Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

|

Updated on: May 03, 2023 | 5:30 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ​ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯ
Image Credit source: arayut Thaneerat
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ​ 3) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಹರ್ಷಣ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:39 ರಿಂದ 05:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:20 ರಿಂದ 10:55ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:04ರ ವರೆಗೆ.

ಮೇಷ: ಉದ್ಯೋಗದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ಸಂತತಿಯ ಶುಭ ವಾರ್ತೆ ಕೇಳಲಿದ್ದೀರಿ. ಯೋಜಿತ ಕಾರ್ಯಗಳನ್ನು ಒಂದೊಂದಾಗಿಯೇ ಮಾಡಲು ತೊಡಗಬಹುದು. ಏಕಾಂತವನ್ನು ಬಯಸಿ ಒಬ್ಬರೇ ಎಲ್ಲಿಗಾದರೂ ಹೋಗಲು ಇಚ್ಛಿಸುವಿರಿ. ನೂತನ ವಾಹನವನ್ನು ಪಡೆಯಲು ಚಿಂತಿಸಬಹುದು. ನಿಮ್ಮ ಕೆಲಸದಿಂದ ನಿಮಗೆ ತೃಪ್ತಿ ಸಿಗಲಿದೆ. ಗಳಿಸಿದ್ದನ್ನು ಕಳೆದುಕೊಳ್ಳುವಾಗ ಯೋಚಿಸಿ. ಅವಶ್ಯಕತೆ ಇದ್ದರೆ‌ ಮಾತ್ರ ಮುಂದುವರಿಯುವುದು ಉತ್ತಮ. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ.‌ ಖುಷಿಯಿಂದ ಸ್ವೀಕರಿಸಿ ಎಲ್ಲವನ್ನೂ.

ವೃಷಭ: ನಿಮ್ಮ ಶಿಸ್ತಿನ ಕೆಲಸದಿಂದ ಕೆಲವರಿಗೆ ಬೇಸರವಾಗಬಹುದು.‌ ದೂರ ಬಂಧುಗಳ ಪರಿಚಯವಾಗಲಿದೆ. ಒತ್ತಡಗಳಿದ್ದರೂ ನೀವು ನಿಮ್ಮ ಕೆಲಸ ಮಾಡಿ ಮುಗಿಸುವಿರಿ. ವಾಹನದಿಂದ ತೊಂದರೆಯಾದೀತು. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ಇದ್ದು ಯಥಾಶಕ್ತಿ ಸಂಪತ್ತನ್ನು ಕೊಡುವಿರಿ. ಸಹೋದರರಿಂದ ಸಂಪತ್ತು ಸಿಗಲಿದೆ. ದಾಂಪತ್ಯದಲ್ಲಿ ಕಲಹವಿದ್ದರೂ ನೆಮ್ಮದಿ ಇರಲಿದೆ. ಕಳೆದುಕೊಂಡ ವಸ್ತುವನ್ನು ಪಡೆಯಲಿದ್ದೀರಿ. ಮಾತಿನಲ್ಲಿ ಹಿಡಿತವಿರಲಿ. ಅಪಹಾಸ್ಯ ಮಾಡಿಯಾರು.

ಮಿಥುನ: ಗೃಹನಿರ್ಮಾಣದ ಕಾರ್ಯವು ಹಣಕಾಸಿನ ಅಭಾವದಿಂದ ಸ್ಥಗಿತಗೊಳ್ಳಬಹುದು. ಉನ್ನತಸ್ಥಾನಕ್ಕೆ ಹೋಗಬೇಕೆನ್ನುವ ಬಯಕೆ ಇರಲಿದೆ. ನಿಮಗೆ ಯೋಗ್ಯ ಮಾರ್ಗದರ್ಶನದ ಕೊರತೆ ಇದ್ದು ಇದರಿಂದ ಅವಕಾಶವನ್ನು ಕಳೆದುಕೊಳ್ಳುವಿರಿ. ನಿಮ್ಮ ಅನಂತರ ಕೆಲಸ ಮಾಡುವವರಿಂದ ನಿಮಗೆ ಕೆಲವು ಮಾತುಗಳು ಸಿಗಬಹುದು. ಮಾತಿನ ಮೇಲೆ ಹಿಡಿತವನ್ನು ಇಟ್ಟು, ಆಲೋಚಿಸಿ ಮಾತನಾಡಿ. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ. ಆಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ.

ಕಟಕ: ಬಹಳ ಕಾಲದ ಸ್ನೇಹವು ಇಂದು ದೂರಾಗಬಹುದು. ಆಸ್ತಿಯ ವಿಚಾರವಾಗಿ ಮಾತುಗಳು ಬರಬಹುದು. ತಂದೆಯ ಮಾತಿಗೆ ಗೌರವವನ್ನು ಕೊಡದೇ ಅಹಂಕಾರ ತೋರಿಸಬಹುದು. ತುರ್ತು ಅವಶ್ಯಕತೆಗಳಿಗೆ ಹಣವನ್ನು ವ್ಯಯಮಾಡಿ. ರಮಣೀಯ ಸ್ಥಳಗಳಿಗೆ ಹೋಗಬೇಕೆನಿಸುವುದು. ಆಲಸ್ಯದಿಂದ ವಿಶ್ರಾಂತಿ ಪಡೆಯುವಿರಿ. ಯಂತ್ರೋಪಕರಣಗಳ ಮಾರಾಟ ಮಾಡುವವರಿಗೆ ಅಲ್ಪ ಲಾಭವಾಗಬಹುದು. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಬಹಳ ದಿನಗಳ ಅನಂತರ ಪ್ರಯಾಣವು ಖುಷಿ ಕೊಡಲಿದೆ.

-ಲೋಹಿತಶರ್ಮಾ ಇಡುವಾಣಿ