ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 5) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಮೂಲಾ, ಯೋಗ: ಸಾಧ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ 07:41 ರಿಂದ 09:17ರ ವರೆಗೆ, ಯಮಘಂಡ ಕಾಲ 10:54 ರಿಂದ 12:31ರ ವರೆಗೆ, ಗುಳಿಕ ಕಾಲ 02:08 ರಿಂದ 03:44ರ ವರೆಗೆ.
ಮೇಷ: ದೈವಭಕ್ತಿಯ ಕೊರತೆ ಹೆಚ್ಚು ಇರಲಿದೆ. ನಿಮ್ಮ ನಡತೆಯನ್ನು ಬದಲಾಯಿಸಿಕೊಳ್ಳುವುದು ಉಚಿತ. ಮನ ಬಂದಂತೆ ವರ್ತನೆಯನ್ನು ನಿಲ್ಲಿಸಿ. ನಿಮ್ಮವರು ನಿಮಗೆ ಹತ್ತಿರವಾಗಲು ಅನೇಕ ಕಾರಣಗಳು ಇರಬಹುದು. ಈ ವಿಚಾರದಲ್ಲಿ ನೀವು ಅಸಹಾಯಕರಾಗುವುದು ಯೋಗ್ಯವಿದೆ. ಸಂಗಾತಿಯನ್ನು ಹೆಚ್ಚು ಪ್ರೀತಿಸುವ ಅವಕಾಶ ಸಿಗಬಹುದು. ಆಕೆಗೆ ಬೇಕಾದ ವಸ್ತುಗಳನ್ನು ನೀವು ತಂದುಕೊಡುವಿರಿ. ನಿಮ್ಮ ನಡುವೆ ಸಂತೋಷದ ಬಾಂಧವ್ಯ ಇನ್ನಷ್ಟು ಬಿಗಿಯಾಗುವುದು. ಗುರುಚರಿತ್ರೆಯನ್ನು ಪಠಿಸಿ.
ವೃಷಭ: ಸಮಾರಂಭಗಳಿಗೆ ತೆರಳಲು ನಿಮಗೆ ಆಸಕ್ತಿ ಇರುವುದಿಲ್ಲ. ಯಂತ್ರೋಪಕರಣಗಳಿಗೆ ನೀವು ಧನವನ್ನು ನೀಡಬೇಕಾದೀತು. ಸಂಗಾತಿಯ ಮಾತನ್ನು ಕೇಳುವ ವ್ಯವಧಾನವು ಇಂದು ಕಡಿಮೆ ಇರುವುದು. ಸಾಮಾನ್ಯವಾದ ಕೆಲಸವನ್ನು ಮಾಡಲೂ ಇಂದು ಜಾಡ್ಯ ಬರಬಹುದು. ನಿಮ್ಮ ವಸ್ತುಗಳು ಮರಳಿ ಬಾರದೇ ಇರಬಹುದು. ಮಂದಗತಿಯ ನಿಮ್ಮ ಕೆಲಸಕ್ಕೆ ಸಮಯವು ಸಾಲದೆಂದು ಅನ್ನಿಸಲಿದೆ. ಬೇಸರವನ್ನು ನೀವು ನುಂಗಿಕೊಳ್ಳುವುದು ಅಭ್ಯಾಸವಾದ ಸಂಗತಿಯಾಗಿದೆ. ಸಣ್ಣ ವಿಚಾರಗಳು ನಿಮ್ಮನ್ನು ವಿಚಲಿತಗೊಳಿಸಲಾರವು.
ಮಿಥುನ: ನಿಮ್ಮದೇ ಹತ್ತಾರು ಕೆಲಸಗಳು ಇದ್ದಿರುವುದು. ಅದಕ್ಕೆ ಇನ್ನೊಂದಿಷ್ಟು ಹೊಸ ಕೆಲಸವು ಬಂದು ಸೇರುವುದು. ನಿಮ್ಮ ಶಿಸ್ತನ್ನು ಪಾಲಿಸಲಾಗದೇ ಸಹೋದ್ಯೋಗಿಗಳು ಗೊಣಗುವರು. ಕುಟುಂಬವನ್ನು ನಿಭಾಯಿಸುವ ಸಾಮರ್ಥ್ಯವನ್ನು ನೀವು ಬೆಳಸಿಕೊಂಡಿದ್ದೀರಿ. ಮಕ್ಕಳ ವಿಷಯದಲ್ಲಿ ಹೆಚ್ಚು ಕಾಳಜಿಯನ್ನು ತೋರಿಸುವಿರಿ. ವಿದೇಶಿ ಉದ್ಯೋಗದಲ್ಲಿ ಇದ್ದರೆ ನಿಮಗೆ ಹೆಚ್ಚಿನ ಲಾಭವು ಇರಲಿದೆ. ನಿಮ್ಮ ನಡೆಯನ್ನು ಆಡಿಕೊಳ್ಳುವುದು ನಿಮ್ಮವರಿಗೆ ಸಹಜವಾಗಿರುತ್ತದೆ. ಕಿವಿಗೆ ಸಂಬಂಧಿಸಿದ ರೋಗವು ಬರಬಹುದು. ತಾಯಿಯಿಂದ ಹಿತವಚನಗಳು ನಿಮಗೆ ಬರಬಹುದು. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆದಿತ್ಯಹೃದಯ ಸ್ತೋತ್ರವು ನಿಮ್ಮ ಅನಾರೋಗ್ಯವನ್ನು ಕಡಿಮೆ ಮಾಡೀತು.
ಕಟಕ: ನಿಮ್ಮ ತಿಳಿವಳಿಕೆಯ ಮಟ್ಟವು ಇತರರಿಗೆ ತಿಳಿಯಲಿದೆ. ನಿಮ್ಮ ಬಹುದಿನದ ನಿರೀಕ್ಷೆ ಇಂದು ಸಾಕಾರಗೊಳ್ಳಬಹುದು. ನಕಾರಾತ್ಮಕ ಚಿಂತನೆಯನ್ನು ಮಾಡಿ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮಗೆ ಇಂದು ಅಪರಿಚಿತರಿಂದ ಅಪಮಾನವಾಗಬಹುದು. ಇದರಿಂದ ಸಿಟ್ಟುಗೊಂಡು ಇನ್ನೊಬ್ಬರ ಮೇಲೆ ತೀರಿಸುವಿರಿ. ಬೆನ್ನು ನೀವಿಗೆ ಚಿಕಿತ್ಸೆಯ ಅವಶ್ಯಕತೆ ಬರಬಹುದು. ಖಾಸಗೀ ಉದ್ಯೋಗಿಗಳಿಗೆ ವೇತನ ಹೆಚ್ಚಳಕ್ಕೆ ನಿಮ್ಮನ್ನು ಹಾಗೂ ನಿಮ್ಮ ಕಾರ್ಯವನ್ನೂ ವೀಕ್ಷಿಸಬಹುದು. ನಿಮ್ಮ ನಿರೀಕ್ಷೆಗಳು ಫಲಿಸಲಿಲ್ಲ ಎಂದು ಬೇಸರವಾಗಬಹುದು. ವಿದ್ಯಾರ್ಥಿಗಳು ಪ್ರೋತ್ಸಾಹದ ಕೊರತೆಯಿಂದ ಹಿಂದೆ ಉಳಿದಾರು.