಇರುವುದು. ವೃಥಾ ಯಾರ ಮೇಲೂ ಅನುಮಾನಪಡುವುದು ಬೇಡ. ಸುಂದರಜೀವನ ನಮ್ಮ ಪೂರ್ವಜರ ಪುಣ್ಯದ ಫಲವೆಂದು ಇಂದು ಆನ್ನಿಸಬಹುದು.
ಕಟಕ: ವಿದ್ಯಾರ್ಥಿಗಳಿಗೆ ತಂದೆಯಿಂದ ಧನವು ಲಭ್ಯವಾಗಲಿದೆ. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಖರ್ಚು ಹೆಚ್ಚಾಗಬಹುದು. ಆನಾರೋಗ್ಯವಿದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕೆಲಸದದಲ್ಲಿ ತೊಡಗುವಿರಿ. ಪೂರ್ವಾಪರಜ್ಞಾನವಿಲ್ದೇ ಪರರ ನಿಂದನೆಯ ಕಾರ್ಯದಲ್ಲಿ ತಲ್ಲೀನರಾಗಿರುವಿರಿ. ನಿಮ್ಮ ಅಂತರಂಗವು ಸರಿಯಾಗಿ ಇನ್ನೊಬ್ಬರಿಗೆ ತಿಳಿಯುವುದು. ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋಗಬಹುದು. ಒಂಟಿಯಾಗಿರಬೇಕು ಎಂದು ಅನ್ನಿಸುವ ಸಾಧ್ಯತೆ ಇದೆ. ಮನೋಹರವಾದ ಸ್ಥಳಕ್ಕೆ ಹೋಗಿ ಮನಸ್ಸನ್ನು ಸರಿಮಾಡಿಕೊಂಡು ಬನ್ನಿ.